• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧನು ವರ್ಷ ಭವಿಷ್ಯ: ಸೋಮಾರಿತನದಿಂದ ಯಾಮಾರಿದರೆ ಭವಿಷ್ಯ ಕಷ್ಟ ಕಷ್ಟ

By ಪಂಡಿತ್ ವಿಠ್ಠಲ ಭಟ್
|

ನಿಮ್ಮ ರಾಶಿಯ ಚಿಹ್ನೆ ಬಿಲ್ಲು. ಬಾಗಿರುವ ಧನುವಿನ ಗುರುತಿನವರಾದ ನೀವು ಮೈ ಬಗ್ಗಿಸಿ ದುಡಿಯುವುದಕ್ಕೆ ಹಿಂದೆ-ಮುಂದೆ ನೋಡುತ್ತೀರಿ. ಇನ್ನೂ ನೇರವಾಗಿ ಹೇಳಬೇಕು ಅಂದರೆ ಸೋಮಾರಿ ಸುಬ್ಬ/ಸುಬ್ಬಿ ಆಗುತ್ತೀರಿ. ನಿಮ್ಮಿಂದ ಒಂದು ಕೆಲಸ ಮಾಡಿಸುವುದಕ್ಕೆ ಹತ್ತು ಸಲ ತಲೆಯ ಮೇಲೆ ಕೂತು, ಒತ್ತಡ ತಂದು ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಸರಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಲ್ಲಿ ಇದು ಸರಿಯಾದ ಸಮಯ. ಒಂದು ಪ್ರಯತ್ನದಲ್ಲಿ ಆಗಲಿಲ್ಲ ಅಂತ ಮನಸ್ಸು ಬದಲಿಸದೆ ನಿರಂತರ ಶ್ರಮ ಹಾಕಿ. ಇನ್ನು ತಾತ್ಕಾಲಿಕವಾದ ಉದ್ಯೋಗದಲ್ಲಿದ್ದೀನಿ ಅದು ಕಾಯಂ ಆಗುತ್ತಾ ಎಂದು ಕಾಯುತ್ತಾ ಕೂತವರಿಗೂ ಇದು ಶುಭ ಕಾಲ. ಸಾಕಷ್ಟು ಪ್ರಯತ್ನ ಹಾಕಿದರೆ ಕೆಲಸ ಕಾಯಂ ಆಗುತ್ತದೆ.

ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?

ಅವಿವಾಹಿತರಿದ್ದಲ್ಲಿ ವಿವಾಹ ಭಾಗ್ಯಕ್ಕೆ ಹೆಚ್ಚು ಪ್ರಯತ್ನ ಮಾಡಬೇಕು. ವಿವಾಹದ ವಿಚಾರದಲ್ಲಿ ತೊಂದರೆ ಅಂದರೆ ಯಾರೋ ಸುಳ್ಳು ಹೇಳಿ ನಿಮ್ಮ ವಿವಾಹ ಮುರಿಯುವ ಪ್ರಯತ್ನ ಮಾಡುತ್ತಿರುತ್ತಾರೆ, ಅವರನ್ನು ಗುರುತಿಸಿ, ದೂರ ಇರಿಸಿ. ಇನ್ನು ಈ ವಿವಾಹದ ಮಾತುಕತೆ ಹಂತದಲ್ಲಿ ಇರುವವರು ಗೌಪ್ಯತೆ ಹೆಚ್ಚು ಕಾಪಾಡಿ.

ಉತ್ತಮ ಸಂತಾನ ಯೋಗ

ಉತ್ತಮ ಸಂತಾನ ಯೋಗ

ಜನ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿರುವ ಗುರು ಸಂತಾನ ಸೇರಿದಂತೆ ಶುಭ ಫಲಗಳ ಕಡೆಗೆ ಕೃಪೆ ತೋರುತ್ತಾನೆ. ಆದರೆ ಜನ್ಮ ಜಾತಕದಲ್ಲಿ ಸಂತಾನಕ್ಕೆ ತಡೆಯಾಗುವಂಥ ಯಾವುದೇ ದೋಷ ಇಲ್ಲವೇ ಎಂಬುದನ್ನು ಜ್ಯೋತಿಷಿಗಳ ಬಳಿ ಕೇಳಿ, ತಿಳಿದುಕೊಳ್ಳಿ. ಹಾಗೊಂದು ವೇಳೆ ಸಮಸ್ಯೆಯಿದ್ದಲ್ಲಿ ಶೀಘ್ರ ನಿವಾರಿಸಿಕೊಂಡು ಪ್ರಯತ್ನ ಪಟ್ಟರೆ ಉತ್ತಮ ಸಂತಾನ ಆಗುತ್ತದೆ.

ಮನೆ ಕಟ್ಟುವ ಕನಸು ನನಸಾಗಲಿದೆ

ಮನೆ ಕಟ್ಟುವ ಕನಸು ನನಸಾಗಲಿದೆ

ಗೃಹ ನಿರ್ಮಾಣದ ಕನಸನ್ನು ನನಸು ಮಾಡಿಕೊಳ್ಳಲು ಶುಭ ಸಮಯ. ಆದರೆ ಸಾಲ ಆಗುತ್ತದೆ. ನಿಮ್ಮ ಬಳಿ ಮನೆ ಕಟ್ಟಲು ಸಂಪೂರ್ಣ ದುಡ್ಡು ಇದ್ದರೂ ಊಹಿಸದ ರೀತಿಯಲ್ಲಿ ದುಡ್ಡು ಹೆಚ್ಚು ಖರ್ಚಾಗಿ ಕೊನೆಯಲ್ಲಿ ಸಾಲ ಮಾಡ ಬೇಕಾದ ಪರಿಸ್ಥಿತಿ ಬರುತ್ತದೆ. ಇಲ್ಲಿ ಗಮನಿಸ ಬೇಕಾದ ಇನ್ನೊಂದು ಅಂಶ ಅಂದರೆ, ನಿಮಗೆ ಸಾಲ ಸಿಗುತ್ತದೆ. ಆದರೆ ತೀರಿಸುವವರು ನೀವೇ ಅಲ್ಲವೆ!

ದೀರ್ಘ ಅನಾರೋಗ್ಯ ಸಮಸ್ಯೆಗೆ ಪರಿಹಾರ

ದೀರ್ಘ ಅನಾರೋಗ್ಯ ಸಮಸ್ಯೆಗೆ ಪರಿಹಾರ

ದೊಡ್ಡದಾದ ಆರೋಗ್ಯ ಬಾಧೆಗಳು ಇದ್ದಲ್ಲಿ ಈ ವರ್ಷ ಮಾಡುವ ಔಷಧ ಉಪಚಾರಗಳು ಉತ್ತಮವಾಗಿ ಫಲ ನೀಡುತ್ತವೆ. ದೀರ್ಘ ಕಾಲದಿಂದ ಇರುವ ಅನಾರೋಗ್ಯ ಸಮಸ್ಯೆಗೆ ಎಲ್ಲ ಕಡೆಯೂ ಪರೀಕ್ಷೆ ಮಾಡಿಸಿ, ಔಷಧೋಪಚಾರ ಮಾಡಿದ ನಂತರವೂ ಯಾವುದೇ ಫಲ ಕೊಟ್ಟಿಲ್ಲ ಎಂದು ಕೊರಗುತ್ತಿದ್ದರೆ ಆ ಚಿಂತೆ ದೂರವಾಗುತ್ತದೆ. ಆರೋಗ್ಯ ಬಾಧೆ ದೂರವಾಗುತ್ತದೆ.

ಅನಿವಾರ್ಯ ಅಲ್ಲದಿದ್ದಲ್ಲಿ ವಿದೇಶ ಪ್ರಯಾಣ ಬೇಡ

ಅನಿವಾರ್ಯ ಅಲ್ಲದಿದ್ದಲ್ಲಿ ವಿದೇಶ ಪ್ರಯಾಣ ಬೇಡ

ವಿದೇಶ ಪ್ರಯಾಣ ಅನಿವಾರ್ಯ ಇದ್ದಲ್ಲಿ ಮಾತ್ರ ಮಾಡಿ. ಆದರೆ ನೀವು ಅಲ್ಲಿಯೇ ಕಾಯಂ ವಾಸ ಅಥವಾ ದೀರ್ಘಾವಧಿ ಅಲ್ಲೇ ಇರುವ ಉದ್ದೇಶದಿಂದ ಹೋಗುತ್ತಿರುವುದಾದಲ್ಲಿ ಹೋದ ಮೊದಲ ಕೆಲ ತಿಂಗಳು ಅಥವಾ ವರ್ಷ ಪೂರ್ತಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಅದರ ಬದಲು ಈಗ ಇರುಲ್ಲಿಯೇ ಇದ್ದರೆ ಉದ್ಯೋಗದಲ್ಲಿ ಬಡ್ತಿ, ಗೌರವ ಹಾಗೂ ಹಣ ಎಲ್ಲವೂ ಸುಲಭವಾಗಿ ಲಭಿಸುತ್ತವೆ.

ಪ್ರೇಮ ವಿಚಾರದಲ್ಲಿ ಗೊಂದಲ

ಪ್ರೇಮ ವಿಚಾರದಲ್ಲಿ ಗೊಂದಲ

ಪ್ರೇಮದಲ್ಲಿ ಇರುವವರಿಗೆ ಗೊಂದಲದ ಕಾಲ. ಮಾತು-ಕತೆ, ಸಂಬಂಧ ಉತ್ತಮವಾಗಿದ್ದರೂ ಚಿಂತೆ ಕಾಡುತ್ತದೆ. ಈಗಲೇ ಮದುವೆ ಆಗುವುದೋ ಅಥವಾ ಗಟ್ಟಿಯಾದ ಉದ್ಯೋಗ ಅಥವಾ ವ್ಯಾಪಾರ ಕೈ ಹಿಡಿದ ನಂತರ ಆಗುವುದೋ ಎಂಬ ಇಬ್ಬಂದಿ ಕಾಡುತ್ತದೆ. ಮನೆಯಲ್ಲೂ ಮದುವೆಗೆ ಒತ್ತಡ ಶುರುವಾಗಿ ಏನು ಮಾಡಬೇಕು ಎಂಬುದು ತಿಳಿಯದಾಗುತ್ತದೆ.

ಶೈಕ್ಷಣಿಕ ಪ್ರವಾಸದಿಂದ ಅನುಕೂಲ

ಶೈಕ್ಷಣಿಕ ಪ್ರವಾಸದಿಂದ ಅನುಕೂಲ

ವಿದ್ಯಾರ್ಥಿಗಳು ಶಾಲೆ- ಕಾಲೇಜು ಅಥವಾ ಶಿಕ್ಷಣ ಸಂಸ್ಥೆಯಿಂದ ದೂರ ದೇಶಕ್ಕೆ ಅಥವಾ ಸ್ಥಳಕ್ಕೆ ಶೈಕ್ಷಣಿಕ ಪ್ರವಾಸ ಮಾಡುವ ಸಾಧ್ಯತೆಗಳಿವೆ. ಭವಿಷ್ಯದಲ್ಲಿ ಅನುಕೂಲ ಮಾಡಿಕೊಡ ಬಹುದಾದ ವ್ಯಕ್ತಿಯೊಬ್ಬರ ಪರಿಚಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆ ವ್ಯಕ್ತಿಯ ಮಾರ್ಗದರ್ಶನ, ಸಹಾಯ ಪಡೆದರೆ ಅನುಕೂಲವಿದೆ.

ಪರಿಹಾರ ಏನು?

ಪರಿಹಾರ ಏನು?

ಈ ವರ್ಷ ದ್ವಿತೀಯದಲ್ಲಿ ನಿಮಗೆ ಕೇತು ಇರುವುದರಿಂದ ಷಣ್ಣಾರಿಕೇಳ ಅಷ್ಟ ದ್ರವ್ಯ ಮಹಾ ಗಣಪತಿ ಹವನ ಸಹಿತ ಶನಿ ಶಾಂತಿ ಹವನ ಹಾಗೂ ಕೇತು ಶಾಂತಿ ಹೋಮ ಕಡ್ಡಾಯವಾಗಿ ಮಾಡಿಸಿ. ಅಭಿಮಂತ್ರಿತ ಜಲ ರತ್ನವನ್ನು ಬೆಳ್ಳಿಯಲ್ಲಿ ಧರಿಸಿ. ಪ್ರತಿ ತಿಂಗಳು ಮೊದಲ ಅಥವಾ ಎರಡನೇ ಸೋಮವಾರ ಶಿವನ ದೇಗುಲಕ್ಕೆ ತಪ್ಪದೇ ಹೋಗಿ, ರುದ್ರಾಭಿಷೇಕ ಮಾಡಿಸಿ. ಬೆಳ್ಳಿಯಲ್ಲಿ ಲಕ್ಷ್ಮಿನಾರಾಯಣ ಯಂತ್ರವನ್ನು ಬರೆಸಿ, ಅಭಿಮಂತ್ರಿಸಿ ಪೂಜಿಸಿ. ದೇವರ ಮನೆಯಲ್ಲಿ ಇಟ್ಟು, ನಿತ್ಯ ಪೂಜಿಸಿ.

ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380, ಇಮೇಲ್ ಐಡಿ- shreepandithji@gmail.com

ಪಂಡಿತ್ ವಿಠ್ಠಲ ಭಟ್ ಇಮೇಲ್ ಐಡಿ- shreepandithji@gmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sagittarius yearly Predictions : Career, Love, Job, Business, Court disputes, Education, Study Abroad, Health, Marriage.. Yearly Horoscope predictions for 2018, remedial, according to Vedic Astrology. (Moon Sign, Zodiac Sign). Predictions in Kannada language by renowned Karnataka astrologer Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more