ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನು ವರ್ಷ ಭವಿಷ್ಯ: ಆಲಸ್ಯ ಅಡ್ಡವಾಗಲಿದೆ, ಅದೇ ಖೆಡ್ಡಾ ಆಗದಿರಲಿ

ಧನು ರಾಶಿಯವರು ಆಲಸ್ಯವನ್ನು ಬಿಡಲೇಬೇಕು. ಇಲ್ಲದಿದ್ದರೆ ಈ ವರ್ಷ ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ವರ್ಷಾಂತ್ಯದಲ್ಲಿ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಧನು ರಾಶಿಯವರಿಗೆ ಈ ವರ್ಷದ ಆದಿ, ಮಧ್ಯಮ ಹಾಗೂ ಅಂತ್ಯ ಉತ್ತಮವಾಗಿ ಕಾಣಿಸುತ್ತಿದೆ. ಇನ್ನು ಮಧ್ಯಮ ಕಾಲದ
ಆದಿಯಲ್ಲಿಯೂ ಬಹಳ ಹೆಚ್ಚಿನ ಶುಭ ಬಯಸುವಂತೆ ಇಲ್ಲ. ಈ ವರ್ಷ ಗಮನಾರ್ಹ ವಿಚಾರ ಅಂದರೆ ನಿಮ್ಮಲ್ಲಿ ಹೆಚ್ಚಾಗುವ ಆಲಸ್ಯ ಗುಣ. ಇತರರು ಗುರುತಿಸಿ ಹೇಳುವಷ್ಟು ಈ ವರ್ಷ ಆಲಸ್ಯ ಹೆಚ್ಚಾಗಲಿದೆ.

ಇದೇ ಆಲಸ್ಯದಿಂದಾಗಿ ನೀವು ಎಷ್ಟೋ ಉತ್ತಮ ಅವಕಾಶಗಳನ್ನು ಈ ವರ್ಷದ ಆದಿಯಲ್ಲಿ ಕಳೆದುಕೊಳ್ಳುವವರಿದ್ದೀರಿ. ಅದನ್ನು ಗುರುತಿಸಿ, ತಪ್ಪನ್ನು ಸರಿ ಮಾಡಿಕೊಳ್ಳುವುದರೊಳಗೆ ವರ್ಷಾಂತ್ಯ ಬರಲಿದೆ. ಇನ್ನು ಹಲವರಿಗೆ ಮೊಣಕಾಲು ಅಥವಾ ಸೊಂಟದ ನೋವು ಕಾಡಲಿದೆ. ಅದಕ್ಕಾಗಿ ಯಾವುದೇ ಆಂಗ್ಲ ಪದ್ಧತಿಯ ಔಷಧಿ ಮಾಡಿದರೂ ಕಡಿಮೆ ಆಗದೆ ಪರಿತಪಿಸುವ ಪರಿಸ್ಥಿತಿ ಬರುತ್ತದೆ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

Sagittarius

ಇನ್ನು ಭೂಮಿ ಖರೀದಿ ಅಥವಾ ನೂತನ ಗೃಹ ನಿರ್ಮಾಣ ಮಾಡುವ ಆಲೋಚನೆಗಳು ಇರುವವರು ಈ ವರ್ಷದ ಮಧ್ಯ ಭಾಗ ಮುಗಿಯುವ ತನಕ ಸ್ವಲ್ಪ ಕಾದರೆ ಉತ್ತಮ. ಇಲ್ಲದಿದ್ದರೆ ಕೈ ಹಾಕಿದ ಕೆಲಸ ಮೂರರಿಂದ ಆರು ತಿಂಗಳು ಅರ್ಧ ಆಗಿ ನಿಂತು ಹೋಗುವ ಸಾಧ್ಯತೆಗಳಿವೆ. ಮತ್ತೆ ಅನಿವಾರ್ಯದ ಸಾಲ ಹಾಗೂ ಇಲ್ಲಸಲ್ಲದ ಮಾತುಗಳನ್ನು ಅಯೋಗ್ಯರಿಂದ ಹೇಳಿಸಿಕೊಳ್ಳಬೇಕಾದೀತು.

ಸ್ತ್ರೀಯರು ಸಹ ತಮ್ಮ ಬಂಗಾರ ಖರೀದಿ ಯೋಚನೆಗಳನ್ನು ವರ್ಷಾಂತ್ಯಕ್ಕೆ ದೂಡುವುದು ಉತ್ತಮ. ಅನಿವಾರ್ಯದ ನ್ಯಾಯಾಲಯದ ವಿಚಾರಗಳಿದ್ದಲ್ಲಿ ಸಾಧ್ಯವಾದಷ್ಟು ಅದನ್ನು ಮುಂದೂಡಿದರೆ ಉತ್ತಮ. ವಿದೇಶ ಪ್ರಯಾಣದ ಯೋಗಗಳೂ ವರ್ಷದ ಆದಿಯಲ್ಲಿ ಹೆಚ್ಚು ಬರದಿದ್ದರೂ ವರ್ಷಾಂತ್ಯದಲ್ಲಿ ಸಿಗುತ್ತದೆ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

ವ್ಯಾಪಾರಗಳೆಲ್ಲವೂ ಈ ವರ್ಷ ಮಧ್ಯಮದಲ್ಲಿ ಇರುತ್ತದೆ. ಕಬ್ಬಿಣದ ವ್ಯಾಪಾರ ಮಾತ್ರ ವರ್ಷದ ಆದಿ ಹಾಗೂ ಮಧ್ಯದಲ್ಲಿ ಕನಿಷ್ಠವಾಗಿದ್ದು, ನಂತರ ಸ್ವಲ್ಪ ಸರಿಹೋಗುತ್ತದೆ. ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರು ಬಹಳ ಕಾಯಬೇಕಾಗುತ್ತದೆ. ಇಲ್ಲದಿದ್ದರೆ ಸಿಕ್ಕಿದ ಯಾವುದೋ ಉದ್ಯೋಗವನ್ನೇ ಇಷ್ಟ ಇಲ್ಲದಿದ್ದರೂ ಮುಂದುವರಿಸಿಕೊಂಡು ಹೋಗಬೇಕು.

ವಿವಾಹಕ್ಕಾಗಿ ಈಗಿಂದಲೇ ಪ್ರಯತ್ನವಿರಲಿ. ಆದರೆ ಯಶಸ್ಸು ವರ್ಷಾಂತ್ಯದಲ್ಲಿ ಲಭಿಸುತ್ತದೆ. ಕೆಲವರಿಗೆ ಮಾತ್ರ ವರ್ಷದ ಆದಿಯಲ್ಲಿ ಅವರು ಮಾಡದ ತಪ್ಪಿನ ಆರೋಪ ಎದುರಿಸಬೇಕಾಗಿ ಬರಬಹುದು. ಅದರಿಂದ ವಿಚಲಿತರಾಗದೆ ಧೈರ್ಯದಿಂದ ಇದ್ದಲ್ಲಿ ಮುಂದೆ ಸತ್ಯ ದರ್ಶನ ಆದ ನಂತರ ಉತ್ತಮ ಕೀರ್ತಿ ಸಿಗುತ್ತದೆ.
ಒಟ್ಟಾರೆ ವರ್ಷ ಫಲ 2.5/5

ಜನವರಿಯಿಂದ ಏಪ್ರಿಲ್ ವರೆಗೆ

ಜನವರಿಯಿಂದ ಏಪ್ರಿಲ್ ವರೆಗೆ

ಮೊದಲ ನಾಲ್ಕು ತಿಂಗಳು ಆಲಸ್ಯ ಹೆಚ್ಚಾಗುವುದು. ನಿಮ್ಮ ಅಸಹಾಯಕತೆಯಿಂದಾಗಿ ಅವಮಾನಿತರಾಗಬಹುದು. ನಿಮ್ಮ ವ್ಯಕ್ತಿತ್ವ ಅಲ್ಲದಿದ್ದರೂ ಸಹ ಗಾಳಿ ಬಂದ ಕಡೆ ತೂರಿಕೊಂಡು ಹೋಗುವ ಬುದ್ಧಿಯನ್ನು ಅನಿವಾರ್ಯವಾಗಿ ಪ್ರದರ್ಶಿಸಲೇಬೇಕಾದ ಪರಿಸ್ಥಿತಿ ಉದ್ಭವಿಸಿ ನಿಮ್ಮ ಮಾನಸಿಕ ತೊಳಲಾಟಕ್ಕೆ ಕಾರಣವಾಗುತ್ತದೆ. ಹೌದು ಈ ಮೊದಲ ನಾಲ್ಕು ತಿಂಗಳು ನಿಮ್ಮ ಮನಸಿಗೆ ನೋವಾಗುವ ಕೆಲ ಘಟನೆಗಳು ನಡೆಯುವ ಸಾಧ್ಯತೆಗಳಿವೆ. ನಿಮಗೆ ಅತ್ಯಂತ ಸಹಕಾರಿಯಾಗುವುದೆಂದರೆ ಅದುವೇ ನಿಮ್ಮ ಮೌನ ! ಹೌದು ಈ ಮೊದಲ ನಾಲ್ಕು ತಿಂಗಳು ಆದಷ್ಟು ಹೆಚ್ಚು ಮೌನ ಮಾಡಿ. ಯಾರೋ ಇಬ್ಬರು ಜಗಳ ಮಾಡಿಕೊಳ್ಳುತ್ತಿದ್ದರೆ ಬಿಡಿಸಲು ಹೋಗಿ, ಅಲ್ಲಿ ನ್ಯಾಯಾಧೀಶರಾಗಲು ಹೋಗಬೇಡಿ. ಹಾಗೊಂದು ಪಕ್ಷ ಹೋದಲ್ಲಿ ಅವರಿಬ್ಬರೂ ನಂತರ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಒಂದಾಗುತ್ತಾರೆ. ಆದರೆ ಅವರಿಬ್ಬರಿಗೂ ನೀವು ಶತ್ರುವಾಗಿಬಿಡುತ್ತೀರಿ.

ಮೇನಿಂದ ಆಗಸ್ಟ್ ವರೆಗೆ

ಮೇನಿಂದ ಆಗಸ್ಟ್ ವರೆಗೆ

ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಈ ನಾಲ್ಕು ತಿಂಗಳು. ಅನಿವಾರ್ಯದ ಹಾಗೂ ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುತ್ತವೆ. ಆರೋಗ್ಯ ಸಹ ಸ್ವಲ್ಪ ಮಟ್ಟಿಗೆ ಕೈ ಕೊಡಬಹುದು. ಸಾಕ್ಷಿ ನುಡಿಯಲು ಹೋಗಿ ತಪ್ಪಿತಸ್ಥರಾಗಿ ಬಿಡುತ್ತೀರಿ. ನಿಮ್ಮವರೇ ನಿಮಗೆ ಮೋಸ ಮಾಡುತ್ತಿದ್ದಾರೆ ಅಥವಾ ಅವರಿಂದ ಸಾಧ್ಯವಾದರೂ ನಿಮಗೆ ಸಹಾಯ ಮಾಡುತ್ತಿಲ್ಲ ಎಂದು ಅನಿಸುತ್ತದೆ. ಯಾರಿಗೂ ಯಾವುದೇ ಕೆಲಸ ಮಾಡಿಕೊಡುತ್ತೇನೆ ಎಂದು ಮಾತು ಕೊಡಬೇಡಿ, ಕೊಟ್ಟು ಕೆಡಬೇಡಿ. ಸಮಸ್ಯೆ ಒಂದನ್ನು ಮಾಡಿಕೊಂಡು ನಂತರ ಅದಕ್ಕೆ ಪರಿಹಾರ ಮಾಡುವ ಬದಲು ಸಮಸ್ಯೆಯೇ ತಲೆದೋರದಂತೆ ಎಚ್ಚರ ವಹಿಸುವವರು ಬುದ್ದಿವಂತರೆನಿಸಿಕೊಳ್ಳುತ್ತಾರೆ. ಸ್ತ್ರೀಯರು ಆರೋಗ್ಯದ ವಿಚಾರದಲ್ಲಿ ಹಾಗೂ ವಿವಾಹಿತ ಸ್ತ್ರೀ ತನ್ನ ತವರು ಮನೆಯೊಂದಿಗಿನ ಸಂಬಂಧಗಳ ಬಗ್ಗೆ ಎಚ್ಚರ ವಹಿಸಬೇಕು. ವ್ಯಾಪಾರಿಗಳು ದೊಡ್ಡ ಪ್ರಮಾಣದ ಸಾಲಗಳನ್ನು ಮಾಡಿ ಬಂಡವಾಳ ಹೂಡುವುದು ಈ ನಾಲ್ಕು ತಿಂಗಳು ಬೇಡವೇ ಬೇಡ. ಉದ್ಯೋಗಿಗಳು ಮೇಲಧಿಕಾರಿಗಳೊಂದಿಗಿನ ವಿಶ್ವಾಸ ಹಾಳಾಗದಂತೆ ನೋಡಿಕೊಳ್ಳಿ. ಮಕ್ಕಳಲ್ಲಿ ಸ್ವಲ್ಪ ಹಠದ ಸ್ವಭಾವ ಹೆಚ್ಚಾಗಲಿದ್ದು, ಆಡ ಬಾರದ ಮಾತುಗಳನ್ನು ಆಡಬಹುದು.

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

ಉತ್ತಮ ಸಮಯದ ಆರಂಭವನ್ನು ವರ್ಷದ ಈ ಕೊನೆ ನಾಲ್ಕು ತಿಂಗಳಲ್ಲಿ ನೀವು ಕಾಣಬಹುದು. ಆರೋಗ್ಯ ಪರಿಪೂರ್ಣ ಸರಿಯಾಗದಿದ್ದರೂ ಸುಧಾರಿಸುವತ್ತ ಕಾಣುತ್ತದೆ. ನೋವು ತಡೆದುಕೊಳ್ಳುವ ಶಕ್ತಿ ಬರಲಿದೆ. ಈ ಹಿಂದೆ ನೀವು ಶಿಕ್ಷೆ ಅನುಭವಿಸಿದ ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ತಪ್ಪು ಇಲ್ಲ ಎನ್ನುವುದು ಎಲ್ಲರಿಗೂ ತಿಳಿದು ಬರುತ್ತದೆ. ನಿಮ್ಮ ತಾಳ್ಮೆ, ಸಹನೆ ಶ್ರೇಯಸ್ಸನ್ನು ಹೆಚ್ಚಿಸುತ್ತದೆ. ಬಹಳ ಕಷ್ಟಗಳ ನಂತರ ವರ್ಷದ ಈ ಕೊನೆ ನಾಲ್ಕು ತಿಂಗಳಲ್ಲಿ ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ಅದರಲ್ಲಿಯೂ ನೀವು ಸ್ವಲ್ಪ ಗಟ್ಟಿ ಮಾತನಾಡಿದರೂ ಸಹ ಸಂಬಂಧ ಮುರಿದು ಬೀಳುವ ಸಾಧ್ಯತೆಗಳಿವೆ. ಆದುದರಿಂದ ಸಾವಧಾನವಾಗಿ ಇರಿ. ನೀವು ಸತ್ಯವಂತರು. ಆದುದರಿಂದ ಒಳ್ಳೆಯತನವೇ ನಿಮ್ಮನ್ನು ಕಾಪಾಡಿ, ಉತ್ತಮ ಭವಿಷ್ಯ ಕೊಡುತ್ತದೆ.

ಪರಿಹಾರ

ಪರಿಹಾರ

ವೈದಿಕ: ಈ ವರ್ಷ ಧನ್ವಂತರಿ ಹವನ ಹಾಗೂ ಶನಿ, ಕೇತು ಶಾಂತಿ ಹವನ ತಪ್ಪದೆ ಮಾಡಿಸಿ

ಕ್ಷೇತ್ರ: ಬೆಂಗಳೂರಿನ ನೆಲಮಂಗಲದಿಂದ ದೊಡ್ಡಬಳ್ಳಾಪುರ ಹೋಗುವ ಮಾರ್ಗ ಮಧ್ಯೆ ಸಿಗುವ ಚಿಕ್ಕ ಮದುರೆ ಶನೈಶ್ಚರ ದೇಗುಲಕ್ಕೆ ಭೇಟಿ ನೀಡಿ. ಅಲ್ಲಿ ಕಬ್ಬಿಣದ ಬಾಂಡ್ಲಿಯಲ್ಲಿ ಕರಿಎಳ್ಳು ಹಾಗೂ ಶುದ್ಧವಾದ ಎಳ್ಳೆಣ್ಣೆ ದಾನ ಮಾಡಿ

ರತ್ನ: ಉತ್ತಮ ಗುಣಮಟ್ಟದ 'ಜಲರತ್ನ'ವನ್ನು ತ್ರಿದಿನ ಪೂಜಿಸಿ ಧರಿಸಿ.

ಸ್ತೋತ್ರ: ಪ್ರತಿ ದಿನ ಆಂಜನೇಯ ಸ್ವಾಮಿ ಅಷ್ಟೋತ್ತರ ತಪ್ಪದೆ ಪಠಿಸಿ

English summary
Sagittarius yearly horoscope 2017: You are more fatigue this year Sagittarius zodiac sign. You should take care of your health- Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X