ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹ ವರ್ಷ ಭವಿಷ್ಯ: ವ್ಯವಹಾರದಲ್ಲಿ ಹುಷಾರಾದರೆ ಜೀವನ ಸೂಪರ್

ಸಿಂಹ ರಾಶಿಯವರು ವ್ಯವಹಾರದಲ್ಲಿ, ಉದ್ಯೋಗದ ವಿಚಾರದಲ್ಲಿ ಎಚ್ಚರವಾಗಿದ್ದರೆ ಇಡೀ ವರ್ಷ ಚೆನ್ನಾಗಿ ಇರಬಹುದು. ಯಾರಿಗೂ ಸಾಲ ಕೊಡಬೇಡಿ, ಪಡೆಯಬೇಡಿ ಅನ್ನೋದು ಚೆನ್ನಾಗಿ ನೆನಪಿರಲಿ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

2017 ವರ್ಷ ಸಿಂಹ ರಾಶಿಯವರು ವ್ಯಾವಹಾರಿಕವಾಗಿ ಬಹಳ ಜಾಗರೂಕರಾಗಿ ಇರಬೇಕಾದ ಸಮಯ. ಅದರ ಅರ್ಥ ವ್ಯಾವಹಾರಿಕವಾಗಿ ನಷ್ಟ ಆಗುವುದು ಎಂದಲ್ಲ. ಆಶ್ಚರ್ಯ ಎಂಬಂತೆ ಹೆಚ್ಚು ಲಾಭದಾಯಕವಾಗಿ ವ್ಯಾಪಾರ ಆಗುತ್ತದೆ. ಆದರೆ ಅದನ್ನೇ ನಂಬಿ ಹೆಚ್ಚಿನ ಸಾಲ ಮಾಡಿ ಬಂಡವಾಳ ಹೂಡಿದರೆ ಮಾತ್ರ ವರ್ಷಾಂತ್ಯದಲ್ಲಿ ನಷ್ಟ ಕಟಿಟ್ಟ ಬುತ್ತಿ ಆಗುತ್ತದೆ.

ಸಿಂಹ ರಾಶಿಯವರು ಈ ವರ್ಷ ಸುವರ್ಣಾಕ್ಷರದಲ್ಲಿ ಬರೆದಿಟ್ಟುಕೊಂಡು ಆಚರಿಸಲೇ ಬೇಕಾದ ವಿಚಾರ ಎಂದರೆ ಸಾಲ ಯಾರಿಗೂ ಕೊಡ ಬೇಡಿ. ಯಾರಲ್ಲಿಯೂ ಸಾಲ ಮಾಡಬೇಡಿ. ಇನ್ನೂ ಮುಖ್ಯವಾದ ವಿಚಾರ: ಎಷ್ಟೇ ಹತ್ತಿರದವರಾದರೂ ಜಾಮೀನಾಗಿ ನಿಲ್ಲಬೇಡಿ. ಈ ವಿಚಾರಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಸಿಂಹ ರಾಶಿಯವರು ಪಾಲಿಸಿದರೆ ನಿಮಗೆ ಅತ್ಯುತ್ತಮ ವರ್ಷ ಆಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

Leo

ಅದೇ ಏನಾದರೂ ಪಾಲಿಸಲಿಲ್ಲ ಎಂದರೆ ಈ ವರ್ಷದ ಅಂತ್ಯ ಹಾಗೂ ಮುಂದಿನ ವರ್ಷ ಹಾಳಾಗುವುದರಲ್ಲಿ ಸಂಶಯವಿಲ್ಲ. ಸ್ತ್ರೀಯರು (ವಿವಾಹಿತರು ಹಾಗೂ ಅವಿವಾಹಿತರು) ತಮ್ಮ ಸ್ನೇಹಿತ ವರ್ಗವನ್ನು ಪುನರ್ ಪರಿಶೀಲನೆ ಮಾಡಿದಲ್ಲಿ ಉತ್ತಮ. ಅದರಲ್ಲಿಯೂ ಅವಶ್ಯವಿಲ್ಲದ ಗಂಡಸರ ಪರಿಚಯವನ್ನು ಹಾಗೂ ಅವರೊಂದಿಗಿನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಹಾಗೂ ಪರಿಚಿತ ಅತಿ ಅವಶ್ಯವಿರುವ ಗಂಡಸರೊಂದಿಗಿನ ಎಲ್ಲ ವ್ಯವಹಾರಗಳನ್ನು ಒಂದು ಹಂತಕ್ಕೆ ಸೀಮಿತಗೊಳಿಸುವುದು ಉತ್ತಮ.

ಯಾವುದೇ ಕಾರಣಕ್ಕೂ ಯಾವುದೇ ವಿಚಾರ ನ್ಯಾಯಾಲಯದ ಮೆಟ್ಟಿಲು ಹತ್ತದಂತೆ ಎಚ್ಚರ ವಹಿಸಿ. ಈ ವಿಚಾರ ಗಂಡಸರು ಹಾಗೂ ಹೆಂಗಸರು ಇಬ್ಬರಿಗೂ ಅನ್ವಯವಾಗುತ್ತದೆ. ವಿದ್ಯಾರ್ಥಿಗಳಿಗೂ ಈ ವರ್ಷ ಆರಂಭ ಹಾಗೂ ಮಧ್ಯದ ತನಕ ಉತ್ತಮವಾಗಿಯೇ ಇರುತ್ತದೆ. ಆ ನಂತರ ನೀವು ಮಾಡದ ತಪ್ಪಿಗೆ ನಿಮ್ಮ ಮೇಲೆಯೇ ಆರೋಪ ಬಂದು ಪೇಚಿಗೆ ಸಿಕ್ಕಿ ಬೀಳಬೇಕಾಗುವುದು.[ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ಅದೇ ಸಮಯದಲ್ಲಿ ಆಹಾರಾದಿ ವಿಚಾರಗಳಲ್ಲಿಯೂ ಎಚ್ಚರ ಅವಶ್ಯ ಅದರಲ್ಲಿಯೂ ಹೆಚ್ಚು ಸಮಸ್ಯೆಗಳು ಬಂದು ಪರೀಕ್ಷೆಗೆ ಕೂತುಕೊಳ್ಳಲಾಗದೆ ಒದ್ದಾಟ ಆಗುವ ಸಾಧ್ಯತೆಗಳು ವರ್ಷಾಂತ್ಯದಲ್ಲಿ ಹೆಚ್ಚು. 2017ರ ಆಗಸ್ಟ್ ಒಳಗೆ ಮುಗಿಸುವ ದೃಢವಾದ ನಂಬಿಕೆ ಇರುವ ವ್ಯವಹಾರಗಳಾದರೆ ಮಾತ್ರ ಭೂಮಿ ಖರೀದಿ, ಗೃಹ ನಿರ್ಮಾಣ ಇತ್ಯಾದಿಗಳಿಗೆ ಕೈ ಹಾಕಿ.
ಒಟ್ಟಾರೆ ವರ್ಷ ಫಲ 4/5

ಜನವರಿ-ಫೆಬ್ರವರಿ-ಮಾರ್ಚ್-ಏಪ್ರಿಲ್

ಜನವರಿ-ಫೆಬ್ರವರಿ-ಮಾರ್ಚ್-ಏಪ್ರಿಲ್

ವರ್ಷದ ಆರಂಭದ ಈ ನಾಲ್ಕು ತಿಂಗಳು ಮಾತ್ರ ನಿಮಗೆ ಅದ್ಭುತವಾಗಿ ಇರುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ. ಅವಿವಾಹಿತರಿಗೆ ವಿವಾಹ ನಿಶ್ಚಯ ಆಗುತ್ತದೆ. ಇನ್ನು ವಿವಾಹ ಆಗಿ ಸಂತಾನ ಅಪೇಕ್ಷಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಗಳು ಬಹಳ ಹೆಚ್ಚಾಗಿ ಕಾಣುತ್ತಿವೆ. ಮೊದಲೇ ಸ್ವಲ್ಪ ಗಾಂಭೀರ್ಯ ಹೆಚ್ಚು ಇರುವ ನಿಮಗೆ ಇನ್ನೂ ರಾಜಾರೋಷವಾಗಿ ತಿರುಗುವ ಕಾಲವಿದು. ನೀವು ನುಡಿದಂತೆ ಆಶಿಸಿದಂತೆ ಎಲ್ಲ ಕೆಲಸಗಳು ನಡೆಯುತ್ತಿರುವುದು ನಿಮಗೆ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ನೀಡುತ್ತದೆ. ಜಮೀನು ಖರೀದಿ ಅಥವಾ ಆಗಲೇ ಖರೀದಿಸಿದ ಜಾಗದಲ್ಲಿ ಗೃಹ ನಿರ್ಮಾಣ ಇತ್ಯಾದಿಗಳಿಗೆ ಇದು ಸಕಾಲ. ಸ್ತ್ರೀಯರಿಗೂ ಮನೆಯಲ್ಲಿ ಗೌರವ ಪ್ರೀತಿ ಹೆಚ್ಚಾಗಿ ಆನಂದದಿಂದ ಇರುತ್ತಾರೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಾಲ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಅಥವಾ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರಲ್ಲಿ ಸಂಶಯವಿಲ್ಲ.

ಮೇ-ಜೂನ್-ಜುಲೈ-ಆಗಸ್ಟ್

ಮೇ-ಜೂನ್-ಜುಲೈ-ಆಗಸ್ಟ್

ಇದು ಬಹಳ ಪ್ರಮುಖವಾದ ಘಟ್ಟ. ನಿಮಗಿದು ಪರೀಕ್ಷಾ ಕಾಲದಂತೆ. ಹಾಗಂತ ನಿಮಗೆ ಇದು ಕಷ್ಟ ಕಾಲ ಎಂದು ಅಲ್ಲ! ಈ ಸಮಯದಲ್ಲಿ ಸಹ ನೀವು ಬಹಳ ಸುಖ, ಸಂತೋಷದಲ್ಲಿಯೇ ಇರುತ್ತೀರಿ. ಆದರೆ ಅದೇ ಹುಮ್ಮಸ್ಸಿನಲ್ಲಿ ನೀವು ಏನೇನು ತೀರ್ಮಾನ ತೆಗೆದುಕೊಳ್ಳುತ್ತೀರಿ ಎನ್ನುವುದು ಪ್ರಮುಖವಾಗುತ್ತದೆ. ಹಿಂದಿನ ನಾಲ್ಕು ತಿಂಗಳಿನಲ್ಲಿ ಆದ ಲಾಭಗಳನ್ನು ಗಮನಿಸಿ ಅಧಿಕ ಲಾಭದ ಆಸೆಯಲ್ಲಿ ಬೇರೆಡೆ ಸಾಲ ಮಾಡಿ ಅಥವಾ ಕಷ್ಟಪಟ್ಟು ಕೂಡಿಟ್ಟ ಸಂಪಾದನೆ ವ್ಯಾಪಾರದಲ್ಲಿ ಸುರಿದರೆ ಭವಿಷ್ಯದ ದೃಷ್ಟಿಯಲ್ಲಿ ಹಾನಿಕಾರಕ. ಉದ್ಯೋಗಿಗಳು ಈಗ ಇರುವ ಉದ್ಯೋಗದಲ್ಲಿ ಬಹಳ ಬೇಡಿಕೆ ಇದೆ ಎನ್ನುವ ಭ್ರಮೆಯಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿನ ಬೇಡಿಕೆ ಇಟ್ಟು, ಬೇರೆಡೆ ಕೆಲಸಕ್ಕೆ ಹೋಗುತ್ತೇನೆ ಎಂದು ಬೀಗಿದರೆ ಮುಂದೆ ಆಪತ್ತು ಕಟ್ಟಿಟ್ಟ ಬುತ್ತಿ. ಹೊಗಳಿಕೆ ಬಂದರೂ ಸಹ ಬೀಗದೆ ಸರಿ ಇದ್ದರೆ ಈ ನಾಲ್ಕು ತಿಂಗಳು ಸಹ ಉತ್ತಮ.

ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್-ಡಿಸೆಂಬರ್

ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್-ಡಿಸೆಂಬರ್

ನೀವು ಅತೀಯಾದ ಆತ್ಮವಿಶ್ವಾಸದಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡುವ ಸಾಧ್ಯತೆಗಳಿವೆ. ಇನ್ನೂ ಕೆಲವರು ಕೊಡುವ ವಿಚಾರದಲ್ಲಿ ಚಿಂತನೆಗಳನ್ನು ಸಹ ಮಾಡಬಹುದು. ಆದರೆ ಹಾಗೆ ಮಾಡಿದಲ್ಲಿ ಮಾತ್ರ ನಿಮ್ಮ ದುರದೃಷ್ಟವನ್ನು ನೀವೇ ಆಮಂತ್ರಿಸಿದಂತೆ. ಹೊಸ ಕೆಲಸಕ್ಕಾಗಿ ಅಲೆಯುವ ಕಾಲ. ವಿದ್ಯೆ ಇದೆ ಆದರೆ ಯಾರೂ ನಿಮಗೆ ಅವಕಾಶ ಮಾತ್ರ ಕೊಡುತ್ತಿಲ್ಲ ಎಂನಿಸುತ್ತದೆ. ನಿಮಗಿಂತಲೂ ಕಡಿಮೆ ಓದಿದ ಅಥವಾ ಕಡಿಮೆ ಅನುಭವ ಇರುವವರಿಗೆ ಮಣೆ ಹಾಕುತ್ತಿದ್ದಾರೆ ಅನಿಸುತ್ತದೆ. ಇನ್ನೂ ಕೆಲವರಿಗೆ ಕೈಗೆ ಬಂದದ್ದು ಬಾಯಿಗೆ ಬರದೆ ಒದ್ದಾಟ. ವ್ಯಾಪಾರಿಗಳಿಗೆ ಅನಿವಾರ್ಯವಾಗಿ ಸಾಲ ಕೊಟ್ಟು ವ್ಯಾಪಾರ ಮಾಡಬೇಕಾದ ಸ್ಥಿತಿ. ಆದರೆ ಕ್ರಮೇಣ ಯಾವುದೇ ಸಾಲ ಮರುಪಾವತಿ ಆಗದೇ ಹಿಂಸೆ ಅನುಭವಿಸುವ ಕಾಲ. ಸ್ತ್ರೀಯರು ಕಳಂಕಗಳನ್ನು ಎದುರಿಸ ಬೇಕು. ನಿಮ್ಮವರೇ ವಿರುದ್ದವಾಗಿ ಸಾಕ್ಷಿ ಹೇಳುತ್ತಾರೆ. ನಿಮ್ಮ ಜೀವನದ ಚಿತ್ರಣ ಬದಲಾಗುತ್ತಿರುವುದು ಗಮನಕ್ಕೆ ಬರುವುದು ಖಚಿತ.

ಪರಿಹಾರ

ಪರಿಹಾರ

ವೈದಿಕ: ನೃಸಿಂಹ ಮಂತ್ರ ಜಪ ಮಾಡಿಸಿ, ದಶಾಂಶ ಹವನ ಮಾಡಿಸಿದರೆ ಅತ್ಯುತ್ತಮ
ಕ್ಷೇತ್ರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಇರುವ ಇಡಗುಂಜಿಯಲ್ಲಿ ಮಹಾಗಣಪತಿ ದರ್ಶನ ಮಾಡಿ, ಅಲ್ಲಿ ಸತ್ಯಗಣಪತಿ ವ್ರತ ಹಾಗೂ ಒಂದು ಕಾಯಿ ಗಣಹವನ ಮಾಡಿಸಿದರೆ ಅತ್ಯುತ್ತಮ
ರತ್ನ: ಉತ್ತಮ ಗುಣಮಟ್ಟದ 'ಮಾಣಿಕ್ಯ' ರತ್ನವನ್ನು (ಕನಿಷ್ಠ 5 cts ತೂಕ) ಬೆಳ್ಳಿಯಲ್ಲಿ ಉಂಗುರ ಅಥವಾ ಡಾಲರ್ ಮಾಡಿಸಿ ಮೂರು ದಿನ ಪೂಜಿಸಿ, ಅಭಿಮಂತ್ರಿಸಿ ಉಂಗುರದ ಬೆರಳಿಗೆ ಅಥವಾ ಕುತ್ತಿಗೆಯಲ್ಲಿ ಧರಿಸಿ.
ಸ್ತೋತ್ರ: ಪ್ರತೀ ದಿನ ತಪ್ಪದೇ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರವನ್ನು ಪಠಿಸಿ

English summary
Leo yearly horoscope 2017: It is a tremendous year for Leo zodiac sign. Don't be over confident and don't borrow and lend the money- Predictions by Pandit Vittal Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X