• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಗೆ ಸಾಡೇಸಾತಿ ಶನಿ ಶುಭ ತರುತ್ತಾ?

By ನಾಗನೂರಮಠ ಎಸ್.ಎಸ್.
|

ಇಡೀ ದೇಶಕ್ಕೆ ರಾಹುಲ್ ಗಾಂಧಿ ಯಾರೆಂದು ಗೊತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಯೂತ್ ಕಾಂಗ್ರೆಸ್ ಮತ್ತು ಎನ್ಎಸ್ ಯುಐ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾಗಿಯೂ 46 ವರ್ಷದ ರಾಹುಲ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಿಯೇ ಬಿಟ್ಟರು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ ಸಾಡೇಸಾತಿಯ ಮೊದಲ ಹಂತದಲ್ಲಿ ಪ್ರಧಾನಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಾಗ್ಯವಿಲ್ಲದೇ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದರು.

ತಮಗೆ ಸಾಡೇಸಾತಿ ಇದೆ ಎಂಬುದು ಬಹುಶಃ ರಾಹುಲ್ ಗೆ ಗೊತ್ತಿಲ್ಲದೇ ಇರಬಹುದು. ಇನ್ನು ರಾಹುಲ್ ಗಾಂಧಿಯವರ ಜನ್ಮದ ವಿವರ ತಿಳಿದುಕೊಂಡರೆ ಕೆಲ ಮಾಹಿತಿಗಳೇ ಸಿಗುತ್ತವೆ. ಕೆಲವರು ಜ್ಯೇಷ್ಠಾ ನಕ್ಷತ್ರದ ನಾಲ್ಕನೇ ಚರಣದಲ್ಲಿ ರಾಹುಲ್ ಹುಟ್ಟಿರುವುದರಿಂದ ವೃಶ್ಚಿಕ ರಾಶಿ ಎನ್ನುತ್ತಾರೆ. ಆದರೆ ಅವರದು ಧನುಸ್ಸು ರಾಶಿ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಏಕೆಂದರೆ ಧನಸ್ಸು ರಾಶಿಗೆ ಈಗ ಸಾಡೇಸಾತಿ ಒಂದನೇ ಹಂತದಲ್ಲಿದೆ. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಎರಡನೇ ಹಂತ ಶುರುವಾಗುತ್ತಿದೆ.[ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?]

19, ಜೂನ್, 1970 ರ ಶುಕ್ರವಾರದಂದು ಹೊಸದೆಹಲಿಯಲ್ಲಿ ಜನಿಸಿದ ರಾಹುಲ್ ಜನ್ಮ ನಕ್ಷತ್ರ ಮೂಲಾ. ಹುಣ್ಣಿಮೆಯಂದು ಹುಟ್ಟಿದ ಅವರದು ತುಲಾ ಲಗ್ನ. ಲಗ್ನಾಧಿಪತಿ ಶುಕ್ರನಾದರೆ, ರಾಶಿಯ ಅಧಿಪತಿ ಗುರುವಾಗಿದ್ದಾನೆ. ಪ್ರತಿ ಸಂವತ್ಸರದ ಶ್ರಾವಣ ಮಾಸದ ಶುಕ್ರವಾರದಂದು ಭರಣಿ ನಕ್ಷತ್ರವಿದ್ದಾಗ ರಾಹುಲ್ ಗೆ ಘಾತ ಕಾದಿರುತ್ತದೆ. ಇವರಿಗೆ ಸಾಡೇಸಾತಿ ಮುಗಿಯುವುದು 2023 ರಲ್ಲಿ

ಉಚ್ಚ, ನೀಚ, ವಕ್ರೀ ಇಲ್ಲ

ಉಚ್ಚ, ನೀಚ, ವಕ್ರೀ ಇಲ್ಲ

1994-95 ರಲ್ಲಿ ತಮ್ಮ ಎಂಎ ಮತ್ತು ಪಿಎಚ್ ಡಿ ಅಧ್ಯಯನ ಮುಗಿಸಿದ ರಾಹುಲ್ 2009 ಮತ್ತು 2014 ರಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಲೋಕಸಭೆಗೆ ಸಂಸದರಾಗಿ ಆರಿಸಿ ಬಂದರು. ಇವರ ಜನ್ಮಕಾಲದಲ್ಲಿ ಯಾವುದೇ ಗ್ರಹಗಳೂ ಉಚ್ಚ, ನೀಚ ಮತ್ತು ವಕ್ರೀ ಆಗಿಲ್ಲದಿರುವುದರು ಇವರ ಜಾತಕದ ವಿಶೇಷ ಎನ್ನಬಹುದು.

ಗುರು ಕೃಪೆ

ಗುರು ಕೃಪೆ

ಲಗ್ನದಲ್ಲಿಯೇ ಗುರು ಇರುವುದರಿಂದ ಇವರಿಗೆ ವಿದ್ಯೆ ಚೆನ್ನಾಗಿದೆ. ಮೇಲಾಗಿ ರಾಶ್ಯಾಧಿಪತಿ ಗುರುಕೃಪೆಯೂ ಇವರಿಗಿರುವುದರಿಂದ ವಿದೇಶದಿಂದ ಡಿಗ್ರಿ ಪಡೆಯಲು ಸಾಧ್ಯವಾಯಿತು. ಸದ್ಯಕ್ಕೆ ರಾಹುಲರಿಗೆ ಸಾಡೇಸಾತಿಯ ತಾಮ್ರ ಚರಣದಲ್ಲಿ ಬಂದಿದ್ದು ಸ್ವಲ್ಪ ನಿರಾಳವಾಗಿರಬಹುದು.

ಕುಜ ನೀಡಿದ ಧೈರ್ಯ

ಕುಜ ನೀಡಿದ ಧೈರ್ಯ

2017ರ ನಂತರ ಸ್ವಲ್ಪ ಹೆಚ್ಚಿನ ಪ್ರಮಾಣದ ತೊಂದರೆಗಳು ಕಂಡು ಬಂದರೆ, ದೇಹಾರೋಗ್ಯಕ್ಕೆ ಸಂಬಂಧಪಟ್ಟಂತೆ ಅಂದರೆ ಹೊಟ್ಟೆಗೆ ಸಂಬಂಧಪಟ್ಟ ಗ್ಯಾಸ್ಟ್ರಿಕ್ ಸೇರಿದಂತೆ ಅಜೀರ್ಣದಂತಹ ಕಿರಿಕಿರಿ ಕಾಡಬಹುದು. ಸದ್ಯಕ್ಕೆ ಮಂಗಳ ದಶೆ ನಡೆಯುತ್ತಿರುವುದರಿಂದ ಸ್ವಲ್ಪ ಧೈರ್ಯ ಹೆಚ್ಚಿರುತ್ತದೆ ಈ ಸಮಯದಲ್ಲಿ ಅದಕ್ಕೆಂದೇ ಕೆಲವೊಂದು ಕಡೆ ರಾಹುಲ್ ಕಠಿಣವಾಗಿ ಮಾತನಾಡುತ್ತಾರೆ.

ರಾಹುವಿನಿಂದ ರಾಜಕೀಯ ಏರಿಳಿತ

ರಾಹುವಿನಿಂದ ರಾಜಕೀಯ ಏರಿಳಿತ

ಉದಾಹರಣೆಗೆ ಮೊನ್ನೆ ನೋಟ್ ಬಂದ್ ಆದ ಸಂದರ್ಭದಲ್ಲಿ ಬ್ಯಾಂಕ್ ನಲ್ಲಿ ಕ್ಯೂ ನಿಂತು ಎಲ್ಲರ ಗಮನ ಸೆಳೆಯುವಂಥಹ ಧೈರ್ಯ ತೋರಿದ್ದು ಇವರ ದಶಾ ಸಮಯದಿಂದಲೇ. 2019ರಿಂದ ರಾಹು ದಶಾ ಶುರುವಾಗುವುದರಿಂದ ಕೆಲವೊಂದು ರಾಜಕೀಯ ಏರಿಳಿತಗಳು ಶುರುವಾಗುತ್ತವೆ. ಕೆಲ ಬಾರಿ ತಲೆ ಚಿಟ್ಟು ಹಿಡಿಸುವಂತಹ ಸಮಸ್ಯೆಗಳು ಉದ್ಭವಿಸುವುದರಿಂದ ಅವುಗಳ ಪರಿಹಾರಕ್ಕಾಗಿ ವಿಪರೀತ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ.

ಸಾಡೇಸಾತಿಯಿಂದ ವಿವಾಹ ವಿಳಂಬ

ಸಾಡೇಸಾತಿಯಿಂದ ವಿವಾಹ ವಿಳಂಬ

ಸದ್ಯಕ್ಕೆ ಕೇತು ವಿಂಶೋತ್ತರಿ ದಶೆ ನಡೆಯುತ್ತಿರುವುದರಿಂದ ಕಾಲಿಗೆ ಸಂಬಂಧಪಟ್ಟ ನೋವು, ಮೊಣಕಾಲು ನೋವಿನನುಭವ ಆಗುತ್ತದೆ. ಅಲ್ಲದೇ ಹೆಚ್ಚಿನ ಪ್ರಯಾಣದಿಂದ ಆಯಾಸ ಹೆಚ್ಚುತ್ತದೆ. ರಾಜಯೋಗದಲ್ಲಿ ಜನಿಸಿದ ರಾಹುಲ್ ಗೆ ಮದುವೆ ವಿಳಂಬವಾಗುತ್ತಿರುವುದಕ್ಕೆ ಕಾರಣ ಸಾಡೇಸಾತಿಯೇ. ಆದರೆ ಸಾಡೇಸಾತಿಗೆ ಸಂಬಂಧಪಟ್ಟಂತೆ ಕೆಲವೊಂದು ಪರಿಹಾರಗಳನ್ನು ಮಾಡಿಸಿಕೊಂಡರೆ ಕಂಕಣ ಭಾಗ್ಯವೂ ರಾಹುಲ್ ಗಿದೆ.

ಶನಿ ಅನುಗ್ರಹಿಸಿದರಷ್ಟೇ ಕುರ್ಚಿ

ಶನಿ ಅನುಗ್ರಹಿಸಿದರಷ್ಟೇ ಕುರ್ಚಿ

ಇನ್ನು ನಕ್ಷತ್ರ ವಿಚಾರಕ್ಕೆ ಬಂದಾಗ ಮಹಾಲಕ್ಷ್ಮಿಯು ಜನಿಸಿದ್ದು ಮೂಲಾ ನಕ್ಷತ್ರದಲ್ಲಿಯೇ ಎನ್ನಲಾಗುತ್ತದೆ. ಹೀಗಾಗಿ ಹಣಕಾಸಿನ ಕೊರತೆ ಇಲ್ಲದ ರಾಹುಲ್ ಗೆ ಪ್ರಧಾನಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಾಗ್ಯವನ್ನು ಮಹಾಮಹಿಮ ಶನಿದೇವರು ಮಾತ್ರ ಕರುಣಿಸಲು ಸಾಧ್ಯ ಎಂಬುದು ಸತ್ಯವಾದ ಮಾತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Will Rahul Gandhi get good results during Sade sathi period? Astrologer S.S.Naganooramata analyses planetary position of AICC Vice president Rahul Gandhi birth chart according to Moon sign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more