ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ಮಾಸದಲ್ಲಿ ಐದು ಹನುಮನ ದರ್ಶನ ಏಕೆ?

By ನಾಗನೂರಮಠ ಎಸ್.ಎಸ್.
|
Google Oneindia Kannada News

ಈಗ ಅಧಿಕ ಆಷಾಢ ಮಾಸ ಬಂದಿರುವುದರಿಂದ ದೇವಾನುದೇವತೆಗಳು ಭೂಲೋಕದಲ್ಲಿ ವಿಹರಿಸುತ್ತಿರುತ್ತಾರೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಈ ತರಹದ ಅಧಿಕ ಮಾಸವು ಕೇವಲ ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ.

ಈ ಸಮಯದಲ್ಲಿ ಕೆಲವೊಂದು ಆಚರಣೆಗಳನ್ನು ಮಾಡಬೇಕಾಗುತ್ತದೆ. ಮಾಡಿದರೆ ತುಂಬಾ ಒಳ್ಳೆಯದು. ಆಗೋಲ್ಲ ಮತ್ತೊಮ್ಮೆ ನೋಡೋಣ ಎನ್ನುವವರು ಮತ್ತೆ ಮುಂದಿನ ನಾಲ್ಕು ವರ್ಷದವರೆಗೆ ಕಾಯಬೇಕಾಗುತ್ತದೆ.

ಅಧಿಕ ಮಾಸದಲ್ಲಿ ಮಾಡಬೇಕಾದ ಕೆಲ ಆಚರಣೆಗಳು. ತಪ್ಪಿಸದೇ ಮಾಡಿದರೆ ಒಳ್ಳೆಯದು.

* ಅದಷ್ಟು ಮನೆಯಲ್ಲಿದ್ದ ದೇವರನ್ನು ಹೆಚ್ಚಾಗಿ ತಪ್ಪಿಸದೇ ಪೂಜಿಸಬೇಕು.

* ಮನೆಗೆ ಹತ್ತಿರದ ದೇವಸ್ಥಾನಕ್ಕೆ ಪ್ರತಿನಿತ್ಯ ಭೇಟಿ ನೀಡಬೇಕು.

* ಮಂಗಳವಾರ ಅಥವಾ ಶನಿವಾರದಂದು ಕನಿಷ್ಠ ಐದು ಹನುಮನ ದೇವಸ್ಥಾನಗಳಿಗೆ ಭೇಟಿ ನೀಡಬೇಕು. ಸೂರ್ಯೋದಯದಿಂದ ಸೂರ್ಯಾಸ್ಥದೊಳಗಾಗಿ ಹನುಮನ ದರ್ಶನ ಪಡೆದುಕೊಳ್ಳಬೇಕು. ಸಾಧ್ಯವಾದರೆ ಬರಿಗಾಲಿನಿಂದಲೇ ಹೋಗಬೇಕು. ಬರೀ ಹೊಟ್ಟೆಯಲ್ಲಿ ಹೋದರೆ ತುಂಬಾ ಒಳ್ಳೆಯದು. ಮೌನ ಆಚರಣೆ ಮಾಡಿಕೊಂಡು ದರ್ಶನ ಪಡೆದುಕೊಂಡು ಬರಬಹುದು. [ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ]

Why one should visit Hanuman temple in Adhika Ashadha?

* ಐದು ಹನುಮನ ದೇವಸ್ಥಾನಗಳಿಗೆ ಹೋಗುವವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆ ಹೋಗಬಹುದು.

* ಹನುಮನ ದೇವಸ್ಥಾನದಲ್ಲಿ ಗಂಟೆ ಬಾರಿಸಬಾರದು. ಗದ್ದಲ ಮಾಡಬಾರದು. ಪ್ರತಿಯೊಂದು ದೇವಸ್ಥಾನದಲ್ಲಿ ಹನುಮಾನ ಚಾಲೀಸಾ ಪಠಿಸಬೇಕು. ನಂತರ ಮುಂದಿನ ದೇವಸ್ಥಾನಕ್ಕೆ ತೆರಳಬೇಕು.

* ದೇವಸ್ಥಾನದಿಂದ ಮರಳಿದ ನಂತರ ಕೈಕಾಲು ತೊಳೆಯುವುದು ಸ್ನಾನ ಮಾಡುವುದು ಮಾಡಬಾರದು.

* ಐದು ಹನುಮನ ದೇವಸ್ಥಾನಗಳಿಗೆ ಹೋಗುವಾಗ ಕೈಲಾದಷ್ಟು ಉಪಹಾರ ತೆಗೆದುಕೊಂಡು ಹೋಗಬಹುದು. ಅಲ್ಲಿ ಬಂದ ಕೆಲವರಿಗೆ ನಿಮ್ಮ ಕೈಲಾದಷ್ಟು ಪ್ರಸಾದ ನೀಡಬೇಕು.

* ಪ್ರತಿ ದೇವಸ್ಥಾನದಲ್ಲಿಯೂ ತೆಂಗಿನಕಾಯಿ ಒಡೆಯಬೇಕೆಂಬ ನಿಯಮವಿಲ್ಲ. ಆದರೆ ಸಂಕಲ್ಪ ಮಾಡಿಕೊಂಡಿದ್ದರೆ ಆ ತರಹ ಮಾಡಬಹುದು.

* ಐದು ಹನುಮನ ದೇವಾಲಯಗಳಲ್ಲಿ ಮುಂದಿನ ಅಧಿಕ ಆಷಾಢದಲ್ಲಿ ಇದೇ ತರಹ ದರ್ಶನಕ್ಕೆ ಬರುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು.

* ಸಾಡೇಸಾತಿ, ಅಷ್ಟಮಶನಿ, ಪಂಚಮಶನಿ, ಅರ್ಧಾಷ್ಟಮ ಶನಿಕಾಟದಲ್ಲಿರುವವರು ತಪ್ಪಿಸದೇ ಐದು ಹನುಮನ ದೇವಾಲಯಗಳಿಗೆ ಹೋಗಲೇಬೇಕು. [ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ ಸಲ್ಲಿಕೆ?]

Why one should visit Hanuman temple in Adhika Ashadha?

* ಐದು ಹನುಮನ ದೇವಾಲಯಗಳನ್ನು ಮೊದಲೇ ನೋಟ್ ಮಾಡಿಟ್ಟುಕೊಂಡು, ಒಂದು ರೂಟ್ ಮಾಡಿ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಖರ್ಚಾಗದಂತೆ ದೇವರ ದರ್ಶನ ಮಾಡಿಕೊಳ್ಳಬೇಕು.

* ಸಾಧ್ಯವಾದರೆ ದೂರದಲ್ಲಿರುವ ಆತ್ಮೀಯರಿಗೆ ಐದು ಹನುಮನ ದೇವಾಲಯಗಳನ್ನು ದರ್ಶನ ಮಾಡುವುದನ್ನು ತಿಳಿಸಬೇಕು.

* ದೇವಸ್ಥಾನದಲ್ಲಿ ದೇವರ ಹುಂಡಿಗೇನೆ ಕಾಣಿಕೆ ಹಾಕಬೇಕು.

* ಅರ್ಹ ನಿರ್ಗತಿಕರಿಗೆ ಮಾತ್ರ ಭಿಕ್ಷೆ ನೀಡಬೇಕು. ಸಬಲರಿಗೆ ಭಿಕ್ಷೆ ನೀಡಿದರೆ ಅವರ ಶನಿಕಾಟ ನೀವು ಹಂಚಿಕೊಂಡಂತೆ ಎಂಬುದನ್ನು ಮರೆಯಬಾರದು.

* ಕಪ್ಪು ಬಟ್ಟೆ ಧರಿಸಿಕೊಂಡು ದರ್ಶನಕ್ಕೆ ಹೋಗಬಾರದು.

* ಸಾಧ್ಯವಿದ್ದರೆ ಕೆಂಪು ಮತ್ತು ಅದಕ್ಕೆ ಹತ್ತಿರದ ಬಣ್ಣಗಳ ಬಟ್ಟೆಗಳನ್ನು ಧರಿಸಿಕೊಂಡು ಹೋಗಬಹುದು.

* ತಿಂಗಳಿನಲ್ಲಿ ಕೇವಲ ನಾಲ್ಕು ಶನಿವಾರಗಳು ಬಂದಿರುವುದರಿಂದ ಪ್ರತಿ ಶನಿವಾರವೂ ಹೋಗಬಹುದು ಅನುಕೂಲವಿದ್ದರೆ. ಆದರೆ ಮೊದಲ ಸಲ ಹೋದ ಹನುಮನ ದೇವಾಲಯಗಳನ್ನು ಬಿಟ್ಟು ಮತ್ತೆ ಬೇರೆ ಹನುಮನ ದೇವಾಲಯಗಳಿಗೆ ಹೋಗಿ ಬರಬೇಕು.

* ಇಂದಿನಿಂದಲೇ ಅಂದರೆ ಇಂದೇ ಶನಿವಾರದಂದು ಈ ಪದ್ಧತಿಯನ್ನು ಸಾಧ್ಯವಿದ್ದವರು ಮಾಡಬೇಕು.

* ಹನುಮನು ಚಿರಂಜೀವಿ ಎಂಬ ಪ್ರತೀತಿ ಇದೆ. ಅವನು ಧ್ಯಾನಾಸಕ್ತನಾಗಿದ್ದಾನೆ ಎಂಬುದೂ ಪ್ರತೀತಿ ಇದೆ. ಆದ್ದರಿಂದ ಹನುಮನ ದೇವಾಲಯದಲ್ಲಿ ಅತಿಯಾಗಿ ಗದ್ದಲ ಮಾಡಬಾರದು. ಅಲ್ಲಿ ಧ್ಯಾನ ಭಂಗಿಯಲ್ಲಿ ಕುಳಿತು ಹನುಮನ ಸ್ಮರಣೆ ಮಾಡಬೇಕು.

* ಗಂಡ-ಹೆಂಡತಿ ಜಗಳ, ಅನಾರೋಗ್ಯದ ತೊಂದರೆ, ಅಧೈರ್ಯವಂತರು, ಪ್ರೀತಿಗಾಗಿ ಹಾತೊರೆಯುವವರು ಐದು ಹನುಮನ ದರ್ಶನ ಪಡೆದುಕೊಳ್ಳಬೇಕು. ಯಾಕೆಂದರೆ ರಾಮ-ಸೀತೆಯರನ್ನು ಕೂಡಿಸಿದವನು, ಅತೀವ ಧೈರ್ಯ ಮತ್ತು ಬಲ ಹೊಂದಿದವನು ಹನುಮನೊಬ್ಬನೇ ಎಂಬುದು ಎಲ್ಲರಿಗೂ ಗೊತ್ತಿದ್ದೇ.

* ಹನುಮನ ದೇವಾಲಯದಲ್ಲಿ ಅನುಕೂಲವಿದ್ದರೆ ಅಥವಾ ಸಾಧ್ಯವಿದ್ದರೆ ಹನುಮನ ಪಾದಗಳಿಗೆ ಹಣೆ ಹಚ್ಚುವುದನ್ನು ಮರೆಯಬಾರದು.

* ಕನಿಷ್ಠ ಐದು ಪ್ರದಕ್ಷಿಣೆಗಳನ್ನು ಹನುಮನಿಗೆ ಅವಶ್ಯ.

* ಹನುಮನ ದೇವಾಲಯದಲ್ಲಿ ಬೇರೆ ದೇವರುಗಳು ಇದ್ದರೆ, ಅವುಗಳಿಗೂ ನಮಸ್ಕರಿಸಬೇಕು.

* ಹನುಮನ ದರ್ಶನ ಮಾಡಿ ಬಂದ ನಂತರ ಚಿಟಿಕೆಯಷ್ಟು ಸಿಹಿಯನ್ನು ಹಾಕಿಕೊಳ್ಳಬೇಕು.

English summary
Why one should visit 5 Hanuman temples in Adhika Ashadha on Saturdays? Here are the reasons. Astrologer SS Naganurmath has explained who should visit and why in this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X