• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ದಿಕ್ಕಿಗೆ ತಲೆ ಹಾಕಿ ನಿದ್ರಿಸಿದರೆ ಉತ್ತಮ, ಇಲ್ಲಿದೆ ವಾಸ್ತು ಟಿಪ್ಸ್

By ರಮಾಕಾಂತ್
|
Google Oneindia Kannada News
   ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಉತ್ತಮ | ಇಲ್ಲಿದೆ ವಾಸ್ತು ಟಿಪ್ಸ್ | Filmibeat Kannada

   ಯಾವ ರಾಶಿಯವರ ನಿದ್ರೆ ಯಾವ ರೀತಿಯಲ್ಲಿ ಇರುತ್ತದೆ, ಮಾಡಿಕೊಳ್ಳಬೇಕಾದ ಬದಲಾವಣೆಗಳೇನು ಇತ್ಯಾದಿ ವಿಚಾರಗಳನ್ನು ತಿಳಿಸಿಕೊಟ್ಟಿದ್ದೆ. ಅದರ ಮುಂದುವರಿದ ಭಾಗ ಅನ್ನೋ ಹಾಗೆ ಇಂದಿನ ಲೇಖನದಲ್ಲಿ ಯಾವ ದಿಕ್ಕಿಗೆ ತಲೆ ಮಾಡಿ ನಿದ್ರೆ ಮಾಡಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ.

   ಹೇಗೆ ಉತ್ತಮ ಆಹಾರ ದೇಹಕ್ಕೆ ಮುಖ್ಯವೋ ಅದೇ ರೀತಿ ಅತ್ಯುತ್ತಮ ನಿದ್ದೆ ಕೂಡ ಅಷ್ಟೇ ಮುಖ್ಯ. ಅಂಥ ನಿದ್ದೆಯನ್ನೇ ಕಳೆದುಕೊಂಡು ಬಿಟ್ಟರೆ ಒತ್ತಡ, ಚಿಂತೆ ಹಾಗೂ ನಿರಾಸಕ್ತಿ ಮೂಡುತ್ತದೆ. ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು? ಇದಂತೂ ಸಾಮಾನ್ಯವಾಗಿ ಕೇಳಿಬರುತ್ತಲೇ ಇರುವ ಪ್ರಶ್ನೆ. ಈ ಪ್ರಶ್ನೆಯೇ ನಿಮ್ಮ ನಿದ್ದೆಯನ್ನೂ ಕೆಡಿಸಿದ್ದರೆ ಇನ್ನು ಯೋಚಿಸುವ ಅಗತ್ಯ ಇಲ್ಲ.

   ಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರಮೇಷದಿಂದ ಮೀನದವರೇ ಎಚ್ಚರ! ಏಕೆಂದರೆ, ಇದು ನಿದ್ದೆಯ ವಿಚಾರ

   ಅಂದಹಾಗೆ ವಾಸ್ತುಶಾಸ್ತ್ರ ಎಂಬುದು ವಿಜ್ಞಾನ ಮತ್ತು ಜೀವನದ ಮಿಳಿತ. ಅದರಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎಂಬ ಬಗ್ಗೆ ಸ್ಪಷ್ಟ ಉಲ್ಲೇಖ ಮಾಡಲಾಗಿದೆ. ಇನ್ನೇಕೆ ತಡ, ಯಾವ ದಿಕ್ಕಿನ ಕಡೆ ತಲೆ ಹಾಕಿ ಮಲಗುವುದು ಉತ್ತಮ ಎಂಬ ಲೇಖನವನ್ನು ಓದಿಕೊಂಡು ಬಿಡಿ.

   ಉತ್ತರ ದಿಕ್ಕಿಗೆ ಸುತರಾಂ ತಲೆ ಹಾಕಿ ಮಲಗಬೇಡಿ

   ಉತ್ತರ ದಿಕ್ಕಿಗೆ ಸುತರಾಂ ತಲೆ ಹಾಕಿ ಮಲಗಬೇಡಿ

   ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜತೆಗೆ ಬಹಳ ತೊಂದರೆಗಳೂ ಆಗುತ್ತವೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆಯಾಗಿ ಮಾಡುವುದಿಲ್ಲ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ- ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆ ಅಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆ ಹಾಕದಂತೆ ಮಲಗುವ ಹಾಸಿಗೆಯನ್ನು ಹೊಂದಿಸಬೇಕು.

   ದಕ್ಷಿಣ ದಿಕ್ಕಿಗೆ ಮಲಗಿದರೆ ಹೀಗೆ

   ದಕ್ಷಿಣ ದಿಕ್ಕಿಗೆ ಮಲಗಿದರೆ ಹೀಗೆ

   ಮನೆಯ ಹಿರಿಯರು, ಯಜಮಾನ- ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಹಲವು ಪದ್ಧತಿ ಹಾಗೂ ಸಂಸ್ಕೃತಿ ಪ್ರಕಾರ ಈ ದಿಕ್ಕಿಗೆ ತಲೆ ಇರಿಸಿಕೊಳ್ಳುವುದು ಸರಿ. ವಾಸ್ತು ಪ್ರಕಾರ, ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜತೆಗೆ ಸಂತೋಷವೂ ಸಿಕ್ಕಿ, ಕನಸುಗಳು ಈಡೇರುತ್ತವೆ. ಒಂದು ವೇಳೆ ಅಂದುಕೊಂಡ ಕೆಲಸಗಳು ನಿಧಾನ ಆಗುತ್ತಿವೆ, ಪೂರ್ತಿ ಮಾಡಲು ಆಗುತ್ತಿಲ್ಲ ಅನಿಸಿದರೆ ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿ, ಪ್ರಯತ್ನಿಸಿ ನೋಡಿ. ದಕ್ಷಿಣ ದಿಕ್ಕಿಗೆ ಮಲಗುವುದರಿಂದ ಮನಶ್ಶಾಂತಿ ದೊರೆತು, ಆರೋಗ್ಯ ವೃದ್ಧಿ ಆಗುತ್ತದೆ.

   ಪೂರ್ವಕ್ಕೆ ಮಲಗಿ ಹೊಸ ಚೈತನ್ಯ ಪಡೆಯಿರಿ

   ಪೂರ್ವಕ್ಕೆ ಮಲಗಿ ಹೊಸ ಚೈತನ್ಯ ಪಡೆಯಿರಿ

   ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆ ನಿದ್ದೆ ಆಗುತ್ತದೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕು ಒಳ್ಳೆಯದು. ಅನಾರೋಗ್ಯದಿಂದ ಬಳಲಿ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೀನಿ ಅನ್ನೋರಿಗೆ ಪೂರ್ವ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

   ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ

   ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಿದರೆ

   ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ತುಂಬ ಒಳ್ಳೆಯದೇನಲ್ಲ. ಆದರೂ ಯಶಸ್ಸು ಬೇಕು ಎಂದು ಬಯಸುವವರಿಗೆ ಇದು ಸರಿಯಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆಅರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಆಚೆ ಬರಬಹುದು. ಹೆಸರು, ಕೀರ್ತಿ, ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ.

   ಒಳ್ಳೆ ನಿದ್ದೆ ಬರಲು ಕೆಲವು ಟಿಪ್ಸ್

   ಒಳ್ಳೆ ನಿದ್ದೆ ಬರಲು ಕೆಲವು ಟಿಪ್ಸ್

   ಒಳ್ಳೆ ನಿದ್ದೆ ಬರಬೇಕು ಅಂದರೆ ಬೀಮ್ ಗಳ ಕೆಳಗೆ ಮಲಗಬೇಡಿ. ಅಷ್ಟೇ ಅಲ್ಲ, ಅಂದರೆ ತಾರಸಿಗೆ ಹಾಕಿರುವ ಬೀಮ್ ಅಥವಾ ಯಾವುದೇ ಭಾರವಾದ ವಸ್ತುವಿನ ಅಡಿಯಲ್ಲಿ ಮಲಗಿದರೂ ಮಾನಸಿಕ ಖಿನ್ನತೆ ಹಾಗೂ ಆರೋಗ್ಯ ಸಮಸ್ಯೆ ಆಗುತ್ತದೆ.

   ಇನ್ನು ಕೋಣೆಯ ಮೂಲೆಗಳಿಗೆ ನಿಮ್ಮ ಹಾಸಿಗೆ ಅಥವಾ ಮಂಚ ಹಾಕಬೇಡಿ. ಇದರಿಂದ ನಿಮ್ಮ ಮನಸ್ಸು ಹಾಗೂ ದೇಹದ ಮೇಲೆ ಒತ್ತಡ ಆಗುತ್ತದೆ. ನಿಮ್ಮ ಸಾಮರ್ಥ್ಯವೂ ಕಡಿಮೆ ಆದಂತೆ ಅನಿಸುತ್ತದೆ.

   ನಿಮ್ಮ ಮಂಚದ ಕೆಳಗೆ ಏನನ್ನೂ ಇಡಬಾರದು. ಅದು ಖಾಲಿಯಾಗಿಯೇ ಇರಬೇಕು. ಜಾಗ ಇದೆಯಲ್ಲಾ ಅನ್ನೋ ಕಾರಣಕ್ಕೆ ಬೇಡದ ವಸ್ತುಗಳನ್ನು ಇಡಬೇಡಿ.

   English summary
   Which is the best sleeping direction and position as per Vastu? Here is the best and useful tips by astrologer, numerologist and vastu expert Ramakanth.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X