ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಯಾವ ರಾಶಿಯವರು ಯಾವ ಉದ್ಯೋಗ ಮಾಡಿದರೆ ಸೂಕ್ತ? ಆಯಾ ರಾಶಿಯವರ ಗುಣಕ್ಕೆ ತಕ್ಕ ಹಾಗೆ ಉದ್ಯೋಗ-ವೃತ್ತಿ ಅಥವಾ ವ್ಯಾಪಾರ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂದು ಸಮಗ್ರವಾಗಿ ವಿವರಿಸಿರುವ ಲೇಖನ ಇದು

By ರವೀಶ್ ಗೌತಮ್
|
Google Oneindia Kannada News

ನಾವು ಆರಿಸಿಕೊಳುವ ಉದ್ಯೋಗ ನಮ್ಮ ರಾಶಿ, ಜಾತಕದ ಗ್ರಹಸ್ಥಿತಿ ಎರಡಕ್ಕೂ ತಾಳೆಯಾದರೆ ಯಶಸ್ಸು ತುಂಬಾ ಜೋರಾಗಿರುತ್ತದೆ. ಒಂದು ವೇಳೆ ಒಂದಕ್ಕೊಂದು ಸರಿ ಹೊಂದಲ್ಲ ಅಂತಾದರೆ ಗುಡ್ಡಕ್ಕೆ ಕಲ್ಲು ಹೊತ್ತಂತೆ. ಏಕೆಂದರೆ, ಒಂದೋ ಅದರಲ್ಲಿ ಯಶಸ್ಸು ಸಿಗದೆ, ಬೇಸರವಾಗಿ ಮನಸಾರೆ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗದಿರಬಹುದು.

ಪದೇಪದೇ ಸೋಲು ಕಂಡು ಪ್ರಯತ್ನ ಮಾಡುವ ಸಂಕಲ್ಪ ಶಕ್ತಿಯನ್ನೇ ಕಳೆದುಕೊಂಡು ಬಿಡಬಹುದು. ಎರಡರಲ್ಲಿ ಯಾವುದೇ ಆದರೂ ಅಪಾಯಕಾರಿಯೇ ಅಲ್ಲವಾ? ಆದ್ದರಿಂದ ರಾಶಿಯ ಮೇಲೆ ಅವಲಂಬಿತವಾದ ನಮ್ಮ ಸ್ವಭಾವಕ್ಕೆ ಹಾಗೂ ರಾಶಿಯ ಅಧಿಪತಿ ಪ್ರಭಾವ ಬೀರುವಂಥ ಉದ್ಯೋಗ, ವೃತ್ತಿ ಅಥವಾ ವ್ಯಾಪಾರ ಆರಿಸಿಕೊಳ್ಳುವುದು ಸೂಕ್ತ.[ಜ್ಯೋತಿಷ್ಯ: ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತೆ?]

ಇನ್ನೊಂದು ಮಾತು ಯಾವುದೇ ವ್ಯಕ್ತಿಯ ಜಾತಕದಲ್ಲಿ ಲಗ್ನದಿಂದ ದಶಮ, ಏಕಾದಶ (ಹತ್ತು, ಹನ್ನೊಂದು) ಹಾಗೂ ಐದನೇ ಸ್ಥಾನ ಬಹಲ ಮುಖ್ಯ. ಆ ಸ್ಥಾನಗಳಲ್ಲಿ ಯಾವ ಗ್ರಹವಿದೆ. ಅದು ಯಾವ ರಾಶಿಯ ಮನೆ. ಅಲ್ಲಿರುವ ಗ್ರಹಕ್ಕೆ ಯಾವ ಗ್ರಹದ ದೃಷ್ಟಿಯಿದೆ ಇತರ ಅಂಶಗಳನ್ನು ಒಮ್ಮೆ ಜ್ಯೋತಿಷಿಗಳಲ್ಲಿ ತೋರಿಸಿ, ಆ ನಂತರ ನಿಮ್ಮ ರಾಶಿಗೆ ಹೊಂದುವ ಉದ್ಯೋಗವೋ, ವೃತ್ತಿಯೋ ಅಥವಾ ವ್ಯಾಪಾರವನ್ನೋ ಆರಿಸಿಕೊಂಡರೆ ಒಳಿತು.

ಇಂದಿನ ಲೇಖನದಲ್ಲಿ ರಾಶಿಗೆ ಅನುಗುಣವಾಗಿ ಆಗಿಬರುವ ಉದ್ಯೋಗ-ವೃತ್ತಿ ಅಥವಾ ವ್ಯಾಪಾರದ ಮಾಹಿತಿಯನ್ನು ನೀಡಲಾಗುತ್ತಿದೆ. ಒಮ್ಮೆ ಓದಿಕೊಳ್ಳಿ.[ಯುಗಾದಿಗೆ ದ್ವಾದಶ ರಾಶಿಗಳಿಗೆ ಆಯವ್ಯಯ ಹೇಗಿದೆ?]

ಮೇಷ

ಮೇಷ

ವಿಪರೀತ ಚಟುವಟಿಕೆಯ, ಸ್ವತಂತ್ರ ಆಲೋಚನೆಯ ಮೇಷ ರಾಶಿಯವರು ಸ್ಪರ್ಧಾತ್ಮಕ ಮನೋಭಾವದವರು. ಜನ್ಮತಃ ನಾಯಕತ್ವ ಗುಣ ಇರುವಂಥವರು. ಎಷ್ಟೋ ಸಲ ತಮ್ಮ ಸ್ವಂತ ಬದುಕನ್ನೇ ವೃತ್ತಿಗಾಗಿ ತ್ಯಾಗ ಮಾಡುವಂಥವರು. ಸದಾ ಅದ್ಭುತ-ಅಮೋಘ ಎನಿಸುವಂಥ ಆಲೋಚನೆಯ ಬಗ್ಗೆ ಧೇನಿಸುವ ಇವರಿಗೆ ಸಣ್ಣ-ಪುಟ್ಟ ವಿಷಯಗಳ ಬಗ್ಗೆ ಆಸಕ್ತಿ ಇರದು.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

ಕಂಪೆನಿಯ ಪ್ರಮೋಟರ್ಸ್, ಷೇರು ಬ್ರೋಕರ್, ಮಾಧ್ಯಮ ವ್ಯವಹಾರ, ರಕ್ಷಣಾ ಪರಿಹಾರದ ಕೆಲಸ, ಸೈನ್ಯ ಇವರಿಗೆ ಸೂಕ್ತವಾದದ್ದು. ತುಂಬ ಬೇಡಿಕೆ ಹಾಗೂ ಸವಾಲಿರುವ ಕಡೆ ಕೆಲಸ ಮಾಡುವುದನ್ನು ಇಷ್ಟಪಡುತ್ತಾರೆ. ಫೀಲ್ಡ್ ವರ್ಕ್ ಗೆ ಹೇಳಿ ಮಾಡಿಸಿದವರು. ಅದರಲ್ಲಿ ಸಾಹಸ-ರಿಸ್ಕ್ ಇದ್ದರಂತೂ ಇನ್ನೂ ಹೆಚ್ಚು ಖುಷಿ ಪಡ್ತಾರೆ. ಒಂದೇ ಥರದ ಕೆಲಸ ಆದರೆ ಬೇಗ ಬೋರಾಗಿ ಬಿಡುತ್ತದೆ. ಇವರನ್ನು ಎಷ್ಟೇ ಮೂಲೆಗುಂಪು ಮಾಡಿದರೂ ಮತ್ತೆ ಪುಟಿದೇಳುತ್ತಾರೆ. ಸೇಲ್ಸ್-ಮಾರ್ಕೆಟಿಂಗ್ ಕೂಡ ಇವರಿಗೆ ಚೆನ್ನಾಗಿ ಹೊಂದುತ್ತದೆ.

ವೃಷಭ

ವೃಷಭ

ಕ್ರಮಬದ್ಧವಾಗಿ ಹಾಗೂ ವಾಸ್ತವ ಎನಿಸುವಂಥ ಗುರಿಯನ್ನೇ ಹಾಕಿಕೊಳ್ಳುವ ವೃಷಭ ರಾಶಿಯವರು ಕೆಲಸದಲ್ಲಿ ಸ್ಥಿರತೆ ಇರಬೇಕು ಎಂದು ಬಯಸುತ್ತಾರೆ. ಆದ್ದರಿಂದ ಸರಕಾರಿ ಕೆಲಸ ಇವರಿಗೆ ಸೂಕ್ತವಾಗುತ್ತದೆ. ಎಂಜಿನಿಯರಿಂಗ್, ಕಾನೂನು, ಲೆಕ್ಕಶಾಸ್ತ್ರ, ಆಡಳಿತ ಮಂಡಳಿ ಅಧಿಕಾರಿ ಮತ್ತು ಶೈಕ್ಷಣಿಕ ರಂಗ ಇವರಿಗೆ ಚೆನ್ನಾಗಿ ಒಪ್ಪುತ್ತವೆ.[ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]

ಯೋಜನೆ ಮಾಡಿದ ನಂತರ ಅದಕ್ಕೆ ಬದ್ಧವಾಗಿ ಕೆಲಸ ಮಾಡುವುದರಲ್ಲಿ ಇವರು ನಿಸ್ಸೀಮರು. ತಕ್ಷಣದ ನಿರ್ಧಾರ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ತೀರ್ಮಾನಗಳು ಒಳಗೊಂಡಂಥ ಕೆಲಸಗಳಿಂದ ಸ್ವಲ್ಪ ದೂರ ಇದ್ದರೆ ಒಳ್ಳೆಯದು. ಇವರು ಟೀಂ ಪ್ಲೇಯರ್. ಡೆಡ್ ಲೈನ್ ನಲ್ಲಿ ಕೆಲಸ ಮಾಡುತ್ತಾರೆ. ಅಂಥ ಒಳ್ಳೆ ನಾಯಕರಲ್ಲ ಅನ್ನೋದು ನಿಜ. ಆದರೆ ಗಂಟೆಗಟ್ಟಲೆ ತಲೆ ಬಗ್ಗಿಸಿ ಕೊಟ್ಟ ಕೆಲಸ ಮುಗಿಸಬಲ್ಲರು.

ಮಿಥುನ

ಮಿಥುನ

ಇವರು ಕೆಲಸದ ವಿಚಾರದಲ್ಲಿ ತುಂಬ ಆಶಾವಾದಿಗಳು. ಬುದ್ಧಿವಂತರು. ಆದರೆ ನಿರ್ಧಾರ ತೆಗೆದುಕೊಳ್ಳುವ ವಿಚಾರಕ್ಕೆ ಬಂದರೆ ಸ್ವಲ್ಪ ವೀಕು. ಒಂದು ಸನ್ನಿವೇಶದ ಬಗ್ಗೆ ಆಲೋಚಿಸುವುದರಲ್ಲಿ, ಅದರ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ತುಂಬ ಸ್ಪೀಡು. ಆದರೆ ಎಲ್ಲ ಪರಾಂಬರಿಸಿ ಒಂದು ನಿರ್ಧಾರಕ್ಕೆ ಬಂದು, ಅದಕ್ಕೆ ಬದ್ಧವಾಗಿರುವುದು ಇವರಿಗೆ ಕಷ್ಟ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಇವರಿಗೆ ಮಾಡೋ ಕೆಲಸದಲ್ಲೂ ವೆರೈಟಿ ಇರಬೇಕು. ಮಾರ್ಕೆಟಿಂಗ್, ಪತ್ರಿಕೋದ್ಯಮ, ಜಾಹೀರಾತು ಮತ್ತು ಮಾಧ್ಯಮ ರಂಗಕ್ಕೆ ಸೂಕ್ತರು. ಜತೆಗೆ ಒಳ್ಳೆ ಟ್ರಾವೆಲ್ ಗೈಡ್ ಆಗಬಲ್ಲರು. ಅಂದಹಾಗೆ ಐಟಿ ಕೆಲದ ಕೂಡ ಇವರಿಗೆ ಹೊಂದುತ್ತದೆ. ಏಕಕಾಲಕ್ಕೆ ಹಲವು ಕೆಲಸ ಮಾಡಬಲ್ಲ ಮಿಥುನ ರಾಶಿಯವರು ಯಶಸ್ವಿ ಸೇಲ್ಸ್ ಮನ್, ರಾಜಕಾರಣಿ ಹಾಗೂ ರಾಜತಾಂತ್ರಿಕ ಅಧಿಕಾರಿ ಆಗಬಹುದು.

ಕರ್ಕಾಟಕ

ಕರ್ಕಾಟಕ

ಈ ರಾಶಿಯವರಿಗೆ ತಾಯಿ ಅಂತಃಕರಣ ಹಾಗೂ ಮನಸ್ಸು. ಮತ್ತೊಬ್ಬರಿಗಾಗಿ ಕಾಳಜಿ ಮಾಡುವ ಇವರನ್ನು ಕೆಲ ಸಲ ಡ್ರಾಮಾ ಮಾಡ್ತಾರೆ ಅಂತ ಜನ ಅಂದುಕೊಳ್ತಾರೆ. ಸಮಾಜ ಸೇವೆ, ಶಿಕ್ಷಣ ರಂಗ, ಎಚ್ ಆರ್, ನರ್ಸಿಂಗ್, ಕೌನ್ಸೆಲಿಂಗ್ ಹಾಗೂ ಥೆರಪಿಯಲ್ಲಿ ಮುಂದುವರಿಯಬಹುದು.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ತುಂಬ ವಿನಯವಂತರಾದ ಇವರು, ಎಲ್ಲ ವಿಷಯಕ್ಕೂ ತಲೆ ಬಿಸಿ ಮಾಡಿಕೊಳ್ತಾರೆ. ಇನ್ನೊಬ್ಬರನ್ನು ಖುಷಿಯಾಗಿರಿಸುವ ಕೆಲಸ ವಹಿಸಿದರೆ ತುಂಬ ಅಚ್ಚುಕಟ್ಟಾಗಿ ಮಾಡ್ತಾರೆ. ಒಂದು ನಿರ್ದಿಷ್ಟ ಆದಾಯ ಇರಬೇಕು ಎಂಬುದು ಇವರ ನಿರೀಕ್ಷೆ. ಹಾಸ್ಪಿಟಾಲಿಟಿ, ಫೈನಾನ್ಸ್, ಇಂಟೀರಿಯರ್ ಡೆಕೋರೇಷನ್, ಎಚ್ ಆರ್ (ಹ್ಯೂಮನ್ ರಿಸೋರ್ಸ್) ಇಅವರಿಗೆ ಹೇಳಿ ಮಾಡಿಸಿದ ಕೆಲಸಗಳು. ರಿಸ್ಕ್ ಇರುವ ಕೆಲಸಗಳಿಗೆ ಸೂಕ್ತರಲ್ಲ.

ಸಿಂಹ

ಸಿಂಹ

ಅಧಿಕಾರ ಇಲ್ಲದಿದ್ದರೆ ಚಡಪಡಿಸಿಹೋಗ್ತಾರೆ ಸಿಂಹ ರಾಶಿಯವರು. ಮುನ್ನಡೆಸುವುದಕ್ಕೆ ತಾವು ಹುಟ್ಟಿದ್ದೇವೆ ಎಂಬಂಥವರು. ಕ್ರಿಯೇಟಿವ್, ಆಶಾವಾದ, ಚರಿಷ್ಮಾ ಹಾಗೂ ಉದಾರತೆ ಇವರ ಗುಣಗಳು. ಯಾವುದೇ ಯೋಜನೆಯನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲರು. ಕಂಪೆನಿ ಪ್ರಮೋಟರ್, ಮನರಂಜನೆ, ರಾಜಕೀಯ, ರಿಯಲ್ ಎಸ್ಟೇಟ್, ಟ್ರಾವೆಲ್ ಗೈಡ್ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರಕ್ಕೆ ಹೇಳಿ ಮಾಡಿಸಿದವರು.[ಮೂವತ್ತು ವರ್ಷದ ಹಿಂದೆ ವೃಶ್ಚಿಕದಲ್ಲಿ ಶನಿ, ಮಾಡಿದ್ದು ಎಷ್ಟೆಲ್ಲ ಹಾನಿ?]

ಒಬ್ಬರೇ ಕೆಲಸ ಮಾಡಲಾರರು. ಇವರಿಗೆ ಅಧಿಕಾರ ಚಲಾಯಿಸುವುದಕ್ಕೆ ಜನ ಇರಬೇಕು. ಆಗಾಗ ಕೆಲಸದ ಬಗ್ಗೆ ಮೆಚ್ಚುಗೆ ಮಾತನಾಡಬೇಕು. ಒಂದು ಕೆಲಸವನ್ನು ಹೀಗೆ ಮಾಡಬೇಕು ಎಂದು ಅನ್ನಿಸಿದರೆ, ಉಳಿದವರೂ ಹಾಗೇ ಮಾಡಬೇಕು ಎಂದು ನಿರೀಕ್ಷಿಸುತ್ತಾರೆ. ದಡ್ಡತನ, ಅನನುಭವ ನಿರ್ಧಾರಗಳನ್ನು ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಇವರಿಗೆ. ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸಬಲ್ಲರು. ಆದರಿಂದ ಮೇಲ್ ಸ್ತರದ ಕೆಲಸಗಳಿಗೂ ಚೆನ್ನಾಗಿ ಹೊಂದುತ್ತಾರೆ.

ಕನ್ಯಾ

ಕನ್ಯಾ

ಪರ್ಫೆಕ್ಷನ್-ಒಂದೇ ಪದದಲ್ಲಿ ಕನ್ಯಾ ರಾಶಿಯವರನ್ನು ಹೀಗೆ ವಿವರಿಸಬಹುದು. ಮಾಹಿತಿ ಆಳಕ್ಕೆ ಹೊಕ್ಕಿ ನೋಡುವ ಸ್ವಭಾವ. ನೀಟಾದ ಕೆಲಸ, ಶ್ರಮಪಡುವ ಮನಸ್ಥಿತಿ. ಯಾವುದೇ ಕೆಲಸವನ್ನು ಗಮನವಿಟ್ಟು ಮಾಡಬೇಕು, ಸಣ್ಣ-ಸಣ್ಣ ಮಾಹಿತಿ ಬಗ್ಗೆಯೂ ಕಣ್ಣಿರಬೇಕು, ಡಾಕ್ಯುಮೆಂಟ್ ಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಅಂದರೆ, ಅಂಥ ಕೆಲಸಕ್ಕೆ ಇವರು ಸೂಕ್ತ.[ಜ್ಯೋತಿಷ್ಯ: ನನಗೆ ಆಗಿಬರುವುದು ಉದ್ಯೋಗವೋ ವ್ಯಾಪಾರವೋ?]

ಸಂಶೋಧನೆ, ಪತ್ತೇದಾರಿಕೆ, ಸೆಕ್ರೇಟರಿ ಕೆಲಸ, ಟೀಚರ್, ಬರವಣಿಗೆ ಮತ್ತು ಎಡಿಟಿಂಗ್, ಆಹಾರ ತಯಾರಿಕೆ, ಸಾರ್ವಜನಿಕ ಸೇವೆ, ಅಕೌಂಟೆನ್ಸಿ, ಎಂಜಿನಿಯರಿಂಗ್, ಸರ್ವೇ, ಆಡಿಟಿಂಗ್, ಕೃಷಿ, ಮೀನುಗಾರಿಕೆ, ಗ್ರಾಫಿಕ್ ಡಿಸೈನ್-ಇಂಥ ಕೆಲಸಗಳನ್ನು ಅದ್ಭುತವಾದ ಸಾಧನೆ ಮಾಡಬಲ್ಲರು. ಮೆಡಿಸನ್, ಭಾಷಾ ವಿಜ್ಞಾನದಲ್ಲಿ ಒಳ್ಳೆ ಕೆಲಸ ಮಾಡಬಲ್ಲರು. ಆದರೆ ಲೈಮ್ ಲೈಟ್ ನಲ್ಲಿ ಕಾಣಿಸಿಕೊಳ್ಳಲು ತುಂಬ ಸಂಕೋಚ ಪಡುತ್ತಾರೆ. ನಾಯಕತ್ವ ವಹಿಸುವುದಕ್ಕೆ ಅಷ್ಟು ಸೂಕ್ತರಲ್ಲ.

ತುಲಾ

ತುಲಾ

ಸಹಕಾರ ಮನೋಭಾವದ, ಎಲ್ಲಿ-ಹೇಗೆ ಮಾತನಾಡಬೇಕು ಎಂದು ತಿಳಿದಿರುವ ತುಲಾ ರಾಶಿಯವರು ಎಂಥ ಪರಿಸ್ಥಿತಿಗೂ ಹೊಂದಿಕೊಳ್ತಾರೆ. ಯಾರನ್ನೂ ಬೇಕಾದರೂ ಮಾತನಾಡಿಸಿ, ಕೆಲಸ ಪಡೆಯಬಲ್ಲರು. ಆದರೆ ಸ್ವಂತ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಕಷ್ಟ. ಆದರೆ ಇವರು ಒಳ್ಳೆ ನ್ಯಾಯಾಧೀಶರಾಗಬಹುದು. ಕನ್ಸಲ್ಟಂಟ್, ರಾಯಭಾರಿ, ಸೇಲ್ಸ್ ಪರ್ಸನ್, ವಕೀಲ, ಮಧ್ಯಸ್ಥಿಕೆಗಾರ, ಟ್ರಾವೆಲ್ ಏಜೆಂಟ್ ಅಗಬಹುದು.[ಜ್ಯೋತಿಷ್ಯ: ಎಲ್ಲ ವಿಧದ ಭಯ ನಿವಾರಣೆಗಾಗಿ ದೈವಿಕ ಉಪಾಯ]

ಒತ್ತಡ ಇಲ್ಲದ-ಆರಾಮದಾಯಕ ಕೆಲಸದ ಪರಿಸರದಲ್ಲಿ ಇವರು ಅದ್ಭುತ ಸಾಧನೆ ಮಾಡಬಲ್ಲರು. ಆರ್ಕಿಟೆಕ್ಚರ್, ಕಲೆ, ಎಚ್ ಆರ್, ಪರ್ಸನಲ್ ಡಿಪಾರ್ಟಮೆಂಟ್ ಗಳಲ್ಲಿ ಕೂಡ ತುಲಾ ರಾಶಿಯವರು ಮಿಂಚಬಲ್ಲರು. ಅದರೆ ಯಾವುದೇ ದೊಡ್ಡ ಜವಾಬ್ದಾರಿ ವಹಿಸಿದಾಗ ಒಳ್ಳೆ ಅಸಿಸ್ಟೆಂಟ್ ಗಳನ್ನು ಕಡ್ಡಾಯವಾಗಿ ನೀಡಬೇಕು. ಇವರ ನಿರ್ಧಾರ-ತೀರ್ಮಾನಗಳ ಬಗ್ಗೆ ಪರಾಂಬರಿಸಬೇಕು.

ವೃಶ್ಚಿಕ

ವೃಶ್ಚಿಕ

ಗಟ್ಟಿ ಮನಸಿನ, ಅಪಾರ ಜ್ಞಾನದ, ಶ್ರಮಜೀವಿ ವೃಶ್ಚಿಕ ರಾಶಿಯವರು ಸರ್ಜನ್, ವಿಜ್ಞಾನಿ ಆಗಬಹುದು. ಹಣಕಾಸಿನ ವ್ಯವಹಾರಕ್ಕೆ ಪ್ರಾಮುಖ್ಯ ಇರುವ ಕೆಲಸಗಳನ್ನು ಇವರು ಮಾಡಲಾರರು. ಡಿಸೈನಿಂಗ್, ಕಾನೂನು, ಚಾರಿಟೇಬಲ್ ಸೊಸೈಟಿ, ಮಾನವೀಯ ಸಂಬಂಧಗಲ ಕುರಿತಾಗಿ ಕೆಲಸ ಮಾಡಬೇಕಾದಲ್ಲಿ ಮಿಂಚುತ್ತಾರೆ. ಒಳ್ಳೆ ಪತ್ತೇದಾರರು, ಗೂಢಚಾರರು, ಪೊಲೀಸ್, ತನಿಖಾಧಿಕಾರಿ ಹಾಗೂ ಸಂಶೋಧಕರು ಕೂಡ ಆಗಬಹುದು.[ಜ್ಯೋತಿಷ್ಯ : ಹನ್ನೆರಡು ರಾಶಿಗಳ ಗುಣ-ಸ್ವಭಾವ ಹೇಗಿರುತ್ತದೆ ಗೊತ್ತಾ?]

ತುಂಬ ಕಷ್ಟದ ವಿಷಯಗಳು ಎಂದು ಉಳಿದವರು ಕೈ ಚೆಲ್ಲಿದರೆ, ಅದರ ಬಗ್ಗೆ ಇವರಿಗೆ ವಿಪರೀತ ಆಸಕ್ತಿ. ಸವಾಲಲ್ಲದ ಕೆಲಸದಲ್ಲಿ ಬಹಳ ಕಾಲ ಇರುವುದು ಒಳ್ಳೆಯದಲ್ಲ. ಅಧಿಕಾರ ಮುಖ್ಯ ಎಂದು ಪರಿಗಣಿಸುವ ವೃಶ್ಚಿಕ ರಾಶಿಯವರು ರಾಜಕಾರಣಕ್ಖು ಸೂಕ್ತರೆನಿಸುತ್ತಾರೆ. ನಿತ್ಯವೂ ಒಂದೇ ಕೆಲಸ ಮಾಡಬೇಕಾದರೂ ಬೇಸರವಿಲ್ಲ ಮಾಡಿ ಮುಗಿಸುತ್ತಾರೆ ಎಂಬುದು ಇವರ ಹೆಚ್ಚುಗಾರಿಕೆ.

ಧನುಸ್ಸು

ಧನುಸ್ಸು

ನೇರವಂತಿಕೆ, ಆಶಾವಾದ, ವಿಪರೀತವಾದ ಚಟುವಟಿಕೆ ಕಾರಣಕ್ಕೆ ಹೋರಾಟ, ಚಳವಳಿಗೆ ಹೇಳಿ ಮಾಡಿಸಿದಂಥವರು ಧನುಸ್ಸು ರಾಶಿಯವರು. ರಾಜಕಾರಣ, ಸಾರ್ವಜನಿಕ ಸಂಪರ್ಕ, ಮಾರಾಟ, ಎಡಿಟಿಂಗ್-ಈ ಕ್ಷೇತ್ರಗಳಲ್ಲಿ ಸೂಕ್ತರಾಗುತ್ತಾರೆ. ಕಂಪೆನಿ ಮಾಲೀಕರು, ಪೈಲಟ್, ಕ್ರೀಡಾಳು, ಪೊಲೀಸ್ ಅಧಿಕಾರಿ, ವಿಮಾನ ಪರಿಚಾರಕರು..ಒಟ್ಟಿನಲ್ಲಿ ಒಂದು ಕದೆ ಕೂತು ಮಾಡುವ ಕೆಲಸ ಇವರಿಗೆ ಸೂಕ್ತವಲ್ಲ.[ಹುಲುಮಾನವನಿಗೆ ಶನಿಯಿಂದ ಬರುವ ರೋಗ ಹಲವಾರು]

ಹೋಟೆಲ್, ರಿಕ್ರಿಯೇಷನ್, ಮಾರ್ಕೆಟಿಂಗ್ ಮತ್ತು ಮನರಂಜನೆ ಕ್ಷೇತ್ರಗಳು ಕೂಡ ಚೆನ್ನಾಗಿ ಒಪ್ಪುತ್ತವೆ. ಧನುಸ್ಸು ರಾಶಿಯವರನ್ನು ತಮ್ಮಷ್ಟಕ್ಕೆ ಕೆಲಸ ಮಾಡಲು ಸ್ವಾತಂತ್ರ್ಯ ನೀಡಬೇಕು. ಬುದ್ಧಿಮತ್ತೆ ಪ್ರದರ್ಶನಕ್ಕೆ ಅವಕಾಶ ಇರಬೇಕು. ಕೆಲಸದ ವಿಚಾರದಲ್ಲಿ ಪ್ರಯೋಗ ಮಾಡುವುದು ಹೆಚ್ಚು. ಯಶಸ್ಸು ಪಡೆಯುವುದಕ್ಕೆ ಶಾರ್ಟ್ ಕಟ್ ಗಳನ್ನು ಹುಡುಕಿಕೊಳ್ತಾರೆ. ಯಾವುದೇ ಕೆಲಸ ಆಯ್ದುಕೊಳ್ಳಲಿ ಅದರಲ್ಲಿ ಯಶಸ್ಸು ಪಡೆಯುತ್ತಾರೆ.

ಮಕರ

ಮಕರ

ಗುರಿ ಕಡೆಗೆ ಕಣ್ಣು ನೆಡುವ ಮಕರ ರಾಶಿಯವರು ಜವಾಬ್ದಾರಿಯಿಂದ ನಡೆದುಕೊಳ್ತಾರೆ. ಬುದ್ಧಿವಂತರು, ತಾರ್ಕಿಕ ಚಿಂತನೆಯುಳ್ಳವರು. ಸಂಬಳ ಎಷ್ಟು ಎಂಬ ಆಧಾರದಲ್ಲಿ ಅವರ ಶ್ರಮವನ್ನು ಕಾಣಬಹುದು. ಬ್ಯಾಂಕಿಂಗ್, ಫೈನಾನ್ಸ್, ಆಡಳಿತ, ನಿರ್ವಹಣೆ, ಐಟಿ ಹಾಗೂ ಭೌತಶಾಸ್ತ್ರ ಕ್ಷೇತ್ರಕ್ಕೆ ಹೊಂದಿಕೊಳ್ಳುತ್ತಾರೆ.[ಮಹಾನ್ ಶಕ್ತಿವಂತ ಶನಿದೇವರ ಬಗ್ಗೆ ಇನ್ನಷ್ಟು ಮಾಹಿತಿ]

ಉನ್ನತಿ ಇಲ್ಲದ ಕೆಲಸ, ದೊಡ್ಡ ಮಟ್ಟದ ಫೈನಾನ್ಷಿಯಲ್ ರಿಸ್ಕ್ ಇಲ್ಲದ ಕೆಲಸ ಇವರಿಗೆ ಸೂಕ್ತವಲ್ಲ. ಕಂಪ್ಯೂಟರ್, ಸಾಫ್ಟ್ ವೇರ್ ಬಗ್ಗೆ ಕೂಡ ಹೆಚ್ಚಿನ ಒಲವಿರುವ ಕಾರಣಕ್ಕೆ ಐಟಿ ವಲಯಕ್ಕೂ ಸೂಕ್ತರಾಗುತ್ತಾರೆ. ಚಾರಣದಂಥ ಸಾಹಸ ಕೆಲಸಗಳಲ್ಲೂ ಇವರ ಆಸಕ್ತಿ ಹೆಚ್ಚು. ಕೆಲಸದ ಸಲುವಾಗಿ ಕುಟುಂಬದವರನ್ನಾದರೂ ಬಿಡುತ್ತಾರೆ. ಅಥವಾ ಕುಟುಂಬವನ್ನೆಲ್ಲ ಒಗ್ಗೂಡಿಸಿಕೊಂಡು ವ್ಯಾಪಾರ ಮಾಡುತ್ತಾರೆ. ಸಂಧಾನ ಮಾಡಿಕೊಳ್ಳುವುದಕ್ಕೆ ತಕರಾರು ಇರಲ್ಲ. ಆದರೆ ಸೋಲನ್ನು ಸುಲಭಕ್ಕೆ ಒಪ್ಪಿಕೊಳ್ಳಲ್ಲ.

ಕುಂಭ

ಕುಂಭ

ಒರಿಜಿನಲ್ ಥಿಂಕಿಂಗ್ ಗೆ ಕುಂಭ ರಾಶಿಯವರು ಸೂಕ್ತ. ಯಾವುದೇ ಹೊಸ ವಿಷಯ ತಿಳಿದುಕೊಳ್ಳಲು ಸದಾ ಕುತೂಹಲಿಗಳಾಗಿರುತ್ತಾರೆ. ಆದ್ದರಿಂದ ವಿಜ್ಞಾನಿಗಳು, ಹೊಸ ಆವಿಷ್ಕಾರ ಮಾಡುವವರು, ಸಂಗೀತಗಾರರು, ಡಿಸೈನರ್ಸ್ ಗಳಾಗಿ ಇವರು ಕಾಣಿಸಿಕೊಳ್ಳಬಹುದು. ಕೆಲಸ ಮಾಡುವ ಕಡೆ ಸ್ವಾತಂತ್ರ್ಯ, ಅವಕಾಶ ನೀಡಬೇಕು.[ಪಂಚ ಮಹಾಪುರುಷ ಯೋಗ: ನಿಮ್ಮ ಜಾತಕದಲ್ಲಿ ಯಾವುದಿದೆ?]

ಎಂಜಿನಿಯರ್, ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವವರು, ಪಶುವೈದ್ಯರು ಅಗಬಹುದು. ವಿಮಾನ ಯಾನ, ಬಾಹ್ಯಾಕಾಶ ಕ್ಷೇತ್ರ, ಫೋಟೋಗ್ರಫಿ, ಸಾಹಿತ್ಯ, ಅನಿಮೇಷನ್, ಎಲೆಕ್ಟ್ರಾನಿಕ್ಸ್, ಕಮ್ಯೂನಿಕೇಷನ್, ಸಾಹಸ ಪ್ರವಾಸ, ಸಾವಯವ ಕೃಷಿ, ಇತಿಹಾಸ ತಜ್ಞರು ಹಾಗೂ ನಟನೆ ಕೂಡ ಸೂಕ್ತರಾಗಬಲ್ಲರು. ತಮ್ಮ ಕಾಲಕ್ಕಿಂತ ಅದೆಷ್ಟೋ ಮುಂದಿನವರೆಗೂ ಯೋಚನೆ ಮಾಡಬಲ್ಲ ಇವರು ಮಾರುಕಟ್ಟೆ ಸಂಶೋಧಕರು ಕೂಡ ಆಗಬಹುದು.

ಮೀನ

ಮೀನ

ಅಧ್ಯಾತ್ಮ ಆಲೋಚನೆಯ ಮೀನರಾಶಿಯವರು ಸೂಕ್ಷ್ಮ ಸ್ವಭಾವ, ಕಲಾತ್ಮಕತೆ, ಕನಸು ಕಾಣುವ, ಅದನ್ನು ಸಾಕಾರ ಮಾಡಿಕೊಳ್ಳಲು ಬದ್ಧತೆ ತೋರಿಸುವವರು. ಅಪಾರ ಪ್ರತಿಭೆಯ ಕಲಾವಿದರು ಅಂತಲೇ ಇವರನ್ನು ಗುರುತಿಸಬಹುದು. ಕೌನ್ಸೆಲರ್ಸ್, ನರ್ಸ್, ಜ್ಯೋತಿಷಿಗಳು, ಫಿಸಿಕಲ್ ಥೆರಪಿಸ್ಟ್ ಗಳು ಆಗಬಬಹುದು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಸೇನೆ, ರಕ್ಷಣಾ ವಲಯ, ಸಮಾಜ ಸೇವಕರು, ಉತ್ತಮ ಶಿಕ್ಷಕರು ಕೂಡ ಆಗಬಹುದು. ಇವರು ಯಾವುದೇ ಕೆಲಸವನ್ನು ಬರೀ ಹಣಕ್ಕಾಗಿ ಮಾಡಲಾರರು. ಆದ್ದರಿಂದ ಬ್ಯಾಂಕಿಂಗ್, ಷೇರು ಬ್ರೋಕರ್ ರಂಥ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರೆ ಇವರು ಮನಸಾರೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಶಿಸ್ತು-ಸಂಯಮ ಬೇಡುವಂತಹ ಕೆಲಸಗಳನ್ನು ಇವರು ಆರಾಮವಾಗಿ ಮಾಡಿಕೊಂಡು ಹೋಗ್ತಾರೆ.

English summary
According to vedic astrology which career suits to your zodiac sign? here is an article by Raveesh Gowtham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X