ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

By ಪಂಡಿತ್ ಶಂಕರ್
|
Google Oneindia Kannada News

ಜಾತಕವನ್ನು ಬರೆಯುವ ಆರಂಭದಲ್ಲಿ 'ಜನನೀ ಜನ್ಮ ಸೌಖ್ಯಾನಾಂ ವರ್ಧನಿ ಕುಲ ಸಂಪದ, ಪದವೀ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮ ಪತ್ರಿಕಾ' ಎಂದು ಬರೆಯುವುದು ರೂಢಿ. ಪದವೀ ಪೂರ್ವ ಪುಣ್ಯಾನಾಂ ಅಂದರೆ ಈ ಹಿಂದಿನ ಜನ್ಮದಲ್ಲಿ ನೀವು ಮಾಡಿದ ಪುಣ್ಯದ ಫಲಿತವೇ ಈ ಜಾತಕ ಎಂದರ್ಥ ಧ್ವನಿಸುತ್ತದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಗ್ರಹಗಳ ಶುಭ ಫಲಿತಾಂಶಗಳ ಬಗ್ಗೆ ಅರಿತಿರುತ್ತಾರೆ.

ಆದರೆ, ಬಹಳ ಜನ ತಮ್ಮ ಕರ್ಮ ಫಲದ ಮೇಲೆ ಅವಲಂಬಿತರಾಗಿರುತ್ತಾರೆ. ಮನುಷ್ಯರ ವರ್ತನೆ ಹೇಗಿರುತ್ತದೆ ಎಂಬ ಆಧಾರದಲ್ಲಿ ಗ್ರಹಗಳು ಫಲಿತಾಂಶವನ್ನು ನೀಡುತ್ತವೆ. ಜ್ಯೋತಿಷ್ಯ ಗ್ರಂಥಗಳಲ್ಲೇ ಈ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ನಿಮ್ಮ ಜೀವನದ ದುಃಖ-ದಾರಿದ್ರ್ಯಗಳನ್ನು ಹೋಗಲಾಡಿಸುವ ಶಕ್ತಿ ಆ ಗ್ರಹಗಳಿಗಿವೆ.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ಇದೇ ಸಂದರ್ಭದಲ್ಲಿ ಮತ್ತೊಂದು ಮಾತನ್ನೂ ಉಲ್ಲೇಖಿಸಬೇಕು. ಹೇಗೆ ಗ್ರಹಗಳು ಶುಭ ಫಲಗಳನ್ನು ನೀಡಬಲ್ಲವೋ ಅದೇ ರೀತಿ ನಕಾರಾತ್ಮಕ ಫಲಿತಾಂಶಗಳನ್ನೂ ಕೊಡಬಲ್ಲವು. ಆದ್ದರಿಂದ ಯಾವ ಗ್ರಹವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು.

ರವಿ

ರವಿ

ಸೂರ್ಯನು ಗ್ರಹವೂ ಹೌದು, ನಕ್ಷತ್ರವೂ ಹೌದು. ಅಂದಹಾಗೆ ರವಿ ಗ್ರಹವು ವ್ಯಕ್ತಿತ್ವ ಹಾಗೂ ಅಹಂಕಾರವನ್ನು ಪ್ರತಿನಿಧಿಸುತ್ತದೆ. ಉತ್ಸಾಹ ಮತ್ತು ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ರವಿ ಅಂದರೆ ಆತ್ಮಕ್ಕೆ ಸಂಬಂಧಿಸಿದ ಗ್ರಹ. ನಿಮ್ಮ ಆಅತ್ಮ, ಬುದ್ಧಿ ಶುದ್ಧವಾಗಿದ್ದರೆ ಯಾವುದಕ್ಕೂ ಯೋಚಿಸುವ ಅಗತ್ಯವಿಲ್ಲ.

ಸೂರ್ಯನ ಸಕಾರಾತ್ಮಕ ಶಕ್ತಿಯಿಂದ ನಿಮ್ಮ ವ್ಯಕ್ತಿತ್ವವೂ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಆದರೆ ಬೇರೆಯವರಿಗೆ ನೋವುಂಟು ಮಾಡಿದರೆ, ತೆರಿಗೆ ಕದ್ದರೆ, ಯಾವುದೇ ಜೀವಿಗೆ ನೋವುಂಟು ಮಾಡಿದರೆ ಆಗ ಸೂರ್ಯ ಗ್ರಹ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವಾಗ ಕೃಪಾ ದೃಷ್ಟಿ ಹೋಗುತ್ತದೋ ಆಗಿನಿಂದ ಆ ವ್ಯಕ್ತಿಯ ಪ್ರತಿಷ್ಠೆ ಕುಸಿಯಲು ಆರಂಭಿಸುತ್ತದೆ. ತಂದೆಯಿಂದ ಬರಬೇಕಾದ ಆಸ್ತಿ ಕೂಡ ಕೈ ತಪ್ಪಿ ಹೋಗುತ್ತದೆ.

ಚಂದ್ರ

ಚಂದ್ರ

ಚಂದ್ರನ ಸಕಾರಾತ್ಮಕ ಪರಿಣಾಮ ನಿಮ್ಮ ಮೇಲೆ ಆಗಬೇಕಾದರೆ ಸುತ್ತಲೂ ಇರುವ ಜನರ ಭಾವನೆಗಳನ್ನು ಗೌರವಿಸಬೇಕು. ನಿಮ್ಮ ಕುಟುಂಬದ ಮಹಿಳೆಯರಿಗೆ ನೋವುಂಟು ಮಾಡಿದರೆ, ಅಂದರೆ ತಾಯಿ, ಅಜ್ಜಿ, ಅತ್ತೆ, ಸೋದರಿ, ಹೆಂಡತಿ ಮುಂತಾದವರಿಗೆ ನೋವು ಮಾಡಿದರೆ ಚಂದ್ರ ನಿಮ್ಮ ಮೇಲೆ ಸಿಟ್ಟಾಗುತ್ತಾನೆ.

ಯಾವಾಗ ಚಂದ್ರನ ಅವಕೃಪೆಗೆ ಒಳಗಾಗುತ್ತೀರೋ ಆಗ ಮಾನಸಿಕವಾಗಿ ತೊಂದರೆ ಅನುಭವಕ್ಕೆ ಬರುತ್ತದೆ. ಅಡೆತಡೆಗಳು ಎದುರಾಗುತ್ತವೆ. ಪ್ರಗತಿ ನಿಂತುಹೋಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಮಾನಸಿಕ ಅಸ್ವಾಸ್ಥ್ಯ ಕಾಡುತ್ತದೆ.

ಗುರು

ಗುರು

ನಿಮ್ಮ ತಂದೆ, ತಾತ, ಚಿಕ್ಕಪ್ಪ- ದೊಡ್ಡಪ್ಪ, ಮಾವ ಅಥವಾ ತಂದೆ ಸಮಾನ ಆದವರನ್ನು ಶೋಷಣೆ ಮಾಡಿದರೆ, ಹಿಂಸೆ ನೀಡಿದರೆ ಗುರು ಗ್ರಹದ ಕೋಪಕ್ಕೆ ಗುರಿಯಾಗುತ್ತೀರಿ. ಆಗ ವ್ಯಕ್ತಿಯು ಗಂಭೀರ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಮತ್ತು ಜೀವನವು ಪ್ರತಿ ಕ್ಷಣ ಯಾತನಾದಾಯಕ ಆಗುತ್ತದೆ.

ಆರ್ಥಿಕ ನಷ್ಟ ಅನುಭವಿಸುತ್ತೀರಿ. ಕೊಟ್ಟ ಹಣ ವಾಪಸ್ ಬರುವುದಿಲ್ಲ. ಪ್ರತಿ ಹೆಜ್ಜೆಯಲ್ಲೂ ದುರದೃಷ್ಟ ಎದುರಾಗುತ್ತಾ ಹೋಗುತ್ತದೆ. ಆದ್ದರಿಂದ ಗುರುವಿನ ಅನುಗ್ರಹ ಬೇಕೆಂದರೆ ಹಿರಿಯರನ್ನು ಗೌರವಿಸಿ. ಈ ಗ್ರಹ ಎಂಥ ಶಕ್ತಿಶಾಲಿ ಅಂದರೆ, ಶುಭ ದೃಷ್ಟಿ ಬೀರಲು ಆರಂಭಿಸಿದ ಕ್ಷಣದಿಂದ ಅದೃಷ್ಟ-ಶ್ರೀಮಂತಿಕೆ ಹುಡುಕಿಕೊಂಡು ಬರುತ್ತವೆ.

ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಹನ್ನೆರಡು ರಾಶಿಗೆ ಏನು ವಿಶೇಷ?ಸೆ.12 ತುಲಾ ರಾಶಿಗೆ ಗುರು ಪ್ರವೇಶ, ಹನ್ನೆರಡು ರಾಶಿಗೆ ಏನು ವಿಶೇಷ?

ಶನಿ

ಶನಿ

ಶನಿ ಗ್ರಹವು ಕರ್ಮವನ್ನು ಪ್ರತಿನಿಧಿಸುತ್ತದೆ. ನೀವು ಮಾಡುವ ಕೆಲಸದ ಫಲಿತಾಂಶವನ್ನು ಅನುಭವಿಸುತ್ತೀರಿ. ಯಾರದೇ ವಿರುದ್ಧ ಪಿತೂರಿ ಮಾಡಿದರೆ, ಜನರ ವಿರುದ್ಧ ಉದ್ದೇಶಪೂರ್ವಕವಾಗಿ ಕೆಡುಕು ಮಾಡಿದರೆ ಅಥವಾ ಗೊತ್ತಿದ್ದೂ ತಪ್ಪುಗಳನ್ನು ಮಾಡಿದರೆ, ಅಪರಾಧ ಕೃತ್ಯ ಎಸಗಿದರೆ ಶನಿ ಗ್ರಹ ಶಿಕ್ಷೆ ನೀಡುತ್ತದೆ. ನಿಮ್ಮ ಒಳ್ಳೆ ಕೆಲಸಗಳಿಗೆ ಫಲಿತವಾಗಿ ಶನಿಯು ಶ್ರೀಮಂತಿಕೆ ನೀಡುತ್ತದೆ.

ಶನೈಶ್ಚರನ ಅನುಗ್ರಹಕ್ಕೆ 10 ಸರಳ ಮಾರ್ಗಗಳು...ಶನೈಶ್ಚರನ ಅನುಗ್ರಹಕ್ಕೆ 10 ಸರಳ ಮಾರ್ಗಗಳು...

ಶುಕ್ರ

ಶುಕ್ರ

ಶುಕ್ರ ಅಂದರೆ ಪ್ರೀತಿ ಮತ್ತು ಹಣಕಾಸಿನ ಸ್ಥಿತಿ ಪ್ರತಿನಿಧಿಸುವ ಗ್ರಹ. ಒಂದು ವೇಳೆ ಶುಕ್ರನ ಶಾಪಕ್ಕೆ ತುತ್ತಾದರೆ ಮಾನಸಿಕ ಕ್ಷೋಭೆಗೆ ಒಳಗಾಗುತ್ತೀರಿ ಅಥವಾ ಏಕಾಂಗಿಗಳಾಗುತ್ತೀರಿ. ಖಂಡಿತಾವಾಗಿಯೂ ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಶುಕ್ರ ಗ್ರಹದ ಅನುಗ್ರಹ ಪಡೆಯಬೇಕು ಅಂದರೆ ಎಲ್ಲರಿಗೂ ಪ್ರೀತಿಯನ್ನೂ ತೋರಿಸಬೇಕು.

ಅದರಲ್ಲೂ ಬಾಳಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಬೇರೆಯವರಿಗೆ ಅದೆಷ್ಟು ಕಾಳಜಿ ತೋರುತ್ತೀರೋ ಶುಕ್ರ ನಿಮ್ಮ ಬಗ್ಗೆ ಆಷ್ಟು ಕಾಳಜಿ ತೋರುತ್ತದೆ.

ಬುಧ

ಬುಧ

ಬೇರೆಯವರ ಜತೆಗೆ ಸರಿಯಾದ ಸಂವಹನ ಅಥವಾ ಮಾತುಕತೆ ನಡೆಸಲಿಲ್ಲ ಅಂದರೆ ಜೀವನದ ಬಹುತೇಕ ಕ್ಷೇತ್ರಗಳಲ್ಲಿ ವೈಫಲ್ಯ ಕಾಣಬೇಕಾಗುತ್ತದೆ. ನಿಮ್ಮ ಮಾತಿನ ಕೌಶಲ ಅವಲಂಬನೆ ಆಗಿರುವುದೇ ಬುಧ ಗ್ರಹದ ಮೇಲೆ. ಉತ್ತಮ ಸಂವಹನವು ಬುದ್ಧಿವಂತಿಕೆ ಹಾಗೂ ಬೌದ್ಧಿಕತೆಯ ದ್ಯೋತಕ.

ಕುಜ

ಕುಜ

ಕುಜ ಗ್ರಹವು ನಿಮ್ಮ ಆಸಕ್ತಿಗಳಿಗೆ ಉತ್ತೇಜನ ನೀಡುತ್ತದೆ. ಆದರೆ ಯಾವಾಗ ನಿಮಗೆ ಏನಾದರೂ ಮಾಡುವುದರಲ್ಲಿ ಆಸಕ್ತಿಯಿದೆಯೋ ಆಗಷ್ಟೇ ಅದು ಸಾಧ್ಯ. ನಿಮ್ಮ ಆಸಕ್ತಿಯ ಮೂಲಕ ಎಷ್ಟು ತಲ್ಲೀನರಾಗುತ್ತೀರಿ ಎಂಬ ಆಧಾರದಲ್ಲಿ ಕುಜನು ಸಂಪತ್ತನ್ನು ದಯಪಾಲಿಸುತ್ತಾನೆ. ಯಾವಾಗ ನೀವು ಎಲ್ಲದರಲ್ಲೂ ನಿರಾಸಕ್ತರಾಗುತ್ತೀರೋ ಆಗ ನಿಮ್ಮ ಬುದ್ಧಿಯೂ ವ್ಯರ್ಥವಾಗುತ್ತದೆ, ಕುಜನ ಅನುಗ್ರಹವೂ ಸಿಗುವುದಿಲ್ಲ.

ಉದ್ಯೋಗ ವಿಚಾರದಲ್ಲಿ ಕುಜ ಅತ್ಯಂತ ಪ್ರಮುಖ ಗ್ರಹ. ಈಗಿನ ದಿನಮಾನದಲ್ಲಿ ತುಂಬ ಶ್ರದ್ಧೆ-ಪ್ರೀತಿಯಿಂದ ಉದ್ಯೋಗ ಮಾಡಿದರಷ್ಟೇ ಏನಾದರೂ ಸಾಧನೆ ಮಾಡಲು ಸಾಧ್ಯ.

ರಾಹು-ಕೇತು

ರಾಹು-ಕೇತು

ರಾಹು-ಕೇತುಗಳು ಅಂದರೆ ಛಾಯಾಗ್ರಹಗಳು. ಅವುಗಳಿಗೆ ದೈಹಿಕವಾದ ಅಸ್ತಿತ್ವ ಇಲ್ಲ. ಆದ್ದರಿಂದ ಇವೆರಡು ಗ್ರಹಗಳ ನೇರ ಪರಿಣಾಮ ಯಾರ ಬದುಕಿನ ಮೇಲೂ ಆಗುವುದಿಲ್ಲ.

ಆ 18ಕ್ಕೆ ಕರ್ಕಕ್ಕೆ ರಾಹು- ಮಕರಕ್ಕೆ ಕೇತು ಪ್ರವೇಶ, ಏನು ಪ್ರಭಾವ?ಆ 18ಕ್ಕೆ ಕರ್ಕಕ್ಕೆ ರಾಹು- ಮಕರಕ್ಕೆ ಕೇತು ಪ್ರವೇಶ, ಏನು ಪ್ರಭಾವ?

English summary
Do you know how your planets can impact your life? If no then here is the complete knowledge about it. Read how Sun, Moon, Jupiter, Mars, Mercury, etc affects your life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X