• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ, ದೇಶದ ಭವಿಷ್ಯ: ನನ್ನ ಕೆಲಸ ಸತ್ಯ ಹೇಳುವುದು, ಮನಸ್ಸು ನೋಯಿಸುವುದಲ್ಲ

|

ಒಂದು ಕಡೆ ಜನರಿಗೆ ಕೊರೊನಾದ ಮೇಲೆ ಭಯ ಕಮ್ಮಿಯಾಗುತ್ತಿದೆ, ಜೊತೆಗೆ, ಸಾಮಾಜಿಕ ಅಂತರಕ್ಕೂ ಬೆಲೆಯಿಲ್ಲದಂತಾಗಿದೆ. ಇನ್ನೊಂದು ಕಡೆ, ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿದೆ. ಇವೆಲ್ಲದರ ನಡುವೆ, ಅನ್ ಲಾಕ್ 5ಕ್ಕೆ ದಿನ ಹತ್ತಿರವಾಗುತ್ತಿದೆ.

ಹಾಗಾಗಿಯೇ, ಲಾಕ್ ಡೌನ್ ಮಾಡಿದರೆ ಪ್ರಯೋಜನವಿದೆಯೇ ಎನ್ನುವುದರ ಬಗ್ಗೆ ಗಮನಕೊಡಿ ಎಂದು ಪ್ರಧಾನಿ ಮೋದಿ, ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದರು. ಇದರಿಂದ, ಮೈಕ್ರೋ, ಮ್ಯಾಕ್ರೋ ಕಂಟೇನ್ಮೆಂಟ್ ಝೋನ್ ಬಗ್ಗೆ ಬಿಬಿಎಂಪಿ ಆಯುಕ್ತರು ಹೇಳಿಕೆಯನ್ನು ನೀಡಿದ್ದಾರೆ.

ಭವಿಷ್ಯ: ಸೆ.13ಕ್ಕೆ ಹಿಂದೆಂದೂ ಬಾರದ, ಮುಂದೆಯೂ ಕಾಣದ 'ಅಪರೂಪದ ಗಳಿಗೆ'

ಕೊರೊನಾ ವಿಚಾರದಲ್ಲಿ ಕೆಲವು ಜ್ಯೋತಿಷಿಗಳ ಭವಿಷ್ಯವನ್ನು ಹೊರತು ಪಡಿಸಿದರೆ, ಮಿಕ್ಕೆಲ್ಲವೂ ಕರಾರುವಕ್ಕಾಗಿ ಹೊರಬಂದಿಲ್ಲ ಎನ್ನುವುದು ಅಷ್ಟೇ ಸತ್ಯ. ಜೂನ್ ನಲ್ಲಿ ವೈರಸ್ ಪ್ರಭಾವ ಕಮ್ಮಿಯಾಗುತ್ತಿದೆ ಎಂದು ಕೆಲವರು ಬಡಾಯಿ ಕೊಚ್ಚಿಕೊಂಡಿದ್ದರು. ಅಸಲಿಗೆ, ಅಲ್ಲಿಂದಲೇ ವೈರಸ್ ಹಾವಳಿ ಜಾಸ್ತಿಯಾಗಲಾರಂಭಿಸಿತು.

ಈಗ, ಖ್ಯಾತ ಸಂಖ್ಯಾಶಾಸ್ತ್ರ ಪರಿಣಿತ ಸಂಜಯ್.ಬಿ..ಜುಮಾನ್ ಭವಿಷ್ಯ ನುಡಿದಿದ್ದು, "ನನ್ನ ಕೆಲಸ ಸತ್ಯ ಹೇಳುವುದು, ನಿಮ್ಮ ಮನಸ್ಸು ನೋಯಿಸುವುದಲ್ಲ. ಈ ವರ್ಷ ಕೊರೊನಾ ವೈರಸ್ ತೊಂದರೆ ಕಮ್ಮಿಯಾಗುವ ಯಾವ ಸಾಧ್ಯತೆಯೂ ಇಲ್ಲ"ಎಂದು ಹೇಳಿದ್ದಾರೆ. ಇನ್ನು ಯಾವಾಗ?

ಖ್ಯಾತ ಸಂಖ್ಯಾಶಾಸ್ತ್ರ ಪರಿಣಿತ ಸಂಜಯ್.ಬಿ..ಜುಮಾನ್

ಖ್ಯಾತ ಸಂಖ್ಯಾಶಾಸ್ತ್ರ ಪರಿಣಿತ ಸಂಜಯ್.ಬಿ..ಜುಮಾನ್

2020 ಸಂಖ್ಯಾ ಶಾಸ್ತ್ರದ ಪ್ರಕಾರ ಉತ್ತಮ ವರ್ಷವಲ್ಲ ಎನ್ನುವ ಮಾತನ್ನು ಹಿಂದೆನೂ ಹೇಳಿದ್ದೆ. ಗಡಿ ಸಮಸ್ಯೆ, ಆರೋಗ್ಯ ಸಮಸ್ಯೆ, ಹಣದುಬ್ಬರ, ನಿರುದ್ಯೋಗ ಎಲ್ಲವೂ ಹೆಚ್ಚಾಗಲಿದೆ. ಈ ವರ್ಷದಲ್ಲಿ ಕೊರೊನಾ ಹಾವಳಿ ಕಮ್ಮಿಯಾಗುವ ಸಾಧ್ಯತೆಯಿಲ್ಲ. ಕೆಲವರು ಮಾತ್ರ ಈ ಅವಧಿಯಲ್ಲಿ ಲಾಭವನ್ನು ಮಾಡಿಕೊಳ್ಳುತ್ತಾರೆ" ಎಂದು ಸಂಜಯ್ ಜುಮಾನ್ ಹೇಳಿದ್ದಾರೆ.

ಆಗಸ್ಟ್ 15, 2021ರವರೆಗೆ ಕಾಯಬೇಕು

ಆಗಸ್ಟ್ 15, 2021ರವರೆಗೆ ಕಾಯಬೇಕು

"ಭಾರತಕ್ಕೆ ಅಚ್ಚೇದಿನ್, ಸಚ್ಚೇದಿನ್ ಬರಬೇಕಾದರೆ, ಮುಂಬರುವ ಆಗಸ್ಟ್ 15, 2021ರವರೆಗೆ ಕಾಯಬೇಕು. ಆ ವೇಳೆ, 3-6-9 ಫ್ಯಾಮಿಲ್ ನಂಬರ್ ಆಗಿದೆ. ಗುರು-ಶುಕ್ರ-ಮಂಗಳ ರಾಶಿ ಒಂದೇ ಪಥದಲ್ಲಿ ಇರಲಿದೆ. 2021ರ ಆಗಸ್ಟ್ 15, ನಮಗೆ 75ನೇ ಸ್ವಾತಂತ್ರ್ಯ ದಿನಾಚರಣೆಯಾಗಲಿದೆ. ಆ ನಂತರದ ದಿನಗಳು ಎಲ್ಲಾ ವಿಚಾರದಲ್ಲಿ ಭಾರತಕ್ಕೆ ಶುಭ ತರಲಿದೆ" ಎಂದು ಸಂಜಯ್ ಜುಮಾನ್ ಅಭಿಪ್ರಾಯ ಪಟ್ಟಿದ್ದಾರೆ.

ಭವಿಷ್ಯ: ಸೆ.13ಕ್ಕೆ ಹಿಂದೆಂದೂ ಬಾರದ, ಮುಂದೆಯೂ ಕಾಣದ 'ಅಪರೂಪದ ಗಳಿಗೆ'

ಭಾರತ ಉತ್ತಮ ಸಾಧನೆಯನ್ನು ಮಾಡಲಿದೆ

ಭಾರತ ಉತ್ತಮ ಸಾಧನೆಯನ್ನು ಮಾಡಲಿದೆ

"ಪ್ರವಾಸೋದ್ಯಮ, ಚಿತ್ರೋದ್ಯಮ, ರೆಸ್ಟೋರೆಂಟ್ ಮುಂತಾದ ಉದ್ಯಮಗಳು ಮುಂದಿನ ವರ್ಷದಲ್ಲಿ ಲಾಭದತ್ತ ಸಾಗಲಿದೆ. ಕ್ರೀಡಾ ಕ್ಷೇತ್ರದಲ್ಲೂ ಭಾರತ ಉತ್ತಮ ಸಾಧನೆಯನ್ನು ಮಾಡಲಿದೆ. ಒಟ್ಟಾರೆಯಾಗಿ, ಆ ದಿನದ ನಂತರ ಭಾರತದಲ್ಲಿ ಶಾಂತಿ, ನೆಮ್ಮದಿ ನೆಲೆಯೂರಲಿದೆ"ಎಂದು ಸಂಜಯ್ ಜುಮಾನ್ ಹೇಳಿದ್ದಾರೆ.

ಅಶ್ವಯುಜ, ಕಾರ್ತಿಕ ಮಾಸ

ಅಶ್ವಯುಜ, ಕಾರ್ತಿಕ ಮಾಸ

"ಅಶ್ವಯುಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಈ ವೈರಸ್ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ. ಹೀಗಾಗಿ ಜನರು ಸುರಕ್ಷತೆ ಕಾಪಾಡಿಕೊಂಡರೆ ಕೊರೊನಾದಿಂದ ಪಾರಾಗಬಹುದು. ಸೆ.17ರಂದು ಮಹಾಲಯ ಅಮಾವಾಸ್ಯೆಯ ನಂತರ ಅಶ್ವಯುಜ ಮಾಸ ಆರಂಭವಾಗಲಿದೆ. ಇದು, ಅಕ್ಟೋಬರ್ ಹದಿನಾರರ ವರೆಗೆ ಇರಲಿದೆ" - ಕೋಡಿಶ್ರೀಗಳು.

  TATA company ಇಂದ ಶಾಪೂರ್ಜಿ ಪಲ್ಲೊಂಜಿ OUT | Oneindia Kannada
  ಕೋಡಿ ಶ್ರೀಗಳ ಭವಿಷ್ಯ

  ಕೋಡಿ ಶ್ರೀಗಳ ಭವಿಷ್ಯ

  ಆದರೆ, ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಅಶ್ವಯುಜ ಮಾಸ, ದೀಪಾವಳಿ ಅಮಾವಾಸ್ಯೆಯ ದಿನವಾದ ನವೆಂಬರ್ 15ರವರೆಗೆ ಇರಲಿದೆ. ನವೆಂಬರ್ 16, ಬಲಿಪಾಡ್ಯಮಿಯ ದಿನದ ನಂತರ ಕಾರ್ತಿಕ ಮಾಸ ಆರಂಭವಾಗಲಿದೆ. ಅಲ್ಲಿಂದ ಒಂದು ತಿಂಗಳು, ಅಂದರೆ, ಕಾರ್ತಿಕ ಮಾಸ ಮುಗಿದು, ಮಾರ್ಗಶಿರ ಮಾಸ ಆರಂಭವಾಗುವುದು ಡಿಸೆಂಬರ್ 15ಕ್ಕೆ. ಹಾಗಾಗಿ, ಈ ಅವಧಿಯ ವರೆಗೆ ಕೋಡಿ ಶ್ರೀಗಳು ಹೇಳಿದ ಹಾಗೆ, ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಬಹುದು.

  English summary
  When Corona Will End, When Is The Good Day Start For Country: Prediction By Sanjay Juman,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X