ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ವರ್ಷದ (2020) ಕೋಡಿಶ್ರೀಗಳ 'ಯುಗಾದಿ ಭವಿಷ್ಯ'ದ ಸತ್ಯಾಸತ್ಯತೆ

|
Google Oneindia Kannada News

ಯುಗಾದಿ ಭವಿಷ್ಯ, ದಸರಾ ಭವಿಷ್ಯ ಎಂದಾಗ ಆಸ್ತಿಕ ಜನರು ಕುತೂಹಲದಿಂದ ಕಾಯುವುದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿಯುವ ಭವಿಷ್ಯದ ಕಡೆಗೆ.

ಕೋಡಿಶ್ರೀಗಳ ಭವಿಷ್ಯ ಎಷ್ಟು ಜನಪ್ರಿಯ ಎಂದರೆ, ಒಮ್ಮೆ ಚುನಾವಣೆಯ ಸಂದರ್ಭದಲ್ಲಿ ಭವಿಷ್ಯ ನುಡಿದರು ಎನ್ನುವ ಕಾರಣಕ್ಕಾಗಿ ಚುನಾವಣಾ ಆಯೋಗ ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು.

 ಪ್ಲವನಾಮ ಸಂವತ್ಸರದ ಭವಿಷ್ಯ: ಕೊರೊನಾ, ಯುದ್ದಭೀತಿ, ಮೋದಿಗೆ ಕಂಟಕ ಪ್ಲವನಾಮ ಸಂವತ್ಸರದ ಭವಿಷ್ಯ: ಕೊರೊನಾ, ಯುದ್ದಭೀತಿ, ಮೋದಿಗೆ ಕಂಟಕ

ಕಳೆದ ಯುಗಾದಿಯ ಅಂದರೆ ಶಾರ್ವರಿ ನಾಮ ಸಂವತ್ಸರದ ಭವಿಷ್ಯವನ್ನು ಕೋಡಿಶ್ರೀಗಳು ನುಡಿದಿದ್ದರು. ಶಾರ್ವರಿ ಯಿಂದ ಪ್ಲವನಾಮ ಸಂವತ್ಸರದ ವರೆಗಿನ ಭವಿಷ್ಯ ಅದಾಗಿತ್ತು. ಕೊರೊನಾ ಹಾವಳಿಯ ನಡುವೆ ಕೋಡಿಶ್ರೀಗಳು ನುಡಿದಿದ್ದ ಭವಿಷ್ಯದಲ್ಲಿ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಶ್ರೀಗಳು ನುಡಿದಿದ್ದರು.

ಹಾಗಾದರೆ, ಕಳೆದ ಯುಗಾದಿಯ ವೇಳೆ, ಕೊರೊನಾ, ಪಾಕೃತಿಕ ವಿಕೋಪ ಮುಂತಾದ ವಿಚಾರಗಳಲ್ಲಿ ಕೋಡಿಶ್ರೀಗಳು ನುಡಿದಿದ್ದ ಭವಿಷ್ಯವಾದರೂ ಏನು ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 Jupiter Transition: ಗುರು ಬಲದಿಂದ ಏಪ್ರಿಲ್ 6ರಿಂದ ಶುಭ ಫಲ ಪಡೆಯುವ 5 ರಾಶಿಗಳಿವು Jupiter Transition: ಗುರು ಬಲದಿಂದ ಏಪ್ರಿಲ್ 6ರಿಂದ ಶುಭ ಫಲ ಪಡೆಯುವ 5 ರಾಶಿಗಳಿವು

 ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ

ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ

''ಜಗತ್ತಿನಾದ್ಯಂತ ಕೊರೊನಾ ವ್ಯಾಧಿ ಇನ್ನೂ ಉಲ್ಬಣವಾಗುವ ಲಕ್ಷಣವಿದೆ. ಈ ವ್ಯಾಧಿ ದಿನೇ ದಿನೇ ಹೆಚ್ಚುತ್ತಾ ಮನುಷ್ಯರ ಪ್ರಾಣದ ಜೊತೆ ತಾಂಡವವಾಡುತ್ತೆ. ಗಿಡ, ಮರ, ಪ್ರಾಣಿಗಳಿಗೂ ಈ ವ್ಯಾಧಿ ಘೋರವಾಗಿ ಅಪ್ಪಳಿಸಲಿದೆ. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಆದರೆ, ಕೊರೊನಾ ತೀವ್ರವಾಗಿ ಹರಿದಾಡುತ್ತಿದ್ದರೂ, ಒಂದು ದೇಶ ನಾಶವಾದ ಬಗ್ಗೆ ಎಲ್ಲೂ ವರದಿಯಾಗಿಲ್ಲ.

 ಭಾರತ ಧರ್ಮ ಭೂಮಿಯಾಗಿದ್ದು, ದೇಶಕ್ಕೆ ಅಪಾಯವಿಲ್ಲ

ಭಾರತ ಧರ್ಮ ಭೂಮಿಯಾಗಿದ್ದು, ದೇಶಕ್ಕೆ ಅಪಾಯವಿಲ್ಲ

''ಭಾರತ ಧರ್ಮ ಭೂಮಿಯಾಗಿದ್ದು, ಈ ವ್ಯಾಧಿ ಜಗತ್ತಿಗೆ ಮುತ್ತಿಗೆ ಹಾಕಿ ಕೊಲ್ಲುತ್ತಾ ಹೋದರೂ, ಭಾರತ ದೇಶಕ್ಕೆ ಅಪಾಯವಿಲ್ಲ. ಭಾರತೀಯರು ಹೆದರಬೇಕಾಗಿಲ್ಲ.‌ ಅವರವರ ಇಷ್ಟ ದೇವರ ಪ್ರಾರ್ಥನೆ ಸಲ್ಲಿಸಬೇಕು. ಭಾರತದಲ್ಲಿ ಈ ವೈರಾಣು ಎಷ್ಟೇ ಎತ್ತರಕ್ಕೆ ಹೋದರೂ, ಈ ಭೂಮಿಯ ಪುಣ್ಯ ಫಲದಿಂದ ತನ್ನನ್ನು ತಾನೇ ಕಳೆದುಕೊಳ್ಳುತ್ತೆ'' ಅಂತ ಕೋಡಿಶ್ರೀಗಳು ಹೇಳಿದ್ದರು. ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಿದಾಡುತ್ತಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಿನವೊಂದಕ್ಕೆ ವರದಿಯಾಗುತ್ತಿದೆ. ಇದುವರೆಗೆ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,73,123ಕ್ಕೇರಿದೆ.

 ಹೊಸ ಶಾಸನ ಬರುವ ನಿರೀಕ್ಷೆಯಿದೆ, ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು

ಹೊಸ ಶಾಸನ ಬರುವ ನಿರೀಕ್ಷೆಯಿದೆ, ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು

''ಹೊಸ ಶಾಸನ ಬರುವ ನಿರೀಕ್ಷೆಯಿದೆ. ಬರುವ ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು. ಅತೃಪ್ತ ಪ್ರಜೆಗಳು ಅರಸನ ವಿರುದ್ಧ ದಂಗೆ ಏಳಬಹುದು. ಅರಸು ಪಟ್ಟಕ್ಕೂ ಭಂಗವಾಗುವ ಲಕ್ಷಣವಿದೆ. ಶಾಸನಗಳು ಮಾರಕ, ಪೂರಕವಾಗಲಿವೆ'' ಎನ್ನುವ ಭವಿಷ್ಯ ಶ್ರೀಗಳಿಂದ ಬಂದಿತ್ತು. ಆದರೆ, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

 ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ

ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ

''ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ. ಈ ರೋಗದಿಂದ ಅನೇಕ ಅರಸರು ನಿಯಂತ್ರಣ ಮಾಡಲಾಗದೆ, ಪ್ರಜೆಗಳ ನಿಯಂತ್ರಣ ಮಾಡಲಾಗದೆ ಪಟ್ಟ ಕಳೆದುಕೊಳ್ಳುವ ಲಕ್ಷಣವಿದೆ. ಈ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರಜೆಗಳು ಅವಶ್ಯಕವಾಗಿ ಹೊಂದಿಕೊಂಡು, ಸರ್ಕಾರದ ಜೊತೆ ಕೈಜೋಡಿಸಬೇಕು. ಇಲ್ಲವಾದರೆ ಸಾವಿಗೆ ತಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ''ಎನ್ನುವ ಕೋಡಿಶ್ರೀಗಳ ಭವಿಷ್ಯ ನಿಜವಾಗಿದೆ (ಪಟ್ಟ ಕಳೆದುಕೊಳ್ಳುವ ವಿಚಾರ ಹೊರತು ಪಡಿಸಿ).

Recommended Video

#Covid19Update : ರಾಜ್ಯದಲ್ಲಿ ಇಂದು 14,738 ಜನರಿಗೆ ಸೋಂಕು, 66 ಮಂದಿ ಸಾವು! | Oneindia Kannada
 ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು

ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು

''ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು. ಕೆಲವೆಡೆ ವೃಷ್ಟಿ ಅನಾವೃಷ್ಟಿ ಆಗಲಿದೆ. ಪಂಚಭೂತಗಳಿಂದಲೂ ಈ ಬಾರಿ ತೊಂದರೆಯಾಗಲಿದೆ. ಭೂಮಿ ಕಂಪನವಾಗಿ ಇಬ್ಭಾಗವಾಗಲಿದೆ. ಮಳೆ ಬೆಳೆ ಬಂದು ಹೆಚ್ಚು ಫಸಲು ಬಂದರೂ, ಅದಕ್ಕೆ ರೋಗ ಕಾಡಲಿದೆ. ಕೆಲವು ನದಿಗಳು ಉಕ್ಕಿ ಹರಿದರೆ ಕೆಲವು ನದಿಗಳು ಬರಡಾಗುತ್ತವೆ. ಬಹುಪಾಲು ಜಲಪ್ರಳಯವಾಗುವ ಲಕ್ಷಣವಿದೆ'' ಎನ್ನುವ ಶ್ರೀಗಳ ಭವಿಷ್ಯವೂ ನಿಜವಾಗಿತ್ತು. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು.

English summary
What Kodimutt Seer Predicted During Last Year Of Ugadi And Authenticity Of Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X