• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ಸಮಸ್ಯೆ ನಿವಾರಣೆಗೆ ಯಾವ ತುಲಾ ಭಾರ ಸೇವೆ ಶ್ರೇಷ್ಠ?

By ಪಂಡಿತ್ ವಿಠ್ಠಲ ಭಟ್
|

ದೇವರಿಗೆ ಸೇವೆ ಸಲ್ಲಿಸುವುದು ಹಾಗೂ ಹರಕೆ ತೀರಿಸುವುದರಲ್ಲಿ ನಾನಾ ಬಗೆ. ಹೆಜ್ಜೆ ನಮಸ್ಕಾರ, ಇಂತಿಷ್ಟು ವಾರ ದೀಪ ಹಚ್ಚುವುದು, ಪ್ರದಕ್ಷಿಣೆ... ಹೀಗೆ ವಿವಿಧ ವಿಧಾನದಲ್ಲಿ ತಮ್ಮ ಮನದ ಕಾಮನೆಯನ್ನು ಪೂರೈಸುವಂತೆ ಆ ಭಗವಂತನಲ್ಲಿ ಪ್ರಾರ್ಥಿಸಿ, ಅದು ಈಡೇರಿದ ನಂತರ ಸೇವೆ ಸಲ್ಲಿಸುವುದು ಒಂದು ವಿಧಾನ.

ಅದೇ ರೀತಿ ಮೊದಲಿಗೆ ಮನಸಿನಲ್ಲಿ ಬೇಡಿಕೆ ಹೇಳಿಕೊಂಡು, ಸೇವೆಯನ್ನೂ ಸಲ್ಲಿಸಿ ಬಿಡುವುದು ಎರಡನೇ ಬಗೆ. ಅಂದರೆ ಈ ವಿಚಾರದಲ್ಲಿ ದೇವರು ಬೇಡಿಕೆಯನ್ನು ಪೂರೈಸಲಿ ಎಂದು ಕಾಯುತ್ತಾ ಕೂರುವ ಪ್ರಮೇಯವೇ ಇಲ್ಲ. ನನಗೆ ಇಂಥ ಸಮಸ್ಯೆಯಿದೆ. ಇದನ್ನು ನಿನ್ನ ಗಮನಕ್ಕೆ ತಂದಿದ್ದೇನೆ. ನಿವಾರಿಸುವೆಯೋ ಅಥವಾ ತಡೆದುಕೊಳ್ಳುವ ಶಕ್ತಿ ನೀಡುವೆಯೋ ನಿನಗೆ ಬಿಟ್ಟದ್ದು ಎಂದು ದೇವರಿಗೆ ಭಾರ ಹಾಕಿ ಬಿಡುವುದು.

ಶಿವ ಪುರಾಣ ಪ್ರಕಾರ ಯಾವ ರೀತಿಯ ಶಿವನ ಪೂಜೆಗೆ ಏನು ಫಲ?

ಭಾರ ಅಂದಾಕ್ಷಣ ನೆನಪಾಯಿತು. ಸೇವೆಗಳಲ್ಲಿ ತುಲಾಭಾರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮಹಾಭಾರತದಲ್ಲಿ ಅಂಥದ್ದೊಂದು ಸನ್ನಿವೇಶ ಬರುತ್ತದೆ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಕೃಷ್ಣನ ತುಲಾಭಾರ ಮಾಡಲಾಗುತ್ತದೆ. ಸತ್ಯಭಾಮೆಗೆ ತನ್ನ ಸಂಪತ್ತಿನಿಂದ ಕೃಷ್ಣನ ತೂಕದಷ್ಟನ್ನು ಅಳೆದು, ಗೆಲ್ಲುವಾಸೆ. ಆದರೆ ರುಕ್ಮಿಣಿಗೆ ತನ್ನ ಅನನ್ಯ ಪ್ರೀತಿಯಿಂದ ಒಲಿಸಿಕೊಳ್ಳುವಾಸೆ. ಕೊನೆಗೆ ಕೃಷ್ಣನನ್ನು ತೂಗುವುದು ರುಕ್ಮಿಣಿಯ ತುಳಸೀದಳವೇ.

ಜ್ಯೋತಿಷ್ಯ ಟಿಪ್ಸ್: ಯಾವ ವಾರ ಏನು ಮಾಡಿದರೆ ಕೈಗೊಳ್ಳುವ ಕಾರ್ಯ ಯಶಸ್ಸು?

ಅಂದರೆ, ಪ್ರೀತಿಗೆ- ಭಕ್ತಿಗೆ ಆ ದೇವರನ್ನು ಒಲಿಸಿಕೊಳ್ಳುವ ಶಕ್ತಿಯಿದೆ ಎಂಬ ಸಂದೇಶವನ್ನು ಆ ಭಗವಂತ ನೀಡಿದ್ದಾನೆ.

ಆಯಾ ದೇವಸ್ಥಾನಗಳಲ್ಲಿ ತುಲಾ ಭಾರ ಸೇವೆ

ಆಯಾ ದೇವಸ್ಥಾನಗಳಲ್ಲಿ ತುಲಾ ಭಾರ ಸೇವೆ

ಇನ್ನು ಈ ಲೇಖನದ ವಿಚಾರಕ್ಕೆ ವಾಪಸ್ ಬಂದರೆ, ತುಲಾ ಭಾರ ಮಾಡಿಕೊಳ್ಳುವ ವ್ಯಕ್ತಿಯ ತೂಕದಷ್ಟು ವಸ್ತುವನ್ನು ಆಯಾ ದೇವಸ್ಥಾನಕ್ಕೆ ಅರ್ಪಣೆ ಮಾಡಲಾಗುತ್ತದೆ. ನಾನಾ ಪದಾರ್ಥಗಳಲ್ಲಿ ಮಾಡುವ ತುಲಾ ಭಾರಕ್ಕೆ ಯಾವ ಫಲ ಎಂದು ತಿಳಿಸಿಕೊಡುವ ಲೇಖನ ಇದು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಚೆಗೆ ತುಲಾ ಭಾರ ಮಾಡಿಸಿಕೊಂಡಿದ್ದನ್ನು ಒಂದು ಸಲ ನೆನಪಿಸಿಕೊಳ್ಳಿ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಸ್ವಾಮಿ ಒಣದ್ರಾಕ್ಷಿ-ಅಕ್ಕಿ ತುಲಾಭಾರ

ಋಣ ಬಾಧೆ ನಿವಾರಣೆಗೆ ಉಪ್ಪಿನಲ್ಲಿ ತುಲಾ ಭಾರ ಸೇವೆ

ಋಣ ಬಾಧೆ ನಿವಾರಣೆಗೆ ಉಪ್ಪಿನಲ್ಲಿ ತುಲಾ ಭಾರ ಸೇವೆ

ತುಲಾ ಭಾರ ಸೇವೆಯನ್ನು ನಾನಾ ದ್ರವ್ಯಗಳಲ್ಲಿ ಮಾಡಲಾಗುತ್ತದೆ. ಇದಕ್ಕೆ ಶಾಸ್ತ್ರಾಧಾರಗಳೇನೂ ಇಲ್ಲ. ಆದರೂ ಸಾಲ ಬಾಧೆ ಇರುವವರು ಉಪ್ಪಿನಲ್ಲಿ ತುಲಾ ಭಾರ ಮಾಡಿಸಿಕೊಂಡು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಕೊಡಬೇಕು. ಇನ್ನು ಭೂಮಿಗೆ ಸಂಬಂಧಿಸಿದ ತೊಂದರೆ ಇರುವವರು, ಶರೀರದಲ್ಲಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು, ರಕ್ತದ ಕೊರತೆ ಇರುವವರು, ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಇರುವಂಥವರು ತೊಗರಿ ಬೇಳೆ ತುಲಾ ಭಾರ ಮಾಡಿ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ನೀಡಬೇಕು.

ಆರೋಗ್ಯ ಬಾಧೆ ನಿವಾರಣೆಗೆ ಈಶ್ವರ ದೇಗುಲದಲ್ಲಿ ಅಕ್ಕಿ ಸಲ್ಲಿಕೆ

ಆರೋಗ್ಯ ಬಾಧೆ ನಿವಾರಣೆಗೆ ಈಶ್ವರ ದೇಗುಲದಲ್ಲಿ ಅಕ್ಕಿ ಸಲ್ಲಿಕೆ

ಆರೋಗ್ಯ ಬಾಧೆ ಇರುವಂಥವರು ಈಶ್ವರ ದೇಗುಲದಲ್ಲಿ ಅಕ್ಕಿ ತುಲಾಭಾರ ಮಾಡಿಸಿ, ನೀಡಿದರೆ ಉತ್ತರ. ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರು, ಕೋರ್ಟ್-ಕಚೇರಿ ವ್ಯಾಜ್ಯ ಇರುವಂಥವರು ಅಮ್ಮನವರ ದೇವಸ್ಥಾನದಲ್ಲಿ ತೆಂಗಿನ ಕಾಯಿಯಲ್ಲಿ ತುಲಾ ಭಾರ ಮಾಡಿ ನೀಡಿದರೆ ಶುಭ ಆಗುತ್ತದೆ.

ಗಣಪತಿ ಸನ್ನಿಧಾನದಲ್ಲಿ ಬೆಲ್ಲದ ತುಲಾ ಭಾರ

ಗಣಪತಿ ಸನ್ನಿಧಾನದಲ್ಲಿ ಬೆಲ್ಲದ ತುಲಾ ಭಾರ

ಮನೆಯಲ್ಲಿ ವಿವಾಹ ವಿಳಂಬ ಆಗುತ್ತಿದ್ದರೆ, ಶುಭ ಕಾರ್ಯ ಜರುಗಲಿ ಎಂಬ ಬೇಡಿಕೆ ಇದ್ದರೆ ಗಣಪತಿ ಸನ್ನಿಧಾನದಲ್ಲಿ ಬೆಲ್ಲದಲ್ಲಿ ತುಲಾ ಭಾರ ಮಾಡಿ, ನೀಡಿದರೆ ಶುಭವಾಗುತ್ತದೆ. ಸರಕಾರಿ ಉದ್ಯೋಗದ ಆಕಾಂಕ್ಷಿಗಳು ಗೋಧಿಯಲ್ಲಿ ತುಲಾ ಭಾರ ಮಾಡಿಸಿಕೊಂಡು ನೀಡಬಹುದು. ಇನ್ನು ಎಷ್ಟು ಶ್ರಮಿಸಿದರೆ ಮುಗಿಯದ ಕಷ್ಟಗಳು ಎನ್ನುವವರು ಕರಿ ಎಳ್ಳಿನಲ್ಲಿ ತುಲಾ ಭಾರ ನೀಡಿದರೆ ಕಷ್ಟಗಳು ಕರಗುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is the significance of Tula bhara seva? How it helps to overcome from problems. Here is an explanation from well known astrologer Pandit Vittala Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more