• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಗದೋಷ, ದೋಷದ ಕಾರಣಗಳು, ಮನೆಗೆ ಹಾವು ಬಂದರೆ ಏನು ಫಲ?

By ಪಂಡಿತ್ ವಿಠ್ಠಲ ಭಟ್
|

ಇಂದಿನ ಲೇಖನದಲ್ಲಿ ಸರ್ಪ ದೋಷದ ವಿಚಾರದ ಬಗ್ಗೆ ತಿಳಿಸುತ್ತಿದ್ದೇನೆ. ಭಾರತೀಯರು ಪ್ರಾಣಿಗಳಿಗೆ ದೈವತ್ವದ ಸ್ಥಾನ ಕೊಟ್ಟಿದ್ದೇವೆ. ಆ ಪೈಕಿ ಹಾವುಗಳನ್ನು ಸುಬ್ರಹ್ಮಣ್ಯ ಎಂದು ನಂಬಿದ್ದೇವೆ. ಇನ್ನು ಆ ಭಗವಂತ ಅವುಗಳಿಗೆ ನಾಗಲೋಕ ಅಂತ ಪ್ರತ್ಯೇಕವಾದ ಲೋಕವನ್ನೇ ನೀಡಿದ್ದಾನೆ ಎಂಬುದು ಕೂಡ ನಮ್ಮ ಪುರಾಣಗಳಿಂದ ಕೇಳಿಕೊಂಡು ಬಂದಿರುವ ಸಂಗತಿ.

ಇನ್ನು ನಾವು ವಾಸಿಸುವ ಈ ಭೂಮಿಯಲ್ಲಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಅದೇ ರೀತಿ ಎಲ್ಲ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಅದರಲ್ಲೂ ಸರ್ಪಗಳು ಅಂದರೆ ಹಾವುಗಳಿಗೆ ತೊಂದರೆ ಕೊಟ್ಟರೆ ಖಂಡಿತಾ ಒಳ್ಳೆಯದಾಗಲ್ಲ.

ನಿಮ್ಮ ಸಹೋದರನ ಜಾತಕದಲ್ಲಿ ಕಾಳಸರ್ಪ ದೋಷವಿದೆ!

ನೀವು ಸರ್ಪದೋಷ ಎಂಬುದನ್ನು ಕೇಳಿದ್ದಿರಬಹುದು. ಬಹಳ ಜನ ಕೇಳ್ತಾರೆ: ನಾನು ಯಾವುದೇ ಹಾವನ್ನು ಹೊಡೆದಿಲ್ಲ, ತೊಂದರೆ ಕೊಟ್ಟಿಲ್ಲ. ಆದರೂ ನನ್ನ ಜಾತಕದಲ್ಲಿ ಸರ್ಪ ದೋಷ ಬಂದಿದೆಯಲ್ಲಾ ಏಕೆ ಎಂಬ ಪ್ರಶ್ನೆ ಮಾಡುತ್ತಾರೆ.

ಇಹ ಜನ್ಮನಿ, ಅನ್ಯ ಜನ್ಮನಿ ಎಂದು ಶಾಸ್ತ್ರ ಹೇಳುತ್ತದೆ. ಹಾಗೆಂದರೆ ಈ ಜನ್ಮದಲ್ಲಿ ಅಥವಾ ಕಳೆದ ಜನ್ಮದಲ್ಲಿ ಮಾಡಿದ ಕೃತ್ಯದ ಫಲ ಈಗ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಮುತ್ತಾತ, ತಾತ-ಚಿಕ್ಕಪ್ಪ, ತಂದೆ ಅಥವಾ ದೊಡ್ಡಪ್ಪ ಹಾವಿಗೆ ತೊಂದರೆ ಕೊಟ್ಟಿದ್ದರೆ ಈ ರೀತಿ ದೋಷ ಬರುತ್ತದೆ.

ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ

ಅವರು ಮಾಡಿದ ಪಾಪದ ಫಲ ನಾವೇಕೆ ಅನುಭವಿಸಬೇಕು ಅಂದರೆ, ಪಿತ್ರಾರ್ಜಿತ ಆಸ್ತಿಯಲ್ಲಿ ನಾವು ಹೇಗೆ ಹಕ್ಕು ಸಾಧಿಸುತ್ತೇವೆಯೋ ಅದೇ ರೀತಿ ಪಾಪ- ಪುಣ್ಯಗಳು ಸಹ ಪಿತ್ರಾರ್ಜಿತವಾಗಿ ಬರುತ್ತವೆ.

ನಾಗದೋಷಗಳು ಅಂದರೇನು

ನಾಗದೋಷಗಳು ಅಂದರೇನು

ಸರ್ಪವಧಾ (ಗೊತ್ತಿದ್ದೋ ಗೊತ್ತಿಲ್ಲದೆಯೋ ಹಾವನ್ನು ಹೊಡೆದು ಹಾಕುವುದು), ಸರ್ಪಾಂಡ (ಹಾವಿನ ಮೊಟ್ಟೆ ನಾಶ ಮಾಡುವುದು) ವಧಾ, ಸರ್ಪ ಕೇಲಿ ದರ್ಶನ (ಮಿಲನ ಕ್ರಿಯೆಯಲ್ಲಿ ತೊಡಗಿದ ಹಾವುಗಳನ್ನು ನೋಡುವುದು), ಸರ್ಪಗಳ ವಾಸಸ್ಥಾನವನ್ನು ನಾಶ ಮಾಡುವುದು...ಇತರ ಕೃತ್ಯಗಳು ದೋಷಗಳು ಎನಿಸಿಕೊಳ್ಳುತ್ತವೆ.

ನಾಗನ ದಾರಿಗೆ ಅಡ್ಡ ಮಾಡಬಾರದು

ನಾಗನ ದಾರಿಗೆ ಅಡ್ಡ ಮಾಡಬಾರದು

ಕೆಲವರು ಕೇಳ್ತಾರೆ, ಪದೇ ಪದೇ ನಮ್ಮ ಮನೆಗೆ ಹಾವುಗಳು ಬರುತ್ತವೆ. ಎಷ್ಟೋ ಸಲ ಹಿಡಿಸಿ, ದೂರ ಬಿಡಿಸಿದ್ದೇವೆ. ಆದರೂ ಬರುತ್ತಿದೆ ಎನ್ನುತ್ತಾರೆ. ಇದಕ್ಕೆ ಮುಖ್ಯ ಕಾರಣವಾಗುವ ದೋಷಗಳು ಏನೆಂದರೆ, ನಾಗವೀಥಿನಿರೋದನ , ಮಲಿನೀಕರಣ ದೋಷ, ಗೃಹ ಗೋಷ್ಠ ನಿರ್ಮಾಣ ಅನ್ನುತ್ತಾರೆ. ಅಂದರೆ ಸರ್ಪಗಳು ಸಂಚರಿಸುವ ದಾರಿಗೆ ಅಡ್ಡ ಮಾಡಿದರೆ, ಮಲಿನ ಮಾಡಿದರೆ, ಆ ದಾರಿಯ ಶುದ್ಧತೆ ಹಾಳು ಮಾಡಿದರೆ ಅದು ದೋಷ ಆಗುತ್ತದೆ.

ಸರ್ಪ ಕಾಣಿಸಿಕೊಂಡಿದ್ದಕ್ಕೆ ಶಾಂತಿ

ಸರ್ಪ ಕಾಣಿಸಿಕೊಂಡಿದ್ದಕ್ಕೆ ಶಾಂತಿ

ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆಯ ಬಳಿ ಸರ್ಪ ಕಾಣಿಸಿಕೊಂಡಿತ್ತು ಎಂಬ ಕಾರಣಕ್ಕೆ ಹಾಗೂ ವಾಸ್ತು ದೋಷಗಳಿದ್ದ ಕಾರಣಕ್ಕೆ ಕೆಲ ಬದಲಾವಣೆ ಮಾಡಿಕೊಂಡರು. ಅದೆಲ್ಲ ಆದ ನಂತರ ಮೊನ್ನೆ ಮಂಗಳವಾರ ಹಾಗೂ ಬುಧವಾರ ವಾಸ್ತು ಹೋಮ, ರಾಕ್ಷೋಜ್ಞ ಹೋಮ, ಅಘೋರಾಸ್ತ್ರ ಹೋಮ ಮಾಡಿಸಿದ್ದಾರೆ.

ವಾಸ್ತು ಹೋಮ ಮತ್ತೆ ಮತ್ತೆ ಮಾಡಬೇಕು

ವಾಸ್ತು ಹೋಮ ಮತ್ತೆ ಮತ್ತೆ ಮಾಡಬೇಕು

ವಾಸ್ತು ಹೋಮ ಅನ್ನೋದು ಗೃಹಪ್ರವೇಶ ಸಂದರ್ಭದಲ್ಲಿ ಮಾತ್ರ ಮಾಡುವುದಲ್ಲ. ಒಂದು, ಮೂರು, ಒಂಬತ್ತು ಅಥವಾ ಹನ್ನೆರಡು ವರ್ಷಕ್ಕೊಮ್ಮೆ ವಾಸ್ತು ಪುರುಷನ ಹೋಮ ಮಾಡಬೇಕು. ನಾನಾ ಕಾರಣಗಳಿಗಾಗಿ ವಾಸ್ತು ಪುರುಷನ ಶಕ್ತಿ ಕ್ಷೀಣವಾಗುತ್ತದೆ. ಇಲ್ಲಿ ವಾಸ್ತುಪುರುಷ ಅಂದರೆ ಒಬ್ಬನೇ ಅಲ್ಲ ಆತನ ಜತೆಗೆ ಐವತ್ಮೂರು ದೇವತೆಗಳು ಇದ್ದಾರೆ. ಅವರಿಗೂ ಶಾಂತಿ ಮಾಡಬೇಕು.

ರಾಕ್ಷಸ ಶಕ್ತಿಯ ನಾಶಕ್ಕೆ ಹೋಮ

ರಾಕ್ಷಸ ಶಕ್ತಿಯ ನಾಶಕ್ಕೆ ಹೋಮ

ಅಘೋರಾಸ್ತ್ರ ಅಂದರೆ ಅಘೋರ ಮಂತ್ರದಿಂದ ಹೋಮ ಮಾಡಬೇಕು. ಇನ್ನು ರಾಕ್ಷೋಜ್ಞ ಅಂದರೆ ರಾಕ್ಷಸ ಶಕ್ತಿಯ ನಾಶ ಮಾಡುವ ಹೋಮ. ಅಂದರೆ ನಕಾರಾತ್ಮಕ ಪರಿಣಾಮ ಬೀರುವ ಶಕ್ತಿಗಳ ನಾಶ ಆಗಲಿ ಎಂದು ಪ್ರಾರ್ಥಿಸಿ ಮಾಡುವ ಹೋಮ.

ಸರ್ಪಶಾಂತಿ, ಆಶ್ಲೇಷ ಬಲಿ

ಸರ್ಪಶಾಂತಿ, ಆಶ್ಲೇಷ ಬಲಿ

ಇನ್ನು ಕುಮಾರಸ್ವಾಮಿ ಅವರ ವಿಚಾರಕ್ಕೆ ಬರೋಣ. ಅವರ ಮನೆ ಬಳಿ ಕರಿ ನಾಗರ ಬಂದಿತ್ತು ಅಂತ ಹೇಳುತ್ತಿದ್ದಾರೆ. ಅಂದಹಾಗೆ ಮಾಟ-ಮಂತ್ರದ ಪ್ರತೀಕವಾಗಿಯೂ ಕಪ್ಪು ಹಾವನ್ನು ನೋಡಲಾಗುತ್ತದೆ. ಆದ್ದರಿಂದ ಈ ಗೃಹಪ್ರವೇಶದ ನಂತರ ಕುಮಾರಸ್ವಾಮಿ ಅವರು ಸರ್ಪಶಾಂತಿ, ಆಶ್ಲೇಷ ಬಲಿ ಮಾಡಿಸಿಕೊಂಡು ಅದರಿಂದ ಆಚೆ ಬಂದರೆ ಒಳ್ಳೆಯದು.

ಇನ್ನು ನಾಗಗಳ ಬಗ್ಗೆ ಇರುವ ನಂಬಿಕೆ ಹೀಗಿದೆ

ಇನ್ನು ನಾಗಗಳ ಬಗ್ಗೆ ಇರುವ ನಂಬಿಕೆ ಹೀಗಿದೆ

ಎರಡು ಹಾವುಗಳು ಕಚ್ಚಾಡುವುದನ್ನು ನೋಡಿದರೆ ಹತ್ತಿರದವರು ಹಾಗೂ ಸಂಬಂಧಿಕರ ಮಧ್ಯೆ ಜಗಳಗಳಾಗುತ್ತವೆ

ಒಂದು ಹಾವು ಮತ್ತೊಂದು ಹಾವನ್ನು ನುಂಗುತ್ತಿರುವುದು ನೋಡಿದರೆ ಬೆಳೆ ನಾಶದ ಸೂಚನೆ

ಮನೆಯೊಳಗೆ ಹಾವು ಬಂದರೆ ಅದು ಆಸ್ತಿ ಬರುತ್ತದೆ ಎಂಬ ಸಂಕೇತ. ಅದೇ ಮನೆಯಿಂದ ಆಚೆ ಹೋಗುತ್ತಿರುವುದು ನೋಡಿದರೆ ಸಂಪತ್ತು ನಾಶವಾಗುವ ಸೂಚನೆ

ಹೆಡೆ ಎತ್ತಿಕೊಂಡು ಹಾವು ಎಡದಿಂದ ಬಲಕ್ಕೆ ಹೋದರೆ ಶುಭ

ಬಲಗಡೆಯಿಂದ ವ್ಯಕ್ತಿ ಹತ್ತಿರ ಹಾವು ಬಂದರೆ ಅದು ಯಶಸ್ಸನ್ನು ತೋರಿಸುವ ಸಂಕೇತ. ಅದೇ ಎಡಗಡೆಯಿಂದ ಬಂದರೆ ಅಶುಭ

ಹೆಡೆ ಎತ್ತಿ ವ್ಯಕ್ತಿಯ ಕಡೆ ದಿಟ್ಟಿಸಿ ನೋಡಿದರೆ ಸಂಪತ್ತು ದೊರೆಯುತ್ತದೆ ಎಂದರ್ಥ. ಬಿಲ ಸೇರುವ ವೇಳೆ ನೋಡಿದರೆ ಬಡವರಿಗೆ ಶ್ರೀಮಂತಿಕೆಯೂ ಶ್ರೀಮಂತರಿಗೆ ಬಡತನವನ್ನು ಸೂಚಿಸುತ್ತದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the explanation of Naga dosha, reasons for dosha, why snake come to home? Oneindia Kannada astrologer Pandit Vittala Bhat explains in detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more