ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Weekly Horoscope: ಕೆಲವೇ ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Google Oneindia Kannada News

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರಮಾಸದ ಶುಕ್ಲ ಪಕ್ಷದ ತ್ರಯೋದಶಿಯಿಂದ ಚೈತ್ರ ಬಹುಳ‌ ಪಂಚಮಿಯವರೆಗೆ.

ಈ ವಾರದ ಚಂದ್ರನ ಸಂಚಾರ ಉತ್ತರಾ ನಕ್ಷತ್ರದಿಂದ ಮೂಲಾ ನಕ್ಷತ್ರದವರೆಗೆ.

21/04/2024 ರಿಂದ 27/04/2024 ವಾರಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಏಪ್ರಿಲ್‌ 14ರಿಂದ ಏಪ್ರಿಲ್‌ 20ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ

ಇನ್ನು ಕೆಲವೇ ದಿನಗಳಲ್ಲಿ ಗುರುಬಲ ಬರುವುದರಿಂದ ಯಾವುದಕ್ಕೂ ಹೆದರುವ ಅಗತ್ಯ ಇಲ್ಲ. ಯಾವುದೇ ಕ್ಲೇಶ ನಿಧಾನ ಗತಿ ಆದರೂ ಕೊಂಚ ಸೈರಿಸಿಕೊಳ್ಳಿ. ವೇಗ ಪಡೆದುಕೊಳ್ಳಲು ಕೆಲವೇ ದಿನಗಳು ಬಾಕಿಯಿದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಇವೆ. ಈ ರಾಶಿಯವರು ಒಳ್ಳೆಯ ಅಂಕಗಳನ್ನು ಪಡೆದು ಉನ್ನತ ವ್ಯಾಸಂಗಕ್ಕೆ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ. ರಾಜಕೀಯ ನಾಯಕರಿಗೆ ಬದಲಾವಣೆ ಗೋಚರಿಸುತ್ತದೆ.‌ ಪದವಿ ಅಧಿಕಾರ ಸಿಗುವ ಯೋಗ ಇದೆ.

ವೃಷಭ ರಾಶಿಯ ವಾರ ಭವಿಷ್ಯ

ವೃಷಭ ರಾಶಿಯ ವಾರ ಭವಿಷ್ಯ

ನಿಮಗೆ ಗುರುಬಲ ಇಲ್ಲದಿದ್ದರೂ ರಾಹುಬಲ ಇದೆ. ಇದೇ ಈಗ ನಿಮ್ಮ ಶಕ್ತಿ. ದುರ್ಗೆಯನ್ನು ಆರಾಧಿಸಿ.‌ಇನ್ನೂ ಹೆಚ್ಚು ಶುಭಫಲಗಳನ್ನು ಪಡೆಯಿತ್ತೀರಿ. ಹಣದ ಅಭಾವ ಕೊಂಚ ಕಾಡಬಹುದು ಆದರೆ ಧನಾಗಮನವೂ‌ ಉತ್ತಮವಾಗಿದೆ. ಪ್ರವಾಸ ಮಾಡುವ ಯೋಗ ಇದೆ. ವೃತ್ತಿಯಲ್ಲಿ ಯಾವುದೇ ಏರಿಳಿತ ಇಲ್ಲದೆ ನೆಮ್ಮದಿ ಇದೆ.

ಮಿಥುನ ರಾಶಿಯ ವಾರ ಭವಿಷ್ಯ

ಮಿಥುನ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಕೊನೆ ಗಳಿಗೆ ಯಲ್ಲಿದೆ. ಯಾವುದಾದರೂ ಮುಖ್ಯ ಕೆಲಸಗಳಿದ್ದರೆ ಈ ತಿಂಗಳು ಮುಗಿಸಿ ಬಿಡಿ. ಈಗ ನಿಮಗೆ ಒಂದು ಸಣ್ಣ ಜಾಗ ಬದಲಾವಣೆ ಇದೆ. ಇದನ್ನು ನೀವೇ ಯೋಚಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಿ. ವೃತ್ತಿಯಲ್ಲಿ ಯಶಸ್ಸು ಇದೆ. ತಾಯಿಗೆ ಒತ್ತಡ ಇರುತ್ತದೆ.

ಕಟಕ ರಾಶಿಯ ವಾರ ಭವಿಷ್ಯ

ಕಟಕ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗುರು ಬಲ ಬರುವುದರಿಂದ ಯಾವುದೇ ಮುಖ್ಯ ತೀರ್ಮನಗಳನ್ನು ಮುಂದಕ್ಕೆ ಹಾಕಿ. ದುಡುಕಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಮುಂದಿನ ದಿನಗಳು ನಿಮಗೆ ಶುಭಪ್ರದವಾಗಿದೆ. ಒಂಬತ್ತನೇ ಮನೆಯಲ್ಲಿ ಶುಕ್ರ, ರಾಹು ಹಾಗೂ ಬುಧ ನಿಮಗೆ ಎಲ್ಲ ವಿಧದಲ್ಲೂ ಯಶಸ್ಸನ್ನು ಕೊಡುತ್ತಾರೆ. ಜವಾಬ್ದಾರಿಗಳು ಹೆಚ್ಚುತ್ತದೆ. ‌ಆದರೂ ಒತ್ತಡ ಕಡಿಮೆಯಾಗಲಿದೆ. ಒಂದಷ್ಟು ಉಸಿರಾಡಬಹುದು.‌

ಸಿಂಹ ರಾಶಿಯ ವಾರ ಭವಿಷ್ಯ

ಸಿಂಹ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇದೆ. ಅಂದುಕೊಂಡೊರುವ ಕೆಲಸಗಳನ್ನು ಬೇಗನೇ ಮುಗಿಸಿ. ಈಗ ನಿಧಾನಿಸಿದರೆ ಮುಂದೆ ಅದು ಮುಂದುವರೆಯುವುದೇ ಇಲ್ಲ ಎಂಬಂತೆ ಆಗುತ್ತದೆ. ಸರ್ಕಾರದಿಂದ ಏನಾದರೂ ಕೆಲಸ ಆಗಬೇಕಿದ್ದರೆ ಈಗ ಪ್ರಯತ್ನಿಸಿ. ಬೇಗ ಬೇಗ ಕೆಲಸ ಆಗುತ್ತದೆ. ರುಜುಗಳು ಶೀಘ್ರವಾಗಿ ಆಗಿ ನಿಮ್ಮ ಯೋಜನೆಗಳು ಅಪ್ರೂವ್ ಆಗುತ್ತದೆ. ಕೊಂಚ ಮನಸ್ಸಿಗೆ ಕಿರಿಕಿರಿ‌ ಇದೆ. ಸಂಭಾಳಿಸಿಕೊಳ್ಳಿ. ಈ ವಾರ ಹಣಕಾಸಿಗೆ ತೊಂದರೆ ಇಲ್ಲ.

 ಕನ್ಯಾ ರಾಶಿಯ ವಾರ ಭವಿಷ್ಯ

ಕನ್ಯಾ ರಾಶಿಯ ವಾರ ಭವಿಷ್ಯ

ಇನ್ನು ಕೆಲವೇ ದಿನದಲ್ಲಿ ಗುರುಬಲ ಬರುವುದರಿಂದ ಈಗ ಕೊಂಚ ಋಣಾತ್ಮಕ ಛಾಯೆಯು ಕಾಣಿಸಿದರೂ ಅಂಜಬೇಡಿ.‌ ಆದಷ್ಟು ಧೈರ್ಯದಿಂದ ಮುನ್ನುಗ್ಗಿ. ಸಂಗಾತಿಯಿಂದ ಲಾಭ ಇದೆ. ಶನಿಯ ಬಲ ಹೇಗೂ ನಿಮ್ಮ ಜೊತೆಗೆ ಇದೆ. ಪ್ರವಾಸ ಹೋಗುವ ಯೋಗ ಇದೆ. ಇನ್ನು ಮುಂದೆ ಬರುವ ದಿನಗಳು ನಿಮಗೆ ಲಾಭವನ್ನು ಗೆಲುವನ್ನೂ ತಂದುಕೊಡುತ್ತದೆ.

ತುಲಾ ರಾಶಿಯ ವಾರ ಭವಿಷ್ಯ

ತುಲಾ ರಾಶಿಯ ವಾರ ಭವಿಷ್ಯ

ಆರನೇ ಮನೆಯಲ್ಲಿ ರಾಹು ಬುಧ, ಮಂಗಳ, ಏಳನೇ ಮನೆಯಲ್ಲಿ ಗುರು, ಸೂರ್ಯ, ಶುಕ್ರ ಇದ್ದಾರೆ. ಆರೂ ಗ್ರಹಗಳೂ ಬಲಾಢ್ಯವಾಗಿದೆ. ಗುರುಬಲ ಎಲ್ಲಕಿಂತ ಹೆಚ್ಚಾಗಿ ನಿಮ್ಮನ್ನು ಕಾಪಾಡುತ್ತದೆ. ಮುಖ್ಯ ತೀರ್ಮಾನಗಳು ಮುಖ್ಯ ಕೆಲಸಗಳು ಆಗಬೇಕಿದ್ದರೆ ಬೇಗನೆ ಮುಗಿಸಿ. ಈ ವಾರ ಕಳೆದರೆ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಸಾಹಿತ್ಯ ಸಂಗೀತ ಪ್ರಿಯರಿಗೆ ಈ ವಾರ ಶುಭಫಲಗಳು ಇದೆ. ಈ ವಾರದ ಮೊದಲಲ್ಲಿ ಕುಜ ಐದನೇ ಮನೆಯಿಂದ ಆರನೇ ಮನೆಗೆ ಪ್ರವೇಶವಾಗುತ್ತಾನೆ. ಆರರ ಕುಜ ನಿಮಗೆ ಸಹಕಾರಿ.

ವೃಶ್ಚಿಕ ರಾಶಿಯ ವಾರ ಭವಿಷ್ಯ

ವೃಶ್ಚಿಕ ರಾಶಿಯ ವಾರ ಭವಿಷ್ಯ

ಇನ್ನು ಕೆಲವೇ ದಿನದಲ್ಲಿ ಗುರುವಿನ ಕೃಪೆಗೆ ಪಾತ್ರರಾಗುತ್ತೀರಿ.‌ ಈ ವಾರ ಸ್ವಲ್ಪ ತಡೆದುಕೊಳ್ಳಿ. ಎಲ್ಲ ಸಂಕಷ್ಟ ಕಿರುಕುಳಗಳಿಗೂ ಕೊನೆ ಇದೆ. ಈಗ ಐದನೇ ಮನೆಯಲ್ಲಿ ರಾಹು ಬುಧ ಕುಜ ಇರುವುದು ಸ್ವಲ್ಪ ತೊಂದರೆ. ಬುಧ ಮೇಷರಾಶಿಗೆ ಬಂದಾಗ ಶುಭಫಲಗಳು ಇವೆ.‌ ಆರರಲ್ಲಿ ಸೂರ್ಯ ಧನಲಾಭ ಕೊಡುತ್ತಾನೆ. ‌ಈ ವಾರ ಕಳೆದರೆ ನಂತರ ಎಲ್ಲವೂ ನಿಮಗೆ ಶುಭ.

ಧನಸ್ಸು ರಾಶಿಯ ವಾರ ಭವಿಷ್ಯ

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇರುವುದರಿಂದ ಏನೂ ಭಯವಿಲ್ಲ. ಆದರೆ ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ತಾಯಿಗೆ ಕಷ್ಟ ಅಥವಾ ತಾಯಿಯೊಂದಿಗಿನ ಸಂಬಂಧಕ್ಕೆ ಕೊಂಚ ಧಕ್ಕೆ ಒದಗಬಹುದು. ಬಾಕಿಯಂತೆ ಈಗ ಐದನೇ ಮನೆಯಲ್ಲಿ ಗುರು ಮೂರನೇ ಮನೆಯಲ್ಲಿ ಶನಿ ಸಮಯ ಬಹಳ‌ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಇದೆ. ವೃತ್ತಿಯಲ್ಲಿ ಕೊಂಚ ಏರಿಳಿತ ಆಗಬಹುದು. ಮುಂದೆ ಒತ್ತಡಗಳು ಹೆಚ್ಚಾಗುವ ಸೂಚನೆ ಇದೆ. ಸಂಭಾಳಿಸಿಕೊಳ್ಳಿ.

ಮಕರ ರಾಶಿಯ ವಾರ ಭವಿಷ್ಯ

ಮಕರ ರಾಶಿಯ ವಾರ ಭವಿಷ್ಯ

ಮೂರರಲ್ಲಿ ರಾಹು ಪರಾಕ್ರಮ ವನ್ನು ಧೈರ್ಯ ವನ್ನು ಕೊಡುತ್ತಾನೆ. ಈ ವಾರದ ಮೊದಲಲ್ಲಿ ಕುಜ ಕೂಡ ಮೂರನೇ ಮನೆಗೆ ಪ್ರವೇಶವಾಗಿ ನಿಮಗೆ ಇನ್ನೂ ಹೆಚ್ವಿನ ಲಾಭ ಇದೆ. ಮುಂದಿನ ದಿನಗಳಲ್ಲಿ ಗುರುವಿನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಕಷ್ಟಗಳೆಲ್ಲ ನಿವಾರಣೆಯಾಗಿ ಭಾಗ್ಯೋದಯವಾಗುತ್ತದೆ. ಹಣಕಾಸಿನ ಹರಿವು ಉತ್ತಮವಾಗುತ್ತದೆ. ಹೊಸ ನೌಕರಿ ಸಿಗುವ ಯೋಗ ಇದೆ. ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. ಉತ್ಸಾಹದಿಂದ ಬರಮಾಡಿಕೊಳ್ಳಿ.

ಕುಂಭ ರಾಶಿಯ ವಾರ ಭವಿಷ್ಯ

ಕುಂಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಪರೀಕ್ಷಾ ಕಾಲ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ ಗುರುಬಲ ಇಲ್ಲ. ಹೀಗಾಗಿ ಬಹಳ ಕಿರಿಕಿರಿ ಹಾಗೂ ಸಂಕಷ್ಟಗಳಿವೆ. ಜಾಗ್ರತೆಯಿಂದ ವ್ಯವಹರಿಸಿ.‌ ಎರಡನೇ ಮನೆಯಲ್ಲಿಇರುವ ಶುಕ್ರ ಈ ವಾರದ ಮೊದಲಲ್ಲಿ‌ಮೂರನೇ ಮನೆಗೆ ಹೋಗುತ್ತಾನೆ. ಸಹೋದರಿಯರಿಂದ ಅನುಕೂಲ ಇದೆ. ಈಗ ಸೂರ್ಯ ಮೂರನೇ ಮನೆಯಲ್ಲಿ ಇದ್ದಾನೆ ಇದೂ ಸಹ ನಿಮಗೆ ಅಲ್ಪಸ್ವಲ್ಪ ಲಾಭ ಕೊಡುತ್ತದೆ. ಶನಿ ನಿಮ್ಮ ರಾಶಿಯಲ್ಲೇ ಇದ್ದಾನೆ ಇದು ಆರೋಗ್ಯದ ಏರುಪೇರನ್ನು ಖರ್ಚುಗಳನ್ನೂ ತೋರಿಸುತ್ತದೆ. ನಿಮಗೆ ಬೇಡದ ಜಾಗಕ್ಕೆ ವರ್ಗಾವಣೆ ಆಗಬಹುದು ನಾಜೂಕಾಗಿ ನಿಭಾಯಿಸಿ.

Recommended Video

ಹೊಸ ವರ್ಷಕ್ಕೆ ಟೀಂ‌ ಇಂಡಿಯಾ ಆಟಗಾರರ ಮೋಜು ಮಸ್ತಿ ಫುಲ್ ವೈರಲ್ | Oneindia Kannada
 ಮೀನ ರಾಶಿಯ ವಾರ ಭವಿಷ್ಯ

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಕುಂಭರಾಶಿ ಯವರಿಗೂ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಖರ್ಚು ಹೆಚ್ಚು ಶ್ರಮ ಜಾಸ್ತಿ ಫಲ ಕಡಿಮೆ. ಯಾವುದೋ ಒಂದು ಕುಟುಕು ಮಾತು ಕಿವಿಮೇಲೆ ಬೀಳುತ್ತಲೇ ಇರುತ್ತದೆ. ನಿಮ್ಮ ನೆಮ್ಮದಿ ಕೆಡಿಸುತ್ತದೆ. ಮನೆಯಲ್ಲಿ ಕೊಂಚ ಅಶಾಂತ ವಾತಾವರಣ ಇರುತ್ತದೆ. ಮನೆಯ ಸದಸ್ಯರಿಗೆ ಕೊಂಚ ನೋವಾದರೂ ನೀವು ಸಹಿಸುವುದಿಲ್ಲ. ಆದಷ್ಟು ನಿಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿ. ದೇವರ ಮೇಲೆ ನಂಬಿಕೆ ಇರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X