• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Weekly Horoscope: ತಾ: 04 ಡಿಸೆಂಬರ್ ಇಂದ 10 ಡಿಸೆಂಬರ್ 2022ರ ವರೆಗೂ ವಾರಭವಿಷ್ಯ

Google Oneindia Kannada News

ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು, ಲಾಭ-ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ವರ್ಷಋತು, ಭಾದ್ರಪದ ಮಾಸ ಶುಕ್ಲಪಕ್ಷ.

ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ದ್ವಾದಶಿಯಿಂದ ಕೃಷ್ಣ ಪಕ್ಷದ ತೃತೀಯಾದ ವರೆಗೆ ವಾರ ಭವಿಷ್ಯ. ತಾ: 04.12.22 to 10.12.22

ಈ ವಾರದ ಚಂದ್ರನ ಸಂಚಾರ ಅಶ್ವಿನಿ ನಕ್ಷತ್ರದಿಂದ ಪುನರ್ವಸು ವರೆಗೆ.

ಮೇಷ ರಾಶಿ

ಮೇಷ ರಾಶಿ

ಈ ವಾರದಲ್ಲಿ ನಿಮ್ಮ ರಾಶಿಗೆ ಬುಧ ಶುಕ್ರರು ಭಾಗ್ಯಸ್ಥಾನದಲ್ಲಿ ಇದ್ದಾರೆ.‌ ಭಾಗ್ಯಸ್ಥಾನದ ಬುಧಶುಕ್ರರು ಬಹಳ ಒಳ್ಳೆಯ ಫಲಗಳನ್ನು ಕೊಡುತ್ತಾರೆ. ಸಜ್ಜನರ ಸ್ನೇಹ, ಸತ್ಸಂಗ, ಧಾರ್ಮಿಕ ಆಚರಣೆ ಮುಂತಾದ ಧರ್ಮಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡುತ್ತಾರೆ. ದೈವದರ್ಶನ ಭಾಗ್ಯ ಇದೆ. ಕೆಲವೇ ದಿನಗಳಲ್ಲಿ ಶನಿಯ ಕುಂಭರಾಶಿಯ ಪ್ರವೇಶದಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಆಗುತ್ತದೆ.‌ ನಿಂತು ಹೋದ ಎಷ್ಟೋ ಕೆಲಸಕಾರ್ಯಗಳು ಮರುಚಾಲನೆ ಪಡೆದುಕೊಳ್ಳುತ್ತದೆ. ಸಂಬಂಧಗಳಲ್ಲಿ ವಿರಸಗಳಿದ್ದರೆ ಸುಖಾಂತವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ವಾರದ ಮಧ್ಯಭಾಗದಿಂದ ಚಂದ್ರನ ಸಂಚಾರ ನಿಮಗೆ ಅದೃಷ್ಟ ತರುತ್ತದೆ. ಶುಭಕಾರ್ಯಕ್ಕೆ ಖರ್ಚು ಮಾಡುತ್ತೀರಿ.‌ ಕೆಲಸದಲ್ಲಿ ವರ್ಗಾವಣೆ, ಬಡ್ತಿ ಮುಂತಾದ ಬದಲಾವಣೆಗಳು ನಡೆಯುತ್ತದೆ. ವಿದೇಶ ಯಾತ್ರೆಯ ಯೋಗ ಇದೆ. ವಿದ್ಯಾರ್ಥಿಗಳಿಗೆ ಶುಭವಿದೆ. ಎಂಟರ ಸೂರ್ಯ ಆಪತ್ತಿಗೆ ರಕ್ಷಣೆ ಕೊಡುತ್ತಾನೆ.

ವೃಷಭ ರಾಶಿ

ವೃಷಭ ರಾಶಿ

ಈ ವಾರ ಬುಧ ಶುಕ್ರರು ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಇದ್ದಾರೆ. ಶುಭಗ್ರಹಗಳು ಎಂಟನೇ ಮನೆಯಲ್ಕಿ ಇದ್ದಾಗ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಆಪತ್ತಿನಿಂದ ರಕ್ಷಣೆ ಸಿಗುತ್ತದೆ. ದುರ್ಗೆ ಹಾಗೂ ನಾರಾಯಣನ ಕೃಪಾಕಟಾಕ್ಷ ನಿಮ್ಮ ಮೇಲಿದೆ.‌ ಶತ್ರುಗಳು ದೂರವಾಗುತ್ತಾರೆ. ಜನರ ಬಣ್ಣ ಬಯಲಾಗುತ್ತದೆ. ನಿಮ್ಮ ಮಿತ್ರರು ಯಾರು ಶತ್ರುಗಳು ಯಾರು ಎಂದು ತಿಳಿಯುವ ಸಮಯ. ಹನ್ನೊಂದರ ಗುರು ನಿಮಗೆ ಕಾರ್ಯಕ್ಷೇತ್ರದಲ್ಲಿ ಅದೃಷ್ಟ ತರುತ್ತಾನೆ. ವಿದೇಶ ಪ್ರಯಾಣ ಯೋಗ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಇದೆ. ಗುರುಗಳ ಅನುಗ್ರಹ ಸಿಗುತ್ತದೆ. ಕುಲದೇವರ ದರ್ಶನಭಾಗ್ಯ ಇದೆ. ನಿಮ್ಮ ಕೆಲಸಕಾರ್ಯಗಳು ಸುಲಭವಾಗಿ‌ ನೆರವೇರುವ ಸಮಯ. ಹಣಕಾಸು ಸ್ಥಿತಿ‌ ಉತ್ತಮವಾಗಿದೆ. ಏಳರ ಸೂರ್ಯನಿಂದ ಸಂಗಾತಿಗೆ ಶುಭವಿದೆ.

ಮಿಥುನ ರಾಶಿ

ಮಿಥುನ ರಾಶಿ

ನಿಮಗೆ ಈ ವಾರದಲ್ಲಿ ಏಳನೇ ಮನೆಯಲ್ಲಿ ಬುಧ ಶುಕ್ರರು ಇದ್ದಾರೆ.‌ ಬುಧ ನಿಮ್ಮ ರಾಶಿಯ ಅಧಿಪತಿ ಶುಕ್ರ ನಿಮಗೆ ಪಂಚಮಾಧಿಪತಿ.‌ ಇಬ್ಬರೂ ಜೊತೆಯಾಗಿ ಏಳನೇ ಮನೆ ಕಳತ್ರ ಸ್ಥಾನದಲ್ಲಿ ಇರುವುದು ಶುಭವನ್ನು ತರುತ್ತದೆ. ಸಂಗಾತಿಯೊಡನೆ ಸಂತಸದಿಂದ ಇರುತ್ತೀರಿ. ಸಂಗಾತಿಯಿಂದ ಲಾಭ ಇದೆ. ಸಹಕಾರ ಬೆಂಬಲ‌ ಸಿಗುತ್ತದೆ. ವಿರಸದಿಂದ ಬೇರ್ಪಟ್ಟಿದ್ದರೆ ಈಗ ಒಂದಾಗುವ ಸಮಯ. ಒಂದಾಗಲು ಅವಕಾಶಗಳು ಹುಡುಕಿ ಬರುತ್ತದೆ. ಸದುಪಯೋಗ ಪಡಿಸಿಕೊಳ್ಳಿ. ವೃತ್ತಿಯಲ್ಲಿ ಒಳ್ಳೆಯ ಅವಕಾಶಗಳು ಇದೆ. ವೃತ್ತಿಯಲ್ಲಿ ಹೆಸರು ಕೀರ್ತಿ‌ ಸಂಪಾದಿಸುತ್ತೀರಿ. ಆರರ ಸೂರ್ಯ ಶತ್ರು ಧ್ವಂಸ ಮಾಡಿಸುತ್ತಾನೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಈ ವಾರದಲ್ಲಿ ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಬುಧಶುಕ್ರರಿದ್ದಾರೆ. ಆರನೇ ಋಣ ಹಾಗೂ ರೋಗಸ್ಥಾನ. ಇಲ್ಲಿ ಬುಧಶುಕ್ರರು ನಿಮಗೆ ಗುಣಾತ್ಮಕ ಫಲಗಳನ್ನು ಕೊಡುತ್ತಾರೆ. ಸಾಲಭಾದೆ ನಿವಾರಣೆಗೆ ದಾರಿ ತೋರುತ್ತಾರೆ. ಅನಾರೋಗ್ಯ ಇದ್ದರೆ ಈಗ ಒಳ್ಳೆ ಔಷಧೋಪಚಾರದಿಂದ ಗುಣ ಕಾಣುತ್ತೀರಿ.‌ಈ ವಾರದ ಶುರುವಿನಲ್ಲಿ ಚಂದ್ರನ ಸಂಚಾರ ನಿಮಗೆ ಶುಭ ತರುತ್ತದೆ. ತಾಯಿಯಿಂದ ಸಹಾಯ ಸಹಕಾರ ಇದೆ. ಒಂಬತ್ತರ ಗುರು ನಿಮ್ಮ ರಾಶಿಯನ್ನು ವೀಕ್ಷಿಸುತ್ತಾನೆ. ನಿಮಗೆ ಕೀರ್ತಿ ಹೆಸರು ತಂದುಕೊಡುವಂಥ ಕೆಲಸಗಳನ್ನು ಮಾಡಿಸುತ್ತಾನೆ. ವಿದ್ಯಾರ್ಥಿಗಳಿಗೆ ಶುಭಫಲಗಳಿವೆ. ಧರ್ಮಕಾರ್ಯ ದೈವಕಾರ್ಯ ಮಾಡುತ್ತೀರಿ. ವೃತ್ತಿಯಲ್ಲಿ ಒತ್ತಡ ಇದ್ದರೂ ಗುರುವಿನ ಅನುಗ್ರಹದಿಂದ ಯಾವ ತೊಂದರೆಯೂ ಬರುವುದಿಲ್ಲ. ನಾಲ್ಕರ ಕೇತು ವಾಹನದಿಂದ ನಷ್ಟ ಮಾಡಿಸುತ್ತಾನೆ.‌ಐದರ ಸೂರ್ಯ ಸರ್ಕಾರದಿಂದ ಲಾಭಮಾಡಿಸುತ್ತಾನೆ.

ಸಿಂಹ ರಾಶಿ

ಸಿಂಹ ರಾಶಿ

ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಬುಧ ಶುಕ್ರರಿದ್ದಾರೆ. ಐದನೇ ಮನೆ ಪೂರ್ವಪುಣ್ಯ ಸಂತಾನ ಹಾಗೂ ವಿದ್ಯಾಸ್ಥಾನ. ಈ ವಾರ ವಿದ್ಯಾರ್ಥಿಗಳಿಗೆ ಸಂತಸವಿದೆ. ವಿದೇಶದಲ್ಲಿ ಓದುವ ಇಚ್ಛೆಯಿದ್ದಲ್ಲಿ ಅದಕ್ಕೆ ತಯಾರಿ‌ ಮಾಡಿಕೊಳ್ಳಬಹುದು. ಮಕ್ಕಳಿಂದ ಶುಭಸುದ್ಧಿ ಇದೆ. ಮಕ್ಕಳ ಬೆಳವಣಿಗೆ ಯಿಂದ ಖುಷಿಯಾಗುತ್ತೀರಿ. ಕೆಲವು ನಿಂತು ಹೋದ ಕೆಲಸಕಾರ್ಯಗಳು ಈಗ ಮರುಚಾಲನೆ ಪಡೆದುಕೊಳ್ಳುತ್ತದೆ. ದುರ್ಗೆ ಹಾಗೂ ನಾರಾಯಣನ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ನಿಮ್ಮ ಮನಸ್ಸಿನಲ್ಲಿ ಸಿಟ್ಟು ದ್ವೇಷ ಇದೆ. ಅದನ್ನು ಬಿಟ್ಟು ಆಚೆ ಬನ್ನಿ ನಿಮಗೆ ಪ್ರಪಂಚ ಸುಂದರವಾಗಿ ಕಾಣುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಯಾರೊಂದಿಗೂ ಸಿಟ್ಟು ದ್ವೇಷ ಒಳ್ಳೆಯದಲ್ಲ. ನಿಮಗೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ವಾರದ ಚಂದ್ರನ ಸಂಚಾರ ನಿಮಗೆ ಶುಭವಿದೆ. ಹತ್ತನೇ ಮನೆಯ ಕುಜ ವೃತ್ತಿಯಲ್ಲಿ ಯಶಸ್ಸು ಕೊಡುತ್ತಾನೆ. ನಾಲ್ಕರ ಸೂರ್ಯ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಸುಲಭ ಮಾಡಿಸುತ್ತಾನೆ. ನೀವು ಯಾವತ್ತೂ ಒಬ್ಬಂಟಿ. ಅಂತರಂಗದ ಮಿತ್ರರು ಹಿತೈಷಿಗಳು ನಿಮಗೆ ಕಡಿಮೆ. ಆದ್ದರಿಂದ ಇರುವ ಹಿತೈಷಿಗಳನ್ನು ಕಳೆದುಕೊಳ್ಳಬೇಡಿ.‌

ಕನ್ಯಾರಾಶಿ

ಕನ್ಯಾರಾಶಿ

ಈಗ ನಿಮಗೆ ಗುರುಬಲದ ಜೊತೆಗೆ ಬುಧ, ಶುಕ್ರ, ಸೂರ್ಯ ಹಾಗೂ ಚಂದ್ರನ ಬಲವೂ‌ಇದೆ. ಈ ವಾರ ನಿಮಗೆ ಅದೃಷ್ಟದ ವಾರ.‌ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲ ನಿಮಗೆ ಜಯ ಸಿಗುತ್ತದೆ. ನಿಮ್ಮ ಮಾತಿಗೆ ಬೆಲೆ ಇದೆ ಆದರೆ ಹಾಗೆಂದು ನೀವು ಹುಸಿ ಭರವಸೆಗಳನ್ನು ಕೊಡಬಾರದು. ನಿಮ್ಮ ಹೆಸರು ಗೌರವವನ್ನು ಕಳೆದುಕೊಳ್ಳುತ್ತೀರಿ. ನೀವು ಹೇಳಿದ ಮಾತೇ ಹುಸಿ ಹೋಗುವ ಸಂಭವ ಇದೆ ಹಾಗಾಗಿ ಮಾತು ಕೊಡುವಾಗ ಎಚ್ಚರಿಕೆ ಇರಲಿ. ಮೂರನೇ ಮನೆ ಸೂರ್ಯ ಧೈರ್ಯ ಕೊಡುತ್ತಾನೆ. ಮುನ್ನುಗ್ಗಿ ಕೆಲಸಕಾರ್ಯಗಳು ಸಾಧಿಸುತ್ತೀರಿ. ಮನೆ ಕಟ್ಟುವ ಅಥವಾ ಕೊಳ್ಳುವ ಸಂದರ್ಭ ಇದೆ. ವಿಶಾಲವಾದ ಮನೆಗೆ ಹೋಗುವ ಯೋಗ ಇದೆ. ಆಸ್ತಿ ಕೊಳ್ಳುವ ಯೋಗ ಇದೆ. ಎಂಟನೇ ಮನೆಯ ರಾಹು ಕೊಂಚ ಕಿರಿಕಿರಿ, ಅನಾರೋಗ್ಯ ನೀಡಿದರೂ ಗುರು ನಿಮ್ಮ ರಾಶಿಯನ್ನು ನೋಡುವುದರಿಂದ ನೀವು ಅಪಾಯಗಳಿಂದ ಪಾರಾಗುತ್ತೀರಿ. ಒಂಬತ್ತರ ಕುಜ ಹಿರಿಯರ ಆಸ್ತಿ‌ಕೊಡಿಸುತ್ರಾನೆ. ವಿದ್ಯಾರ್ಥಿಗಳಿಗೆ ಶುಭವಿದೆ.

ತುಲಾ ರಾಶಿ

ತುಲಾ ರಾಶಿ

ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಬುಧ ಶುಕ್ರರು ಈ ವಾರ ಪೂರ್ತಿ ಇರುತ್ತಾರೆ. ‌ರಾಶಿಯ ಅಧಿಪತಿ ಶುಕ್ರ ಭಾಗ್ಯಾಧಿಪತಿ ಬುಧ ಒಟ್ಟಿಗೆ ಇರುವುದು ಬಹಳಷ್ಡು ಶುಭಫಲಗಳನ್ನು ಕೊಡುತ್ತದೆ. ಎರಡನೇ ಮನೆಯಲ್ಲಿ ಸೂರ್ಯ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಸುಲಭ ಮಾಡಿಸುತ್ತಾನೆ. ಸರ್ಕಾರದಿಂದ ಬರಬೇಕಾಗಿರುವ ಬಾಕಿ ವಸೂಲಿಯಾಗುತ್ತದೆ. ಕಂಟ್ರಾಕ್ಟರ್ ಗಳಿಗೆ ಈ ವಾರ ಶುಭಫಲಗಳು ಇದೆ. ಏಳನೇ ಮನೆಯ ರಾಹು ಪಾಲುದಾರರೊಂದಿಗೆ ಕಿರಿಕಿರಿ ಮಾಡಿಸುತ್ತಾನೆ. ಆರರ ಗುರು ಅನಾರೋಗ್ಯ ಅಥವಾ ಸಾಲಬಾಧೆ ಮಾಡಿಸುತ್ತಾನೆ. ನೀವು ದತ್ತಾತ್ರೇಯ ದೇವಸ್ಥಾನ ಕ್ಕೆ ಪ್ರತಿಗುರುವಾರ ಹೋಗಿಬರಬೇಕು. ಕಡಲೆ ಬೆಲ್ಲ ಹಸುವಿಗೆ ತಿನ್ನಿಸಿ. ಬುಧ ಶುಕ್ರರು ನಿಮಗೆ ರಕ್ಷೆಯಾಗಿದ್ದು ಬಹಳಷ್ಟು ಅಪಾಯಗಳಿಂದ ಅನಾಹುತಗಳಿಂದ ಪಾರು ಮಾಡುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನಿಮ್ಮ ರಾಶಿಯಲ್ಲೇ ಸೂರ್ಯ ಇದ್ದಾನೆ. ನಿಮಗೆ ಬಹಳಷ್ಟು ಚೈತನ್ಯ ಉತ್ಸಾಹ ಇರುತ್ತದೆ. ಯಾವಕೆಲಸವನ್ನೂ ಲೀಲಾಜಾಲವಾಗಿ ಮಾಡಿಬಿಡುತ್ತೀರಿ‌. ನಿಮ್ಮ ಏಳನೇ ಮನೆ ಅಧಿಪತಿ ಶುಕ್ರ ಹಾಗೂ ಒಂಬತ್ತನೇ ಮನೆ ಅಧಿಪತಿ ಬುಧ ಈ ವಾರ ಪೂರ್ತಿ ಸಹಯೋಗದಲ್ಲಿ ಎರಡನೇ ಮನೆಯಲ್ಲಿ ಇರುತ್ತಾರೆ. ಇದು ನಿಮಗೆ ರಕ್ಷೆಯಾಗಿ ಕೆಲಸಮಾಡುತ್ತದೆ. ಹಣಕಾಸಿನ ಹರಿವು ಉತ್ತಮವಾಗಿದೆ. ನಾನಾ ಮೂಲಗಳಿಂದ ಧನಲಾಭ ಇದೆ. ವ್ಯಾಪಾರಸ್ಥರಿಗೆ ಬಹಳ ಒಳ್ಳೆಯ ವಾರ. ಐದರ ಗುರು ನಿಮಗೆ ಎಲ್ಲ ಕಾರ್ಯದಲ್ಲೂ ಜಯ ಸಿಗುವಂತೆ ಮಾಡುತ್ತಾನೆ.‌ಆರರ ರಾಹು ಶತ್ರುವಿನ‌ತೊಂದರೆ ನಿವಾರಣೆ ಮಾಡುತ್ತಾನೆ. ಮದುವೆ ಯಾಗದವರಿಗೆ ಮದುವೆ ಆಗುತ್ತದೆ. ಸಂತಾನಭಾಗ್ಯ ಇದೆ. ಈ ವಾರದ ಚಂದ್ರನ ಸಂಚಾರವೂ ನಿಮಗೆ ಶುಭಫಲ ನೀಡುತ್ತದೆ.

ಧನು ರಾಶಿ

ಧನು ರಾಶಿ

ನಿಮ್ಮ ರಾಶಿಯಲ್ಲೇ ಹತ್ತು ಹನ್ನೊಂದನೇ ಮನೆಯ ಅಧಿಪತಿಗಳಾದ ಬುಧಶುಕ್ರರು ಇದ್ದಾರೆ. ಇವರು ನಿಮ್ಮನ್ನು ಅಪಾಯಗಳಿಂದ ರಕ್ಷಿಸುತ್ತಾರೆ. ಏನೇ ಕಷ್ಟ ಕೋಟಲೆಗಳಿದ್ದರೂ ಮಾನಸಿಕ ಹಿಂಸೆ ಇದ್ದರೂ ಬುಧ ಶುಕ್ರರ ಅನುಗ್ರಹದಿಂದ ನಿಮಗೆ ಯಾವುದೇ ಅಪಾಯವಿಲ್ಲ. ಅಪಘಾತ ಆತ್ಮಹತ್ಯೆ ಮೊದಲಾದ ಸಂಕಟಗಳಿಂದ ನಿಮ್ಮನ್ನು ಪಾರುಮಾಡುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಶನಿ ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಭಾಗ್ಯದ ಬಾಗಿಲು ತೆರೆಯುತ್ತದೆ.‌ ಇದುವರೆಗೂ ಪಟ್ಡ ಸಂಕಟ ಕಷ್ಟ ಮಾಯವಾಗಿ ಮನಸ್ದಿಗೆ ಸಂತಸ ಉತ್ಸಾಹ ಸಿಗುತ್ತದೆ. ಸಾಡೆಸಾತಿ ಶನಿಯ ಪ್ರಭಾವದಿಂದ ಮುಕ್ತರಾಗುತ್ತೀರಿ. ಹನ್ನೊಂದರ ಕೇತು ಕೂಡ ನಿಮಗೆ ಧೈರ್ಯವನ್ನು, ಹಣಕಾಸಿನ‌ ಅನುಕೂಲವನ್ನೂ ಕೊಟ್ಟಿದ್ದಾನೆ.‌ ಆರರ ಕುಜನಿಂದ ಭೂಮಿಯಿಂದ ಲಾಭ ಇದೆ. ‌ಮಕ್ಕಳಿಂದ ವಿರೋಧ ಇದೆ. ಜಾಗ್ರತೆ ಇರಲಿ. ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.‌

ಮಕರ ರಾಶಿ

ಮಕರ ರಾಶಿ

ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಸೂರ್ಯ ನಿಮಗೆ ಧನಲಾಭ ಮಾಡಿಸುತ್ತಾನೆ. ಸರ್ಕಾರದಿಂದ ಯಾವುದಾದರೂ ಹಣ ಬರಬೇಕಾಗಿದ್ದಲ್ಲಿ ಈ ವಾರ ಬರಬಹುದು. ಬ್ಯಾಂಕ್ ಲೋನ್ ಪ್ರಯತ್ನ ಮಾಡುತ್ತಿದ್ದರೆ ಈ ವಾರ ಅದು ಕೈಗೆ ಸಿಗುತ್ತದೆ. ಲೋನ್ ಗೆ ಇರುವ ಅಡೆತಡೆಗಳು ನಿವಾರಣೆಯಾಗುತ್ತದೆ. ಹನ್ನೆರಡನೇ ಮನೆಯಲ್ಲಿ ಬುಧ ಶುಕ್ರ ಸ್ವಲ್ಪ ಖರ್ಚು ಮಾಡಿಸುತ್ತಾರೆ. ಶುಕ್ರ ವಾಹನವನ್ನು ಸೂಚಿಸುವುದರಿಂದ ನಿಮಗೆ ವಾಹನದಿಂದ ಖರ್ಚುಗಳು ಬರಬಹುದು. ವಾಹನ ಕೊಂಡುಕೊಳ್ಳಲು ಬಯಸುವವರು ನಿಮ್ಮ ಯೋಜನೆಯನ್ನು ಕೊಂಚ ಮುಂದಕ್ಕೆ ಹಾಕಿ.‌ಇನ್ನು ಕೆಲವೇ ದಿನಗಳಲ್ಲಿ ಶನಿ ನಿಮ್ಮ ರಾಶಿ ಬಿಟ್ಡು ಕುಂಭಕ್ಕೆ ಪ್ರವೇಶವಾದಾಗ ನಿಮಗೆ ಮನಸ್ಸಿನ ಆತಂಕ ಕಷ್ಟನಷ್ಟಗಳು ಬಹುತೇಕ ನಿವಾರಣೆಯಾಗುತ್ತದೆ. ಹೊಸ ಉದ್ಯೋಗ ಸಿಗುವ ಸಮಯ.‌ಅವಕಾಶಗಳ ಕಡೆ ಗಮನ ಇರಲಿ. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಾಲ್ಕರಲ್ಲಿ ರಾಹು ತಾಯಿಯ ಆರೋಗ್ಯ ಹಾನಿ ಮಾಡುತ್ತಾನೆ. ವಿದ್ಯಾರ್ಥಿಗಳಿಗೆ ಶುಭವಿದೆ. ಮಕ್ಕಳಿಂದ ಶುಭಸುದ್ದಿ ಇದೆ. ಈ ವಾರದ ಚಂದ್ರನ ಸಂಚಾರ ನಿಮಗೆ ಶುಭಫಲ ನೀಡುತ್ತದೆ. ಒಮ್ಮೆ ಕಾಳಹಸ್ತಿಗೆ ಹೋಗಿ‌ ದರ್ಶನ ಮಾಡಿಬನ್ನಿ. ಮೂರರ ಗುರು ಸಹೋದರರಿಂದ ಸಹಾಯ ಸಹಕಾರ ಕೊಡಿಸುತ್ತಾನೆ. ಭೂಮಿಯಿಂದ ಲಾಭ ಇದೆ. ವ್ಯವಸಾಯದಿಂದ ನಿಮಗೆ ಈವಾರ ಅನುಕೂಲ ಇದೆ. ವ್ಯವಸಾಯದಿಂದ ಹಣ ಗಳಿಸುತ್ತೀರಿ.‌

ಕುಂಭ ರಾಶಿ

ಕುಂಭ ರಾಶಿ

ನಿಮಗೆ ಈಗ ಲಾಭಸ್ಥಾನದಲ್ಲಿ ಬುಧಶುಕ್ರರು ಇದ್ದಾರೆ. ಶುಕ್ರ ನಾಲ್ಕನೇ ಮನೆ ಅಧಿಪತಿ, ಬುಧ ಐದನೇ ಮನೆ ಅಧಿಪತಿಯಾಗಿ ಇಬ್ಬರೂ ಒಟ್ಟಿಗೆ 11 ನೇ ಮನೆಯಲ್ಲಿ ಇರುವುದು ಬಹಳ‌ ಶುಭಫಲಗಳನ್ನು ನೀಡುತ್ತದೆ. ದೇವತಾಕಾರ್ಯ ಮಾಡುತ್ತೀರಿ. ಕುಲದೇವತಾ ದರ್ಶನ ಮಾಡುತ್ತೀರಿ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬ ಸೌಹಾರ್ದತೆ ಚೆನ್ನಾಗಿದೆ. ಮೂರ ರಾಹು ದೈಹಿಕ ಶಕ್ತಿ ಹೆಚ್ಚಿಸುತ್ತಾನೆ. ಶತ್ರುನಿವಾರಣೆ ಮಾಡುತ್ತಾನೆ. ಎರಡರ ಗುರು ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ನಿಮಗೆ ನಷ್ಟವೆನಿಸುವ ಯಾವ ಸಂಗತಿಯೂ ನಡೆಯುವುದಿಲ್ಲ. ಗುರುಬಲ‌ಇರುವುದರಿಂದ ಆಪತ್ತು ನಿವಾರಣೆಯಾಗುತ್ತದೆ. ಗುರುಹಿರಿಯರ ಆಶೀರ್ವಾದ ದೊರೆಯುತ್ತದೆ. ಭೂಮಿಯಿಂದ ಲಾಭ ಇದೆ. ಒಂಬತ್ತರ ಕೇತುವಿನಿಂದ ತಂದೆಗೆ ಅನಾರೋಗ್ಯ. ಪಿತ್ರಾರ್ಜಿತವಾಗಿ ಆಸ್ತಿ ಬರುವುದಿದ್ದರೆ ಅಡೆತಡೆ ಇದೆ. ಒಮ್ಮೆ ಕಾಳಹಸ್ತಿಗೆ ಹೋಗಿ ದರ್ಶನ ಮಾಡಿ ಬನ್ನಿ. ಹನ್ನೆರಡರ ಶನಿ ನಿಮ್ಮ ರಾಶಿಗೇ ಪ್ರವೇಶವಾಗುತ್ತಾನೆ. ಜಾಗ್ರತೆ ಇರಲಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

Recommended Video

  ಹೊಸ ವರ್ಷಕ್ಕೆ ಟೀಂ‌ ಇಂಡಿಯಾ ಆಟಗಾರರ ಮೋಜು ಮಸ್ತಿ ಫುಲ್ ವೈರಲ್ | Oneindia Kannada
  ಮೀನ ರಾಶಿ

  ಮೀನ ರಾಶಿ

  ನಿಮಗೆ ಸಾಡೆಸಾತಿ ಶನಿ‌ ಪ್ರಾರಂಭ ಹಂತದಲ್ಲಿ‌ ಇದ್ದೀರಿ. ನೀವು ಅಂದುಕೊಂಡ ಕೆಲಸಕಾರ್ಯಗಳಲ್ಲಿ ವಿಘ್ನಗಳು ಅಡೆತಡೆಗಳು ಬರುತ್ತದೆ. ಯಾವ ಕೆಲಸವೂ ಸಲೀಸಾಗಿ ಆಗುವುದಿಲ್ಲ. ಶ್ರಮ ಹೆಚ್ಚು ನಿಧಾನ ಪ್ರಗತಿ. ಸ್ನೇಹಿತರು ಬಂಧುಬಳಗದವರಿಂದ ಚುಚ್ಚು ಮಾತು ವಿನಾಕಾರಣ ವಿರೋಧ ಎದುರಿಸುತ್ತೀರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ. ನಿಮಗೇ ಗೊತ್ತಿಲ್ಲದಂತೆ ನಷ್ಟವಾಗುವ ಸಂಭವ ಇದೆ. ವ್ಯಾಪಾರಸ್ಥರಿಗೆ ಪ್ರಗತಿ‌ಕಡಿಮೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಬೇಡದ ಜಾಗಕ್ಕೆ ವರ್ಗಾವಣೆ ಆಗುವ ಸಂಭವ ಇದೆ. ವೃಥಾ ಅಲೆದಾಟ ಇರುತ್ತದೆ. ಹನುಮಾನ್ ಚಾಲೀಸಾ ಹಾಗೂ ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. ಕಪ್ಪು ಹಸುವಿಗೆ ಗೋಗ್ರಾಸ ಕೊಡಿ.‌ ಹತ್ತನೇ ಮನೆಯಲ್ಲಿ ಬುಧ ಶುಕ್ರ ಹಾಗೂ ಒಂಬತ್ತರಲ್ಲಿರುವ ಸೂರ್ಯ ಸ್ವಲ್ಪಮಟ್ಟಿಗೆ ನಿಮ್ಮನ್ನು ರಕ್ಷಿಸುತ್ತಾರೆ.

  ಶುಭಮಸ್ತು

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X