• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 15ರಿಂದ 21ರ ವರೆಗೆ ದ್ವಾದಶ ರಾಶಿ ವಾರ ಭವಿಷ್ಯ

By ಪಂಡಿತ್ ಶಂಕರ್ ಭಟ್
|

ಜುಲೈ 15ರಿಂದ 21ರ ವರೆಗಿನ ಜನ್ಮರಾಶಿಯನ್ನು ಆಧರಿಸಿದ ವಾರಭವಿಷ್ಯ ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು.

ಅಕ್ಟೋಬರ್ 11ಕ್ಕೆ ವೃಶ್ಚಿಕಕ್ಕೆ ಗುರು ಗ್ರಹ ಪ್ರವೇಶ: ದ್ವಾದಶ ರಾಶಿ ಫಲ ವಿಶೇಷ

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.

ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ.

ರಾಹುಕಾಲ, ಗುಳಿಕಕಾಲ, ಯಮಗಂಡಕಾಲ

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ: ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ದೊರೆಯಲಿದೆ

ಮೇಷ: ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ದೊರೆಯಲಿದೆ

ನಿಮ್ಮ ಸಹವರ್ತಿಗಳ ಪಾತ್ರ ಏನು ಎಂಬುದನ್ನು ನಿರ್ಧರಿಸುವುದರಲ್ಲಿಯೇ ವಾರದ ಮೊದಲ ಭಾಗದಲ್ಲಿ ಬಿಡುವಿಲ್ಲದ ಕೆಲಸ ಆಗುತ್ತದೆ. ಮುಂಬರುವ ಸಮಸ್ಯೆಗಳನ್ನು ಈಗಲೇ ಬಗೆಹರಿಸಿಕೊಳ್ಳಲು ಇದರಿಂದ ನೆರವಾಗುತ್ತದೆ. ಜ್ಞಾನ- ವಿಜ್ಞಾನ ಕ್ಷೇತ್ರಗಳಲ್ಲಿ ಅದ್ಭುತವಾದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆದರೆ ಆ ಅವಕಾಶಗಳನ್ನು ಬಳಸಿಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ವಾರದ ಶುರುವಿನಿಂದಲೇ ವೈಯಕ್ತಿಕ ಸಂಬಂಧಗಳು ಸುಮಧುರವಾಗಿ ಇರಿಸಿಕೊಳ್ಳಲು ಪ್ರಯತ್ನ ಪಡುತ್ತೀರಿ. ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿ ಸಂತೋಷ ನೀಡುತ್ತದೆ.

ತಲೆ ನೋವು ಮತ್ತಿತರ ದೈಹಿಕ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ಇದಕ್ಕಾಗಿ ಚಿಕಿತ್ಸೆ ಪಡೆಯುವುದು ಅನಿವಾರ್ಯ ಆಗಲಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಈ ಮೂಲಕ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅತ್ಯುತ್ತಮವಾದ ವೇದಿಕೆ ದೊರೆಯಲಿದೆ. ವಾರದ ಕೊನೆ ಭಾಗ ನಿಮಗೆ ಅನುಕೂಲಕರವಾಗಿ ಇರಲಿದೆ. ಇದರಿಂದ ಸಂತೋಷವಾಗಲಿದೆ.

ವೃಷಭ: ಉದ್ಯೋಗಸ್ಥರಿಗೆ ಅನುಕೂಲಕರ ಅವಕಾಶ

ವೃಷಭ: ಉದ್ಯೋಗಸ್ಥರಿಗೆ ಅನುಕೂಲಕರ ಅವಕಾಶ

ಒಂದು ಕಡೆಯಿಂದ ನಿಮ್ಮ ಕೆಲಸಗಳಿಗೆ ವೇಗ ನೀಡುತ್ತೀರಿ. ಇದೇ ವೇಳೆ ಕೆಲವರನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೆಲವರ ಮೇಲಷ್ಟೇ ಇರುವ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತೀರಿ. ಆದರೆ ಹೀಗೆ ಮಾಡಲು ಅಗತ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳಲೇಬೇಕಾದ ಸಂಗತಿಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಉದ್ಯೋಗಸ್ಥರಿಗೆ ವಾರದ ಶುರುವಿನಿಂದಲೇ ವಾರದ ಮೊದಲಾರ್ಧದಲ್ಲಿ ಅನುಕೂಲಕರವಾದ ಅವಕಾಶಗಳು ದೊರೆಯಲಿವೆ. ಉದ್ಯೋಗ ಸ್ಥಳದಲ್ಲಿ ಉತ್ತಮವಾದ ವಾತಾವರಣ ಸೃಷ್ಟಿ ಆಗುತ್ತದೆ. ಇದರಿಂದ ನಿಮಗೆ ಹೆಚ್ಚು ಸಂತೋಷ ಆಗುತ್ತದೆ.

ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಬಳಿ ಹಣಕಾಸಿನ ಓಡಾಟ ಹೆಚ್ಚಾಗುತ್ತದೆ. ಮಾರಾಟದ ಗುರಿ ಇರುವವರ ಅದನ್ನು ತಲುಪುವ ಸನಿಹದಲ್ಲಿ ಇರುತ್ತೀರಿ. ಮಕ್ಕಳ ಏಳ್ಗೆಯು ನಿಮಗೆ ಸಂತಸವನ್ನು ನೀಡುತ್ತದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಅಗತ್ಯವಾದ ದಾಖಲಾತಿಗಳನ್ನು ಸರಿ ಹೊಂದಿಸುವ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಇದಕ್ಕಾಗಿ ಹೆಚ್ಚು ಸಮಯ ಹಾಗೂ ಹಣ ಮೀಸಲಿಡಬೇಕಾಗುತ್ತದೆ. ದೂರ ಪ್ರಯಾಣದಿಂದ ಮಾನಸಿಕ ಕ್ಷೋಭೆಗೆ ಒಳಗಾಗುತ್ತೀರಿ. ಆರೋಗ್ಯ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಸಮಾಧಾನದಿಂದ ಚಿಕಿತ್ಸೆ ಪಡೆಯುವುದು ಮುಖ್ಯ.

ಮಿಥುನ: ಉದ್ಯೋಗ ಸ್ಥಳದಲ್ಲಿ ಒತ್ತಡ ನಿವಾರಣೆಗೆ ಅವಕಾಶಗಳಿವೆ

ಮಿಥುನ: ಉದ್ಯೋಗ ಸ್ಥಳದಲ್ಲಿ ಒತ್ತಡ ನಿವಾರಣೆಗೆ ಅವಕಾಶಗಳಿವೆ

ವಾರದ ಮೊದಲ ಭಾಗದಲ್ಲಿ ಪ್ರಬಲವಾದ ಉದ್ದೇಶಗಳ ಜತೆಗೆ ಕೆಲಸವನ್ನು ಆರಂಭಿಸಲಿದ್ದೀರಿ. ಆ ಕಾರಣಕ್ಕೆ ನೀವು ಅಂದುಕೊಂಡ ಕೆಲಸಗಳು ಗಡುವಿನ ಒಳಗಾಗಿ ಪೂರ್ಣಗೊಳ್ಳುತ್ತವೆ. ಉದ್ಯಮಿಗಳು- ವ್ಯಾಪಾರಿಗಳು ಅಗತ್ಯ ಇರುವ ಗೋದಾಮುಗಳನ್ನು ಗುರುತಿಸಿ, ಬಾಡಿಗೆಗೆ ಅಥವಾ ಖರೀದಿಗೆ ಪಡೆಯುವ ಸಾಧ್ಯತೆ ಇದೆ. ಆ ಮೂಲಕ ಬಹಳ ದಿನಗಳಿಂದ ಆಲೋಚಿಸುತ್ತಿದ್ದ ಯೋಜನೆಯೊಂದು ಪೂರ್ಣಗೊಂಡಂತೆ ಆಗುತ್ತದೆ. ಈ ಮಧ್ಯೆ ನಿಮ್ಮ ಸೋದರ ಸಂಬಂಧಿಗಳ ಜತೆಗೆ ಬಾಂಧವ್ಯ ವೃದ್ಧಿ ಆಗುತ್ತದೆ. ಆದರೆ ಸೊಂಟ ಹಾಗೂ ಮಂಡಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ನಿಮ್ಮ ಸಾಮರ್ಥ್ಯದ ಮೂಲಕ ಹಲವು ಬಗೆಯ ಪರಿಹಾರಗಳನ್ನು ಏಕ ಕಾಲದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗಲಿದೆ. ವಾರದ ದ್ವಿತೀಯಾರ್ಧದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಉದ್ಯೋಗವು ಹೆಚ್ಚಿನ ಏರಿಳಿತಗಳು ಇಲ್ಲದೆ ಎಂದಿನಂತೆ ಸಾಗುತ್ತದೆ. ಒಂದು ವೇಳೆ ಒತ್ತಡ ಇದ್ದಲ್ಲಿ ಅದರ ನಿವಾರಣೆಗೆ ಮಾರ್ಗಗಳು ಕಾಣಿಸಿಕೊಳ್ಳುತ್ತವೆ. ವಾರದ ಅಂತ್ಯಕ್ಕೆ ಸರಿಯುತ್ತಾ ಮಕ್ಕಳ ಪ್ರಗತಿಯಿಂದ ಸಂತೋಷ ಆಗುತ್ತದೆ. ಆದರೆ ವಾರಾಂತ್ಯದಲ್ಲಿ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಹಣಕಾಸು ವೆಚ್ಚವಾಗುತ್ತದೆ.

ಕರ್ಕಾಟಕ: ಕೆಲಸ ಪೂರ್ಣಗೊಳಿಸುವ ಸಲುವಾಗಿ ಅನಿವಾರ್ಯ ಪ್ರಯಾಣ

ಕರ್ಕಾಟಕ: ಕೆಲಸ ಪೂರ್ಣಗೊಳಿಸುವ ಸಲುವಾಗಿ ಅನಿವಾರ್ಯ ಪ್ರಯಾಣ

ವಾರದ ಮೊದಲಾರ್ಧದಲ್ಲಿ ಕೆಲವು ಕೋರ್ಟ್ ವ್ಯಾಜ್ಯಗಳಲ್ಲಿ ನಿಮ್ಮ ಸಮಯ ತೊಡಗಿಸಬೇಕಾಗುತ್ತದೆ. ಅಗತ್ಯ ಇರುವ ದಾಖಲಾತಿಗಳನ್ನು ಹುಡುಕಲು ಆರಂಭ ಮಾಡುತ್ತೀರಿ. ಸಾಕ್ಷ್ಯವಾಗಿ ತೋರಿಸಲು ಇದರಿಂದ ಅನುಕೂಲ ಆಗುತ್ತದೆ. ಆದರೆ ಕೆಲವು ಕೆಲಸಗಳನ್ನು ಪೂರ್ಣಗೊಳಿಸುವ ಸಲುವಾಗಿ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಈ ಸಮಯದಲ್ಲಿ ಕುಟುಂಬದವರಿಂದ ಉತ್ತಮ ಬೆಂಬಲ ದೊರೆಯುತ್ತದೆ. ಆದರೆ ವೈಯಕ್ತಿಕ ಸಂಬಂಧದ ವಿಚಾರಕ್ಕೆ ಬಂದರೆ, ನಿಮ್ಮ ಮಾತಿನಿಂದ ಸಂಗಾತಿಯು ದಿಢೀರ್ ಕೋಪಗೊಳ್ಳುತ್ತಾರೆ, ಈ ಬಗ್ಗೆ ಬಹಳ ಎಚ್ಚರವಾಗಿ ಇರಬೇಕು. ಇಲ್ಲದಿದ್ದರೆ ಈ ಬೆಳವಣಿಗೆಯು ಚಿಂತೆಗೆ ಕಾರಣ ಆಗುತ್ತದೆ.

ವಾರದ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯವು ಉತ್ತಮವಾಗಿರುತ್ತದೆ. ವ್ಯಾಪಾರ- ವ್ಯವಹಾರಗಳು ಮುಂಚಿನಂತೆಯೇ ಇರುತ್ತವೆ. ವ್ಯಾಪಾರ- ಉದ್ಯಮದ ವಿಸ್ತರಣೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ. ಇದರಿಂದ ನಿಮ್ಮ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ನಿಮಗಿಂತ ಹಿರಿಯ ಅಧಿಕಾರಿಗಳ ಜತೆಗೆ ಮನಸ್ತಾಪ- ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆಗಳಿವೆ.

ಸಿಂಹ: ಉದ್ಯೋಗಾವಕಾಶಕ್ಕಾಗಿ ಹೆಚ್ಚು ಶ್ರಮ ಪಡುತ್ತೀರಿ

ಸಿಂಹ: ಉದ್ಯೋಗಾವಕಾಶಕ್ಕಾಗಿ ಹೆಚ್ಚು ಶ್ರಮ ಪಡುತ್ತೀರಿ

ಈ ವಾರ ಎರಡು ಬಗೆಯಲ್ಲಿ ನಿಮಗೆ ಅನುಕೂಲ ಆಗುವ ಸಾಧ್ಯತೆಗಳಿವೆ. ಒಂದು ಕಡೆ, ನೀವು ಅಂದುಕೊಂಡ ಕೆಲಸವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುತ್ತೀರಿ. ಮತ್ತೊಂದು ಕಡೆ ಆರೋಗ್ಯ ಉತ್ತಮವಾಗಿರುತ್ತದೆ. ಆ ಮೂಲಕ ನಿಮ್ಮ ಕೆಲಸ-ಕಾರ್ಯವನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಉದ್ಯೋಗಾವಕಾಶಕ್ಕಾಗಿ ಹೆಚ್ಚು ಶ್ರಮ ಪಡಲಿದ್ದೀರಿ. ವೈವಾಹಿಕ ಜೀವನವು ಸುಮಧುರವಾಗಿ, ಸಂತುಷ್ಟವಾಗಿ ಇರಲಿದೆ. ನಿಮ್ಮ ಸಂಗಾತಿ ಜತೆಗಿನ ಭಿನ್ನಾಭಿಪ್ರಾಯವನ್ನು ಮರೆತು, ಕೆಲಸಗಳನ್ನು ಪೂರ್ತಿ ಮಾಡುವ ಕಡೆಗೇ ಗಮನ ಇರುತ್ತದೆ. ಆದರೆ ನಿಮ್ಮದೇ ಕೆಲಸಕ್ಕೆ ವಿರುದ್ಧವಾದ ನಿರ್ಧಾರಗಳನ್ನು ವಾರದ ದ್ವಿತೀಯಾರ್ಧದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ನಿಮ್ಮ ನಿರ್ಧಾರದ ಕಾರಣಗಳಿಗಾಗಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಅಗತ್ಯ ದಾಖಲೆ- ಪತ್ರಗಳಿಗೆ ಸಹಿ ಹಾಕುವಾಗ ಸರಿಯಾಗಿ ಓದಿ, ಆ ನಂತರವೇ ಸಹಿ ಹಾಕಿ. ನಿಮ್ಮ ಸೋದರ ಅಥವಾ ಸೋದರಿಯರ ಜತೆಗೆ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡಿಕೊಳ್ಳಲು ಸಫಲರಾಗುತ್ತೀರಿ. ನೀವು ಪೂರ್ಣಗೊಳಿಸಬೇಕಾದ ಧಾರ್ಮಿಕ ಕೆಲಸಗಳ ಬಗ್ಗೆ ಅವರಿಂದ ಸಲಹೆ ಹಾಗೂ ಮಾರ್ಗದರ್ಶನ ದೊರೆಯಲಿದೆ.

ಕನ್ಯಾ: ಆರ್ಥಿಕ ಕೊರತೆ, ಸಮಸ್ಯೆ ನಿವಾರಿಸಿಕೊಳ್ಳಲು ಹೆಚ್ಚಿನ ಪ್ರಯತ್ನ

ಕನ್ಯಾ: ಆರ್ಥಿಕ ಕೊರತೆ, ಸಮಸ್ಯೆ ನಿವಾರಿಸಿಕೊಳ್ಳಲು ಹೆಚ್ಚಿನ ಪ್ರಯತ್ನ

ನಿಮ್ಮ ವ್ಯಾಪ್ತಿಗೆ ಬರುವ ಕೆಲಸದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸುತ್ತೀರಿ. ಈಗಾಗಲೇ ಕೆಲಸದಲ್ಲಿ ಹಿಂದುಳಿದಂಥವರು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುತ್ತಾರೆ. ವ್ಯಾಪಾರ- ಉದ್ಯಮದ ಏಳ್ಗೆಗಾಗಿ ಹಲವು ಮುಖ್ಯವಾದ ಸಭೆಗಳನ್ನು ನೀವು ನಡೆಸಬೇಕಾಗುತ್ತದೆ. ಅಲ್ಲಿ ನಡೆದ ಬೆಳವಣಿಗೆಗಳ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಈ ವಾರದಲ್ಲಿ ಬಹಳ ಸಮಯವು ಹಲವು ವ್ಯಕ್ತಿಗಳ ಭೇಟಿ ಹಾಗೂ ಸಮಾಲೋಚನೆಗಾಗಿಯೇ ಮೀಸಲಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಆರ್ಥಿಕ ಸಮಸ್ಯೆ ಅಥವಾ ಕೊರತೆ ನಿವಾರಿಸಿಕೊಳ್ಳಲು ಹೆಚ್ಚು ಶ್ರಮಿಸುತ್ತೀರಿ.

ಆ ಮೂಲಕ ನಿಮ್ಮ ಕೆಲಸ- ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವೈಯಕ್ತಿಕ ಸಂಬಂಧದಲ್ಲಿ ಒತ್ತಡಗಳು ಇರುತ್ತವೆ. ವಾರದ ದ್ವಿತೀಯಾರ್ಧದಲ್ಲಿ ಕೌಟುಂಬಿಕ ಜೀವನ ಅತ್ಯುತ್ತಮವಾಗಿ ಇರುತ್ತದೆ. ಆರೋಗ್ಯವು ಸಾಧಾರಣವಾಗಿರುತ್ತದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಶತ್ರುಗಳಿಂದ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಇದರಿಂದ ಕೋರ್ಟ್ ಮೆಟ್ಟಿಲೇರುವ ಸಂದರ್ಭ ಕೂಡ ಬರಬಹುದು.

ತುಲಾ: ಸಂಗಾತಿ ಜತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ

ತುಲಾ: ಸಂಗಾತಿ ಜತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ

ವ್ಯಾಪಾರ- ಉದ್ಯಮದ ಪ್ರಗತಿಗಾಗಿ ಕೆಲ ಸಲಕರಣೆಗಳನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ಸಂಪನ್ಮೂಲ ಕೊರತೆ ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಹಾಕಿದ ಪ್ರಯತ್ನಗಳು ಫಲ ನೀಡಲಿದೆ. ವಾರದ ಮೊದಲ ಭಾಗದಿಂದಲೇ ಕೌಟುಂಬಿಕ ವಿಚಾರಗಳು ಉತ್ತಮ ಹಾದಿಯಲ್ಲಿ ಸಾಗಲಿದೆ. ಕೌಟುಂಬಿಕ ನೆಮ್ಮದಿಯ ಕಾರಣಕ್ಕೆ ಉದ್ಯೋಗ ಸ್ಥಳದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ವೈಯಕ್ತಿಕ ಸಂಬಂಧದಲ್ಲಿ ಅನುಕೂಲಕರವಾದ ಅವಕಾಶಗಳು ದೊರೆಯಲಿವೆ. ತುಂಬ ಇಷ್ಟ ಪಡುವ ಸ್ಥಳಗಳಿಗೆ ಸಂಗಾತಿ ಜತೆಗೆ ಕೂಡಿ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ವಿವಿಧ ಆದಾಯ ಮೂಲಗಳಿಂದ ಅದ್ಭುತ ಅನುಕೂಲವಾಗಲಿದೆ.

ವಾರದ ದ್ವಿತೀಯಾರ್ಧದಲ್ಲಿ ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ಹಲ್ಲು ನೋವು, ತಲೆ ನೋವು ನಿಮ್ಮನ್ನು ಕಾಡಬಹುದು. ಕಡ್ಡಾಯವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಹಲವು ಬಗೆಯಲ್ಲಿ ಅನುಕೂಲಕರವಾದ ಹಾಗೂ ನಿರೀಕ್ಷಿತ ಫಲಿತಾಂಶಗಳು ದೊರೆಯಬಹುದು. ಇದರಿಂದ ಸಂತೋಷ ಉಂಟಾಗುತ್ತದೆ.

ವೃಶ್ಚಿಕ: ವ್ಯಾಪಾರ- ವ್ಯವಹಾರಗಳಲ್ಲಿ ಅನುಕೂಲ

ವೃಶ್ಚಿಕ: ವ್ಯಾಪಾರ- ವ್ಯವಹಾರಗಳಲ್ಲಿ ಅನುಕೂಲ

ಉತ್ಪಾದನಾ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅದರ ಗುಣಮಟ್ಟ ಕಾಯ್ದುಕೊಳ್ಳುವ ಜವಾಬ್ದಾರಿ ಹೆಚ್ಚಾಗಲಿದೆ. ಇಡೀ ನಿರ್ವಹಣಾ ವ್ಯವಸ್ಥೆ ಹಾಗೂ ಕಾರ್ಯ ಚಟುವಟಿಕೆ ವಿಧಾನವನ್ನು ಎಚ್ಚರಿಕೆಯಿಂದ ನಿರ್ವಹಿಸಲಿದ್ದೀರಿ. ಈ ಸಂಬಂಧವಾದ ಕೆಲಸ-ಕಾರ್ಯಗಳಲ್ಲಿ ಪ್ರಗತಿ ಕಾಣಿಸಲಿದೆ. ವಾರದ ಶುರುವಿನಿಂದಲೇ ಆರೋಗ್ಯ ಉತ್ತಮವಾಗಿರುತ್ತದೆ. ಆ ಮೂಲಕ ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿದ್ದೀರಿ. ವಾರದ ದ್ವಿತೀಯಾರ್ಧದಿಂದ ಆದಾಯವು ನಿಶ್ಚಿತವಾಗಲಿದೆ.

ಇದೇ ವೇಳೆ ವ್ಯಾಪಾರ- ವ್ಯವಹಾರದಲ್ಲಿಯೂ ಅನುಕೂಲ ಇದೆ. ಈ ವಾರ ಬರುವ ಆದಾಯವನ್ನು ಸಂಪನ್ಮೂಲಗಳನ್ನು ವೃದ್ಧಿಸಿಕೊಳ್ಳಲು ಬಳಸಿಕೊಳ್ಳಲಿದ್ದೀರಿ. ಜೀವನ ಗುಣಮಟ್ಟ ಹೆಚ್ಚಿಸಿಕೊಳ್ಳಲು ಹಲವು ನಿರ್ಧಾರ ಕೈಗೊಳ್ಳಲಿದ್ದೀರಿ. ವಾರದ ಕೊನೆ ಭಾಗಕ್ಕೆ ಸರಿಯುತ್ತಾ ಹೆಚ್ಚುವರಿಯಾಗಿ ಹಣ ಖರ್ಚಾಗಲಿದೆ. ಗುಪ್ತಾಂಗ ಸಮಸ್ಯೆಗಳು ಎದುರಾಗಬಹುದು. ಸಂಗಾತಿ ಜತೆಗೆ ಅನಗತ್ಯ ವಾಗ್ವಾದ- ಕಾವೇರಿದ ಚರ್ಚೆ ಆಗಬಹುದು.

ಧನುಸ್ಸು: ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸುಮಧುರ ಕ್ಷಣಗಳು

ಧನುಸ್ಸು: ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸುಮಧುರ ಕ್ಷಣಗಳು

ದೈಹಿಕ ಸುಖ ನೀಡುವ ವಸ್ತುಗಳ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಹೆಚ್ಚಿನ ಕಾರ್ಯ ಒತ್ತಡದಿಂದ ಆರೋಗ್ಯದ ಕಡೆಗೆ ಗಮನ ಹರಿಸುವುದಕ್ಕೆ ಕಷ್ಟವಾಗುತ್ತದೆ. ಸ್ವಚ್ಛತೆ- ಶುದ್ಧತೆ ಕಾಪಾಡಿಕೊಳ್ಳುವುದು ಸಹ ಸವಾಲಾಗಿ ಪರಿಣಮಿಸುತ್ತದೆ. ಉಸಿರಾಟದ ಸಮಸ್ಯೆ ಹಾಗೂ ಕೆಮ್ಮು ಕಾಡಬಹುದು. ಕುಟುಂಬ ಸದಸ್ಯರ ಜತೆಗೆ ಉತ್ತಮ ಬಾಂಧವ್ಯ ಇರುತ್ತದೆ. ಈ ಹಿಂದೆಂದಿಗಿಂತ ಉದ್ಯೋಗ ಸ್ಥಳದಲ್ಲಿ ಬಿಡುವಿಲ್ಲದಷ್ಟು ಕೆಲಸ ಬರುತ್ತದೆ. ನೀವು ಪಟ್ಟ ಶ್ರಮದ ಶ್ರೇಯ ದೊರೆಯಬೇಕು ಎಂದು ಪ್ರಯತ್ನ ಪಡುತ್ತೀರಿ. ಈ ಪ್ರಯತ್ನವು ನಿಮಗೆ ಸಮಸ್ಯೆ ತಂದೊಡ್ಡುತ್ತದೆ.

ಆದರೆ, ನೀವು ತಾಳ್ಮೆ, ಸಮಾಧಾನದಿಂದ ವರ್ತಿಸಿದರೆ ಎಲ್ಲ ಕೆಲಸಗಳು ನಿಧಾನವಾಗಿ ಸರಿಹೋಗುತ್ತದೆ. ವಾರದ ದ್ವಿತೀಯಾರ್ಧದಲ್ಲಿ ಬಡ್ತಿ ದೊರೆಯುವ ಅವಕಾಶಗಳಿವೆ. ಆ ಮೂಲಕ ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಆದಾಯ ಉತ್ತಮವಾಗಿರುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಸುಮಧುರವಾದ ಕ್ಷಣಗಳನ್ನು ಅನುಭವಿಸುವ ಯೋಗವಿದೆ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ

ಮಕರ: ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ

ಸಂಸ್ಥೆ ಅಥವಾ ವ್ಯಕ್ತಿಗಳ ಜತೆಗೆ ಮಾಡಿಕೊಂಡ ಒಪ್ಪಂದದಿಂದ ನಿಮ್ಮ ಮನಸಿಗೆ ಬೇಸರ ಆಗಲಿದೆ. ಸಂಬಂಧಪಟ್ಟ ವ್ಯಕ್ತಿಗಳು ಮೊದಲಿಗೆ ನೀಡಿದ ಮಾತು ಉಳಿಸಿಕೊಳ್ಳಲಿಲ್ಲ ಅಥವಾ ಉಳಿಸಿಕೊಳ್ಳುತ್ತಿಲ್ಲ ಎಂಬ ಸಂಗತಿ ಸಿಟ್ಟಿಗೆ ಕಾರಣವಾಗುತ್ತದೆ. ನಿಮ್ಮ ಪ್ರಗತಿಯನ್ನು ಕಂಡು ಕೆಲವು ವಿರೋಧಿಗಳು ಕರುಬುತ್ತಾರೆ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ ಯತ್ನಿಸುತ್ತಾರೆ. ಎಚ್ಚರಿಕೆ ಬಹಳ ಮುಖ್ಯ. ಆದರೂ ಹಲವು ವಿಚಾರಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ವಾರದ ದ್ವಿತೀಯಾರ್ಧದಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಸಾಧ್ಯತೆ ಇದೆ.

ಧಾರ್ಮಿಕ ಹಾಗೂ ಹೆಚ್ಚು ಜ್ಞಾನವುಳ್ಳ ವ್ಯಕ್ತಿಗಳ ಜತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಜತೆಗೂ ಬಾಂಧವ್ಯ ಗಾಢವಾಗಲಿದೆ. ನಿಮ್ಮ ಪಾಲಿಗೆ ಅದೃಷ್ಟ ಕೈ ಹಿಡಿಯಲಿದೆ. ವಾರದ ಅಂತ್ಯಕ್ಕೆ ಸರಿಯುತ್ತಾ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಅಲ್ಲಿ ನಿಮ್ಮ ಕೆಲಸದ ವೈಖರಿಗೆ ಯಶಸ್ಸು ದೊರೆಯಲಿದೆ. ಇದರಿಂದ ನಿಮ್ಮ ಉತ್ಸಾಹ ಹೆಚ್ಚಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಕುಂಭ: ವಿದೇಶಿ ವ್ಯವಹಾರ, ಹೂಡಿಕೆಯಿಂದ ಅನುಕೂಲ

ಕುಂಭ: ವಿದೇಶಿ ವ್ಯವಹಾರ, ಹೂಡಿಕೆಯಿಂದ ಅನುಕೂಲ

ಸೇವಾ ವಲಯದಲ್ಲಿ ಉದ್ಯೋಗ ನಿರ್ವಹಿಸುವವರು ವಿಸ್ತರಣೆಗೆ ಯತ್ನಿಸುತ್ತೀರಿ. ಇದರಿಂದ ಬೆಳವಣಿಗೆ ಸಾಧ್ಯವಿದೆ. ನಿಮಗೆ ವಹಿಸಿದ ಕೆಲಸಗಳನ್ನು ಪೂರ್ತಿ ಮಾಡುವ ಸಲುವಾಗಿ ಹೆಚ್ಚು ಸಮಯ ಮೀಸಲಿಡ ಬೇಕಾಗುತ್ತದೆ. ಉತ್ಪಾದನೆ ಹಾಗೂ ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅದ್ಭುತವಾದ ಪ್ರಗತಿ ಕಾಣುವ ಯೋಗ ಇದೆ. ವೈವಾಹಿಕ ಜೀವನವು ಸಂತೋಷವಾಗಿ ಇರುತ್ತದೆ. ಸಂಗಾತಿ ಹಾಗೂ ಮಕ್ಕಳ ಮಾತನ್ನು ಕೇಳುತ್ತೀರಿ. ನಿಮ್ಮ ಈ ಗುಣವು ಅವರಲ್ಲಿ ಸಂತೋಷ ಮೂಡಿಸುತ್ತದೆ. ಆದರೆ ಈ ವಾರ ನಿಮ್ಮ ಆರೋಗ್ಯವು ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ. ಅಗತ್ಯವಾದ ಚಿಕಿತ್ಸೆ ಪಡೆಯಲೇ ಬೇಕಾಗುತ್ತದೆ.

ವಾರದ ದ್ವಿತೀಯಾರ್ಧದಲ್ಲಿ ವಿದೇಶಿ ವ್ಯವಹಾರ ಹಾಗೂ ಹೂಡಿಕೆಯಿಂದ ಅನುಕೂಲ ಆಗಲಿದೆ. ನಿಮ್ಮ ಜಾಗ್ರತೆಯ ಸ್ವಭಾವ ಸಹಾಯಕ್ಕೆ ಬರಲಿದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಹೆಚ್ಚು ಶ್ರಮ ಹಾಕಲಿದ್ದೀರಿ. ವಾರದ ಕೊನೆ ಭಾಗದಲ್ಲಿ ಉತ್ಪಾದನೆ ಹಾಗೂ ಮಾರಾಟ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮವಾದ ಲಾಭವಿದೆ.

ಮೀನ: ಉದ್ಯೋಗ- ವ್ಯಾಪಾರ ವಿಸ್ತರಣೆಗೆ ಪ್ರಯತ್ನ

ಮೀನ: ಉದ್ಯೋಗ- ವ್ಯಾಪಾರ ವಿಸ್ತರಣೆಗೆ ಪ್ರಯತ್ನ

ಉದ್ಯೋಗ ಹಾಗೂ ವ್ಯಾಪಾರದ ವಿಸ್ತರಣೆಗೆ ಪ್ರಯತ್ನ ಮುಂದುವರಿಸಲಿದ್ದೀರಿ. ಇದರ ಫಲಿತವಾಗಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತೀರಿ. ಆದರೂ ನಿಮ್ಮ ಶ್ರಮದ ಬಗ್ಗೆ ಸರಿಯಾದ ಮೌಲ್ಯಮಾಪನ ಮಾಡುವುದು ಅಗತ್ಯ. ಹಲವು ಕಡೆ ನಿಮ್ಮ್ ಶ್ರಮ ಹಂಚಿಹೋಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೆ ನೋಡಿಕೊಂಡರೆ ನಿಮಗೆ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಚಿಕಿತ್ಸೆ ಪಡೆಯುವ ಅನಿವಾರ್ಯವೂ ಸೃಷ್ಟಿ ಆಗುತ್ತದೆ. ವೈಯಕ್ತಿಕ ಸಂಬಂಧವು ಡೋಲಾಯಮಾನವಾಗಿ ಇರುತ್ತದೆ. ಇದರಿಂದ ಚಿಂತೆಗೀಡಾಗುತ್ತೀರಿ.

ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಸಂಗಾತಿ- ಮಕ್ಕಳ ಆಯ್ಕೆಗೆ ತಕ್ಕಂತೆ ಕೆಲ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ವ್ಯಾಪಾರ- ಉದ್ಯಮದಲ್ಲಿ ಲಾಭದಾಯಕವಾದ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶ ಒದಗಿ ಬರಲಿದೆ. ವಿರೋಧಿಗಳು- ಶತ್ರು ಪಾಳಯದವರು ನಿಮ್ಮನ್ನು ಕೋರ್ಟ್- ಕಟಕಟೆಗೆ ಎಳೆಯುವ ಸಾಧ್ಯತೆಗಳಿವೆ. ಎಚ್ಚರಿಕೆ ಅಗತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Read your Weekly forecast on the horoscope provided by Oneindia Kannada. We provide online free weekly prediction including your personal, professional and love life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more