• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಕ್ರ ಉಚ್ಚನಾಗಿದ್ದಲ್ಲಿ ಅನುಕೂಲ ಮಾತ್ರ ಇರುತ್ತದಾ? ಸಮಸ್ಯೆ ಏನು, ಪರಿಹಾರ ಹೇಗೆ?

By ಪಂಡಿತ್ ಶ್ರೀ ಗಣೇಶ್ ಕುಮಾರ್
|

ಮಕ್ಕಳ ಜಾತಕವನ್ನು ಸರಿಯಾಗಿ ಪರಿಶೀಲನೆ ಮಾಡಿಸಿ, ಅದಕ್ಕೆ ಮಾಡಬೇಕಾದ ಸೂಕ್ತ ಪರಿಹಾರ- ಮುಂಜಾಗ್ರತೆ ಇಲ್ಲದಿದ್ದಲ್ಲಿ ಎಂಥೆಂಥೆ ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ನಿಮ್ಮ ಜತೆಗೆ ಹಂಚಿಕೊಳ್ಳುವ ಉದ್ದೇಶದಿಂದಲೇ ಈ ಜ್ಯೋತಿಷ್ಯ ಲೇಖನವನ್ನು ಬರೆಯುತ್ತಿದ್ದೇನೆ. ನನ್ನ ಬಳಿ ಜ್ಯೋತಿಷ್ಯ ಕೇಳಿಕೊಂಡು ಬರುವವರ ಪೈಕಿ ಕೆಲವರು ಎಲ್ಲವನ್ನೂ ಕಳೆದುಕೊಂಡು, ಅವಮಾನದ ಪಾಲಾಗಿ ಕೊನೆಯ ಆಯ್ಕೆ ಎಂದು ಬಂದಿರುತ್ತಾರೆ.

ಅಂಥವರಿಗೆ ನನ್ನ ಮೊದಲ ಪ್ರಶ್ನೆ ಏನಾಗಿರುತ್ತದೆ ಗೊತ್ತಾ? ಯಾಕೆ ಈ ಜಾತಕವನ್ನು ಮುಂಚಿತವಾಗಿ ಯಾರ ಬಳಿಯೂ ತೋರಿಸಿಲ್ಲ? ಈಗ ಇಂಥ ಸ್ಥಿತಿಯಲ್ಲಿ ನನ್ನ ಹತ್ತಿರ ಯಾಕೆ ಬಂದಿರಿ ಎಂದಿರುತ್ತೇನೆ. ಕೊನೆಗೆ ಅವರ ಸ್ಥಿತಿ ನೋಡಿ, ಪರಿಹಾರ ಹೇಳಿ, ಧೈರ್ಯ ತುಂಬಿ ವಾಪಸ್ ಕಳುಹಿಸುತ್ತೇನೆ.

Rahu, Ketu Transition To Taurus On Sep 23: ದ್ವಾದಶ ರಾಶಿಗಳ ಮೇಲೆ ರಾಹು, ಕೇತು ಪ್ರಭಾವ ಏನು?

ಈ ದಿನ ನಿಮಗೆ ರಾಹು, ಕೇತು, ಶುಕ್ರ, ಶನಿಯಿಂದ ಆಗುವ ಸಮಸ್ಯೆ ಬಗ್ಗೆ ತಿಳಿಸುತ್ತೇನೆ. ದಯವಿಟ್ಟು ಹುಷಾರಾಗಿರಿ. ಮಕ್ಕಳ ಜಾತಕವನ್ನು ಅಥವಾ ನಿಮಗೇ ಸ್ವತಃ ಈ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಿ.

ಯಾರದೇ ಜಾತಕದಲ್ಲಿ ಶುಕ್ರ ಉಚ್ಚನಾಗಿದ್ದು, ಅಂದರೆ ಮೀನ ರಾಶಿಯಲ್ಲಿ ಶುಕ್ರ ಉಚ್ಚ ಸ್ಥಿತಿಯಲ್ಲಿ ಇರುತ್ತಾನೆ. ಅಲ್ಲಿ ಶುಕ್ರ ಇದ್ದು, ಜತೆಗೆ ರಾಹು ಅಥವಾ ಕೇತು ಅಥವಾ ಶನಿ ಇದ್ದಲ್ಲಿ ಈ ಜಾತಕರಿಗೆ 'ಮತ್ತು' ಅಥವಾ ನಶೆ ಬರುವ ಪದಾರ್ಥಗಳ ಕಡೆಗೆ ಆಕರ್ಷಣೆ ಸದಾ ಇರುತ್ತದೆ. ಶುಕ್ರ ಉಚ್ಚ ಸ್ಥಾನದಲ್ಲಿ ಇದ್ದು, ರಾಹು ಅಥವಾ ಕೇತುವಿನ ಅಥವಾ ಶನಿಯ ದೃಷ್ಟಿ ಇದ್ದರೂ ಈ ಸಮಸ್ಯೆ ಆಗುತ್ತದೆ.

ಈ ಜಾತಕರಿಗೆ ಅದ್ಭುತವಾದ ಹೆಸರು, ಕೀರ್ತಿ ಬರುತ್ತದೆ. ಆದರೆ ಭಾವನಾ ಜೀವಿಗಳಾಗಿರುತ್ತಾರೆ. ಸಂಬಂಧಗಳಲ್ಲಿ, ಅದರಲ್ಲಿ ಪ್ರೀತಿ- ಪ್ರೇಮ ವಿಚಾರದಲ್ಲಿ ಮೋಸ ಆಗುತ್ತದೆ. ಇಲ್ಲದಿದ್ದಲ್ಲಿ ವಿವಾಹೇತರ ಅಥವಾ ವಿವಾಹಬಾಹಿರ ಸಂಬಂಧದ ಕಡೆಗೆ ಕೈ ಚಾಚುತ್ತಾರೆ. ಆ ಮೂಲಕ ನೆಮ್ಮದಿ ಹಾಳಾಗಿ, ಅದರಿಂದ ಹೊರಬರುವುದಕ್ಕೆ ಆರಿಸಿಕೊಳ್ಳುವುದೇ ಈ ನಶೆಯ ಅಥವಾ ಮತ್ತು ಮತ್ತು ಬರಿಸುವ ಪದಾರ್ಥಗಳನ್ನು.

ಇನ್ನು ಶುಕ್ರನ ಜತೆಗೆ ಶನಿಯ ಪ್ರಭಾವ ಕೂಡ ಒಟ್ಟಾಗಿ, ರಾಹು ಅಥವಾ ಕೇತುವಿನ ದೃಷ್ಟಿ ಇದ್ದಲ್ಲಿ ಅಥವಾ ಸಂಯೋಗ ಇದ್ದಲ್ಲಿ ಆಗ ಸ್ವಭಾವದಲ್ಲೇ ಅಂಥದ್ದೊಂದು ಆಕರ್ಷಣೆ ಬಂದು ಬಿಡುತ್ತದೆ. ಈ ಜಾತಕರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇರುತ್ತದೆ. ಕೌಟುಂಬಿಕ ಹಿನ್ನೆಲೆ ಚೆನ್ನಾಗಿದ್ದು, ಉತ್ತಮ ಸಂಸ್ಕಾರ ಸಿಕ್ಕಿರುತ್ತದೆ. ಆದರೆ ಪಾಪ ಕರ್ಮಾಸಕ್ತಿ, ದುಷ್ಟ ಸ್ನೇಹಿತರ ಸಹವಾಸ ಅಧಿಕವಾಗಿರುತ್ತದೆ.

ಹಾಗಂತ ಇವರಿಗೆ ಸರಿ- ತಪ್ಪುಗಳ ಅರಿವಿರುವುದಿಲ್ಲವಾ ಅಂದರೆ, ಖಂಡಿತಾ ಹಾಗಲ್ಲ. ಉಚ್ಚ ಕ್ಷೇತ್ರದ ಶುಕ್ರ ಇವರನ್ನು ಅದ್ಭುತ ಕಲಾವಿದರನ್ನಾಗಿ ಮಾಡಿರುತ್ತಾನೆ. ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ಸಣ್ಣ ಬಂಡವಾಳ ಹೂಡಿದರೂ ದೊಡ್ಡ ಲಾಭ ಗಳಿಸುತ್ತಿರುತ್ತಾರೆ. ಅದೃಷ್ಟ ಸದಾ ಇವರ ಪಾಲಿಗೆ ಕೆಲಸ ಮಾಡುತ್ತದೆ.

ಆದರೆ, ಸಮಸ್ಯೆ ಏನೆಂದರೆ ರಾಹು, ಕೇತು ಹಾಗೂ ಶನಿಯ ಸಂಯೋಗ ಅಥವಾ ದೃಷ್ಟಿ ಹಾಗೂ ಸ್ವತಃ ಇವರಿಗೆ ಯಶಸ್ಸು ಸಂಭಾಳಿಸಲು ಸಾಧ್ಯವಾಗಲ್ಲ. ಮಾನಸಿಕವಾಗಿ ಹೇಗೆಂದರೆ ಹಾಗೆ ನಡೆದುಕೊಳ್ಳುತ್ತಾರೆ. ಆದ್ದರಿಂದ ಚಿಕ್ಕವಯಸ್ಸಿನಲ್ಲೇ ಜಾತಕ ಪರಿಶೀಲನೆ ಮಾಡಿಸಿ, ಏನು ಪರಿಹಾರ ಎಂಬುದನ್ನು ಕಂಡುಕೊಳ್ಳಬೇಕು.

ಶುಕ್ರ ಗ್ರಹ ಜಾತಕದಲ್ಲಿ ಉಚ್ಚನಾಗಿದ್ದಲ್ಲಿ ಸಿನಿಮಾ ರಂಗದಲ್ಲಿ ಇರುತ್ತಾರೆ. ಲೇವಾದೇವಿ ವ್ಯವಹಾರ ಮಾಡುತ್ತಾರೆ. ವಾಹನಗಳ ಖರೀದಿ- ಮಾರಾಟ ಮಾಡುತ್ತಾರೆ. ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ವೈಯಕ್ತಿಕವಾಗಿ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ. ಈ ಮೇಲೆ ತಿಳಿಸಿದ ಪ್ರಭಾವಗಳು ನಿಮ್ಮ ಮೇಲೆ ಆಗುತ್ತಿದ್ದಲ್ಲಿ ಎಚ್ಚರವಾಗಿರಿ.

ವೈಯಕ್ತಿಕ ಜಾತಕ ಪರಿಶೀಲನೆಗೆ ಪಂಡಿತ್ ಶ್ರೀ ಗಣೇಶ್ ಕುಮಾರ್, ಶ್ರೀ ಪಂಚಮುಖಿ ಜೋತಿಷ್ಯಂ, ಮೈಸೂರು ಸರ್ಕಲ್ (ಶಿರ್ಸಿ ಸರ್ಕಲ್)ಚಾಮರಾಜಪೇಟೆ ಬೆಂಗಳೂರು 98805 33337 ಸಂಪರ್ಕಿಸಿ.

English summary
Here is the explainer about Venus exalt in horoscope and it's significance, importance and solution to problems related to Venus, Rahu, Ketu and Saturn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X