ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ ಸಲಹೆ: ಮಾಸಿಕ ಋತು ಚಕ್ರದ ವೇಳೆ ದೇವರ ಪೂಜೆ ಮಾಡಬಹುದಾ?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಭವಿಷ್ಯದ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಕಳಿಸಿದರೆ ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಉತ್ತರ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಆ ನಂತರ ಅನೇಕ ಓದುಗರು ತಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದರು. ಆ ಪೈಕಿ ಆಯ್ದ ಎರಡು ಪತ್ರಕ್ಕೆ ಜ್ಯೋತಿಷಿಗಳು ಉತ್ತರಿಸಿದ್ದಾರೆ.

ಅಂದಹಾಗೆ ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ [email protected] ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ್ಯೋತಿಷ್ಯ: ರಾಹು ಗ್ರಹವು ಕೊಟ್ಟರೆ ವರ, ಇಟ್ಟರೆ ಶಾಪ!]

Vedic astrolgy Solution to Oneindia Kannada readers by astrologer Vittal Bhat

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ

ಪ್ರಶ್ನೆ: ನನ್ನ ಹೆಸರು, ವಿವರಗಳನ್ನು ಬಹಿರಂಗ ಮಾಡುವುದು ಬೇಡ ಎಂಬ ಮನವಿಯನ್ನು ಪರಿಗಣಿಸಿ. ಶಿವಮೊಗ್ಗದ ಭದ್ರಾವತಿ ನನ್ನ ಹುಟ್ಟೂರು. ಫೆಬ್ರವರಿ 2017ರಲ್ಲಿ ಕುಕ್ಕೆಯಲ್ಲಿ ಸರ್ಪ ಸಂಸ್ಕಾರ ಮಾಡಿಸಿದ್ದೇನೆ. ನನ್ನ ಮದುವೆ ಯಾವಾಗ ಆಗುತ್ತದೆ? ಉತ್ತರ ದಿಕ್ಕಿನ ಹುಡುಗ ಬರುತ್ತಾರೋ ಅಥವಾ ದಕ್ಷಿಣ ದಿಕ್ಕಿನವರು ಬರುತ್ತಾರೆ? ತಿಳಿಸಿ.

ನಾನು ಕುಕ್ಕೆಗೆ ಭೇಟಿ ನೀಡಿದ್ದಾಗ ಅಲ್ಲಿನ ಅರ್ಚಕರು ಮೂಲ ಪ್ರಸಾದವನ್ನು ಹನ್ನೆರಡು ದಿನ ತೆಗೆದುಕೊಳ್ಳುವಂತೆ ಸೂಚಿಸಿದರು. ಒಂಬತ್ತು ದಿನ ತೆಗೆದುಕೊಂಡೆ. ಆ ನಂತರ ಹೊರಗಾಗಿದ್ದರಿಂದ ಅದನ್ನು ನಿಲ್ಲಿಸಿದೆ. ಆ ರೀತಿ ಮಾಡಿದ್ದರಿಂದ ನನಗೇನಾದರೂ ತೊಂದರೆ ಆಗುತ್ತಾ? ನನಗೇನಾದರೂ ಮುಂದೆ ಆರೋಗ್ಯ ಹಾಗೂ ಮದುವೆ ವಿಚಾರದಲ್ಲಿ ತೊಂದರೆ ಆಗುತ್ತಾ? ದಯವಿಟ್ಟು ಉತ್ತರ ಕೊಡಿ; ನಾನು ಬಹಳ ಹೆದರಿದ್ದೀನಿ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಇನ್ನು ನನ್ನ ಎರಡನೇ ಪ್ರಶ್ನೆ. ಯುವತಿ ಅಥವಾ ಮಹಿಳೆ ಮಾಸಿಕ ಋತು ಚಕ್ರದ ಅವಧಿಯಲ್ಲಿ ಮನೆಯಲ್ಲಾಗಲೀ ದೇವಸ್ಥಾನದಲ್ಲಾಗಲೀ ಪೂಜೆ ಮಾಡಬಹುದಾ? ಏಕೆಂದರೆ ನಾವೆಲ್ಲ ದೇವರೇ ಸೃಷ್ಟಿ ಮಾಡಿದಂಥವರು. ಅಂಥದರಲ್ಲಿ ಆಕೆ ಅಶುದ್ಧ ಎಂದು ದೇವರು ಚಿಂತಿಸುತ್ತಾನೆಯೇ? ಯಾವುದಾದರೂ ವೇದದಲ್ಲಿ ಈ ಬಗ್ಗೆ ಉಲ್ಲೇಖವಿದೆಯೇ? ನನ್ನಂಥ ಹಲವರಿಗೆ ಈ ಪ್ರಶ್ನೆ ಇದೆ.

ಉತ್ತರ: ನಮಸ್ತೇ, ನಿಮ್ಮದು ಪುಬ್ಬಾ ನಕ್ಷತ್ರ ಸಿಂಹ ರಾಶಿ ಹಾಗೂ ಸಿಂಹ ಲಗ್ನ. ನಿಮ್ಮ ಜಾತಕ ಪ್ರಕಾರವೇ ನಿಮಗೆ ವಿವಾಹ ನಿಧಾನ. ಆದರೆ ಈ ವರ್ಷ ಮೇ ತಿಂಗಳ ನಂತರ ಮುಂದಿನ ವರ್ಷ ಅಂದರೆ 2018ರ ಡಿಸೆಂಬರ್ ತನಕ ವಿವಾಹ ಯೋಗ ಚೆನ್ನಾಗಿ ಕಾಣುತ್ತಿದೆ.

ನೀವು ಸರ್ಪ ಸಂಸ್ಕಾರ ಮಾಡಿಸುವ ಅವಶ್ಯ ಇರಲಿಲ್ಲ. ಕಾರಣ ನಾಗನನ್ನು ನಾವೇ ಕೊಂದಿದ್ದಲ್ಲಿ ಅಥವಾ ನಮ್ಮ ಕುಟುಂಬದಲ್ಲಿ ಯಾರಾದರೂ ಕೊಂದದ್ದು ನಮಗೆ ಗೊತ್ತಿದ್ದಲ್ಲಿ ಆಗ ಮಾತ್ರ ಸರ್ಪ ಸಂಸ್ಕಾರ ಮಾಡಿಸಬೇಕು. ಅದೂ ಸಹ ತಂದೆ- ತಾಯಿ ಜೀವಂತ ಇದ್ದಾಗ ನಿಮಗೆ ಸಂಸ್ಕಾರ ಮಾಡಿಸುವ ಆಧಿಕಾರ ಇರುವುದಿಲ್ಲ.

ಇನ್ನು ನಿಮ್ಮ ಜಾತಕದ ಪ್ರಕಾರ ನಾಗದೇವರ ಆರಾಧನೆಯಲ್ಲಿಯೇ ಬೇರೆ ವಿಧದ ಆರಾಧನೆ ಅವಶ್ಯವಿದೆ ಆದರೆ ಸಂಸ್ಕಾರ ಅವಶ್ಯ ಇಲ್ಲ.

ಸ್ತ್ರೀಯರು ಹನ್ನೆರಡು ದಿನ ಅಥವಾ ಅದರ ಒಳಗೆ ಮುಗಿಯುವ ಸಂಕಲ್ಪ ಮಾಡಿದ ಪೂಜಾದಿ ಕೈಂಕರ್ಯಗಳು ಮಾಸಿಕ ಋತು ಚಕ್ರದಿಂದಾಗಿ ಮುರಿದರೆ ಆ ಸಂಕಲ್ಪವನ್ನು ಮತ್ತೆ ಮೊದಲಿನಿಂದ ಆರಂಭಿಸಬೇಕು.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ನೀವು ಸರ್ವ ಸ್ವಾಭಾವಿಕ ಮಾಸಿಕ ಋತು ಚಕ್ರದಿಂದಾಗಿ ನಿಲ್ಲಿಸಿದ್ದರಿಂದ ನಿಮ್ಮ ಮೇಲೆ ಅದರ ದುಷ್ಪರಿಣಾಮ ಏನೂ ಆಗದು ಆದರೆ ಆ ಕಾರ್ಯವನ್ನು ಮತ್ತೆ ಮೊದಲ ದಿನದಿಂದ ಆಚರಿಸಿ

ಯಾವ ಸ್ತ್ರೀ ಸಹ ತನ್ನ ಮಾಸಿಕ ಋತು ಚಕ್ರ ನಡೆಯುವಾಗ ದೇವಸ್ಥಾನದ ಆವರಣ ಸಹ ಹೋಗುವಂತೆ ಇಲ್ಲ. ಇದು ಕಡ್ಡಾಯ. ಇನ್ನು ಆ ಸಮಯದಲ್ಲಿ ಮನೆಯಲ್ಲಿ ಮನಸಿನಲ್ಲಿ ದೇವರ ಸ್ಮರಣೆ ಮಾಡಿಕೊಳ್ಳಬಹುದು ಅಷ್ಟೇ.

ಸ್ತ್ರೀಯನ್ನು ನಮ್ಮ ಧರ್ಮ ಶಾಸ್ತ್ರ ಎಂದೂ ಎಲ್ಲಿಯೂ ಕೀಳಾಗಿ ನೋಡಿಲ್ಲ, ತಿಳಿಸಿಲ್ಲ. "ನ ಮಾತು: ಪರ ದೈವತಂ" ಎಂಬಿತ್ಯಾದಿ ವಾಕ್ಯಗಳಿಂದ ದೇವರಿಗಿಂತ ದೊಡ್ಡ ಜಾಗ ಕೊಡಲಾಗಿದೆ. ಆದರೆ ಆ ಋತು ಚಕ್ರದ ದಿನಗಳಲ್ಲಿ ಕೆಲ ನಕಾರಾತ್ಮಕ ಶಕ್ತಿಗಳ ಅಧೀನದಲ್ಲಿ ಸ್ತ್ರೀ ಇರುವುದರಿಂದ ಆ ಸಮಯದಲ್ಲಿ ದೇಗುಲ ಹೋಗುವುದು ಸ್ವತಃ ಆ ಸ್ತ್ರೀಗೆ ಶುಭವಲ್ಲ.

ಚಿಕ್ಕ ವಿಷಯಕ್ಕೆ ಏಕೆ ಸಿಟ್ಟು ಬರುತ್ತದೆ?

ಪ್ರಶ್ನೆ: ನಮಸ್ತೆ. ನನಗೆ ಸಾಂಸಾರಿಕ ಜೀವನದಲ್ಲಿ ತೊಂದರೆಯಾಗಿದೆ. ಮದುವೆ ಆದಾಗಿನಿಂದ ನನ್ನ ಗಂಡನ ಜೊತೆ ಜಗಳ ಜಾಸ್ತಿ. ಹೊಂದಾಣಿಕೆ ಇಲ್ಲದಂತಾಗಿದೆ. ಚಿಕ್ಕ ವಿಷಯಕ್ಕೆಲ್ಲ ನಾನು ಕೋಪ ಮಾಡಿಕೊಳ್ತೀನಿ. ಮನಸಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ನನ್ನ ಗಂಡ ತಾಳ್ಮೆಯಿಂದಲೇ ಇರುತ್ತಾರೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ಮಕ್ಕಳಾಗುವ ವಿಚಾರದಲ್ಲೂ ತೊಂದರೆಗಳು ಬರುತ್ತಿವೆ. ನನ್ನ ಭವಿಷ್ಯ ಹೇಗಿದೆ ತಿಳಿಸಿ.

ಉತ್ತರ: ನಿಮ್ಮ ಪ್ರಶ್ನೆಯಲ್ಲಿಯೇ ಅದಕ್ಕೆ ಉತ್ತರವೂ ಇದೆ. ಅದನ್ನು "ತಾಳ್ಮೆ" ಎನ್ನುತ್ತಾರೆ. ಇನ್ನೂ ಆಶ್ಚರ್ಯ ಅಂದರೆ, ಅದು ನಿಮಗೂ ತಿಳಿದಿದೆ! ಸಮಸ್ಯೆಯನ್ನು ಅರಿತ ಮೇಲೂ ಅದನ್ನು ನಾವು ಸರಿಪಡಿಸಿಕೊಳ್ಳದೇ ಇದ್ದಲ್ಲಿ ಅದು ದಡ್ಡತನ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಿಂದ, ಪೂಜೆ- ಪುನಸ್ಕಾರಗಳಿಂದ ಪಡೆಯುವ ಪರಿಹಾರದಷ್ಟೇ ನಿಮ್ಮ ಗುಣ- ಸ್ವಭಾವದಲ್ಲಿ ಕೆಲ ಬದಲಾವಣೆಗಳಿಂದ ಸಹ ಪಡೆಯಬಹುದು.

ನಿಮ್ಮ ಜನ್ಮ ಲಗ್ನ ಸಿಂಹ. ಆದ ಕಾರಣ ಸ್ವಲ್ಪ ಹಠ ಸ್ವಾಭಾವಿಕ. ಇನ್ನು ಸಿಂಹ ಲಗ್ನಕ್ಕೆ ಶನಿ ಗ್ರಹ ಸಪ್ತಮಾಧಿಪತಿ ಆಗುವುದರಿಂದ ಲಗ್ನಾಧಿಪತಿಗೆ ಹಾಗೂ ಸಪ್ತಮಾಧಿಪತಿಗೆ ಪರಸ್ಪರ ವೈರತ್ವ ಇದೆ. ಆ ಕಾರಣಕ್ಕೆ ನಿಮ್ಮ ಹಾಗೂ ಬಾಳಸಂಗಾತಿ ನಡುವೆ ಭಿನ್ನಾಭಿಪ್ರಾಯಗಳು ಸ್ವಾಭಾವಿಕ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ಅವರ ಹಲವು ನಿರ್ಧಾರ ಅಥವಾ ಗುಣ- ಸ್ವಭಾವಗಳು ನಿಮಗೆ ಇಷ್ಟ ಆಗುವುದಿಲ್ಲ. ನಿಮಗೆ ಸ್ವಲ್ಪ ಸಿಟ್ಟು ಬೇಗನೆ ಬರುವುದರಿಂದ ಜಗಳ ಮಾಡುತ್ತೀರಿ. ತಾಳ್ಮೆ ಹೆಚ್ಚಿಸಿಕೊಳ್ಳಿ. ಸ್ವಲ್ಪ ವಿಶಾಲವಾಗಿ ಯೋಚಿಸಿದರೆ ಸಾಕು, ನಿಮ್ಮ ಅರ್ಧ ಸಮಸ್ಯೆ ಪರಿಹಾರ ಆಗುತ್ತದೆ.

ಇನ್ನು ಸಾಧ್ಯ ಆದಲ್ಲಿ ಹಾಗೂ ನಂಬಿಕೆ ಇದ್ದಲ್ಲಿ ಉತ್ತಮ ಗುಣಮಟ್ಟದ ಸಿಲೋನ್ ಎಲ್ಲೋ ಸಫೈರ್ Cylone Yellow Sapphire (3cts ತೂಕ) ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ, ಮೂರು ದಿನ ಅದನ್ನು ಪೂಜಿಸಿ, ಅಭಿಮಂತ್ರಿಸಿ ಗುರುವಾರದಂದು ಸೂರ್ಯೋದಯಕ್ಕೆ ಸರಿಯಾಗಿ ಧರಿಸಿ. ಶುಭವಾಗಲಿ.[ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

English summary
Here is the suggestions, solution given by Astrologer Pandit Vittal Bhat to Oneindia Kannada readers questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X