ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ ಸಲಹೆ: ನನ್ನ ಮಗನ ಅನಾರೋಗ್ಯ ಸಮಸ್ಯೆಗೆ ಪರಿಹಾರ ತಿಳಿಸಿ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಓದುಗರ ಆಯ್ದ 2 ಪತ್ರಕ್ಕೆ ಉತ್ತರಿಸಿದ್ದಾರೆ. ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ [email protected] ಮೂಲಕ ಕಳುಹಿಸಿ.

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ [ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?]

Vedic astrolgy Solution by astrologer to Oneindia Kannada readers

ಪ್ರಶ್ನೆ: ನನ್ನ ಮಗನಿಗೆ ಆಗಾಗ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಅವನ ಜಾತಕದ ಪ್ರಕಾರ ಗಂಭೀರ ಆರೋಗ್ಯ ಸಮಸ್ಯೆಗಳೇನಾದರೂ ಇವೆಯಾ? ಒಂದು ವೇಳೆ ಸಮಸ್ಯೆ ಇದ್ದರೆ ಪರಿಹಾರ ತಿಳಿಸಿ.
ಉತ್ತರ: ನೀವು ಕೊಟ್ಟ ಮಾಹಿತಿ ಪ್ರಕಾರ ನಿಮ್ಮ ಮಗನದು ಮಖಾ ನಕ್ಷತ್ರ, 2ನೇ ಪಾದ ಸಿಂಹ ರಾಶಿ ಹಾಗೂ ಮೇಷ ಲಗ್ನ. ನೀವು ಕೇಳಿದ ಪ್ರಶ್ನೆ ಪ್ರಕಾರ ನೋಡಿದಾಗ ಈ ವರ್ಷ ಡಿಸೆಂಬರ್ ತಿಂಗಳ ತನಕ ನಿಮ್ಮ ಮಗನ ಆರೋಗ್ಯ ಹೀಗೆ ಇರುವ ಸಾಧ್ಯತೆ ಕಂಡು ಬರುತ್ತಿದೆ.

ಆದರೆ, ಉತ್ತಮ ವೈದ್ಯರಲ್ಲಿ ತೋರಿಸಿ. ಸಾಧ್ಯವಾದಲ್ಲಿ ಆಯುರ್ವೇದ ಚಿಕಿತ್ಸೆ ಕೊಡಿಸಿ. ಆಯುಷ್ಯಕಾರಕ ಉತ್ತಮವಾಗಿ ಇರುವುದರಿಂದ ಹೆದರುವ ಅವಶ್ಯ ಇಲ್ಲ. ಅಷ್ಟ ದ್ರವ್ಯ ಮಹಾ ಗಣಪತಿ ಹವನ ಸಹಿತ ಕಾಳಸರ್ಪ ದೋಷ ಪರಿಹಾರ ಹವನ ಎಂದು ಒಂದು ಹೋಮ ಪಧ್ಧತಿ ಇದೆ. ಸಾಧ್ಯವಾದಲ್ಲಿ ನನ್ನ ಭೇಟಿ ಮಾಡಿ, ಅದನ್ನು ಮಾಡಿಸಿ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಮಗುವಿನ ಕುತ್ತಿಗೆಯಲ್ಲಿ ರುದ್ರ ಮಂತ್ರಗಳಿಂದ ಅಭಿಮಂತ್ರಣೆ ಮಾಡಿದ, ಬೆಳ್ಳಿಯಲ್ಲಿ ಸುರಿದ ವ್ಯಾಘ್ರ ನೇತ್ರ ರತ್ನಗಳ ಮಾಲೆಯನ್ನು ಶನಿವಾರ ಹಾಕಿ. ಮಗುವಿನ ಕೈಯಲ್ಲಿ 5 ಮಂಗಳವಾರಗಳಂದು ಹುರಳಿ ಧಾನ್ಯವನ್ನು ಬ್ರಾಹ್ಮಣರಿಗೆ ದಾನ ಮಾಡಿಸಿ. ಸಾಧ್ಯವಾದಲ್ಲಿ ಪ್ರತಿ ವರ್ಷ ಮಗುವನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿ ಮಹಾ ಗಣಪತಿಯ ಸನ್ನಿಧಾನಕ್ಕೆ ಕರೆದುಕೊಂಡು ಹೋಗಿ. ಅಲ್ಲಿ ಬೆಲ್ಲದಲ್ಲಿ ಮಗುವಿನ ತುಲಾಭಾರ ಮಾಡಿಸಿ (ಕನಿಷ್ಠ ಮೂರು ವರುಷ). ಶುಭವಾಗಲಿ.

ನಮ್ಮ ಮಗನ ಭವಿಷ್ಯದ ಬಗ್ಗೆ ಮಾಹಿತಿ ನೀಡಿ
ಪ್ರಶ್ನೆ: ನಮ್ಮ ಮಗನ ಭವಿಷ್ಯ ಹೇಗಿದೆ ತಿಳಿಸಿ, ಅವನ ಜನ್ಮದಿನಾಂಕ 13-04-2004.
ಉತ್ತರ: ನೀವು ನೀಡಿದ ಮಾಹಿತಿ ಪ್ರಕಾರ ಮಗುವಿನದು ಶ್ರವಣ ನಕ್ಷತ್ರ, 3ನೇ ಪಾದ, ಮಕರ ರಾಶಿ ಹಾಗೂ ತುಲಾ ಲಗ್ನ ಬರುತ್ತದೆ. ಮಗುವಿನ ಜಾತಕದಲ್ಲಿ ಪಂಚಮಾರಿಷ್ಟ ದೋಷವಿದೆ. ಅದಕ್ಕೆ ತಕ್ಕ ಪರಿಹಾರ, ಶಾಂತಿ ಮಾಡಿಸಿ. ಜಾತಕದಲ್ಲಿ ಲಗ್ನದಿಂದ ಲಾಭ ಸ್ಥಾನದಲ್ಲಿ ಗುರು ಗ್ರಹ ಹಾಗೂ ಲಾಭಾಧಿಪತಿ ರವಿ ಪರಮೋಚ್ಚ ಸ್ಥಿತಿಯಲ್ಲಿ ಇದೆ. ಇದು ಮಗುವಿಗೂ ಹಾಗೂ ಮಗುವಿನ ತಂದೆಗೂ ಉತ್ತಮ ಫಲ ನೀಡುತ್ತದೆ.

2015ರ ಏಪ್ರಿಲ್ ತಿಂಗಳಿನಲ್ಲಿ ಮಗುವಿಗೆ ಕುಜ-ರಾಹು ಸಂಧಿಕಾಲ ಆಗಿತ್ತು. ಆಗ ಮಗುವಿನ ಹೆಸರಿನಲ್ಲಿ ಕುಜ-ರಾಹು ಸಂಧಿ ಶಾಂತಿ ಮಾಡಿಸಬೇಕಿತ್ತು. ಮಾಡಿಸಿದ್ದಲ್ಲಿ ಉತ್ತಮ. ಈಗ ರಾಹು ದಶೆ ಇರುವುದರಿಂದ ಹಾಗೂ 27-04-2033ರ ತನಕ ರಾಹು ದಶೆಯೇ ಇರುವುದರಿಂದ ಕ್ರಮೇಣ ವಿದ್ಯೆಯಲ್ಲಿ ಆಸಕ್ತಿ ಕಡಿಮೆ ಹಾಗೂ ಆಟೋಟಗಳಲ್ಲಿ ಆಸಕ್ತಿ ಜಾಸ್ತಿ ಆಗುತ್ತಾ ಹೋಗುತ್ತದೆ.[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆದ್ದರಿಂದ ನಿಮ್ಮ ಮಗುವನ್ನು ಪ್ರತೀ ವರ್ಷ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿ ಗ್ರಾಮದಲ್ಲಿ ನೆಲೆಸಿರುವ ಕರಿಕಾನ ಪರಮೇಶ್ವರೀ ದೇಗುಲದಲ್ಲಿ ತಾಯಿಯ ದರ್ಶನ ಪಡೆದು, ಅಲ್ಲಿ ದೇವಿಗೆ ತ್ರಿಶತಿ ಕುಂಕುಮಾರ್ಚನೆ ಮಾಡಿಸಿ ಹಾಗೂ ಉತ್ತಮ ವಿದ್ಯಾ ಪ್ರಾಪ್ತಿಗಾಗಿ ಸಂಕಲ್ಪ ಮಾಡಿಸಿ ಸಂಪುಟೀ ವಿಧಾನದಲ್ಲಿ ಚಂಡಿಕಾ ಪಾರಾಯಣ ಮಾಡಿಸಿ. ದೇಗುಲದ ಸಂಪರ್ಕ ಸಂಖ್ಯೆ 9448482591, 08387262123. ನಿಮಗೆ ಶುಭವಾಗಲಿ

English summary
Here is the suggestions, solution for children health problem given by Astrologer Pandit Vittal Bhat to Oneindia Kannada readers questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X