ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತು ಟಿಪ್ಸ್: ಮನೆ ವಾಸ್ತು ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

Google Oneindia Kannada News

ಕಳೆದ ಕೆಲ ದಿನಗಳಿಂದ ನನ್ನ ಬಳಿ ಮನೆ ಕಟ್ಟುವ ವಾಸ್ತು ಬಗ್ಗೆ ಕೇಳುವವರ ಸಂಖ್ಯೆ ಜಾಸ್ತಿ ಆಗಿದೆ. ಸೈಟು ಖರೀದಿ ಮಾಡಿದ ನಂತರ ಮನೆಯ ಪ್ಲ್ಯಾನಿಂಗ್ ಹಂತದಲ್ಲಿ ಕೇಳುವವರು ಕೆಲವರಾದರೆ, ಅದಾಗಲೇ ಮನೆಯನ್ನು ಕಟ್ಟಿ, ಅಲ್ಲಿಗೆ ತೆರಳಿದ ನಂತರ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕೆಲವರು.

ನಿಮಗೆ ಗೊತ್ತಿರಲಿ, ಗೃಹ ವಾಸ್ತು ಎಂಬುದು ಸಮುದ್ರ. ಅಲ್ಲಿನ ಎಲ್ಲವನ್ನೂ ಒಂದು ಗುಕ್ಕಿನಲ್ಲಿ ಅಪೋಶನ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ ವಾಸ್ತುವಿಗೆ ಸಂಬಂಧಪಟ್ಟ ಕೆಲವು ಪ್ರಾಥಮಿಕ ಸಂಗತಿಗಳನ್ನು ನಿಮಗೆ ತಿಳಿಸಬಹುದು. ಇದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದಕ್ಕೆ ನಿಮಗೆ ಸಹಾಯ ಆಗಬಹುದು.

ಒಂದು ವಿಷಯ ಸ್ಪಷ್ಟವಾಗಿ ತಿಳಿದುಕೊಂಡಿರಿ, ಸೈಟು ಖರೀದಿ ಮಾಡುವಾಗಲೇ ವಾಸ್ತು ತಜ್ಞರ ನೆರವನ್ನು ಪಡೆದು, ಮುಂದುವರಿಯಿರಿ. ಹೇಗೆ ಒಂದು ಮನೆ ಕಟ್ಟುವುದಕ್ಕೆ ಅಡಿಪಾಯ ಬಹಳ ಮುಖ್ಯವೋ ಅದೇ ರೀತಿ ವಾಸ್ತು ಪ್ರಕಾರವಾಗಿ ಮನೆ ಕಟ್ಟುವುದಕ್ಕೆ ಸೈಟಿನ ಆಕಾರ, ಸುತ್ತಮುತ್ತಲ ಪರಿಸರ ಹಾಗೂ ಅದು ಇರುವ ಸ್ಥಳ ಹಾಗೂ ದಿಕ್ಕು ಮುಖ್ಯವಾಗುತ್ತದೆ. ಸೈಟು ಖರೀದಿಸಿಯಾಗಿದೆ, ನಾವು ಮನೆ ಕಟ್ಟಬೇಕು ಎಂದಿರುವವರಿಗೆ ಇಲ್ಲಿನ ಕೆಲವು ಪ್ರಾಥಮಿಕ ಟಿಪ್ಸ್ ನಿಂದ ನೆರವಾಗುತ್ತದೆ.

Vastu Tips: Simple Vastu Guidance Should Be Follow While House Construction

ಆದರೆ, ನೆನಪಿನಲ್ಲಿಡಿ. ಇದು ಪ್ರಾಥಮಿಕ ಮಾಹಿತಿ ಮಾತ್ರ. ವಾಸ್ತು ತಜ್ಞರನ್ನು ಭೇಟಿ ಮಾಡಿದ ನಂತರವೇ ಮುಂದಕ್ಕೆ ಹೆಜ್ಜೆ ಇಡುವುದು ಸರಿ.

  • ಸೈಟ್ ಖರೀದಿಸುವಾಗ ಅದು 'ರೋಡ್ ಹಿಟ್' ಅಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಮನೆ ಎದುರಿಗೆ ನೇರವಾಗಿ ರಸ್ತೆ ಇದ್ದರೆ ಅದನ್ನು ರೋಡ್ ಹಿಟ್ ಎನ್ನಲಾಗುತ್ತದೆ. ಇನ್ನು ಸೈಟ್ ದೇವಮೂಲೆ (ಈಶಾನ್ಯ) ಬೆಳೆದಿರಬೇಕು. ಇನ್ನು ಉದ್ದ ಹಾಗೂ ಅಗಲದ ಪ್ರಮಾಣ ಎರಡೂವರೆ ಪಟ್ಟಿಗಿಂತ ಹೆಚ್ಚಿರಬಾರದು. 20X30, 15X40, 30X40, 30X60, 40X60, 50X80 ಇದೆಲ್ಲ ಪರವಾಗಿಲ್ಲ. ಆದರೆ 20X60, 30X80, 20X100 ಹೀಗೆ ಅಗಲಕ್ಕಿಂತ ಉದ್ದ ಅಥವಾ ಉದ್ದಕ್ಕಿಂತ ಅಗಲದ ಪ್ರಮಾಣ ಎರಡೂವರೆ ಪಟ್ಟು ದಾಟಬಾರದು.
  • ಮನೆ ನಿರ್ಮಾಣದ ವೇಳೆ ಆಯವನ್ನು ಸರಿಯಾಗಿ ಆರಿಸಿಕೊಳ್ಳಬೇಕು. ಆಯ ಅಂದರೆ, ಮನೆ ನಿರ್ಮಾಣದ ಉದ್ದ‍ X ಅಗಲ ಗುಣಕ ಮಾಡಿದರೆ ದೊರೆಯುವ ಸಂಖ್ಯೆಯಿಂದ ತಿಳಿದುಕೊಳ್ಳುವ ಮಾಹಿತಿ. ಧ್ವಜ, ಗಜ, ವೃಷಭ, ಸಿಂಹ ಹೀಗೆ ವಿವಿಧ ಆಯಗಳಿದ್ದು, ಧ್ವಜಾಯ ಅತ್ಯುತ್ತಮ ಎಂಬ ಅಭಿಪ್ರಾಯ ಇದೆ.
  • ಇನ್ನು ಮನೆಯ ನಾಲ್ಕೂ ಕಡೆ ಜಾಗವನ್ನು ಬಿಡಬೇಕು. ಪಶ್ಚಿಮಕ್ಕಿಂತ ಪೂರ್ವದಲ್ಲೂ ಹಾಗೂ ದಕ್ಷಿಣಕ್ಕಿಂತ ಉತ್ತರದಲ್ಲಿ ಹೆಚ್ಚಿನ ಜಾಗ ಬಿಡಬೇಕು.
  • ಮನೆಯ ಕಾಂಪೌಂಡ್ ಪಶ್ಚಿಮ ಹಾಗೂ ದಕ್ಷಿಣದಲ್ಲಿ ಎತ್ತರಕ್ಕೂ ಹಾಗೂ ಬಲವಾಗಿರಬೇಕು.
  • ಈಶಾನ್ಯದಲ್ಲಿ ದೇವರ ಕೋಣೆ ಇರುವುದು ಶ್ರೇಷ್ಠ. ಅದೇ ರೀತಿ ಆಗ್ನೇಯಕ್ಕೆ ಅಡುಗೆ ಮನೆ, ವಾಯವ್ಯಕ್ಕೆ ಶೌಚಾಲಯ- ಸ್ನಾನದ ಮನೆ, ನೈರುತ್ಯದಲ್ಲಿ ಮನೆಯ ಯಜಮಾನರ ಕೋಣೆ ಇರಬೇಕು.
  • ಈಶಾನ್ಯ ಅಥವಾ ಪೂರ್ವ ಅಥವಾ ಉತ್ತರಕ್ಕೆ ಮನೆಯ ಮುಖ್ಯ ಬಾಗಿಲು ಇರುವುದು ಉತ್ತಮ. ಇದನ್ನು ಆಯಾ ಆಯಕ್ಕೆ ಅನುಗುಣವಾಗಿ ಇಡಬಹುದು. ಒಂದು ವೇಳೆ ಆಯಕ್ಕೆ ಅನುಗುಣವಾಗಿ ಮನೆಯ ಬಾಗಿಲನ್ನು ಇಟ್ಟಲ್ಲಿ ರಾಶಿಗೆ ಅನುಗುಣವಾಗಿ ಯಾವ ಬಾಗಿಲು ಆಗಿಬರುತ್ತದೆ ಎಂಬುದನ್ನು ನೋಡುವ ಅಗತ್ಯ ಇಲ್ಲ.
  • ಮನೆಯ ಮುಖ್ಯ ಬಾಗಿಲು ಎಂದಾಗ, ಎರಡು ಬಾಗಿಲು (ಡಬಲ್ ಡೋರ್) ಇರುವುದು ಉತ್ತಮ. ಒಂದು ವೇಳೆ ಒಂದೇ ಬಾಗಿಲು (ಸಿಂಗಲ್) ಇದ್ದಲ್ಲಿ ಅದನ್ನು ಬಲಗಡೆಯಿಂದ ಒಳ ಭಾಗಕ್ಕೆ ತೆರೆಯುವಂತೆ ಇರಬೇಕು.
  • ಮುಖ್ಯ ಬಾಗಿಲಿಗೆ ಉತ್ತಮ ಗುಣಮಟ್ಟದ ಮರವನ್ನು ಬಳಸಬೇಕು. ಮನೆಯ ಉಳಿದ ಕೋಣೆಗಳ ಬಾಗಿಲಿಗಿಂತ ಅದು ದೊಡ್ಡದಾಗಿಯೂ ಬಲವಾಗಿಯೂ ಇರಬೇಕು. ಬಾಗಿಲು, ಕಿಟಕಿಗಳಿಗೆ ಮರವನ್ನು ಬಳಸುವುದು ಶ್ರೇಷ್ಠ.
  • ಮುಖ್ಯ ಬಾಗಿಲಿನ ಮೇಲೆ ಕೆತ್ತನೆ ಕೆಲಸ ಮಾಡಿಸುವಂತಿದ್ದಲ್ಲಿ ದೇವರು, ಹೂವು, ಪಕ್ಷಿಗಳ ಚಿತ್ರವನ್ನು ಕೆತ್ತಿಸಬಹುದು. ಪ್ರಾಣಿಗಳು, ಯುದ್ಧ, ದುಃಖದ ಚಿತ್ರಗಳನ್ನು ಕೆತ್ತಿಸಬಾರದು. ಮನೆಯ ಬಾಗಿಲು ತೆರೆಯುವಾಗ ಕರ್ಕಶ ಶಬ್ದ ಆಗಬಾರದು.
  • ಯಜಮಾನರ ಹೆಸರನ್ನು ಮರದ ಬೋರ್ಡ್ ನಲ್ಲಿ ಕೆತ್ತಿಸಿ, ಮನೆಯ ಬಾಗಿಲಿನ ಮೇಲೆ ಹಾಕಿಸುವುದರಿಂದ ಸಂಪತ್ತಿನ ವೃದ್ಧಿಯಾಗುತ್ತದೆ.
  • ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ನಿವೇಶನವು ಇಳಿಜಾರಿನಂತೆ ಇರಬೇಕು.
  • ಮನೆಯ ಹೊರ ಭಾಗಕ್ಕೆ ರಸ್ತೆಗೆ ಮುಖ ಮಾಡಿದಂತೆ ಕನ್ನಡಿಯನ್ನು ಹಾಕಿರಬೇಕು.
  • ಮನೆಯಲ್ಲಿನ ಮೆಟ್ಟಿಲ ಕೆಳಗೆ ಶೌಚಾಲಯ ನಿರ್ಮಿಸಬಾರದು. ಬೇಡದ ವಸ್ತುಗಳನ್ನು ಇಡಬಾರದು.
  • ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಮಾಡಿ ಮಲಗಬಹುದು. ಮನೆಯಲ್ಲಿ ಬೀಮ್ ಗಳು ಇದ್ದಲ್ಲಿ ನೇರವಾಗಿ ಅದರ ಕೆಳಗೆ ಮಲಗಬಾರದು.
  • ಮನೆಯೊಳಗೆ ಇರುವ ಮಂಚದ ಕೆಳಗೆ ಕೂಡ ಯಾವುದೇ ವಸ್ತುಗಳನ್ನು ಇಡಬಾರದು. ಅದನ್ನು ಖಾಲಿ ಬಿಡಬೇಕು. ಇನ್ನು ದಂಪತಿಯ ಕೋಣೆಗಳೊಳಗೆ ಯುದ್ಧದ ಸನ್ನಿವೇಶ, ದುಃಖ ಪಡುತ್ತಿರುವ ಚಿತ್ರ, ಸನ್ಯಾಸಿಗಳ ಚಿತ್ರ, ಒಡೆದ ಕನ್ನಡಿ, ಫೋಟೋ ಇಟ್ಟುಕೊಳ್ಳಬಾರದು.

ಆರಂಭದಲ್ಲೇ ಹೇಳಿದಂತೆ ವಾಸ್ತು ಶಾಸ್ತ್ರದ ಮೂಲ ತತ್ವಗಳ ಬಗ್ಗೆ ತಿಳಿಸುತ್ತಾ ಹೋದಲ್ಲಿ ಕೊನೆ ಮೊದಲಿಲ್ಲ. ಆದರೂ ಸೈಟು ಖರೀದಿ ಮಾಡುವ ಹಂತದಿಂದಲೇ ವಾಸ್ತು ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಏಕೆಂದರೆ, ಮನೆ ಅಂದರೆ ತಲೆ ತಲೆಮಾರಿನ ಭವಿಷ್ಯ. ಲಕ್ಷ- ಕೋಟಿಗಳಲ್ಲಿ ಹಣ ಖರ್ಚು ಮಾಡಿ, ಸಮಸ್ಯೆ ಮಾಡಿಕೊಳ್ಳುವುದು ಸರಿಯಲ್ಲ.

ರಾಘವೇಂದ್ರ ಕುಡ್ಲ

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ, ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ. ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X