ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ವಾಸ್ತುವಿನ ಬಗ್ಗೆ ಎಲ್ಲರೂ ತಿಳಿದುಕೊಂಡಿರಬೇಕಾದ ಮುಖ್ಯ ವಿಚಾರಗಳು

By ಕಬ್ಯಾಡಿ ಜಯರಾಮಾಚಾರ್ಯ
|
Google Oneindia Kannada News

ಇಂದಿನ ಲೇಖನದಲ್ಲಿ ಮನೆಯ ವಾಸ್ತುವಿನ ಬಗ್ಗೆ ಪ್ರಾಥಮಿಕ ಜ್ಞಾನ ನೀಡುವಂಥ ಮಾಹಿತಿ ನೀಡುತ್ತಿದ್ದೇನೆ. ಬಹಳ ಮಂದಿಯ ಪ್ರಶ್ನೆ ಒಂದೇ ಥರ ಇರುತ್ತದೆ. ನಾವೊಂದು ಮನೆ ನೋಡಿದ್ದೀವಿ. ಅದರ ಮುಖ್ಯಬಾಗಿಲು ಇಂಥ ದಿಕ್ಕಿಗಿದೆ. ಅದು ನಮಗೆ ಆಗಿಬರುತ್ತದಾ? ನೀರಿನ ಟ್ಯಾಂಕ್ ಯಾವ ದಿಕ್ಕಿಗಿರಬೇಕು? ಆ ಮನೆಗೆ ಹೋದಾಗಿನಿಂದ ಒಂದಲ್ಲ ಒಂದು ತೊಂದರೆ ಆಗುತ್ತಿದೆ ಏಕೆ?

ಹೀಗೆ ಅವೇ ಪ್ರಶ್ನೆಗಳು ಪದೇ ಪದೇ ಕೇಳಿಬರುತ್ತವೆ, ಆದರೆ ಬೇರೆ ಬೇರೆ ವ್ಯಕ್ತಿಗಳಿಂದ ಆ ಕಾರಣಕ್ಕೆ ಅಂಥ ಪುನರಾವರ್ತಿತ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ತಿಳಿಸುವ ಬಹುತೇಕ ಸಂಗತಿಗಳು ಸಾಮಾನ್ಯ ಮಾಹಿತಿಯನ್ನು ಹೊಂದಿರುವಂಥವು. ನೀವು ಸ್ವಂತಕ್ಕೆ ಕಟ್ಟಿಸುವಾಗ ಹಾಗೂ ಮನೆ ಬಾಡಿಗೆಗೆ ತೆಗೆದುಕೊಳ್ಳುವಾಗ ಮುಖ್ಯವಾಗಿ ಗಮನಿಸಬೇಕಾದಂಥವು.

ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!ವಾಸ್ತು ಟಿಪ್ಸ್: ಈ 9 ವಸ್ತುಗಳು ಮನೆಯಲ್ಲಿದ್ದರೆ ಎಚ್ಚರ!

ಆದರೆ, ಇದರಾಚೆಗೂ ಕೆಲವು ವಿಚಾರಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಜ್ಯೋತಿಷಿ, ಅದರಲ್ಲೂ ವಾಸ್ತು ಶಾಸ್ತ್ರದ ಬಗ್ಗೆ ಜ್ಞಾನ ಇರುವ ಜ್ಯೋತಿಷಿಯ ಬಳಿ ತೆರಳಿ ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳುವುದು ಒಳಿತು. ಗ್ರಹ ಹಾಗೂ ಗೃಹದ ಸ್ಥಿತಿ ಉತ್ತಮ ಆಗಿದ್ದರೆ ಬಹುತೇಕ ಸಮಸ್ಯೆಗಳನ್ನು ನಿವಾರಿಸಿಕೊಂಡಂತೆಯೇ. ಇನ್ನೇಕೆ ತಡ, ಮುಂದೆ ಓದಿ.

ಮನೆಯ ವಿಚಾರದಲ್ಲಿ ಪ್ರಾಥಮಿಕ ಸಂಗತಿಗಳು

ಮನೆಯ ವಿಚಾರದಲ್ಲಿ ಪ್ರಾಥಮಿಕ ಸಂಗತಿಗಳು

ಅಡುಗೆ ಮನೆ ಆಗ್ನೇಯ ಅಥವಾ ವಾಯವ್ಯ ದಿಕ್ಕಿನಲ್ಲಿರಬೇಕು. ಮನೆಯ ಯಜಮಾನ ಅಥವಾ ಯಜಮಾನಿ ಮಲಗುವ ಕೋಣೆ ನೈರುತ್ಯಕ್ಕೆ ಇರಬೇಕು. ಮಕ್ಕಳ ಕೋಣೆ ಉತ್ತರ ಅಥವಾ ವಾಯವ್ಯಕ್ಕೆ ಇರಬೇಕು. ಮನೆಯ ನೀರಿನ ಸಂಪ್, ಟ್ಯಾಂಕ್ ಅಥವಾ ಬಾವಿಯು ಈಶಾನ್ಯ, ಪೂರ್ವ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ಉತ್ತಮ. ಓವರ್ ಹೆಡ್ ಟ್ಯಾಂಕ್ ನೈರುತ್ಯದಲ್ಲಿದ್ದರೆ ಉತ್ತಮ. ಮನೆಯನ್ನು ಕಟ್ಟಲು ಆಯ್ದುಕೊಳ್ಳುವ ಜಾಗ ಚೌಕ ಅಥವಾ ಆಯತಾಕಾರದಲ್ಲಿ ಇರಬೇಕು. ನಾಲ್ಕಕ್ಕೂ ಹೆಚ್ಚು ಮೂಲೆಗಳು ಬರಬಾರದು. ದಕ್ಷಿಣ, ನೈರುತ್ಯ, ಪಶ್ಚಿಮ ಎತ್ತರವಾಗಿದ್ದು, ಉತ್ತರ, ಈಶಾನ್ಯ ಮತ್ತು ಪೂರ್ವ ತಗ್ಗಿನಲ್ಲಿದ್ದರೆ ಅಂಥ ಕಡೆ ಮನೆ ಕಟ್ಟುವುದಕ್ಕೆ ಉತ್ತಮ.

ರಾಶಿ ಆಧಾರದಲ್ಲಿ ಮುಖ್ಯ ಬಾಗಿಲುಗಳ ನಿರ್ಧಾರ

ರಾಶಿ ಆಧಾರದಲ್ಲಿ ಮುಖ್ಯ ಬಾಗಿಲುಗಳ ನಿರ್ಧಾರ

ಮನೆಯ ಒಳಗೆ ಬರುವಾಗ ನೆಲದಿಂದ ಮೆಟ್ಟಿಲನ್ನು ಹತ್ತಿಕೊಂಡು ಬರುವಂತಿರಬೇಕು. ಮನೆಯಿಂದ ಹೊರ ಹೋಗುವಾಗ ಮೆಟ್ಟಿಲನ್ನು ಇಳಿದು ಹೋಗುವಂತಿರಬೇಕು. ಆ ಮೆಟ್ಟಿಲುಗಳ ಸಂಖ್ಯೆ 3 ಅಥವಾ 5 ಇರಬೇಕು. ಅದಕ್ಕಿಂರ ಹೆಚ್ಚಿನ ಸಂಖ್ಯೆಯಲ್ಲಿದ್ದಲ್ಲಿ ಬೆಸ ಪ್ರಮಾಣದಲ್ಲೇ ಹೆಚ್ಚಿಸುತ್ತಾ ಹೋಗಬೇಕು. ಮನೆಯ ಮುಖ್ಯ ಬಾಗಿಲು ಪೂರ್ವ, ಉತ್ತರ, ಈಶಾನ್ಯ ಎಲ್ಲರಿಗೂ ಉತ್ತಮವಾಗಿ ಆಗಿಬರುತ್ತದೆ. ಆ ದಿಕ್ಕಿನಲ್ಲಿ ಬಾಗಿಲು ಇಡಲು ಸಾಧ್ಯ ಆಗದಿದ್ದಲ್ಲಿ ಪಶ್ಚಿಮ ಅಥವಾ ವಾಯವ್ಯ ದಿಕ್ಕು ಮಧ್ಯಮ ಫಲ ನೀಡುತ್ತದೆ. ಇನ್ನು ರಾಶಿ ಆಧಾರದಲ್ಲಿ ಹೇಳಬೇಕು ಅಂದರೆ, ಕರ್ಕಾಟಕ- ವೃಶ್ಚಿಕ- ಮೀನ ರಾಶಿಯವರಿಗೆ ಉತ್ತರ ದಿಕ್ಕು, ಮೇಷ- ಸಿಂಹ- ಧನುಸ್ಸು ರಾಶಿಯವರಿಗೆ ಪೂರ್ವ ದಿಕ್ಕು, ವೃಷಭ- ಕನ್ಯಾ- ಮಕರದವರಿಗೆ ದಕ್ಷಿಣ ದಿಕ್ಕು, ಮಿಥುನ- ತುಲಾ- ಕುಂಭ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಬಾಗಿಲು ಆಗಿಬರುತ್ತದೆ.

ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳನ್ನು ಎಲ್ಲಿ ಇಡಬೇಕು?

ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳನ್ನು ಎಲ್ಲಿ ಇಡಬೇಕು?

ದುಡ್ಡಿನ ಅಥವಾ ಬೆಲೆ ಬಾಳುವ ವಸ್ತುಗಳನ್ನು ಇಡುವ ಪೆಟ್ಟಿಗೆ, ಬೀರು, ಲಾಕರ್ ಗಳನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಅವುಗಳ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಮನೆಯಲ್ಲಿ ದೇವರ ಮೂರ್ತಿಗಳನ್ನು ಇಡುವಾಗ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಪಶ್ಚಿಮ ಮುಖವಾಗಿ ದೇವರನ್ನು ಇಡುವುದು ಪ್ರಾಶಸ್ತ್ಯ. ಇನ್ನು ಮನೆಯ ಮಧ್ಯದಲ್ಲಿ ದೇವರ ಕೋಣೆ ಇದ್ದರೆ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ದೇವರನ್ನು ಇಡಬೇಕು. ದಕ್ಷಿಣದ ಪಡಸಾಲೆಯಲ್ಲಿ ಅಥವಾ ಆಗ್ನೇಯದಲ್ಲಿ ದೇವರ ಮನೆ ಇದ್ದಾಗ ಪಶ್ಚಿಮಕ್ಕೆ ಮುಖ ಮಾಡಿ ದೇವರನ್ನು ಇಡುವ ವಾಡಿಕೆ ಇದೆ.

ಯಾವ ದೇವಾಲಯ ಬಳಿ, ಯಾವ ದಿಕ್ಕಿಗೆ ಮನೆ ಪ್ರಶಸ್ತವಲ್ಲ?

ಯಾವ ದೇವಾಲಯ ಬಳಿ, ಯಾವ ದಿಕ್ಕಿಗೆ ಮನೆ ಪ್ರಶಸ್ತವಲ್ಲ?

ಸೌಮ್ಯ ಸ್ವರೂಪದ ದೇವರುಗಳಾದ ಉದಾಹರಣೆಗೆ ವಿಷ್ಣು, ಲಕ್ಷ್ಮಿ, ಸರಸ್ವತಿ, ಗಣಪತಿ ಮೊದಲಾದ ದೇವಾಲಯಗಳ ಹಿಂಬದಿಯಲ್ಲಿ ಅಥವಾ ಎಡಭಾಗಕ್ಕೆ ಮೂನ್ನೂರು ಅಡಿ ವ್ಯಾಪ್ತಿಯೊಳಗೆ ಮನೆ ಇರುವುದು ಪ್ರಶಸ್ತವಲ್ಲ. ಉಗ್ರ ಸ್ವರೂಪದ ಶಿವ, ಭದ್ರಕಾಳಿ, ಮಹಿಷ ಮರ್ದಿನಿ, ದುರ್ಗೆ ಇತ್ಯಾದಿ ದೇವರ ದೇವಾಲಯಗಳ ಬಲ ಭಾಗಕ್ಕೆ ಅಥವಾ ಮುಂಭಾಗಕ್ಕೆ ಮುನ್ನೂರು ಅಡಿ ವ್ಯಾಪ್ತಿಯಲ್ಲಿ ಮನೆ ಇರುವುದು ಒಳ್ಳೆಯದಲ್ಲ. ಇನ್ನು ಕೆಲವರಿಗೆ ಕುಲ ದೈವದ ಸ್ಥಾನಗಳು ಮನೆಯೊಳಗೆ ಇರುತ್ತವೆ. ಮನೆಗೆ ದಕ್ಷಿಣ ಅಥವಾ ನೈರುತ್ಯದಲ್ಲಿ ಕುಲ ದೈವದ ಸ್ಥಾನಗಳಿರಬಾರದು. ಅದೇ ರೀತಿ ಮನೆಗೆ ಪಶ್ಚಿಮ, ನೈರುತ್ಯ, ದಕ್ಷಿಣ ಅಥವಾ ಆಗ್ನೇಯದಲ್ಲಿ ನಾಗನ ವಾಸಸ್ಥಾನ, ನಾಗನ ಕಲ್ಲು ಇರುವುದು ಒಳ್ಳೆಯದಲ್ಲ. ಅಂದರೆ ಮನೆಯ ಸುತ್ತಳತೆಯ ಮುನ್ನೂರು ಅಡಿಯವರೆಗೆ ಇದು ಅನ್ವಯಿಸುತ್ತದೆ.

ಮನೆಯ ಬಳಿ ಯಾವ ಮರವಿದ್ದರೆ ಒಳಿತು?

ಮನೆಯ ಬಳಿ ಯಾವ ಮರವಿದ್ದರೆ ಒಳಿತು?

ಮನೆಯ ಹಿತ್ತಿಲಿನ ಕನಿಷ್ಠ ಎರಡು ಗಜ ದೂರದಲ್ಲಿ ಬಿಲ್ವ, ನೆಲ್ಲಿ, ದೇವದಾರು, ಪಾಲಾಶ, ಶ್ರೀಗಂಧ, ಸಂಪಿಗೆ, ಕದಿರ, ಅಶೋಕ, ರಂಜೆ ಹಾಗೂ ಹೂವಿನ ಗಿಡ ಹಾಗೂ ಮರಗಳು ಇರಬಹುದು. ಪೂರ್ವ ದಿಕ್ಕಿನಲ್ಲಿ ರಂಜೆ, ಗೋಳಿ ಮರ, ಅಡಿಕೆ, ತೆಂಗು, ಹಲಸು ಇದ್ದರೆ ಶುಭ. ದಕ್ಷಿಣದಲ್ಲಿ ಅತ್ತಿ, ಹುಣಸೇಮರ, ಪಶ್ಚಿಮ ದಿಕ್ಕಿನಲ್ಲಿ ಮಾವು, ಅಶ್ವತ್ಥ, ಉತ್ತರದಲಿ ಸಂಪಿಗೆ ಇದ್ದರೆ ಶುಭ. ಕಳ್ಳಿ ಗಿಡ, ಕಾಸರ್ಕ, ಗೋಡಂಬಿ ಮರ, ಅಮಟೆ, ನುಗ್ಗೆ ಮತ್ಯಾವುದೇ ಮುಳ್ಳಿನ ಗಿಡ- ಮರ ಮನೆಯ ಬಳಿ ಇರುವುದು ಒಳ್ಲೆಯದಲ್ಲ.

English summary
Here is the tips for house construction by well known astrologer Kabiyadi Jayaramacharya. Vastu tips in Kannada. House construction suggestion according to Indian ancient vastu tips.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X