ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತು ಪ್ರಕಾರ ಮಲಗುವ ಕೋಣೆ ಯಾವ ದಿಕ್ಕಿನಲ್ಲಿದ್ರೆ ಹಿತ?

By ಮನಸ್ವಿನಿ, ನಾರಾವಿ
|
Google Oneindia Kannada News

ವಾಸ್ತು ಎನ್ನುವುದು ಒಂದು ಯಾಂತ್ರಿಕ ಕ್ರಿಯೆ. ಜೀವನದಲ್ಲಿ ಯಶಸ್ಸು ಕಾಣಲು ವಾಸ್ತು ಸಹಕಾರಿ. ಮಾನವರ ಆರ್ಥಿಕ ಹಾಗೂ ಕಾರ್ಯ ಕ್ಷಮತೆ ಹೆಚ್ಚಿಸಲು ವಾಸ್ತು ಉಪಯುಕ್ತವಾಗಿದೆ.

ಮಲಗುವ ಕೋಣೆ ಯಾವ ದಿಕ್ಕಿನಲ್ಲಿದ್ರೆ ಹಿತ? ಮನೆಯ ಸದಸ್ಯರು ಯಾವ ದಿಕ್ಕಿನಲ್ಲಿ ಮಲಗಬೇಕು? ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ..

ವಾಸ್ತು ಸರಿಯಿಲ್ಲವೆಂದು ಹೋಮ, ಹವನ ಮಾಡಬೇಕು, ಜಪ, ತಪ ಮಾಡಬೇಕು ಎಂದು ಪುರಾಣಗಳು ಹೇಳಬಹುದು, ಆದರೆ, ವಿಜ್ಞಾನ ತಿಳಿಸಿಲ್ಲ.

ವಾಸ್ತು ಶಾಸ್ತ್ರವೂ ಭಾರತದ ವಾಸ್ತುಶಿಲ್ಪಶಾಸ್ತ್ರ, ಕಟ್ಟಡ ನಿರ್ಮಾಣ ಪದ್ಧತಿಗಳಲ್ಲಿ ಪ್ರಮುಖವಾದ ವಿಧಾನಗಳಲ್ಲಿ ಒಂದು. ಈ ಶಾಸ್ತ್ರದ ಜ್ಞಾನದಿಂದ ಮಾನಸಿಕ ಶಾಂತಿ, ದೈಹಿಕ ಆರೋಗ್ಯ, ಧನ ಧಾನ್ಯಗಳಿಂದ ಕೂಡಿದ ಸಮೃದ್ಧ ಜೀವನವನ್ನು ನಡೆಸಲು ಸಾಧ್ಯ ಎಂದು ನಂಬಲಾಗಿದೆ.

ಈ ಶಾಸ್ತ್ರದ ನಿಯಮದ ಪ್ರಕಾರ ಕಟ್ಟಿದ ಮನೆ, ಗ್ರಾಮ, ನಗರ, ಅಂಗಡಿ, ಕಚೇರಿ, ಕಾರ್ಖಾನೆಗಳಿಂದ ಸಮೃದ್ಧಿಯನ್ನು ಪಡೆಯಬಹುದು. ಅಧುನಿಕ ವಾಸ್ತುತಜ್ಞರಿಗೂ ಅನೇಕ ಪ್ರಾಚೀನ ವಾಸ್ತುಶಾಸ್ತ್ರ ಗ್ರಂಥಗಳು ಆಧಾರವಾಗಿವೆ. ಶಾಸ್ತ್ರ, ಆಚರಣೆ ಎಲ್ಲಕ್ಕೂ ವೈಜ್ಞಾನಿಕ ಕಾರಣಗಳು ಸಿಕ್ಕಿವೆ.

ಮಲಗುವ ಕೋಣೆಯನ್ನು ನಿರ್ಮಿಸುವಾಗ ದಿಕ್ಕುಗಳ ಆಯ್ಕೆಗಳನ್ನು ಸರಿಯಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ವಾಸ್ತುಪ್ರಕಾರ ಸಲಹೆ ಪಡೆದು ಮಲಗುಣ ಕೋಣೆಯನ್ನು ಬದಲಿಸಬೇಕು, ಋಣಾತ್ಮಕ ಅಂಶಗಳನ್ನು ತೊಡೆದು ಹಾಕುವ ಎಲ್ಲಾ ಸರಳ ವಿಧಾನಗಳು ಲಭ್ಯವಿದ್ದು, ಸೂಕ್ತವಾಗಿ ಬಳಸಿಕೊಳ್ಳಬಹುದು...

ಈಶಾನ್ಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಈಶಾನ್ಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಈ ದಿಕ್ಕಿನಲ್ಲಿ ಕೋಣೆಯನ್ನು ನಿರ್ಮಿಸುವುದು ಸೂಕ್ತವಲ್ಲ.ದೇವರ ಕೋಣೆ ಇರಬೇಕಾದ ಸ್ಥಳವಿದು. ಇದು ಪರಮ ಶಿವನ ಅಧಿಪತ್ಯದ ದಿಕ್ಕು. ಹೀಗಾಗಿ, ಈ ದಿಕ್ಕಿನಲ್ಲಿ ಮಲಗುವ ಕೋಣೆಯನ್ನು ಅದರಲ್ಲೂ ಮನೆಯ ಒಂದು ಪಕ್ಷ ಈ ದಿಕ್ಕಿನಲ್ಲಿ ಕೋಣೆಯಿದ್ದರೆ ಕುಟುಂಬದಲ್ಲಿ ಹೆಣ್ಣು ಸಂತಾನ ಹೆಚ್ಚಾಗುವ ಸಾಧ್ಯತೆ ಅಧಿಕ

ಆಗ್ನೇಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಆಗ್ನೇಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಈ ದಿಕ್ಕಿನಲ್ಲಿ ಕೋಣೆಯನ್ನು ನಿರ್ಮಿಸುವುದು ಸೂಕ್ತವಲ್ಲ. ಮಕ್ಕಳು ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸರಿಯಾಗಿ ನಿದ್ರೆ ಬರುವುದಿಲ್ಲ. ಜನರು ಹೆಚ್ಚು ಕೋಪವಿಷ್ಟಾರಾಗುತ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಮನಸ್ಸು ಗೊಂದಲಮಯವಾಗುತ್ತದೆ. ಗಂಡ-ಹೆಂಡತಿ ಸದಾಕಾಲ ಜಗಳವಾಡುತ್ತಿರುತ್ತಾರೆ. ಹಣ ಕೂಡಾ ನೀರಿನಂತೆ ಖರ್ಚಾಗುತ್ತದೆ.

ಉತ್ತರ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಉತ್ತರ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಯುವ ಸಂಗಾತಿಗಳು ನೆಲೆಸಲು ಇದು ಸೂಕ್ತ ದಿಕ್ಕು. ಕುಬೇರನ ಪಾರುಪತ್ಯದ ಸ್ಥಾನ ಇಲ್ಲಿರುವುದರಿಂದ ತಮ್ಮ ಬೆಲೆಬಾಳುವ ಆಭರಣಗಳು, ಕಾಗದ ಪತ್ರಗಳು, ಮೌಲ್ಯಯುತ ಸಾಮಾಗ್ರಿಗಳನ್ನು ಈ ದಿಕ್ಕಿನಲ್ಲಿಡಬಹುದು.

ಪೂರ್ವ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಪೂರ್ವ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಸೂರ್ಯ ಹಾಗೂ ಇಂದ್ರನ ಅಧಿಪತ್ಯದ ದಿಕ್ಕು ಇದಾಗಿರುವುದರಿಂದ ಅವಿವಾಹಿತರಿಗೆ ನೆಲೆಸಲು ಸೂಕ್ತವಾದ ಸ್ಥಳ. ಮಲಗುವ ಕೋಣೆ ಹಾಗೂ ಮಲಗುವಾಗ ಪೂರ್ವಕ್ಕೆ ತಲೆ ಹಾಕಿ ಮಲಗುವುದು ಉತ್ತಮ.

ಪಶ್ಚಿಮ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಪಶ್ಚಿಮ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ನಿಮ್ಮ ಕುಟುಂಬದಲ್ಲಿ ಹೆಣ್ಣು ಸಂತಾನ ಹೆಚ್ಚಾಗುವ ಸಾಧ್ಯತೆ ಅಧಿಕ. ವಿವಾಹಿತರು ಈ ದಿಕ್ಕಿನಲ್ಲಿ ಮಲಗಿದರೂ ತಲೆಯನ್ನು ಪೂರ್ವಕ್ಕೆ ಹಾಕಬೇಕು. ವರುಣ ದೇವನ ಪ್ರಭಾವವಿರುವುದರಿಂದ ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೂ ಅನುಕೂಲ. ಬೆಡ್ ಮೇಲೆ ಕುಳಿತುಕೊಂಡು ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡು ಓದಿಕೊಳ್ಳಬಹುದು.

ನೈರುತ್ಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ನೈರುತ್ಯ ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಮನೆಯ ಯಜಮಾನನಿಗೆ ಮೀಸಲಾಗಿ ಇಡಬಹುದಾದ ಕೋಣೆ.

ವಾಯುವ್ಯ-ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ವಾಯುವ್ಯ-ದಿಕ್ಕಿನಲ್ಲಿದ್ರೆ ಯಾರಿಗೆ ಹಿತ?

ಈ ದಿಕ್ಕಿನಲ್ಲಿರುವ ಕೋಣೆಯಲ್ಲಿ ಅತಿಥಿಗಳಿಗೆ ಹಾಗೂ ಹೆಣ್ಣು ಮಕ್ಕಳು ಇರುವುದು ಸೂಕ್ತ

ಯಾವ ದಿಕ್ಕಿನಲ್ಲಿದ್ರೆ ಹಿತ?

ಯಾವ ದಿಕ್ಕಿನಲ್ಲಿದ್ರೆ ಹಿತ?

ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೋಣೆಯಿದ್ದರೆ ನೈಋತ್ಯಕ್ಕೆ ಶಿಫ್ಟ್ ಮಾಡಿಕೊಳ್ಳಿ. ಅಥವಾ ವಾಯುವ್ಯಕ್ಕೂ ಶಿಫ್ಟ್ ಆಗಬಹುದು. ಇದು ಯಾವುದು ಸಾಧ್ಯವಿಲ್ಲದಿದ್ದರೆ, ರೂಮಿನಲ್ಲಿ ಬೆಡ್ ಗಳನ್ನು ಆಗ್ನೇಯ ದಿಕ್ಕಿನಿಂದ ದೂರವಿರಿಸಿ. ದಕ್ಷಿಣ ದಿಕ್ಕಿಗೆ ತಲೆ ಇರಿಸಿ ಮಲಗಿಕೊಳ್ಳಿ

English summary
Vastu Shastra : Tips guidelines for Bedroom : North West direction is governed by Diety "Vayu", the location is the best for newlywed couples this and many tips are here. Vastu Shastra a Hindu system of architecture describe principles of design, layout, measurements, ground preparation, space arrangement and spatial geometry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X