ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯವಾಣಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರಿಗೆ ಕಿರೀಟ?

|
Google Oneindia Kannada News

ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೂರರಂದು ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬಿಡೆನ್ ಮತ್ತು ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ತನ್ನ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಸೂಜಿಗಲ್ಲಿನಂತೆ ವಿಶ್ವದಾದ್ಯಂತ ಆಕರ್ಷಿಸುವ ತಾಕತ್ ಅನ್ನು ಹೊಂದಿರುವ ದೇಶವೆಂದರೆ ಅದು ಅಮೆರಿಕ. ಹಾಗಾಗಿ, ಆ ದೇಶದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ ಎಂದರೆ, ನಮ್ಮ, ಭವಿಷ್ಯವಾಣಿ ನುಡಿಯುವವರು ಸುಮ್ಮನಿರುತ್ತಾರೆಯೇ?

ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?ಟ್ರಂಪ್ ಮತ್ತೆ ಅಧ್ಯಕ್ಷರಾಗೋದು ಗ್ಯಾರಂಟಿ..? ನಾಸ್ಟ್ರಡಾಮಸ್ ಕೂಡ ಇದನ್ನೇ ಹೇಳಿದ್ದನಾ..?

ಅಮೆರಿಕಾದ ಚುನಾವಣೆಯಲ್ಲಿ ಯಾರು ಜಯಭೇರಿ ಬಾರಿಸಲಿದ್ದಾರೆ ಎನ್ನುವ ವಿಚಾರದಲ್ಲಿ ಹಲವು ಭವಿಷ್ಯವಾಣಿಗಳು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನಾಗುತ್ತದೆ, ಟ್ರಂಪ್ ಮತ್ತು ಬಿಡೆನ್ ಗ್ರಹಗತಿ ಹೇಗಿದೆ ಎನ್ನುವ ಸಾಕಷ್ಟು ಪೋಸ್ಟ್ ಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಅಮೆರಿಕ ಚುನಾವಣೆ: ಟ್ರಂಪ್ ಹಿಂದಿಕ್ಕಲು ಬಿಡನ್ ಗೆ ನೆರವಾದ ದೇಣಿಗೆ ಸಂಗ್ರಹಣೆಅಮೆರಿಕ ಚುನಾವಣೆ: ಟ್ರಂಪ್ ಹಿಂದಿಕ್ಕಲು ಬಿಡನ್ ಗೆ ನೆರವಾದ ದೇಣಿಗೆ ಸಂಗ್ರಹಣೆ

ಅಧ್ಯಕ್ಷೀಯ ಚುನಾವಣೆಯ ಬಗ್ಗೆ ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ನಡುವೆ, ಕೊರೊನಾ ವಿಚಾರದಲ್ಲಿ ಭವಿಷ್ಯ ನುಡಿದಿದ್ದ ಉತ್ತರ ಭಾರತ ಮೂಲದ ಖ್ಯಾತ ಜ್ಯೋತಿಷ್ಯೆಯೊಬ್ಬರು ಟ್ರಂಪ್, ಬಿಡೆನ್, ಕಮಲಾ ಹ್ಯಾರಿಸ್ ಯಾರು ಗೆಲ್ಲಲಿದ್ದಾರೆ ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅದು ಹೀಗಿದೆ:

ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರುವ ಪೋಸ್ಟ್

ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರುವ ಪೋಸ್ಟ್

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಎಂದರೆ ಅದು ನಾಸ್ಟ್ರಡಾಮಸ್ ನುಡಿದಿದ್ದಾರೆ ಎನ್ನಲಾಗುತ್ತಿರುವ ಪೋಸ್ಟ್. ಆ ಪೋಸ್ಟ್ ಪ್ರಕಾರ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಖಚಿತ ಎನ್ನುವುದು. ರಿಪಬ್ಲಿಕನ್ ಪಾರ್ಟಿಯ ಬೆಂಬಲಿಗರು ಫಿರ್ ಸೇ ಟ್ರಂಪ್ ಎನ್ನುವ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಆದರೆ, ಡೆಮಾಕ್ರಟಿಕ್ ಪಕ್ಷದವರು ಇದನ್ನು ಅಪಹಾಸ್ಯ ಮಾಡುತ್ತಿದ್ದಾರೆ.

ಉತ್ತರ ಭಾರತ ಮೂಲದ ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆ

ಉತ್ತರ ಭಾರತ ಮೂಲದ ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆ

ಉತ್ತರ ಭಾರತ ಮೂಲದ ಮನೀಜಾ ಅಹುಜಾ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನವೆಂಬರ ಮಾಸಾಂತ್ಯದ ವೇಳೆಗೆ ಕೊರೊನಾ ಹಾವಳಿ ಭಾರತದಲ್ಲಿ ಕಮ್ಮಿಯಾಗಲಿದೆ ಎನ್ನುವ ಮಾತನ್ನು ಇವರು ಆಡಿದ್ದರು. ಇವರು ಹೇಳುವ ಪ್ರಕಾರ, "ಟ್ರಂಪ್ ಹುಟ್ಟಿದ್ದು 14.06.1946 ಜಮೈಕಾದಲ್ಲಿ. ಇದು ಸಿಂಹರಾಶಿಯ ಜಾತಕ. ನಾಲ್ಕು ಗ್ರಹಗತಿಗಳು ಮೈತ್ರಿಕಾರಕ ಸ್ಥಾನದಲ್ಲಿದೆ. ಇದು ಟ್ರಂಪ್ ಜಾತಕದ ಪ್ರಕಾರ ಮಹತ್ವವಾದದ್ದು.

ಸದ್ಯದ ಗ್ರಹಹತಿಯ ಪ್ರಕಾರ ಟ್ರಂಪ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚು

ಸದ್ಯದ ಗ್ರಹಹತಿಯ ಪ್ರಕಾರ ಟ್ರಂಪ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚು

ಇವರು ನುಡಿದಿರುವ ಭವಿಷ್ಯದ ಪ್ರಕಾರ, ಈ ವರ್ಷ್ಯಾಂತ್ಯದಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಅಮೆರಿಕ ಯುದ್ದವನ್ನು ಎದುರಿಸಬೇಕಾಗುತ್ತದೆ. ಮುಂದಿನ ವರ್ಷದ ಜುಲೈ ತಿಂಗಳ ನಂತರ, ವಿಶ್ವದ ಇತರ ರಾಷ್ಟ್ರಗಳ ನಡುವೆ, ಸಣ್ಣ ಮಟ್ಟದ ಸಮರ ಅಮೆರಿಕ ದೈನಂದಿನ ಪರಿಪಾಠವಾಗಲಿದೆ. ಸದ್ಯದ ಗ್ರಹಹತಿಯ ಪ್ರಕಾರ ಟ್ರಂಪ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚು. ಕಮಲಾ ಹ್ಯಾರಿಸ್ ಭವಿಷ್ಯ?

ಬಿಡೆನ್ ಗ್ರಹಗತಿ ಚೆನ್ನಾಗಿದ್ದರೂ, ಅವರು ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಕಮ್ಮಿ

ಬಿಡೆನ್ ಗ್ರಹಗತಿ ಚೆನ್ನಾಗಿದ್ದರೂ, ಅವರು ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಕಮ್ಮಿ

ಜೋ ಬಿಡೆನ್ ಹುಟ್ಟಿದ್ದು 20.11.1942, ವೃಶ್ಚಿಕ ರಾಶಿಯ ಲಗ್ನವಿದು. ಮಂಗಳ ರಾಶಿ ಇಲ್ಲಿ ಏಳನೇ ಪಾದದಲ್ಲಿದ್ದಾನೆ. ಗುರು ಮತ್ತು ರಾಹು ದಶೆ ಸದ್ಯ ಬಿಡೆನ್ ಜಾತಕದ ಪ್ರಕಾರ ಇದೆ. ಸಿಂಹ ರಾಶಿಯು ಹತ್ತನೇ ಮನೆಯಲ್ಲಿ ಇದ್ದರೂ ಕೂಡಾ, ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುವುದಿಲ್ಲ. ಹಲವು ವಿಚಾರದಲ್ಲಿ ಬಿಡೆನ್ ಗ್ರಹಗತಿ ಚೆನ್ನಾಗಿದ್ದರೂ, ಅವರು ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಕಮ್ಮಿ ಎನ್ನುತ್ತಾರೆ ಮನೀಜಾ ಅಹುಜಾ.

ಕಮಲಾ ಹ್ಯಾರಿಸ್ ಸ್ಟ್ರಾಂಗ್ ಅಭ್ಯರ್ಥಿ ಎಂದು ನನಗನಿಸುವುದಿಲ್ಲ

ಕಮಲಾ ಹ್ಯಾರಿಸ್ ಸ್ಟ್ರಾಂಗ್ ಅಭ್ಯರ್ಥಿ ಎಂದು ನನಗನಿಸುವುದಿಲ್ಲ

ಕಮಲಾ ಹ್ಯಾರಿಸ್ 19.10.1964, ಇದು ಮಿಥುನ ರಾಶಿಯ ಲಗ್ನ. ಐದನೇ ಸ್ಥಾನದಲ್ಲಿ ಸೂರ್ಯನಿದ್ದಾನೆ, ರಾಹು-ಬುಧ ಗ್ರಹಗತಿ ಸದ್ಯ ಇವರ ಜಾತಕದ ಪ್ರಕಾರ ನಡೆಯುತ್ತಿದೆ. ಮೀನ ರಾಶಿ ಹತ್ತನೇ ಮನೆಯಲ್ಲಿದ್ದಾನೆ. ರಾಹು ಮಹಾದಶ ಚಾಲ್ತಿಯಲ್ಲಿದೆ. ಇದು, ಕಮಲಾ ಅವರಿಗೆ ಸೂಕ್ತವಾದದಲ್ಲ. ಹಾಗಾಗಿ, ಕಮಲಾ ಹ್ಯಾರಿಸ್ ಸ್ಟ್ರಾಂಗ್ ಅಭ್ಯರ್ಥಿ ಎಂದು ನನಗನಿಸುವುದಿಲ್ಲ. ಹಾಗಾಗಿ, ಟ್ರಂಪ್ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಮನೀಜಾ ಅಹುಜಾ ಭವಿಷ್ಯ ನುಡಿದಿದ್ದಾರೆ.

English summary
USA President Election Prediction: Who Will Win, Donald Trump Or Joe Biden / Kamala Harris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X