• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗಾದಿಯ ಶ್ರೀವಿಕಾರಿನಾಮ ಸಂವತ್ಸರದ ರಾಶಿ ಫಲ

By ಹರಿ ಶಾಸ್ತ್ರಿ ಗುರೂಜಿ
|

ಶ್ರೀವಿಕಾರಿ ನಾಮ ಸಂವತ್ಸರ ಶುಭಾಶಯಗಳು. ಹೊಸ ಸಂವತ್ಸರ, ಹೊಸ ವಿಚಾರ. ಸಮೃದ್ಧಿ, ಸಂತೋಷಕ್ಕೆ ನಾಂದಿ ಆಗಲಿ ಎಂದು ಹಾರೈಸುತ್ತಾ ಯುಗಾದಿ ಫಲವನ್ನು ಇಲ್ಲಿ ತಿಳಿಸುತ್ತಿದ್ದೇನೆ. ಈ ಸಂವತ್ಸರದ ಆರಂಭದಲ್ಲಿ ಅಂದರೆ ಏಪ್ರಿಲ್ ಇಪ್ಪತ್ತೆರಡರ ತನಕ ಧನುಸ್ಸು ರಾಶಿಯಲ್ಲಿ ಗುರು ಸಂಚರಿಸುತ್ತಾನೆ. ಈ ಅವಧಿಯಲ್ಲಿ ಶನಿ ಹಾಗೂ ಕೇತು ಗ್ರಹಗಳು ಕೂಡ ಅದೇ ಮನೆಯಲ್ಲಿ ಇರುತ್ತವೆ.

ಆ ನಂತರ ಏಪ್ರಿಲ್ ಇಪ್ಪತ್ಮೂರನೇ ತಾರೀಕಿನಿಂದ ನವೆಂಬರ್ ಐದನೇ ತಾರೀಕಿನ ತನಕ ವೃಶ್ಚಿಕ ರಾಶಿಯಲ್ಲೇ ಗುರು ಗ್ರಹ ಸಂಚಾರ ಇರುತ್ತದೆ. ಆ ನಂತರ ಈ ಸಂವತ್ಸರದ ಅಂತ್ಯದ ತನಕ ಧನು ರಾಶಿಯಲ್ಲೇ ಗುರು ಸಂಚಾರ ಇರುತ್ತದೆ. ಇನ್ನು ಮುಂದಿನ ವರ್ಷದ ಜನವರಿ ಇಪ್ಪತ್ನಾಲ್ಕರ ತನಕ ಧನು ರಾಶಿಯಲ್ಲಿ ಸಂಚರಿಸುವ ಶನಿಯು, ಆ ನಂತರ ಮಕರ ರಾಶಿ ಪ್ರವೇಶಿಸಿ ಸಂವತ್ಸರದ ಅಂತ್ಯದ ತನಕ ಅದೇ ಮನೆಯಲ್ಲಿ ಇರುತ್ತದೆ.

ಯುಗಾದಿ ವಿಶೇಷ: ಮೇಷದಿಂದ ಮೀನ ರಾಶಿ ತನಕ ಯಾರಿಗೆ, ಯಾವ ಫಲ?

ಶನಿ ಹಾಗೂ ಗುರು ಪ್ರಮುಖ ಗ್ರಹಗಳಾದ್ದರಿಂದ ಅವೆರಡು ಗ್ರಹಗಳ ಸಂಚಾರದ ಆಧಾರದಲ್ಲಿ ಯುಗಾದಿ ಫಲವನ್ನು ಹೇಳುವ ರೂಢಿ ಇದೆ. ಆದರೆ ಯಾವುದೇ ವ್ಯಕ್ತಿಯು ತನ್ನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿಯೇ ಪ್ರಮುಖ ನಿರ್ಧಾರ ಕೈಗೊಳ್ಳಬೇಕು. ದಶಾ-ಭುಕ್ತಿ ಕಾಲಗಳು ಬಹಳ ಮುಖ್ಯವಾಗುತ್ತವೆ. ಈ ಸಂವತ್ಸರದ ಮೇಷದಿಂದ ಕನ್ಯಾ ರಾಶಿ ತನಕದ ಗೋಚಾರ ಫಲವನ್ನು ಮೊದಲನೇ ಕಂತಿನಲ್ಲಿ ನೀಡಲಾಗುತ್ತಿದೆ. ಮುಂದೆ ಓದಿ.

ಮೇಷ: ಸಂವತ್ಸರದ ಆರಂಭದಲ್ಲೇ ಶುಭ ಕಾರ್ಯ ಮುಗಿಸಿಕೊಳ್ಳಿ

ಮೇಷ: ಸಂವತ್ಸರದ ಆರಂಭದಲ್ಲೇ ಶುಭ ಕಾರ್ಯ ಮುಗಿಸಿಕೊಳ್ಳಿ

ನಿಮಗೆ ಯುಗಾದಿ ಆರಂಭದಿಂದ ಹದಿನೆಂಟು ದಿನಗಳ ಕಾಲ ಅಂದರೆ ತೀರಾ ಅಲ್ಪಾವಧಿಯಲ್ಲಿ ಅನುಕೂಲಕರವಾದ ಸನ್ನಿವೇಶ ಒದಗಿ ಬರುತ್ತದೆ. ಆಗ ಮನೆ, ಕಾರು, ಒಡವೆ-ವಸ್ತ್ರ ಖರೀದಿ ಇತ್ಯಾದಿಗಳನ್ನು ಮಾಡಿ ಮುಗಿಸಿಕೊಂಡು ಬಿಡಿ. ಆದರೂ ನಿಮಗೆ ದಾರಿ ತಪ್ಪಿಸುವವರು ಕೂಡ ಜತೆಯಲ್ಲೇ ಇರುತ್ತಾರೆ ಜೋಪಾನವಾಗಿ ಇರಬೇಕು. ಅದೆಷ್ಟೇ ಶ್ರಮ ಹಾಕಿದ ಕೆಲಸವೂ ಕೊನೆ ಕ್ಷಣಗಳಲ್ಲಿ ಪೂರ್ತಿ ಆಗಬಹುದಾ ಎಂಬ ಆತಂಕ ಎದುರಾಗುತ್ತದೆ. ಅದನ್ನು ಮೀರುವುದು ಮುಖ್ಯ. ಏಪ್ರಿಲ್ ನಂತರ ಎಂಟನೇ ಮನೆಯ ಗುರು, ಒಂಬತ್ತನೇ ಮನೆಯ ಶನಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಆತಂಕ ಉಂಟು ಮಾಡುವ ಸಾಧ್ಯತೆ ಇದೆ. ನವೆಂಬರ್ ನಲ್ಲಿ ಗುರುವು ಒಂಬತ್ತನೇ ಮನೆ ಹಾಗೂ ಮುಂದಿನ ವರ್ಷದ ಜನವರಿಯಲ್ಲಿ ಶನಿಯು ಹತ್ತನೇ ಮನೆ ಪ್ರವೇಶ ಮಾಡಿ ಸಂವತ್ಸರದ ಕೊನೆಯ ತನಕ ಅಲ್ಲೇ ಇರುತ್ತಾರೆ. ಈ ಸಂದರ್ಭದಲ್ಲಿ ಉದ್ಯೋಗ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮೇಲೆ ಈರ್ಷ್ಯೆ ಪಡುವವರಿಂದ ಸಮಸ್ಯೆಗಳು ಎದುರಾಗುತ್ತವೆ. ಯಾವುದೇ ಕಾರಣಕ್ಕೂ ಕೆಲಸ ಬಿಟ್ಟು ವ್ಯಾಪಾರ-ವ್ಯವಹಾರ ಮಾಡಲು ಮುಂದಾಗಬೇಡಿ. ಹಾಗೊಂದು ವೇಳೆ ಮಾಡಬೇಕು ಎಂದಿದ್ದರೆ ಕಡ್ಡಾಯವಾಗಿ ನಿಮ್ಮ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿ. ಸುಬ್ರಹ್ಮಣ್ಯನ ಆರಾಧನೆ ಮಾಡಿ, ದೋಷ- ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ.

ಮೇಷ ರಾಶಿಯವರ ಗುಣ-ಸ್ವಭಾವ, ಅದೃಷ್ಟ ರತ್ನ, ದಿನಾಂಕ, ದೇವತೆಗಳು

ವೃಷಭ: ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧ ದೊರಕಬಹುದು

ವೃಷಭ: ಪ್ರಾಪ್ತ ವಯಸ್ಕರಿಗೆ ವಿವಾಹ ಸಂಬಂಧ ದೊರಕಬಹುದು

ಈ ಸಂವತ್ಸರ ಸಮತೋಲನದ ಫಲ ನೀಡುತ್ತದೆ. ಯುಗಾದಿ ಆರಂಭದಲ್ಲಿ ಕೆಲ ದಿನಗಳ ಮಟ್ಟಿಗೆ ಎಂಟನೇ ಮನೆಯಲ್ಲೇ ಶನಿ, ಗುರು, ಕೇತು ಹಾಗೂ ದ್ವಿತೀಯದಲ್ಲಿ ರಾಹು ಇರುವುದರಿಂದ ಆರೋಗ್ಯ, ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಹಿನ್ನಡೆ, ಚಿಂತೆ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಶತ್ರುಗಳ ಬಾಧೆ ಹೀಗೆ ನಾನಾ ಬಗೆಯ ಅಶುಭ ಫಲಗಳಿವೆ. ಆ ನಂತರ ನವೆಂಬರ್ ಮೊದಲ ವಾರದ ತನಕ ಏಳನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಚೇತರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವೈವಾಹಿಕ ಜೀವನದಲ್ಲಿ ಸಂತೋಷ, ಪ್ರಾಪ್ತ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುತ್ತದೆ. ಆದರೆ ಮುಂದಿನ ವರ್ಷದ ಜನವರಿ ತನಕ ಅಷ್ಟಮದಲ್ಲಿ ಶನಿ ಸಂಚರಿಸುವುದರಿಂದ ಕಡ್ಡಾಯವಾಗಿ ದೂರ ಪ್ರಯಾಣ ಮಾಡಬಾರದು. ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಆ ನಂತರ ಒಂಬತ್ತನೇ ಮನೆಯಲ್ಲಿ ಶನಿ ಹಾಗೂ ಎಂಟನೇ ಸ್ಥಾನದಲ್ಲಿ ಗುರು ಸಂಚಾರ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು, ಯತ್ನ ಕಾರ್ಯಗಳಲ್ಲಿ ಅಡೆತಡೆ, ನಯ ವಂಚಕರ ಉಪಟಳ ಕಾಡುವ ಸಾಧ್ಯತೆ ಇದೆ. ಕೋರ್ಟ್ ವ್ಯವಹಾರಗಳನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳಬೇಡಿ. ರಾಜಿ-ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಶನಿ-ಗುರು ಗ್ರಹಗಳ ಶಾಂತಿ, ಆರಾಧನೆ ಮಾಡಿ.

ಏಪ್ರಿಲ್ 2019 - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ

ಮಿಥುನ: ವಿದೇಶದಲ್ಲಿ ವ್ಯಾಪಾರ ಆರಂಭಿಸಲು ಅವಕಾಶ ದೊರೆಯುತ್ತದೆ

ಮಿಥುನ: ವಿದೇಶದಲ್ಲಿ ವ್ಯಾಪಾರ ಆರಂಭಿಸಲು ಅವಕಾಶ ದೊರೆಯುತ್ತದೆ

ಯುಗಾದಿ ಆರಂಭದಲ್ಲಿ ದಂಪತಿ ಮಧ್ಯ ಉತ್ತಮ ಬಾಂಧವ್ಯ ಇರುತ್ತದೆ. ವೃಥಾ ಸುತ್ತಾಟ, ಖರ್ಚು ಹೆಚ್ಚಾಗಿರುತ್ತದೆ. ಆ ನಂತರ ನವೆಂಬರ್ ತನಕ ಆರನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಶತ್ರು ಬಾಧೆ ಇರುತ್ತದೆ. ಸಂಗಾತಿ ಜತೆಗೆ ಅನಗತ್ಯ ವಾದ-ವಿವಾದ ಬೇಡ. ನವೆಂಬರ್ ನಂತರ ಗುರು ಗ್ರಹವು ಧನುಸ್ಸು ರಾಶಿಯನ್ನು ಪ್ರವೇಶ ಮಾಡುವುದರಿಂದ ಉತ್ತಮ ಫಲಗಳನ್ನು ಕಾಣಬಹುದು. ಪಾರ್ಟ್ ನರ್ ಷಿಪ್ ವ್ಯವಹಾರಗಳು ಲಾಭದಾಯಕ ಆಗುತ್ತವೆ. ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಸಂಗಾತಿಯ ಸಲುವಾಗಿ ಒಡವೆ-ವಸ್ತ್ರಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ವಿದೇಶದಲ್ಲಿ ಸಂಸ್ಥೆಗಳನ್ನು ಆರಂಭ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಅನುಕೂಲಕರವಾದ ಸನ್ನಿವೇಶ ನಿರ್ಮಾಣ ಆಗುತ್ತದೆ. ಆದರೆ ಜನವರಿಯಲ್ಲಿ ಶನಿಯು ಮಕರ ರಾಅಶಿ ಪ್ರವೇಶಿಸಿದ ಮೇಲೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಜೀರ್ಣಾಂಗ ಸಮಸ್ಯೆ, ಮೀನ ಖಂಡ, ಜಠರ, ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಪ್ತರ ಅಗಲಿಕೆಯಿಂದ ನೋವುಂಟಾಗಲಿದೆ. ಕೊಟ್ಟಿದ್ದ ಮಾತು ಉಳಿಸಿಕೊಳ್ಳಲು ಆಗದೆ ಅವಮಾನದ ಪಾಲಾಗುವ ಸಾಧ್ಯತೆಗಳಿವೆ. ಗುರುಗಳ ಆರಾಧನೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಎದುರಿಸುವ ಶಕ್ತಿ ನಿಮಗೆ ದೊರೆಯುತ್ತದೆ.

ಮಿಥುನ ರಾಶಿಯ ಅದ್ಭುತ ಶಕ್ತಿ ಬಗ್ಗೆ ನಿಮಗೆಷ್ಟು ಗೊತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ಕಾಟಕ: ಭವಿಷ್ಯಕ್ಕಾಗಿ ಉಳಿತಾಯ ಮಾಡಿಕೊಳ್ಳಿ

ಕರ್ಕಾಟಕ: ಭವಿಷ್ಯಕ್ಕಾಗಿ ಉಳಿತಾಯ ಮಾಡಿಕೊಳ್ಳಿ

ಈ ಸಂವತ್ಸರದ ಆರಂಭದಲ್ಲಿ ಗುರುವಿನ ಪ್ರಭಾವದಿಂದ ವೃತ್ತಿ ಮಾತ್ಸರ್ಯ ಎದುರಿಸಬೇಕಾಗುತ್ತದೆ. ತೀವ್ರ್ ತಲೆ ಶೂಲೆ, ಮೈಗ್ರೇನ್, ಡಿಪ್ರೆಷನ್ ನಂಥ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ನಿಮ್ಮ ಶ್ರಮದ ಮೂಲಕ ಬಾಕಿ ಬರಬೇಕಾದ ಹಣ ವಾಪಸ್ ಬರುವ ಸಾಧ್ಯತೆ ಇದೆ. ಆದರೆ ಸಟ್ಟಾ ವ್ಯವಹಾರಗಳಲ್ಲಿ ಹಣ ತೊಡಗಿಸಿ ಅಥವಾ ಹೆಚ್ಚಿನ ಬಡ್ಡಿ ಆಸೆಗೆ ಹಣ ಕೊಟ್ಟು ಕಳೆದುಕೊಳ್ಳುವ ಸಾಧ್ಯತೆ ಇದೆ. ಜೂಜಿನ ಅಭ್ಯಾಸ ಇಲ್ಲದಿದ್ದರೂ ಅ ಕಡೆ ಮನಸು ಸೆಳೆಯುವ ಸಾಧ್ಯತೆ ಇದೆ. ಆರಂಭದಲ್ಲಿ ಸ್ವಲ್ಪ ಹಣ ಬಂದಂತೆ ಕಂಡುಬಂದರೂ ನಂತರದಲ್ಲಿ ದೊಡ್ಡ ಮಟ್ಟದ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಆದರೆ ನವೆಂಬರ್ ತನಕ ಯಾವುದೇ ದೊಡ್ಡ ಮಟ್ಟದ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಮುಂದಿನ ವರ್ಷದ ಜನವರಿಯಲ್ಲಿ ಮಕರ ರಾಶಿಗೆ ಶನಿಯು ಪ್ರವೇಶಿಸಿದ ಮೇಲೆ ಸಂಗಾತಿ ಆರೋಗ್ಯದಲ್ಲಿ ಏರುಪೇರಾಗಿ, ಚಿಂತೆಗೆ ಕಾರಣ ಆಗಲಿದೆ. ಅದೇ ವೇಳೆ ನಿಮ್ಮ ಮೇಲೆ ಸಲ್ಲದ ಅಪವಾದ ಬರಬಹುದು. ಬೇಡದ ಸ್ಥಳಗಳಿಗೆ ವರ್ಗಾವಣೆ ಆಗಬಹುದು. ಮುಖ್ಯವಾಗಿ ಜನವರಿ ನಂತರ ತಾಳ್ಮೆಯಿಂದ ಇರಬೇಕಾಗುತ್ತದೆ. ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಶತ್ರುತ್ವ ಕಟ್ಟಿಕೊಳ್ಳಬೇಡಿ. ನವೆಂಬರ್ ತನಕ ಎಷ್ಟು ಉಳಿತಾಯ ಮಾಡಲು ಸಾಧ್ಯವೋ ಅಷ್ಟು ಮಾಡಿಕೊಂಡು ಬಿಡಿ. ಹೊಸದಾಗಿ ಸಾಲ ಹಾಗೂ ಪಾರ್ಟನರ್ ಷಿಪ್ ವ್ಯಾಪಾರ ಆರಂಭಿಸುವುದು ಬೇಡ.

ಸಿಂಹ: ಮನೆ, ವಾಹನ, ಹೊಸ ಕಚೇರಿ ಆರಂಭ ಇತ್ಯಾದಿ ಮಾಡಬಹುದು

ಸಿಂಹ: ಮನೆ, ವಾಹನ, ಹೊಸ ಕಚೇರಿ ಆರಂಭ ಇತ್ಯಾದಿ ಮಾಡಬಹುದು

ಉದ್ಯೋಗದಲ್ಲಿ ಬದಲಾವಣೆ ಎದುರು ನೋಡುತ್ತಿರುವವರಿಗೆ ಯುಗಾದಿಯ ಆರಂಭದಲ್ಲಿ ಒಂದು ಅವಕಾಶ ದೊರೆಯುತ್ತದೆ. ಈ ಅವಧಿಯಲ್ಲಿ ಕೆಲಸ ಬದಲಾಯಿಸಿಕೊಳ್ಳುವುದಾದರೆ ಉತ್ತಮ. ಆದರೆ ಉದ್ಯೋಗ ಬಿಟ್ಟು ಹುಡುಕುವುದು ಬೇಡ. ನವೆಂಬರ್ ಕಳೆದ ನಂತರ ಸಕಾರಾತ್ಮಕ ಬದಲಾವಣೆಗಳು ಕಾಣುತ್ತಾ ಸಾಗುತ್ತೀರಿ. ಮುಂದಿನ ವರ್ಷದ ಜನವರಿ ನಂತರ ನಿಮ್ಮ ಪಾಲಿಗೆ ಅತ್ಯುತ್ತಮ ಸಮಯ. ಷೇರು ವ್ಯವಹಾರಗಳಲ್ಲಿ ತೊಡಗಿರುವವರು ಮೇ ತಿಂಗಳಿಂದ ನವೆಂಬರ್ ತನಕ ಎಚ್ಚರಿಕೆಯಿಂದ ಇರಿ. ಹನ್ನೊಂದನೇ ಮನೆಯ ರಾಹು ವಿಪರೀತ ಧೈರ್ಯವನ್ನು ಕೊಟ್ಟು, ಸಾಲಕ್ಕೆ ದೂಡುವ ಅಪಾಯಗಳಿವೆ. ವಿವೇಕದಿಂದ ಮುಂದಕ್ಕೆ ಹೆಜ್ಜೆಗಳನ್ನು ಇರಿಸಿ. ಆರೋಗ್ಯ ವಿಚಾರದಲ್ಲಿ, ಮಕ್ಕಳ ಬಗ್ಗೆ ತುಂಬ ಜಾಗ್ರತೆಯಿಂದ ಇರಬೇಕು. ಮಕ್ಕಳಿಂದ ನಿಮಗೆ ಕೆಟ್ಟ ಹೆಸರು ಬರುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಇನ್ನೊಬ್ಬರು ಮಾಡಿದ ಕೆಲಸದ ಶ್ರೇಯವನ್ನು ನೀವು ಮೋಸದಿಂದ ಪಡೆಯಲು ಯತ್ನಿಸಬೇಡಿ. ಹಾಗೆ ಮಾಡಿದಲ್ಲಿ ಅವಮಾನಕ್ಕೆ ಗುರಿಯಾಗುತ್ತೀರಿ. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಈ ವರ್ಷದ ನವೆಂಬರ್ ನಂತರ ಶುಭ ಸುದ್ದಿ ಕೇಳುವ ಯೋಗಗಳಿವೆ. ಜನವರಿ ನಂತರ ಮನೆ, ವಾಹನ ಖರೀದಿ, ಹೊಸ ಕಚೇರಿ ಆರಂಭ ಇತ್ಯಾದಿಗಳನ್ನು ಮಾಡಬಹುದು. ಶನಿ-ಗುರು ಆರಾಧನೆ ಮಾಡಿ.

ಕನ್ಯಾ: ಬೇರೆಯವರ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ

ಕನ್ಯಾ: ಬೇರೆಯವರ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ

ನಿಮ್ಮ ಮಾತು ನಿಮಗೆ ವೈರಿ ಆಗುವ ಸಂವತ್ಸರ ಇದು. ಗುರು-ಹಿರಿಯರ ಬಗ್ಗೆ ಗೌರವ ಇರಲಿ. ಸಾರ್ವಜನಿಕವಾಗಿ ಅಪಮಾನಕ್ಕೆ ಗುರಿ ಆಗುವ ಸಾಧ್ಯತೆಗಳಿವೆ. ಆಲಸ್ಯ ಮಾಡಿಕೊಂಡು ಆದಾಯಕ್ಕೆ ಕಲ್ಲು ಬೀಳಬಹುದು, ಎಚ್ಚರ ಇರಲಿ. ಹಗಲುಕನಸು ಕಾಣುವುದನ್ನು ಬಿಡಬೇಕು. ನಿಮ್ಮನ್ನು ಹೊಗಳುವವರ ಹಿಂದಿನ ಉದ್ದೇಶವನ್ನು ಗ್ರಹಿಸಿ. ನಿಮ್ಮದೇ ಹೆಸರನ್ನು ಬಳಸಿಕೊಂಡು ಇತರರು ಲಾಭ ಮಾಡಿಕೊಳ್ಳುತ್ತಾರೆ. ಇದೇ ವೇಳೆ ನಿಮಗೆ ಕೆಟ್ಟ ಹೆಸರು ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಚಾಡಿ ಹೇಳುವವರಿಂದ ಕಿರಿಕಿರಿ ಉಂಟಾಗುತ್ತದೆ. ನಿಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡುವ ಸಲುವಾಗಿ ಕಷ್ಟದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯುಗಾದಿ ಆರಂಭದಲ್ಲಿ ಸುಸ್ತು, ತಲೆ ಸುತ್ತು, ಪಿತ್ತದ ಸಮಸ್ಯೆಗಳು ಎದುರಾದರೆ ವೈದ್ಯರ ಬಳಿ ಕೂಡಲೇ ತೆರಳಿ, ಚಿಕಿತ್ಸೆ ಪಡೆದುಕೊಳ್ಳಿ. ಇನ್ನು ಸೋದರ-ಸೋದರಿಯರ ಜತೆ ಆಸ್ತಿ ವ್ಯಾಜ್ಯ ಅಥವಾ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಲ್ಲಿ ಸಮಾಧಾನವಾಗಿ ಕೂತು ಬಗೆಹರಿಸಿಕೊಳ್ಳಿ. ಜನವರಿ ನಂತರ ಯಾವುದೇ ಪ್ರಮುಖ ತೀರ್ಮಾನ ಮಾಡುವ ಮುನ್ನ ಪೂರ್ವಾಪರ ಯೋಚಿಸಿ. ನೀವು ಜಾಮೀನಾಗಿ ನಿಂತು ಯಾರಿಗೂ ಸಾಲ ಕೊಡಿಸಬೇಡಿ. ಉದ್ಯೋಗ ಬದಲಾವಣೆ ಮಾಡಬೇಡಿ.

ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.

(ಮುಂದುವರಿಯುವುದು)

English summary
Here is an Ugadi Varsha Phal for Aries to Virgo. Sri Vikari Nama Samvatsar varsha phal in Kannada by well known astrologer Hari Shastri Guruji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more