ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೂತ ಹೆಣಗಳು ಪ್ರೇತವಾಗಿ ಎದ್ದು ಮಾತಾಡುತ್ತವೆ': ಕೋಡಿಮಠದ ಶ್ರೀಗಳ ಭಯಂಕರ ಭವಿಷ್ಯವಾಣಿ

|
Google Oneindia Kannada News

ಗೊತ್ತಿಲ್ಲದಿರುವಂತಹ, ಔಷಧಿ ಇಲ್ಲದಂತಹ ಕಾಯಿಲೆಗಳು ಭಾರೀ ಪ್ರಭಾವವನ್ನು ಬೀರುತ್ತದೆ ಎಂದು ಎರಡು ವರ್ಷದ ಹಿಂದೆನೇ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು, ಮತ್ತೆ ಭವಿಷ್ಯವನ್ನು ನುಡಿದಿದ್ದಾರೆ.

ಕೊರೊನಾ ಮೊದಲನೇ ಅಲೆಯ ವಿಚಾರದಲ್ಲಿ ಭವಿಷ್ಯ ನುಡಿದಿದ್ದ ಶ್ರೀಗಳು, ಕಾರ್ತಿಕ, ಅಶ್ವಯುಜ ಮಾಸಗಳಲ್ಲಿ ಇದರ ಪ್ರಭಾವ ಕಮ್ಮಿಯಾಗುತ್ತಾ ಸಾಗುತ್ತದೆ ಎಂದು ಕಳೆದ ಯುಗಾದಿಯ ವೇಳೆಯೇ ಹೇಳಿದ್ದರು.

ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!ಕೊರೊನಾ, 'ನಿಟ್ಟುಸಿರು': 18,341 ರಿಂದ 61,766ರ ವರೆಗೆ, ದಾಖಲೆ!

ಈಗ, ಕೊರೊನಾ ಎರಡನೇ ಅಲೆಯ ವಿಚಾರದಲ್ಲೂ ಭವಿಷ್ಯವಾಣಿ ನುಡಿದಿರುವ ಶ್ರೀಗಳು, ಸದ್ಯದಲ್ಲೇ ಇದರ ಹಾವಳಿ ತಪ್ಪಲಿದೆ ಎಂದು ಹೇಳಿದ್ದಾರೆ. ಆದರೆ, ಮುಂದೆ ಕಾದಿದೆ ಮಾರಿಹಬ್ಬ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

 2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು 2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು

ಗಮನಿಸಬೇಕಾದ ವಿಚಾರ ಏನಂದರೆ, ಕಳೆದ ಕಾರ್ತಿಕ ಮಾಸದಲ್ಲಿ ಕೊರೊನಾ ಮೊದಲನೇ ಕಮ್ಮಿಯಾಗುತ್ತದೆ ಎಂದು ಕೋಡಿಶ್ರೀಗಳು, ಮುಂಬರುವ ಕಾರ್ತಿಕದಲ್ಲಿ ದೇಶಕ್ಕೆ ಹೊಸ ಸಮಸ್ಯೆ/ಕಾಯಿಲೆ ಎದುರಾಗಲಿದೆ ಎಂದು ಹೇಳಿರುವುದು ಜ್ಯೋತಿಷ್ಯ ಶಾಸ್ತ್ರ ನಂಬುವವರನ್ನು ಆತಂಕಕ್ಕೆ ದೂಡಿದೆ. ಕೋಡಿಶ್ರೀಗಳು ಹೇಳಿದ್ದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ

ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ

ಕೊರೊನಾ ಎನ್ನುವ ಕಾಯಿಲೆ ಏನು ವಿಶ್ವವನ್ನು ಕಾಡುತ್ತಿದೆಯೋ ಅದು ಸಂಪೂರ್ಣ ಹೋಗಲು ಇನ್ನು ಹತ್ತು ವರ್ಷ ಬೇಕಾದೀತು. ಆದರೆ, ಈಗಿನ ಕಾಯಿಲೆ ಜೂನ್ ಇಪ್ಪತ್ತರ ಮೇಲೆ ಕಮ್ಮಿಯಾಗುತ್ತಾ ಬರುತ್ತದೆ. ಈಗ ಬಂದಿರುವ ರೋಗವನ್ನು ನಾವು ಗಂಟಲು ಬೇನೆ ಎಂದು ಕರೆಯುತ್ತಿದ್ದೆವು. ಯಾವಾಗ ಮನುಷ್ಯನಲ್ಲಿ ಸ್ವಚ್ಚತೆ ಹೋಯಿತೋ ಆಗ ಇಂತಹ ಕಾಯಿಲೆಗಳು ಕಫ, ಪಿತ್ತ, ವಾತ ರೀತಿಯಲ್ಲಿ ಮನುಷ್ಯನನ್ನು ಆವರಿಸುತ್ತದೆ - ಕೋಡಿಮಠದ ಶ್ರೀಗಳು

 ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ

ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ

ಕಾಯಿಲೆಗಳು ಮಾರಕವಾಗದಿದ್ದರೂ, ಮನುಷ್ಯ ತನ್ನ ನಿಯಂತ್ರಣ ತಪ್ಪಿದಾಗ ಇಂತಹ ಕಾಯಿಲೆಗಳು ಜನರನ್ನು ಕಾಡಲು ಆರಂಭಿಸುತ್ತದೆ. ಮುಂದಿನ ದಿನಗಳಲ್ಲಿ ಇನ್ನೊಂದು ಅಲೆ ಎದುರಾಗಲಿದೆ. ಸಾವಿರಾರು ಸಾವುಗಳಾಗಿವೆ, ಎಲ್ಲರೂ ಮೆಡಿಶಿನ್ ಹಾಕಿ ಸತ್ತು ಹೋದವರು. ಇದರ ವಿಷ ಭೂಮಿಯನ್ನು ಸೇರುತ್ತಿದೆ, ಅದು ಹೊರಗೆ ಬರುತ್ತದೆ - ಕೋಡಿಮಠದ ಶ್ರೀಗಳು.

 ಕುಂಭ ರಾಶಿಯಲ್ಲಿ ಗುರು ಬಂದರೆ ಆ ವರ್ಷವೆಲ್ಲಾ ಮಳೆಬೆಳೆ ಜಾಸ್ತಿಯಾಗುತ್ತೆ

ಕುಂಭ ರಾಶಿಯಲ್ಲಿ ಗುರು ಬಂದರೆ ಆ ವರ್ಷವೆಲ್ಲಾ ಮಳೆಬೆಳೆ ಜಾಸ್ತಿಯಾಗುತ್ತೆ

ಹೋದ ಹೊತ್ತಲ್ಲೇ ಸತ್ತ, ಬಿದ್ದ ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು. ಅಂತಹ ಕಾಯಿಲೆ ಮುಂದೆ ಬರುತ್ತದೆ, ಕುಂಭದಲ್ಲಿ ಗುರು ಬರಲು, ತುಂಬೋ ಕೆರೆಕಟ್ಟೆ ಶಂಭವಿನ ಪದಶಾಕ್ಷಿ ಡಬ್ಬವೆನಿಸಬೇಡಿ ಎನ್ನುವ ಪದ ನಮ್ಮಲ್ಲಿ ಬಳಕೆಯಲ್ಲಿದೆ. ಜ್ಯೋತಿಷ್ಯದಲ್ಲಿ ಕುಂಭ ರಾಶಿಯಲ್ಲಿ ಗುರು ಬಂದರೆ ಆ ವರ್ಷವೆಲ್ಲಾ ಮಳೆಬೆಳೆ ಜಾಸ್ತಿಯಾಗುತ್ತೆ - ಕೋಡಿಮಠದ ಶ್ರೀಗಳು.

Recommended Video

Rohini Sindhuri ಯಂತಹ ದುರಂಹಕಾರಿ DC ಯಾರಿಗೂ ಸಿಗೋದು ಬೇಡ | Shilpa Nag | Oneindia Kannada
 ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ

ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ

ಕಾರ್ತಿಕದ ವರೆಗೂ ಮಳೆ ಸುರಿಯುತ್ತೆ, ಮಳೆ ಬಂದರೆ ಶೀತ, ಇದು ಈಗಿನ ಕಾಯಿಲೆಯ ಸ್ನೇಹಿತ. ಜಗತ್ತಿಗೆ ಅಪಾಯಕಾರಿ ಸನ್ನಿವೇಶ ಎದುರಾಗಲಿದೆ, ದೊಡ್ಡದೊಡ್ಡ ತಲೆಗಳು ಉರುಳಲಿವೆ, ರಾಜಕೀಯ ವಿಪ್ಲವವಾಗಲಿದೆ. ಸಾಮೂಹಿಕ ಸಾವುನೋವುಗಳು ಆಗುತ್ತವೆ, ಹೂತ ಹೆಣಗಳು ಎದ್ದು ಮಾತಾಡುತ್ತಾವೆ. ಪ್ರೇತಗಳ ಭಾದೆ ಎದುರಾಗಲಿದೆ - ಕೋಡಿಮಠದ ಶ್ರೀಗಳು.

English summary
Tough Days Ahead After Karthika Masa, Kodimutt Seer Prediction On Health And Other Issues
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X