ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಮೂನ್: ಮೇಷ, ತುಲಾ ರಾಶಿಯವರು ಎಚ್ಚರವಾಗಿರಿ!

By ಪಂಡಿತ್ ವಿಠ್ಠಲ್ ಭಟ್
|
Google Oneindia Kannada News

ಈ ದಿನ (ಸೋಮವಾರ, ನವೆಂಬರ್ 14) ಆಗಸದಲ್ಲಿ ಕಾಣುವ ದೊಡ್ಡ-ಪ್ರಕಾಶಮಾನ ಚಂದ್ರನಿಂದ ಯಾವ ರಾಶಿಯವರಿಗೆ ತೊಂದರೆ? ಎಂಬ ಪ್ರಶ್ನೆಯಂತೂ ಹಲವರ ಮನಸ್ಸಿನಲ್ಲಿದೆ. ಅದಕ್ಕೆ ಉತ್ತರಿಸಿದ್ದಾರೆ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ್ ಭಟ್.

'ಸೂಪರ್ ಮೂನ್ ಬಗ್ಗೆ ತಿಳಿಯಬೇಕು ಅಂದರೆ ಜ್ಯೋತಿಷ್ಯದ ಪ್ರಕಾರ ಅಮಾವಾಸ್ಯೆ ಹಾಗೂ ಹುಣ್ಣಿಮೆ ಏನು ಅಂತ ತಿಳಿಯಬೇಕು. ಅಮಾವಾಸ್ಯೆ ಅಂದರೆ ರವಿ ಗ್ರಹ ಯಾವ ರಾಶಿಯಲ್ಲಿ ಇರುತ್ತದೋ ಅದೇ ರಾಶಿಗೆ ಚಂದ್ರ ಬಂದ ದಿನ. ಇನ್ನು ಹುಣ್ಣಿಮೆ ಅಂದರೆ ರವಿ ಗ್ರಹ ಇರುವ ರಾಶಿಯಿಂದ ಏಳನೇ ಮನೆಯಲ್ಲಿ ಚಂದ್ರ ಬಂದ ದಿನ.

'ಯಾವುದೇ ಗ್ರಹಕ್ಕೆ ಏಳನೇ ಮನೆ ಪೂರ್ಣ ದೃಷ್ಟಿ ಇರುತ್ತದೆ. ಅದೇ ರೀತಿ ಹುಣ್ಣಿಮೆ ದಿನ ರವಿ ಗ್ರಹದ ಪೂರ್ಣ ದೃಷ್ಟಿ ಚಂದ್ರನ ಮೇಲೆ ಬೀಳುತ್ತದೆ. ಚಂದ್ರನಿಗೆ ಮೂಲತಃ ಸ್ವತಂತ್ರವಾಗಿ ಬೆಳಕಿನ ಶಕ್ತಿ ಇಲ್ಲ. ಅಂದರೆ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರಕಾಶಿಸಬೇಕು ಅಷ್ಟೇ.[ಇಂದು ದೊಡ್ಡ ಚಂದಿರನ ನೋಡಿಬಿಡಿ, ಇಲ್ಲದಿದ್ದರೆ 16 ವರ್ಷ ಕಾಯ್ಬೇಕು!]

Pandit Vittal Bhat

'ಭೂಮಿಯ ಕಕ್ಷೆಗೆ ತುಂಬ ಹತ್ತಿರದಲ್ಲಿ ಸೋಮವಾರ (ನವೆಂಬರ್ 14) ಚಂದ್ರ ಬರುತ್ತಾನೆ. ಇನ್ನು ಸೂಪರ್ ಮೂನ್ ಬಗ್ಗೆ ವಿಜ್ಞಾನಿಗಳು ಹೆಚ್ಚು ಸಮರ್ಥವಾಗಿ ಉತ್ತರಿಸಬಲ್ಲರು. ಯಾಕೆಂದರೆ ಜ್ಯೋತಿಷ್ಯದ ಪ್ರಕಾರ ಎಲ್ಲ ರಾಶಿಯವರೆಗೆ ತುಂಬ ಮುಖ್ಯವಾದ ವಿದ್ಯಮಾನವೇನೂ ಇದಲ್ಲ. ಆದರೆ ಈ ದಿನ ಮೇಷ ಹಾಗೂ ತುಲಾ ರಾಶಿಗೂ ಅಂಥ ಉತ್ತಮವಲ್ಲ.[ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

Super moon

'ನವೆಂಬರ್ ಹದಿನಾಲ್ಕರಂದು ತುಲಾ ರಾಶಿಯಲ್ಲಿ ನೀಚನಾದ ರವಿ ಗ್ರಹವಿದೆ. ಮೇಷ ರಾಶಿಯಲ್ಲಿ ಚಂದ್ರನಿದ್ದಾನೆ. ಮೂಲತಃ ಚಂದ್ರನಿಗೆ ಸ್ವತಂತ್ರ ಗುಣವಿಲ್ಲ. ಚಂದ್ರ ಯಾವ ಗ್ರಹದ ಪ್ರಭಾವಕ್ಕೆ ಒಳಗಾಗುತ್ತನೋ ಅದರಂತೆ ವರ್ತನೆ ಇರುತ್ತದೆ. ಇಂದಿನ ಸನ್ನಿವೇಶದಲ್ಲಿ ನೀಚ ರವಿಯ ದೃಷ್ಟಿ ಚಂದ್ರನ ಮೇಲೆ ಬಿದ್ದಿರುವುದರಿಂದ ಮೇಷ ಹಾಗೂ ತುಲಾ ರಾಶಿಯವರಿಗೆ ಉತ್ತಮ ಸಮಯವಲ್ಲ. ಇನ್ನು ಎರಡು-ಮೂರು ದಿನ ಈ ಎರಡು ರಾಶಿಯವರು ಎಚ್ಚರವಾಗಿದ್ದರೆ ಒಳ್ಳೆಯದು.'

ಪಂಡಿತ್ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 9845682380.

English summary
It’s the November 14th super moon. Astrologer Pandit Vittal bhat explains astrological effect on Zodiac sign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X