ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 2ಕ್ಕೆ ಸೂರ್ಯ ಗ್ರಹಣ; ಕಡ್ಡಾಯವಾಗಿ ಅನುಸರಿಸಬೇಕಾದ ನಿಯಮಗಳೇನು?

By ಪಂಡಿತ್ ಶಂಕರ್ ಭಟ್
|
Google Oneindia Kannada News

ಜುಲೈ 2, 2019ರಂದು ಸಂಪೂರ್ಣ ಸೂರ್ಯ ಗ್ರಹಣ ಆಗಲಿದೆ. ಈ ಸೂರ್ಯ ಗ್ರಹಣವು ರಾತ್ರಿ 10.25ಕ್ಕೆ (ಭಾರತೀಯ ಕಾಲಮಾನ) ಸಂಭವಿಸಲಿದೆ. ಈ ಗ್ರಹಣವು 4.33 ನಿಮಿಷಗಳ ಕಾಲ ಸಂಭವಿಸಲಿದೆ. ಆ ಸಂದರ್ಭದಲ್ಲಿ ಸೂರ್ಯ ಸಂಪೂರ್ಣವಾಗಿ ಚಂದ್ರನ ನೆರಳಲ್ಲಿ ಮರೆಯಾಗುತ್ತದೆ. ಈ ಗ್ರಹಣವು ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಪೆಸಿಫಿಕ್ ಸಾಗರದಿಂದ ಗೋಚರವಾಗುತ್ತದೆ.

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಗ್ರಹಣದ ವೇಳೆ ಭೂಮಿಯಲ್ಲಿ ವಾತಾವರಣ ಕಲುಷಿತ ಆಗುತ್ತದೆ. ಆದ್ದರಿಂದ ಯಾವುದೇ ನಕಾರಾತ್ಮಕ ಅಡ್ಡ ಪರಿಣಾಮಗಳು ಸಂಭವಿಸಬಾರದು ಅಂದರೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನುಷ್ಯರ ದೇಹದ ಮೇಲೂ ಈ ಗ್ರಹಣದ ಪ್ರಭಾವ ಆಗುತ್ತದೆ ಎಂಬ ನಂಬಿಕೆ ಇದೆ. ಅದು ದೈಹಿಕ ಹಾಗೂ ಮಾನಸಿಕ ಪರಿಣಾಮ ಎರಡೂ ಹೌದು.

ಜುಲೈ 2ಕ್ಕೆ ಸಂಪೂರ್ಣ ಸೂರ್ಯ ಗ್ರಹಣ; 4 ನಿಮಿಷ 33 ಸೆಕೆಂಡ್ ಗಳ ಗ್ರಹಣ ಇದು ಜುಲೈ 2ಕ್ಕೆ ಸಂಪೂರ್ಣ ಸೂರ್ಯ ಗ್ರಹಣ; 4 ನಿಮಿಷ 33 ಸೆಕೆಂಡ್ ಗಳ ಗ್ರಹಣ ಇದು

ಸೂರ್ಯ ಗ್ರಹಣಕ್ಕೆ ಸಂಬಂಧಿಸಿದಂತೆ ಪಾಲನೆ ಮಾಡಬೇಕಾದದ್ದು ಹಾಗೂ ಆ ಅವಧಿಯಲ್ಲಿ ಏನು ಮಾಡಬಾರದು ಎಂಬ ವಿವರಣೆ ಇಲ್ಲಿದೆ.

ಗ್ರಹಣ ಸಮಯದಲ್ಲಿ ಪಾಲನೆ ಮಾಡಬೇಕಾದ ನಿಯಮ:

ಗ್ರಹಣದ ನಂತರ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡಿ

ಗ್ರಹಣದ ನಂತರ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡಿ

* ಗ್ರಹಣದ ನಂತರ ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಬೇಕು

* ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಒಂದು ವೇಳೆ ಬಂದರೆ ಗರ್ಭದಲ್ಲಿರುವ ಮಗುವಿಗೆ ತೊಂದರೆ ಆಗುತ್ತದೆ

ಸಿದ್ಧಪಡಿಸಿದ್ದ ಆಹಾರವನ್ನು ಗ್ರಹಣದ ನಂತರ ಬಳಸಬಾರದು

ಸಿದ್ಧಪಡಿಸಿದ್ದ ಆಹಾರವನ್ನು ಗ್ರಹಣದ ನಂತರ ಬಳಸಬಾರದು

* ಗ್ರಹಣದ ಮುಂಚೆ ಸಿದ್ಧಪಡಿಸಿದ್ದ ಆಹಾರವನ್ನು ಗ್ರಹಣ ಮೋಕ್ಷದ ನಂತರ ಬಳಸಬಾರದು. ಯಾವ ಆಹಾರ ಪದಾರ್ಥವನ್ನು ಬಿಸಾಡಲು ಸಾಧ್ಯವಿಲ್ಲವೋ ಅಂಥದ್ದಕ್ಕೆ ದರ್ಭೆ ಹಾಗೂ ತುಳಸಿ ಹಾಕಿಡಬೇಕು. (ಉದಾ: ತುಪ್ಪ, ಬೆಣ್ಣೆ, ಹಾಲು, ಮೊಸರು ಇತ್ಯಾದಿ)

ಹನ್ನೆರಡು ರಾಶಿಗಳ ಮೇಲೆ ಖಂಡಗ್ರಾಸ ಚಂದ್ರ ಗ್ರಹಣದ ಪ್ರಭಾವಹನ್ನೆರಡು ರಾಶಿಗಳ ಮೇಲೆ ಖಂಡಗ್ರಾಸ ಚಂದ್ರ ಗ್ರಹಣದ ಪ್ರಭಾವ

ಗ್ರಹಣದ ನಂತರ ದೇವರ ಆರಾಧನೆ

ಗ್ರಹಣದ ನಂತರ ದೇವರ ಆರಾಧನೆ

* ಗ್ರಹಣದ ನಂತರ ದೇವರ ಆರಾಧನೆ, ಧ್ಯಾನ, ದಾನ- ಧರ್ಮಾದಿಗಳು ಶ್ರೇಷ್ಠ

* ರವಿಗೆ ಸಂಬಂಧಿಸಿದ ಜಪ, ಮಂತ್ರಗಳನ್ನು ಪಠಣ ಮಾಡಬೇಕು.

ಸೂರ್ಯಗ್ರಹಣ ಆವಧಿಯಲ್ಲಿ ಮಾಡಬಾರದ ಕೆಲಸಗಳು
* ಆಹಾರ ಹಾಗೂ ನೀರು ಸೇವನೆಯನ್ನು ಗ್ರಹಣದ ಸಮಯದಲ್ಲಿ ಮಾಡಬಾರದು

* ಗ್ರಹಣದ ಅವಧಿಯಲ್ಲಿ ಪ್ರಯಾಣವನ್ನು ಮಾಡಬಾರದು

ಶುಭ ಕಾರ್ಯಗಳನ್ನು ಗ್ರಹಣದ ಸಮಯದಲ್ಲಿ ಮಾಡಬಾರದು

ಶುಭ ಕಾರ್ಯಗಳನ್ನು ಗ್ರಹಣದ ಸಮಯದಲ್ಲಿ ಮಾಡಬಾರದು

* ಯಾವುದೇ ಶುಭ ಕಾರ್ಯಗಳನ್ನು ಗ್ರಹಣದ ಸಮಯದಲ್ಲಿ ಮಾಡಬಾರದು

ಅಶಕ್ತರಿಗೆ, ದುರ್ಬಲರಿಗೆ, ಅನಾರೋಗ್ಯ ಪೀಡಿತರಿಗೆ, ಮಕ್ಕಳಿಗೆ, ವಯಸ್ಸಾದ ಹಿರಿಯರಿಗೆ ಗ್ರಹಣ ಸಮಯದ ಕಟ್ಟುಪಾಡುಗಳಿಂದ ರಿಯಾಯಿತಿ ಇದೆ. ಈ ಬಾರಿ ಮಿಥುನ ರಾಶಿಯಲ್ಲಿ ಗ್ರಹಣ ಸಂಭವಿಸುವುದರಿಂದ ಮಿಥುನ, ವೃಷಭ, ಕರ್ಕಾಟಕ, ವೃಶ್ಚಿಕ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.

English summary
Solar eclipse on July 2nd: Do's and don't during solar eclipse according to astrology by Pandit Shankar Bhat. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X