ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 12ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ; ಇದರ ಫಲಗಳೇನು?

Google Oneindia Kannada News

ಫೆಬ್ರವರಿ 12, 2021ನೇ ತಾರೀಕಿನ ಶುಕ್ರವಾರದಂದು ಜ್ಯೋತಿಷ್ಯ ರೀತ್ಯಾ ಬಹಳ ಮಹತ್ತರವಾದ ಹಾಗೂ ಕುತೂಹಲಕರವಾದ ದಿನ. ಅಂದು ಆರು ಗ್ರಹಗಳು ಮಕರ ರಾಶಿಯಲ್ಲೇ ಇರುತ್ತವೆ. ಗುರು, ಶನಿ, ರವಿ, ಬುಧ, ಚಂದ್ರ ಹಾಗೂ ಶುಕ್ರ... ಈ ಆರು ಗ್ರಹಗಳು ಕಾಲ ಪುರುಷನ ಕರ್ಮ ಸ್ಥಾನವಾದ ಮಕರ ರಾಶಿಯಲ್ಲಿ ಇರುವುದರಿಂದ ತೀರಾ ಎಚ್ಚರಿಕೆ ಅಗತ್ಯ.

ಮುಖ್ಯವಾಗಿ ಮಕರ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಆ ನಂತರ ಕುಂಭ, ಮಿಥುನ ಹಾಗೂ ಕನ್ಯಾ ರಾಶಿಯವರು ಜಾಗ್ರತೆಯನ್ನು ವಹಿಸಬೇಕು. ಹಾಗಂತ ಒಂದು ರಾಶಿಯಲ್ಲಿ ಈ ರೀತಿ ಆರು ಗ್ರಹಗಳು ಇರುವುದು ಇಲ್ಲವೇ ಇಲ್ಲ ಅಂತೇನಿಲ್ಲ. ಎಪ್ಪತ್ತು ವರ್ಷಗಳ ಹಿಂದೆ ಕನ್ಯಾ ರಾಶಿಯಲ್ಲಿ ಇಂಥದ್ದೊಂದು ಸಂಯೋಗ ಆಗಿತ್ತು.

ಆ ನಂತರ 1962ರಲ್ಲಿ ಮಕರದಲ್ಲಿ, 1979ರಲ್ಲಿ ಸಿಂಹದಲ್ಲಿ, 1982ರಲ್ಲಿ ತುಲಾದಲ್ಲಿ, 1993ರಲ್ಲಿ ವೃಶ್ಚಿಕದಲ್ಲಿ, 2019ನೇ ಇಸವಿಯಲ್ಲಿ ಧನುಸ್ಸಿನಲ್ಲಿ ಸಂಯೋಗ ಆಗಿತ್ತು. ಮೊದಲೇ ಹೇಳಿದ ಹಾಗೆ ಈಗ ಆರು ಗ್ರಹಗಳು ಒಟ್ಟು ಸೇರುತ್ತಿರುವುದು ಕರ್ಮದ ಸ್ಥಾನದಲ್ಲಿ ಹಾಗೂ ಶನಿಯು ಅಧಿಪತಿ ಆಗಿರುವ ಮತ್ತು ಸದ್ಯಕ್ಕೆ ಅಲ್ಲೇ ಶನಿ ಗ್ರಹ ಇರುವ ಮಕರ ರಾಶಿಯಲ್ಲಿ.

Six Planets Rare Combination in Capricorn on February 2021 Effect on India Pakistan and China

ಆ ಕಾರಣದಿಂದ ಈ ಕೆಳಕಂಡ ಫಲಗಳನ್ನು ನಿರೀಕ್ಷೆ ಮಾಡಬಹುದು:

* ಮಾಧ್ಯಮ ವಲಯದಲ್ಲಿ ದೊಡ್ಡ ಮಟ್ಟದ ಅಪಘಾತಗಳ ಸಾಧ್ಯತೆ ಇದೆ.

* ಚೀನಾ/ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳ ಜತೆಗೆ ಸಂಬಂಧ ಹಾಳಾಗಿ, ಅದು ಯುದ್ಧದ ಸನ್ನಿವೇಶದ ತನಕ ಹೋಗಬಹುದು.

* ಮನರಂಜನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ವ್ಯಕ್ತಿಯೊಬ್ಬರು ಅನಾರೋಗ್ಯ ಅಥವಾ ದುರ್ಮರಣಕ್ಕೆ ಈಡಾಗಬಹುದು.

* ರಾಜಕೀಯ ವಲಯದಲ್ಲೂ ಪ್ರಮುಖ ಪಕ್ಷದ ಮುಖಂಡರಿಗೆ ವಿಪತ್ತು ಸಂಭವಿಸಬಹುದು.

* ಧರ್ಮದ ಕಾರಣಕ್ಕೆ ಆಂತರಿಕ ಕಲಹ, ದಂಗೆ ಏರ್ಪಡುವ ಸಾಧ್ಯತೆ ಇದೆ.

* ಷೇರು ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತ ಕಂಡುಬರಲಿದ್ದು, ಹೂಡಿಕೆದಾರರು ಜಾಗ್ರತೆಯಿಂದ ಇರಬೇಕು.

ಇನ್ನು ದ್ವಾದಶ ರಾಶಿಗಳವರು ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳಬಾರದು. ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಬಾರದು. ಉದ್ಯೋಗ ಬದಲಾವಣೆ, ಕೆಲಸ ಬಿಡುವ ನಿರ್ಧಾರಗಳನ್ನು ಮಾಡಿದಲ್ಲಿ ಕಷ್ಟ ಎದುರಿಸಬೇಕಾಗುತ್ತದೆ. ಧಾರ್ಮಿಕ ಮುಖಂಡರು, ಜ್ಯೋತಿಷಿಗಳು, ಪುರೋಹಿತರು, ಅಧ್ಯಾತ್ಮ ಪ್ರವಚನಕಾರರು ತಮ್ಮ ಹೇಳಿಕೆ ಮತ್ತು ನಡವಳಿಕೆ ಕಾರಣಕ್ಕೆ ನಿಂದೆ- ಆರೋಪಗಳನ್ನು ಎದುರಿಸಬೇಕಾಗುತ್ತದೆ.

ಈ ದಿನ ಮೇಷದಲ್ಲಿ ಕುಜ, ವೃಷಭದಲ್ಲಿ ರಾಹು ಹಾಗೂ ವೃಶ್ಚಿಕದಲ್ಲಿ ಕೇತು ಇರುತ್ತದೆ. ಅಲ್ಲಿಗೆ ರಾಹು ಹಾಗೂ ಕೇತು ಮಧ್ಯೆ ಉಳಿದ ಏಳು ಗ್ರಹಗಳು ಬಂದಿಯಾದಂತೆ ಆಗುತ್ತದೆ. ಇದನ್ನು ಕಾಳಸರ್ಪ ಯೋಗ ಎನ್ನಲಾಗುತ್ತದೆ. ಈ ಸ್ಥಿತಿ ಕೆಲ ದಿನಗಳಿಂದ ಇದೆ ಮತ್ತು ಇರುತ್ತದೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಫೆಬ್ರವರಿ ತಿಂಗಳೇ ಶುಭದಾಯಕವಾಗಿಲ್ಲ.

ನಮ್ಮೆಲ್ಲರ ಮುಂದಿರುವುದು ದೇವರ ಪ್ರಾರ್ಥನೆಯ ದಾರಿವೊಂದೇ. ಯಾವುದೇ ಅರಿಷ್ಟ ಸಂಭವಿಸದಿರಲಿ. ಜನರ ಜೀವಕ್ಕೆ ಹಾನಿ ಆಗದಿರಲಿ ಎಂದು ಪ್ರಾರ್ಥನೆ ಮಾಡೋಣ. ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಳ್ಳಿ. ಯಾವುದೇ ವದಂತಿಗಳಿಂದ ಆಕ್ರೋಶ ಪಡದಿರಿ. ಸರ್ವೇ ಜನಾಃ ಸುಖಿನೋ ಭವಂತು.

ರಾಘವೇಂದ್ರ ಕುಡ್ಲ

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ, ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ. ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X