ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 12ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ; ದ್ವಾದಶ ರಾಶಿಗೆ ಫಲಗಳೇನು?

Google Oneindia Kannada News

ಈಗಾಗಲೇ ತಿಳಿಸಿರುವಂತೆ ಫೆಬ್ರವರಿ 12, 2021ರ ಶುಕ್ರವಾರದಂದು ಜ್ಯೋತಿಷ್ಯ ರೀತ್ಯಾ ಮಹತ್ತರವಾದ ದಿನ. ಅಂದು ಗುರು, ಶನಿ, ರವಿ, ಬುಧ, ಚಂದ್ರ ಹಾಗೂ ಶುಕ್ರ ಆರು ಗ್ರಹಗಳು ಮಕರ ರಾಶಿಯಲ್ಲೇ ಇರುತ್ತವೆ. ಈ ಆರು ಗ್ರಹಗಳು ಕಾಲ ಪುರುಷನ ಕರ್ಮ ಸ್ಥಾನವಾದ ಮಕರ ರಾಶಿಯಲ್ಲಿ ಇರುವುದರಿಂದ ಎಲ್ಲ ಹನ್ನೆರಡೂ ರಾಶಿಯವರು ಎಚ್ಚರಿಕೆಯಿಂದ ಇರುವುದು ತೀರಾ ಅಗತ್ಯ.

ಮುಖ್ಯವಾಗಿ ಮಕರ ರಾಶಿಯವರು ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಆ ನಂತರ ಕುಂಭ, ಮಿಥುನ ಹಾಗೂ ಕನ್ಯಾ ರಾಶಿಯವರು ಜಾಗ್ರತೆಯನ್ನು ವಹಿಸಬೇಕು. ಹಾಗಂತ ಒಂದು ರಾಶಿಯಲ್ಲಿ ಈ ರೀತಿ ಆರು ಗ್ರಹಗಳು ಇರುವುದು ಇಲ್ಲವೇ ಇಲ್ಲ ಅಂತೇನಿಲ್ಲ. ಎಪ್ಪತ್ತು ವರ್ಷಗಳ ಹಿಂದೆ ಕನ್ಯಾ ರಾಶಿಯಲ್ಲಿ ಇಂಥದ್ದೊಂದು ಸಂಯೋಗ ಆಗಿತ್ತು.

ಆ ನಂತರ 1962ರಲ್ಲಿ ಮಕರದಲ್ಲಿ, 1979ರಲ್ಲಿ ಸಿಂಹದಲ್ಲಿ, 1982ರಲ್ಲಿ ತುಲಾದಲ್ಲಿ, 1993ರಲ್ಲಿ ವೃಶ್ಚಿಕದಲ್ಲಿ, 2019ನೇ ಇಸವಿಯಲ್ಲಿ ಧನುಸ್ಸಿನಲ್ಲಿ ಸಂಯೋಗ ಆಗಿತ್ತು. ಮೊದಲೇ ಹೇಳಿದ ಹಾಗೆ ಈಗ ಆರು ಗ್ರಹಗಳು ಒಟ್ಟು ಸೇರುತ್ತಿರುವುದು ಕರ್ಮ ಸ್ಥಾನದಲ್ಲಿ ಹಾಗೂ ಶನಿಯು ಅಧಿಪತಿ ಆಗಿರುವ ಮತ್ತು ಸದ್ಯಕ್ಕೆ ಅಲ್ಲೇ ಶನಿ ಗ್ರಹ ಇರುವ ಮಕರ ರಾಶಿಯಲ್ಲಿ.

ಇಂಥ ಸನ್ನಿವೇಶದಲ್ಲಿ ದ್ವಾದಶ ರಾಶಿಗಳವರು ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ರಾಘವೇಂದ್ರ ಕುಡ್ಲ

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ, ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ. ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

ಮೇಷ

ಮೇಷ

ಉದ್ಯೋಗ ಬದಲಾವಣೆ, ಕೆಲಸ ಬಿಡುವುದು ಇಂಥ ನಿರ್ಧಾರಗಳನ್ನು ಮಾಡಬೇಡಿ. ಮೇಲಧಿಕಾರಿಗಳ ಜತೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ನಿಮ್ಮದಲ್ಲದ ವಿಚಾರಗಳಿಗೆ ಅಭಿಪ್ರಾಯ ಹೇಳುವುದು ಹಾಗೂ ಟೀಕೆ ಮಾಡುವುದು ಸರಿಯಲ್ಲ. ಗುರು- ಹಿರಿಯರು, ತಂದೆ- ತಾಯಿ ಬಗ್ಗೆ ಗೌರವ ಇಟ್ಟುಕೊಳ್ಳಿ.

ವೃಷಭ

ವೃಷಭ

ನಿಮ್ಮ ತಂದೆಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳು ಎಂದು ನಿರ್ಲಕ್ಷ್ಯ ಮಾಡದಿರಿ. ಷೇರು ಮಾರುಕಟ್ಟೆ, ಸಟ್ಟಾ ವ್ಯವಹಾರದಲ್ಲಿ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡದಿರಿ. ಪಿತ್ರಾರ್ಜಿತ ಆಸ್ತಿ ವ್ಯವಹಾರಗಳ ವ್ಯಾಜ್ಯಗಳಿದ್ದಲ್ಲಿ ನಿಮ್ಮ ವಿರುದ್ಧ ಆಗಬಹುದು.

ಮಿಥುನ

ಮಿಥುನ

ಈ ಹಿಂದಿನ ಆರೋಗ್ಯ ಸಮಸ್ಯೆ ಇದ್ದಲ್ಲಿ ಉಲ್ಬಣಿಸುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಜಾಗ್ರತೆ ವಹಿಸಬೇಕು. ಬೇರೆಯವರ ಸಾಲಕ್ಕೆ ಜಾಮೀನು ನಿಲ್ಲದಿರಿ. ಮದುವೆ ನಿಶ್ಚಯ ಆದವರಿಗೆ ಅದು ಮುರಿದುಬೀಳುವ ಅಪಾಯ ಇದೆ. ಆದ್ದರಿಂದ ಚಾಡಿ ಮಾತನ್ನು ಕೇಳದಿರಿ. ನಿಮ್ಮಿಂದ ಸಾಧ್ಯವಾದಲ್ಲಿ ನವಗ್ರಹ ಆರಾಧನೆಯನ್ನು ಮಾಡಿ.

ಕರ್ಕಾಟಕ

ಕರ್ಕಾಟಕ

ಪಾರ್ಟನರ್ ಷಿಪ್ ವ್ಯವಹಾರಗಳು ನಡೆಸುವವರು ಕಾಗದ- ಪತ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಎದುರಾಗದಂತೆ ನೋಡಿಕೊಳ್ಳಿ. ಮದುವೆಗೆ ಸಂಬಂಧಗಳ ಹುಡುಕಾಟದಲ್ಲಿ ತೊಡಗಿರುವವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಹಿನ್ನಡೆ ಆಗಬಹುದು.

ಸಿಂಹ

ಸಿಂಹ

ಶತ್ರುಗಳು ನಿಮ್ಮ ಏಳ್ಗೆಗೆ ಅಡ್ಡಗಾಲು ಹಾಕಬಹುದು. ಇನ್ನು ಅಂದುಕೊಳ್ಳದ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಾಜಕೀಯ ನಾಯಕರಿಗೆ ದೊರೆಯಬೇಕಾದ ಸ್ಥಾನಮಾನಗಳು ತಪ್ಪಿಹೋಗಬಹುದು. ಸ್ತ್ರೀಯರಿಂದ ಸಮಸ್ಯೆಗಳಾಗಬಹುದು. ಗುಪ್ತಾಂಗ ಸಮಸ್ಯೆ ಎದುರಾಗಬಹುದು. ಎಚ್ಚರಿಕೆಯಿಂದಿರಿ.

ಕನ್ಯಾ

ಕನ್ಯಾ

ಮಕ್ಕಳ ಶಿಕ್ಷಣ, ಭವಿಷ್ಯ ಚಿಂತೆಗೆ ಕಾರಣ ಆಗಬಹುದು. ವಿವಾಹಕ್ಕೆ ಸಂಬಂಧಗಳು ಹುಡುಕುತ್ತಿದ್ದಲ್ಲಿ ಅಂದುಕೊಳ್ಳುವ ರೀತಿಯಲ್ಲಿ ಅನುಕೂಲಗಳು ಒದಗಿ ಬರುವುದಿಲ್ಲ. ನೀವು ಹಾಕಿದ್ದ ಶ್ರಮಕ್ಕೆ ಪ್ರತಿಫಲ ದೊರೆಯುವುದಿಲ್ಲ. ಇದರಿಂದ ಬೇಸರ ಉಂಟಾಗುತ್ತದೆ. ಬಡ್ತಿ, ವರ್ಗಾವಣೆ ನಿರೀಕ್ಷೆಯಲ್ಲಿ ಇರುವವರಿಗೆ ಆಘಾತ ಎದುರಾಗಲಿದೆ.

ತುಲಾ

ತುಲಾ

ವಾಹನ ಖರೀದಿ, ಮಾರಾಟದಲ್ಲಿ ವಂಚನೆಗಳಾಗುವ ಸಾಧ್ಯತೆ ಇದೆ. ತಾಯಿಯ ಅಥವಾ ತಾಯಿಗೆ ಸಮಾನರಾದವರ ಆರೋಗ್ಯದ ಕಾಳಜಿಯನ್ನು ವಹಿಸಿ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ಕಂದಾಯ ಬಾಕಿ ಉಳಿಸಿಕೊಂಡಿದ್ದಲ್ಲಿ ಅದರಿಂದ ಸಮಸ್ಯೆ, ಅವಮಾನಗಳಾಗುವ ಯೋಗ ಇದೆ. ಮಧುಮೇಹ- ರಕ್ತದೊತ್ತಡ ಕಾಣಿಸಿಕೊಳ್ಳಬಹುದು. ಈಗಾಗಲೇ ಸಮಸ್ಯೆ ಇದ್ದಲ್ಲಿ ಉಲ್ಬಣಿಸಬಹುದು.

ವೃಶ್ಚಿಕ

ವೃಶ್ಚಿಕ

ಸೋದರ- ಸೋದರಿಯರ ಜತೆಗೆ ಭಿನ್ನಾಭಿಪ್ರಾಯ ಏರ್ಪಡಬಹುದು. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಚಿಂತೆ ಕಾಡುತ್ತದೆ. ಈಗಾಗಲೇ ಹೂಡಿಕೆ ಮಾಡಿದ್ದಲ್ಲಿ ನಷ್ಟ ಎದುರಾಗುವಂಥ ಯೋಗ ಇದೆ. ಕಣ್ಣು- ಹಲ್ಲಿನ ಸಮಸ್ಯೆಗಳು ಎದುರಾಗಬಹುದು, ತಕ್ಷಣ ವೈದ್ಯರನ್ನು ಭೇಟಿಯಾಗಿ.

ಧನುಸ್ಸು

ಧನುಸ್ಸು

ಮಾತಿನ ಮೇಲೆ ಹಿಡಿತ ಇರಲಿ. ನಿಮ್ಮಿಂದ ಸಾಧ್ಯವಿರುವ ಕೆಲಸವನ್ನು ಮಾತ್ರ ಮಾಡಿಕೊಡುವುದಾಗಿ ಒಪ್ಪಿಕೊಳ್ಳಿ. ಇನ್ನು ನಿಮ್ಮ ಕೈ ಸೇರದ ಹಣಕ್ಕೆ ಮುಂಚಿತವಾಗಿಯೇ ಕಮಿಟ್ ಆಗದಿರಿ. ಇದರಿಂದ ಅವಮಾನದ ಪಾಲಾಗುವ ಸಾಧ್ಯತೆ ಇದೆ. ನೀವು ಬಾಕಿ ಉಳಿಸಿಕೊಂಡ ಸಾಲದ ಮೊತ್ತವನ್ನು ಸರಿಯಾದ ಸಮಯಕ್ಕೆ ಹಿಂತಿರುಗಿಸುವ ಕಡೆಗೆ ಲಕ್ಷ್ಯ ನೀಡಿ.

ಮಕರ

ಮಕರ

ಸಿಕ್ಕಾಪಟ್ಟೆ ಗೊಂದಲ ಇರುತ್ತದೆ. ಹೃದಯ ಅಥವಾ ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ತಂದೆಯೊಂದಿಗೆ ಅಥವಾ ತಂದೆಗೆ ಸಮಾನರಾದವರ ಜತೆಗೆ ಭಿನ್ನಾಭಿಪ್ರಾಯ ಏರ್ಪಡದಂತೆ ನೋಡಿಕೊಳ್ಳಿ. ಕಡ್ಡಾಯವಾಗಿ ದೂರಪ್ರಯಾಣಗಳನ್ನು ಮಾಡಬೇಡಿ.

ಕುಂಭ

ಕುಂಭ

ಖರ್ಚಿನ ಪ್ರಮಾಣದಲ್ಲಿ ವಿಪರೀತ ಹೆಚ್ಚಾಗುತ್ತದೆ. ಆಸ್ಪತ್ರೆಗೆ ಹೆಚ್ಚಿನ ಖರ್ಚಾಗುವ ಸಾಧ್ಯತೆ ಇದೆ. ನಿಮಗೆ ಅಗತ್ಯವಿಲ್ಲದ ಗ್ಯಾಜೆಟ್, ಲ್ಯಾಪ್ ಟಾಪ್ ಅಥವಾ ಕ್ಯಾಮೆರಾದಂಥದ್ದು ಖರೀದಿಸಬೇಡಿ. ಒಂದು ವೇಳೆಗೆ ಮನೆಗೆ ಅಗತ್ಯ ಇರುವ ವಸ್ತುಗಳನ್ನು ತರುವಂತಿದ್ದಲ್ಲಿ ಅವುಗಳ ಗುಣಮಟ್ಟದ ಕಡೆಗೆ ಲಕ್ಷ್ಯ ನೀಡಿ.

ಮೀನ

ಮೀನ

ನಿಮಗೆ ಬರಬೇಕಾದ ಲಾಭದ ಪ್ರಮಾಣದಲ್ಲಿ ಇಳಿಕೆ ಆಗಬಹುದು. ಹೊಸದಾಗಿ ವ್ಯಾಪಾರ- ವ್ಯವಹಾರಗಳನ್ನು ಆರಂಭ ಮಾಡದಿರುವುದು ಉತ್ತಮ. ಸವಿಯಾದ ಮಾತುಗಳನ್ನು ಆಡುವ ಮೂಲಕ ನಿಮ್ಮನ್ನು ದಾರಿ ತಪ್ಪಿಸುವುದಕ್ಕೆ ಪ್ರಯತ್ನಗಳಾಗಬಹುದು. ಆದ್ದರಿಂದ ಅತಿಯಾದ ಲಾಭ ಹಾಗೂ ಬಡ್ಡಿಯ ಆಸೆಗೆ ಬೀಳಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X