ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹ ಮಾಸದಲ್ಲಿ ಮಗು ಹುಟ್ಟಿದರೆ ತಂದೆ-ಮಕ್ಕಳ ಸಂಬಂಧ ಗಟ್ಟಿಯೋ ಗಟ್ಟಿ

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ಎಲ್ಲ ಆಸ್ತಿಕ ಬಂಧುಗಳಿಗೆ ನಮಸ್ಕಾರ. ವಿವಿಧ ಮಾಧ್ಯಮಗಳಲ್ಲಿ ಧನುರ್ಮಾಸ ವಿಶೇಷ ಪೂಜೆಗಳ ಬಗ್ಗೆ ವಿಶೇಷ ಲೇಖನ, ಕಾರ್ಯಕ್ರಮಗಳು ಬರುತ್ತಿವೆ. ಅವೆಲ್ಲಕ್ಕಿಂತ ಭಿನ್ನವಾದ ವಿಚಾರವೊಂದನ್ನು ಈ ದಿನ ನಿಮಗೆ ತಿಳಿಸುತ್ತಿದ್ದೇನೆ. ಈ ವಿಷಯ ವಿವಾಹಿತರಿಗೆ, ಅದರಲ್ಲೂ ಸಂತಾನ ಅಪೇಕ್ಷಿತರಿಗೆ ಉಪಯುಕ್ತ ಎಂದು ಭಾವಿಸಿ, ನಿಮ್ಮೆದುರು ಇಡುತ್ತಿದ್ದೇನೆ.

ಮಕ್ಕಳು ತಾಯಿ ಜತೆಗೆ ಹೊಂದಿಕೊಂಡಷ್ಟು ಸಲೀಸಾಗಿ ಹಾಗೂ ಸುಲಭವಾಗಿ ತಂದೆಯೊಂದಿಗೆ ಹೊಂದಿಕೊಳ್ಳಲ್ಲ ಎಂಬುದು ಹಲವರ ಚಿಂತೆಗೆ ಕಾರಣ ಆಗಿರುತ್ತದೆ. ಇನ್ನೂ ಕೆಲವರಿಗೆ ತಾವು ನಡೆಸಿಕೊಂಡು ಬಂದ ವೃತ್ತಿ, ಆಶಯಗಳನ್ನು ಮಕ್ಕಳು ಮುಂದುವರಿಸಿಕೊಂಡು ಹೋಗಲಿ ಎಂಬ ಆಶಯ ಬಲವಾಗಿರುತ್ತದೆ.

ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ ಜ್ಯೋತಿಷ್ಯ: 2019ರ ದ್ವಾದಶ ರಾಶಿಗಳ ಪ್ರೀತಿ-ಪ್ರೇಮ, ವಿವಾಹ ಭವಿಷ್ಯ

ತಾಯಿ ಜತೆಗೆ ಸಹಜವಾಗಿಯೇ ಗಟ್ಟಿಯಾದ ಬಾಂಧವ್ಯ ಇರುವ ಮಕ್ಕಳಿಗೆ ತಂದೆಯ ಜತೆಗೂ ಭಾವನಾತ್ಮಕ ಬಂಧ ಹಾಗೂ ಸಹಕಾರ ಮನೋಭಾವ ಇರಬೇಕು ಅಂದರೆ ಜಾತಕದಲ್ಲಿ ರವಿಯ ಸ್ಥಿತಿ ಉತ್ತಮವಾಗಿರಬೇಕು. ಜ್ಯೋತಿಷ್ಯ ಪ್ರಕಾರ ರವಿಯ ಮೂಲಕ ತಂದೆಯ ಬಗೆಗಿನ ಚಿಂತನೆಯನ್ನು ಹಾಗೂ ಚಂದ್ರನ ಮೂಲಕ ತಾಯಿ ಜತೆಗೆ ಬಂಧವನ್ನು ವಿಶ್ಲೇಷಿಸಲಾಗುತ್ತದೆ. ಇನ್ನು ಆಗಸ್ಟ್ ಹಾಗೂ ಸೆಪ್ಟೆಂಬರ್ ಎರಡೂ ತಿಂಗಳ ಮಧ್ಯೆ ಮೂವತ್ತು ದಿನ ಸಿಂಹ ರಾಶಿಯ ಅಧಿಪತಿಯಾದ ರವಿ ಅದೇ ರಾಶಿಯಲ್ಲೇ ಇರುತ್ತಾನೆ.

ಆದ್ದರಿಂದ ಧನುರ್ಮಾಸದಲ್ಲಿ ದಂಪತಿಗಳ ಮಿಲನವಾಗಿ, ಗರ್ಭ ಧರಿಸಿದರೆ, ಅಲ್ಲಿಂದ ಒಂಬತ್ತನೇ ತಿಂಗಳು, ಸ್ವಲ್ಪ ಹೆಚ್ಚು ಅಥವಾ ಕಡಿಮೆ ಅವಧಿಗೆ ಮಗು ಜನಿಸಿದರೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ಮಗು ಜನನವಾಗುತ್ತದೆ.

ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ

ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ

ಈ ಅವಧಿಯಲ್ಲಿ ಅಂದರೆ ಸಿಂಹ ರಾಶಿಯಲ್ಲಿ ರವಿ ಇರುವ ವೇಳೆಯಲ್ಲಿ ಜನಿಸಿದ ಮಕ್ಕಳಿಗೆ ಸರಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯ ಇರುತ್ತದೆ. ನಾಯಕತ್ವ ಗುಣಗಳಿರುತ್ತವೆ. ವೃತ್ತಿ-ಉದ್ಯೋಗ ಬದುಕಿನಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ. ರವಿಯ ಅನುಗ್ರಹದ ಎಲ್ಲ ಸಕಾರಾತ್ಮಕ ಪ್ರಭಾವಗಳನ್ನು ಅನುಭವಿಸುತ್ತಾರೆ.

ಜನ್ಮ ಜಾತಕದಲ್ಲಿ ಸಿಂಹ ರಾಶಿಯಲ್ಲೇ ರವಿ ಸ್ಥಿತನಾಗಿರುತ್ತಾನೆ

ಜನ್ಮ ಜಾತಕದಲ್ಲಿ ಸಿಂಹ ರಾಶಿಯಲ್ಲೇ ರವಿ ಸ್ಥಿತನಾಗಿರುತ್ತಾನೆ

ತಂದೆಯ ಜತೆಗೆ ಹಾಗೂ ಅದೇ ರೀತಿ ತಂದೆಗೆ ಮಗುವಿನೊಂದಿಗೆ ಬಾಂಧವ್ಯ ಹೆಚ್ಚಾಗಿರುತ್ತದೆ. ಆ ಕಾರಣಕ್ಕೆ ಸಂತಾನ ಅಪೇಕ್ಷಿತರು ಧನುರ್ಮಾಸದಲ್ಲಿ ಸೇರಿದರೆ, ಈ ಮಾಸದಲ್ಲಿ ಗರ್ಭ ಧರಿಸಿದರೆ ಮಕ್ಕಳು ಸಿಂಹ ಮಾಸದಲ್ಲಿ ಜನಿಸುತ್ತವೆ. ಜನನದ ವೇಳೆ ಜನ್ಮ ಜಾತಕದಲ್ಲಿ ಸಿಂಹ ರಾಶಿಯಲ್ಲೇ ರವಿ ಸ್ಥಿತನಾಗಿರುತ್ತಾನೆ.

ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?

ಪುರುಷ ಹಾಗೂ ಸ್ತ್ರೀ ಗ್ರಹಗಳ ವಾರಗಳು

ಪುರುಷ ಹಾಗೂ ಸ್ತ್ರೀ ಗ್ರಹಗಳ ವಾರಗಳು

ಸಂತಾನಕ್ಕಾಗಿ ಗಂಡ-ಹೆಂಡತಿ ಸೇರುವ ಸಮಯವನ್ನು ಕೂಡ ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಪುರುಷ ಗ್ರಹಗಳ ವಾರದಲ್ಲಿ ಸೇರಿದರೆ ಗಂಡು ಮಕ್ಕಳು ಹಾಗೂ ಸ್ತ್ರೀ ಗ್ರಹಗಳ ವಾರಗಳಲ್ಲಿ ಸೇರಿದರೆ ಹೆಣ್ಣುಮಕ್ಕಳ ಜನನವಾಗುತ್ತದೆ ಎಂದು ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿದ್ದು, ನಮ್ಮ ಋಷಿ-ಮುನಿಗಳು ತಮ್ಮ ಜ್ಞಾನವನ್ನು ದಾಖಲಿಸಿದ್ದಾರೆ.

ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ

ಹಗಲು ವೇಳೆ ದಂಪತಿ ಕೂಡುವುದು ಸರ್ವಥಾ ಮಾನ್ಯವಲ್ಲ

ಹಗಲು ವೇಳೆ ದಂಪತಿ ಕೂಡುವುದು ಸರ್ವಥಾ ಮಾನ್ಯವಲ್ಲ

ಹೆಣ್ಣು ಅಥವಾ ಗಂಡು ಮಗು ಎಂಬುದು ಇಲ್ಲಿ ಭೇದ-ಭಾವ ಎಂಬ ದೃಷ್ಟಿಯಿಂದಲ್ಲ. ಕೆಲವರಿಗೆ ಒಂದು ಗಂಡು-ಒಂದು ಹೆಣ್ಣು ಮಗು ಬೇಕು ಎಂಬ ಅಭಿಲಾಷೆ ಇರುತ್ತದೆ. ಕೆಲವರಿಗೆ ಹೆಣ್ಣುಮಕ್ಕಳನ್ನೇ ಪಡೆಯಬೇಕು ಎಂದಿರುತ್ತದೆ. ಯಾವುದೇ ಮಗುವಾಗಲಿ ಆರೋಗ್ಯವಂತವಾಗಿರಲಿ ಎಂಬ ಉದ್ದೇಶ ಇಟ್ಟುಕೊಂಡಿರಿ. ಇನ್ನು ಹಗಲು ವೇಳೆಯಲ್ಲಿ ಕೂಡುವುದು ಸರ್ವಥಾ ಮಾನ್ಯವಲ್ಲ. ಏಕೆಂದರೆ ದಂಪತಿಗಳು ಹಗಲು ವೇಳೆ ಕೂಡಿದರೆ ರಾಕ್ಷಸೀಯ ಗುಣವುಳ್ಳ ಮಕ್ಕಳ ಜನನವಾಗುತ್ತದೆ ಎಂಬ ಶಾಸ್ತ್ರ ಉಲ್ಲೇಖ ಇದೆ.

ಇತರ ಗ್ರಹ ಸ್ಥಿತಿಗಳಿಗೆ ಸಂಬಂಧವಿಲ್ಲ

ಇತರ ಗ್ರಹ ಸ್ಥಿತಿಗಳಿಗೆ ಸಂಬಂಧವಿಲ್ಲ

ಈ ಲೇಖನವು ತಂದೆ ಹಾಗೂ ಮಗುವಿನ ಸಂಬಂಧ ಹಾಗೂ ಪ್ರಭಾವದ ಬಗ್ಗೆ ಮಾತ್ರ ತಿಳಿಸಿಕೊಡುವ ಲೇಖನ. ಆದ್ದರಿಂದ ಉಳಿದ ಗ್ರಹ ಸ್ಥಿತಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಉದಾಹರಣೆಗೆ ಮುಂದಿನ ವರ್ಷದಲ್ಲಿ ಒಂದು ಸನ್ನಿವೇಶದಲ್ಲಿ ಪಂಚಗ್ರಹ ಯೋಗ ಇದೆ. ಅಂದರೆ ಒಂದೇ ಸ್ಥಾನದಲ್ಲಿ ಐದು ಗ್ರಹಗಳು ಒಗ್ಗೂಡುತ್ತವೆ. ಅಂಥ ಸಂದರ್ಭದಲ್ಲಿ ಅದರದೇ ಪ್ರಭಾವ ಇರುತ್ತದೆ. ಇನ್ನುಳಿದಂತೆ ಈ ವಿಚಾರವೇ ಸೂಕ್ಷ್ಮವಾದದ್ದು ಆದ್ದರಿಂದ ಓದುಗರ ನಂಬಿಕೆಗೆ ಬಿಟ್ಟು, ನಿಮ್ಮ ಜಾತಕದಲ್ಲಿ ಜನನ ಕಾಲದಲ್ಲಿ ಸಿಂಹ ರಾಶಿಯಲ್ಲಿ ರವಿ ಇತ್ತೇ ಅನ್ನೋದು ಗಮನಿಸಿ. ತಂದೆ ಜತೆಗಿನ ನಿಮ್ಮ ಸಂಬಂಧ, ನಿಮ್ಮ ಮೇಲೆ ತಂದೆಯ ಪ್ರಭಾವ ಹೇಗಿತ್ತು ಅನ್ನೋದನ್ನು ವಿಶ್ಲೇಷಣೆ ಮಾಡಿಕೊಳ್ಳಿ.

English summary
Significance of Dhanur masa explained by Kannada well know astrologer pandit Vittala Bhat. Who wish to have very good relationship with child, particularly father, they have to try for child in the month of December. Here is the reason, why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X