ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 18ಕ್ಕೆ ಅಕ್ಷಯ ತೃತೀಯ, ದಿನದ ಮಹತ್ವ ಏನು, ಮಾಡಬೇಕಾದ್ದೇನು?

By ಕಬ್ಯಾಡಿ ಜಯರಾಮಾಚಾರ್ಯ
|
Google Oneindia Kannada News

Recommended Video

Akshaya Tritiya 2018 : ಈ ದಿನ ಏನು ಮಾಡಬೇಕು? ಮಹತ್ವ ಹಾಗು ಹಿನ್ನೆಲೆ ಏನು? | Oneindia kannada

ಏಪ್ರಿಲ್ 18ನೇ ತಾರೀಕು ಅಕ್ಷಯ ತೃತೀಯ. ಏನು ಖರೀದಿ ಮಾಡಬೇಕು ಅಂತಿದೀರಿ? ಒಂದು ಗ್ರಾಮ್ ನಷ್ಟು ಚಿನ್ನ ಆದರೂ ತೆಗೆದುಕೊಳ್ಳಬೇಕು. ಚಿನ್ನ ಆಗದಿದ್ದರೆ ಕನಿಷ್ಠ ಪಕ್ಷ ಬೆಳ್ಳಿ ಆದರೂ ತೆಗೆದುಕೊಳ್ಳಬೇಕು ಎಂಬ ಮಾತು ಪದೇಪದೇ ಕೇಳಿ ಬರ್ತಿದೆಯಾ? ಚಿನ್ನ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಆಭರಣದ ಅಂಗಡಿಯಲ್ಲಿ ಒಂದಿಷ್ಟು ಮುಂಗಡ ಅಂತಲೂ ಕೊಟ್ಟುಬಿಟ್ಟಿದ್ದೀರಾ?

ರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ: ಕಬ್ಯಾಡಿ ಜಯರಾಮಾಚಾರ್ಯ ಭವಿಷ್ಯರಾಜ್ಯದಲ್ಲಿ ಬಿಜೆಪಿಗೆ ಸರಳ ಬಹುಮತ: ಕಬ್ಯಾಡಿ ಜಯರಾಮಾಚಾರ್ಯ ಭವಿಷ್ಯ

ಅಂದಹಾಗೆ, ಅಕ್ಷಯ ತೃತೀಯದಂದು ಮನೆಗೆ ಚಿನ್ನ ತಂದು, ಧರಿಸಿದರೆ ಒಳಿತಾಗುತ್ತದೆ. ಸಂಪತ್ತು ವೃದ್ಧಿ ಆಗುತ್ತದೆ ಎಂದು ಯಾವ ಗ್ರಂಥದಲ್ಲಿ ಉಲ್ಲೇಖ ಇದೆ ಎಂಬ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ? ಅಥವಾ ಈ ಬಗ್ಗೆ ತಿಳಿದುಕೊಂಡವರ ಹತ್ತಿರ ಮಾಹಿತಿ ಪಡೆದುಕೊಂಡಿದ್ದೀರಾ? ನಿಮ್ಮ ಉತ್ತರ ಇಲ್ಲ ಅಂತಾದರೂ ಅಥವಾ ಹೌದು ಅಂತಾದರೂ ಈ ಲೇಖನದ ಮೂಲಕ ಮುಖ್ಯ ವಿಚಾರ ನಿಮಗೆ ಗೊತ್ತಾಗಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಒಂದು ಸಂವತ್ಸರದ ಮೂರೂವರೆ ದಿನ ಯಾವುದೇ ಶುಭ ಕಾರ್ಯಗಳಿಗೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ (ಪಂಚಾಂಗ) ನೋಡುವ ಅಗತ್ಯ ಇಲ್ಲ ಎಂದು ಕೆಲವು ಮುಖ್ಯ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅವು ಯಾವುವು ಅಂದರೆ, ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಹಾಗೂ ಬಲಿಪಾಡ್ಯಮಿಯ ಮೊದಲ ಅರ್ಧ ದಿನದಂದು ಕೈಗೊಳ್ಳುವ ಯಾವುದೇ ಶುಭ ಕಾರ್ಯಕ್ಕೆ ಮುಹೂರ್ತ ನೋಡುವ ಅಗತ್ಯ ಇಲ್ಲ ಎಂಬ ಉಲ್ಲೇಖವಿದೆ.

ದೇವತಾ ಕಾರ್ಯ, ದಾನಗಳಿಗೆ ಪ್ರಾಶಸ್ತ್ಯ

ದೇವತಾ ಕಾರ್ಯ, ದಾನಗಳಿಗೆ ಪ್ರಾಶಸ್ತ್ಯ

ಅಕ್ಷಯ ತೃತೀಯ ಎಂಬುದು ಹೆಸರೇ ತಿಳಿಸುವಂತೆ ಆ ದಿನ ಕೈಗೊಂಡ ಕಾರ್ಯ ಅಕ್ಷಯ ಆಗುತ್ತದೆ. ಅಂದರೆ ಆ ದಿನದಂದು ಶಕ್ತ್ಯಾನುಸಾರ ಸುವರ್ಣವನ್ನು ದಾನ ಮಾಡಬೇಕು. ಯಾರಿಗೆ ದಾನ ಮಾಡಬೇಕು ಎಂಬುದನ್ನು ಕೂಡ ತಿಳಿದುಕೊಂಡಿರಬೇಕು. ಆ ದಿನ ನಾವು ಚಿನ್ನ ಖರೀದಿಸಿ, ನಾವೇ ಧರಿಸಬೇಕು ಎಂಬ ಉಲ್ಲೇಖ ಏನಿಲ್ಲ. ಅಂದು ದೇವತಾ ಕಾರ್ಯಗಳಿಗೆ, ದಾನಗಳಿಗೆ ಬಹಳ ಪ್ರಾಶಸ್ತ್ಯ. ಎಷ್ಟು ಶ್ರದ್ಧೆ-ಭಕ್ತಿಯಿಂದ ಅವೆಲ್ಲವನ್ನೂ ಮಾಡುತ್ತೀರೋ ಆ ಫಲಗಳು ಅಷ್ಟು ಅಕ್ಷಯ ಆಗುತ್ತವೆ.

ಯಾರಿಗೆ ದಾನ ಮಾಡಬೇಕು?

ಯಾರಿಗೆ ದಾನ ಮಾಡಬೇಕು?

ದಾನ ಅಂದರೆ ಅದರರ್ಥ ನಾವು ಗೊತ್ತಿದ್ದೋ- ಗೊತ್ತಿಲ್ಲದೆಯೋ ಮಾಡಿದ ಪಾಪ ಕರ್ಮಗಳಿಗೆ ಮಾಡಿಕೊಳ್ಳುವ ಪರಿಹಾರ. ಆದ್ದರಿಂದ ದಾನ ನೀಡಿದವರ ಪಾಪ ಕರ್ಮಗಳು ದಾನ ಪಡೆದವರಿಗೆ ಹಸ್ತಾಂತರ ಆಗುತ್ತದೆ. ಆದ್ದರಿಂದ ಚಿನ್ನವೋ ಮತ್ತೊಂದೋ ದಾನ ಪಡೆದವರು ನಿತ್ಯವೂ ಜಪ-ತಪ ಅನುಷ್ಠಾನಗಳನ್ನು ಮಾಡಿ, ದಾನದ ಮೂಲಕ ಪಡೆದ ಪಾಪದ ಫಲವನ್ನು ನೀಗಿಸಿಕೊಳ್ಳವರಾಗಿರಬೇಕು. ಜತೆಗೆ ದಾನ ಮಾಡಿದವರ ಏಳ್ಗೆಯನ್ನು ಹಾರೈಸಿ, ಆ ಮಾತು ನಿಜವಾಗುವಂಥ ವಾಕ್ ಶಕ್ತಿ- ಶುದ್ಧಿ ಉಳ್ಳವರಾಗಿರಬೇಕು.

ಕೋಸಂಬರಿ, ಪಾನಕ, ಮಜ್ಜಿಗೆ, ಮಾವಿನ ಹಣ್ಣು ದಾನ

ಕೋಸಂಬರಿ, ಪಾನಕ, ಮಜ್ಜಿಗೆ, ಮಾವಿನ ಹಣ್ಣು ದಾನ

ಇನ್ನು ಅಕ್ಷಯ ತೃತೀಯವು ವೈಶಾಖ ಮಾಸದಲ್ಲಿ ಬಂದಿರುವುದರಿಂದ ಕೋಸಂಬರಿ, ಪಾನಕ, ಮಜ್ಜಿಗೆ, ಮಾವಿನ ಹಣ್ಣು ದಾನ ಮಾಡುವುದು ಕೂಡ ಶ್ರೇಷ್ಠವಾದ ಕಾರ್ಯ. ಬೇಸಿಗೆಯ ತಾಪಕ್ಕೆ ತಂಪೆರೆಯುವ ಈ ಪದಾರ್ಥಗಳನ್ನು ಎಷ್ಟು ಮಂದಿಗೆ ಸಾಧ್ಯವಾಗುತ್ತದೋ ಅಷ್ಟು ಮಂದಿಗೆ ಭಕ್ತಿಯಿಂದ ಹಂಚಬೇಕು. ಇಡೀ ವೈಶಾಖ ಮಾಸಕ್ಕೆ ಮಹತ್ವ ಇದೆ. ಅದರಲ್ಲೂ 'ಅಕ್ಷಯ' ತೃತೀಯಕ್ಕೆ ಮತ್ತಷ್ಟು ಪ್ರಾಶಸ್ತ್ಯ.

ದೇವರಿಗೆ ನೈವೇದ್ಯ ಮಾಡಿ, ಅತಿರಸ ದಾನ

ದೇವರಿಗೆ ನೈವೇದ್ಯ ಮಾಡಿ, ಅತಿರಸ ದಾನ

ಅದೇ ರೀತಿ ಅತಿರಸ (ಕಜ್ಜಾಯ ಅಥವಾ ಅಪ್ಪೂಪ)ವನ್ನು ದಾನ ಮಾಡುವುದು ಕೂಡ ಬಹಳ ಶ್ರೇಷ್ಠ. ಅತಿರಸವನ್ನು ಮಾಡಿ, ದೇವರ ಮುಂದಿಟ್ಟು ನೈವೇದ್ಯ ಮಾಡಬೇಕು. ಆದ್ದರಿಂದ ಅಂಗಡಿಯಿಂದ ತಂದು ದಾನ ಮಾಡಿದರೆ ಯಾವ ಪ್ರಯೋಜನ ಇಲ್ಲ. ಮನೆಯಲ್ಲಿ ಶುಚಿರ್ಭೂತರಾಗಿ, ಅಪ್ಪೂಪ ಮಾಡಿ. ಅವುಗಳನ್ನು ದೇವರ ಮುಂದೆ ನೈವೇದ್ಯಕ್ಕೆ ಇಟ್ಟು, ಆ ನಂತರ ಅವುಗಳನ್ನು ದಾನ ಮಾಡಬೇಕು.

English summary
Significance, importance and rituals to be follow on Akshaya Tritiya. It will be on April 18, 2018. Well known astrologer Kabiyadi Jayaramacharya explains important days in the year to perform auspicious programs according to vedic astrology and Hindu panchang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X