ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವಿಲ್ಲಿ, ಅವನಲ್ಲಿ, ಶನಿ ನಮಗೇನು ಮಾಡಬಲ್ಲ?

By ಎಸ್.ಎಸ್. ನಾಗನೂರಮಠ
|
Google Oneindia Kannada News

ನೆನಪಿರಲಿ ಸಾಡೇಸಾತಿಯಲ್ಲಿ ಮಾತ್ರ ಶನಿ ತನ್ನ ಪ್ರಭಾವ ತೋರುತ್ತಾನೆ. ಕರ್ಮಕಾರಕನಾದ ಶನಿ ಮಹಾರಾಜನ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಬಹಳ ಒಳ್ಳೆಯದು. ಅವನ ಬಗ್ಗೆ ಕಿಂಚಿತ್ತೂ ತೆಗಳುವುದು ಲೇಸಲ್ಲ. ಇಲ್ಲವಾದಲ್ಲಿ ಅವನು ಸಾಡೇಸಾತಿಯಲ್ಲಿ ಬಂದಾಗ ತಿಳಿದುಕೊಳ್ಳುವಂತೆ ಮಾಡಿ ಅವನ ಬಗ್ಗೆ ಹೀಯಾಳಿಸಿದವರಿಗೆ ಭಾರಿ ಪಾಠ ಕಲಿಸುತ್ತಾನೆ.

ಅವನಿದ್ದಾನೆಯೇ? ಎಂದು ಓದುಗರೊಬ್ಬರು ಪಶ್ನಿಸಿದ್ದಾರೆ. ಆ ಓದುಗರ ಮೊಬೈಲ್ ಗೆ ಬರುವ ಕರೆಗಳ ತರಂಗಾಂತರ ಸ್ಯಾಟ್ ಲೈಟ್ ಗಳಿಂದ ಬರುತ್ತವೆ. ಅದೇಗೆ ಸಾಧ್ಯ ಸ್ಯಾಟ್ ಲೈಟ್ ಅಷ್ಟೊಂದು ದೂರದಲ್ಲಿರುತ್ತದೆ? ಸೂರ್ಯನ ಕಿರಣಗಳಿಂದ ಗಿಡಗಳು ಜೀವಿಸುವುದು ಹೇಗೆ? ಅದೇ ರೀತಿ ಶನಿಯ ಪ್ರಭಾವ ಕಾಣುವುದಿಲ್ಲ ಅನುಭವಿಸಿದಾಗ ಅವರವರಿಗೇನೆ ಗೊತ್ತಾಗುತ್ತದೆ ಬಿಡಿ!

ಅದೇ ರೀತಿ ಶನಿ ಮಹಾರಾಜ ಎಷ್ಟೇ ದೂರದಲ್ಲಿರಲಿ, ಅವನ ಸಾಡೇಸಾತಿ ಕಾಲದಲ್ಲಿ ಯಾರೆಲ್ಲೇ ಅಡಗಲಿ ಬಿಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲದೇ, ಆ ಪ್ರೀತಿಯ ಓದುಗ ಮಹಾಶಯರು ಶನಿಯ ಅಂತರ ತಪ್ಪಾಗಿ ಬರೆದಿದ್ದಾರೆ. ಅವನು ಭೂಮಿಯಿಂದ 886,000,000 ಮೈಲು (1,425,878,784 ಕಿ.ಮೀ) ದೂರದಲ್ಲಿದ್ದಾನೆ. ಅವರ ಪ್ರತಿಕ್ರಿಯೆಗೆ ತುಂಬು ಹೃದಯದ ಸ್ವಾಗತ.

Shani can affect our lifestyle from any distance

ಸಾಡೇಸಾತಿ ಪ್ರಭಾವ ಇರುವ ಸಮಯದಲ್ಲಿ ಆ ರಾಶಿಯವರು ಯಾವುದೇ ಪರಿಸ್ಥಿತಿಯಲ್ಲೂ ಕಪ್ಪು, ನೀಲಿ ಬಣ್ಣದ ಬಟ್ಟೆ ಹಾಕಲೇಬಾರದು. ಹಾಕಿದರೆ ಶನಿಯನ್ನು ಆಕರ್ಷಿಸಿದಂತಾಗುತ್ತದೆ. ಮನುಷ್ಯ ಕಷ್ಟ ಸುಖ ಅನುಭವಿಸುವುದು ಮನಸ್ಸಿನ ಭಾವನೆಗಳಿಂದ. ಮನಸ್ಸಿನಲ್ಲಿ ದುಃಖ ಮತ್ತು ಸುಖ ಅನುಭವಕ್ಕೆ ಬರುತ್ತದೆ. ಅದೇ ರೀತಿ ಶನಿಯು ಮನಸ್ಸನ್ನು ಸಂಪೂರ್ಣ ತನ್ನ ಹತೋಟಿಗೆ ತೆಗೆದುಕೊಂಡು ತನಗೆ ಹೇಗೆ ಬೇಕೋ ಹಾಗೆ ಆಟ ಆಡಿಸಲು ಆರಂಭಿಸುತ್ತಾನೆ.

ಮತ್ತೊಬ್ಬರಿಗೆ ಒಳ್ಳೆಯತನ ಮಾಡಿದವರಿಗೆ ನೂರು ಪಟ್ಟು ಒಳ್ಳೆಯದನ್ನು ಮಾಡುತ್ತ ಹೋಗುತ್ತಾನೆ. ಕೆಟ್ಟತನವನ್ನು ಮಾಡಿದವರಿಗೆ ದುಪ್ಪಟ್ಟು ಬುದ್ಧಿ ಕಲಿಸುತ್ತ, ಅವರು ಮಾಡಿದ ಕರ್ಮಕ್ಕೆ ಪಶ್ಚಾತ್ತಾಪ ಮೂಡಿಸಿ ಮಮ್ಮಲ ಮರುಗುವಂತೆ ಮಾಡಿ ಸಾವಿನಂಚಿನವರೆಗೂ ತಂದು ನಿಲ್ಲಿಸುತ್ತಾನೆ. ಆದರೆ ಸಾವನ್ನು ಬರಲೂ ಬಿಡುವುದಿಲ್ಲ. ಏಕೆಂದರೆ ಸಾವಿನೊಂದಿಗೆ ಜೀವ ಕೊಂಡೊಯ್ಯುವವ ಯಮ ಅವನ ಸಹೋದರ!

ಈಗ ಮೀನ ರಾಶಿಯವರಿಗೆ ಶನಿ ಮಹಾರಾಜನು ಅಷ್ಟಮ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಈ ರಾಶಿಯವರಿಗೆ ಅಷ್ಟಮಶನಿಯ ಕಾಡಾಟ ಅನುಭವಕ್ಕೆ ಬಂದಿರುತ್ತದೆ. ಶನಿ ಮಹಾರಾಜನು ಯಾವ ಯಾವ ರಾಶಿಯವರಿಗೆ ಈಗ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂಬುದನ್ನು ಮುಂದಿನ ಲೇಖನದಲ್ಲಿ ಓದುವಿರಿ.

ವಾಸ್ತು ಟಿಪ್ಸ್: ಮಲಗುವಾಗ ದಕ್ಷಿಣ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು. ಆರೋಗ್ಯ, ಐಶ್ಚರ್ಯ, ಸುಖ ನಿದ್ರೆ ಬೇಕಾದರೆ ಈ ರೀತಿ ಮಲಗಲೇಬೇಕು. [ಲೇಖಕರ ಮೊಬೈಲ್ : 9481522011]

English summary
Though Shani (Saturn) is far away from earth, he can affect our lifestyle based on the deeds, good or bad, we have done in our present life time. So, it is better not to curse Shani for whatever reason. The moral is, think and do only good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X