ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ: ಸೆ.13ಕ್ಕೆ ಹಿಂದೆಂದೂ ಬಾರದ, ಮುಂದೆಯೂ ಕಾಣದ 'ಅಪರೂಪದ ಗಳಿಗೆ'

|
Google Oneindia Kannada News

ಈ ಹಿಂದಿನ 250 ವರ್ಷಗಳಲ್ಲಿ ಮತ್ತು ಮುಂಬರುವ 250ವರ್ಷಗಳಲ್ಲಿ ಎಂದೂ ಬರದ ಅಪರೂಪದ ಗಳಿಗೆ, ಭಾನುವಾರದಂದು (ಸೆ13) ಬರಲಿದೆ ಎಂದು ಖ್ಯಾತ ಸಂಖ್ಯಾ ಶಾಸ್ತ್ರ ಪ್ರವೀಣ, ಹೈದರಾಬಾದ್ ಮೂಲದ, ಪಿಎಚ್ಡಿ ಪದವೀಧರ, ಡಾ.ರವಿ ಸುಂದರ್ ಹೇಳಿದ್ದಾರೆ.

ಅವರ ಆಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಅವರ ಹೇಳಿದ ಮಾತುಗಳು ಹೀಗಿವೆ. "ಕುತೂಹಲಕಾರಿ ವಿಚಾರವೊಂದನ್ನು ನಿಮ್ಮ ಜೊತೆ ಶೇರ್ ಮಾಡಿಕೊಳ್ಳಲು ಬಯಸುತ್ತೇನೆ. ಅದು ಸೆಪ್ಟಂಬರ್ ಹದಿಮೂರರಂದು ಬರುವ ಅಪರೂಪದ ಗಳಿಗೆಯ ಬಗ್ಗೆ".

ಜ್ಯೋತಿಷ್ಯ: ನವೆಂಬರ್ ನಿಂದ ಏಪ್ರಿಲ್ ಮಧ್ಯೆ ಭಾರತದಲ್ಲಿ ಆಗಬಹುದಾದ ಆ ಬದಲಾವಣೆಗಳೇನು?ಜ್ಯೋತಿಷ್ಯ: ನವೆಂಬರ್ ನಿಂದ ಏಪ್ರಿಲ್ ಮಧ್ಯೆ ಭಾರತದಲ್ಲಿ ಆಗಬಹುದಾದ ಆ ಬದಲಾವಣೆಗಳೇನು?

ರಾಮಾಯಣದ ಕಾಲದಲ್ಲಿ ಇಂದ್ರಜಿತ್ ಹುಟ್ಟುವ ಸಮಯದಲ್ಲಿ ರಾವಣ ಎಲ್ಲಾ ಗ್ರಹಗಳನ್ನು ಅತ್ಯಂತ ಪ್ರಶಸ್ತವಾದ ಜಾಗದಲ್ಲಿ ನಿಯೋಜಿಸುತ್ತಾನೆ. ಆ ಮೂಲಕ, ಅವನು ಸೂಪರ್ ಪವರ್ ಆಗಲಿ ಎನ್ನುವುದು ಆತನ ಉದ್ದೇಶವಾಗಿತ್ತು. ರಾಮನು ಹುಟ್ಟುವ ಸಮಯದಲ್ಲೂ ಎಲ್ಲಾ ಗ್ರಹಗಳು ಪ್ರಶಸ್ತವಾದ ಸ್ಥಾನದಲ್ಲಿದ್ದವು.

"ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದೇ ರೀತಿಯ ಅತಿ ಅಪರೂಪದ ಗಳಿಗೆ, ಗ್ರಹಗಳು ಇರುವ ಸ್ಥಾನ, ಸುಮಾರು ಐನೂರು ವರ್ಷಗಳಲ್ಲಿ, ಹಿಂದೆಂದೂ ಕಂಡರಿಯದ, ಸಮಯ, ಭಾನುವಾರದಂದು ಬರಲಿದೆ"ಎಂದು ಡಾ.ರವಿ ಸುಂದರ್ ಹೇಳಿದ್ದಾರೆ.

ಕೊರೊನಾ ಹಾವಳಿ ತೀವ್ರಗೊಳ್ಳುವ ಸಮಯ: ಕೋಡಿಶ್ರೀಗಳು ನುಡಿದ ಭವಿಷ್ಯದ ದಿನ ಮುಂದೆ ಬರುತ್ತಿದೆಕೊರೊನಾ ಹಾವಳಿ ತೀವ್ರಗೊಳ್ಳುವ ಸಮಯ: ಕೋಡಿಶ್ರೀಗಳು ನುಡಿದ ಭವಿಷ್ಯದ ದಿನ ಮುಂದೆ ಬರುತ್ತಿದೆ

ತೊಂಬತ್ತು ನಿಮಿಷದ ವರೆಗೆ ಪ್ರಶಸ್ತವಾದ ಜಾಗದಲ್ಲಿ ಇರಲಿದೆ

ತೊಂಬತ್ತು ನಿಮಿಷದ ವರೆಗೆ ಪ್ರಶಸ್ತವಾದ ಜಾಗದಲ್ಲಿ ಇರಲಿದೆ

ನವಗ್ರಹಗಳಲ್ಲಿ ರಾಹು ಕೇತುವನ್ನು ಹೊರತು ಪಡಿಸಿ, ಉಳಿದ ಏಳು ಗ್ರಹಗಳು, ಸುಮಾರು ತೊಂಬತ್ತು ನಿಮಿಷದ ವರೆಗೆ ಪ್ರಶಸ್ತವಾದ ಜಾಗದಲ್ಲಿ ಇರಲಿದೆ. ಸೂರ್ಯನು ಸಿಂಹ ರಾಶಿಯಲ್ಲಿ, ಚಂದ್ರ ಕಟಕ ರಾಶಿಯಲ್ಲಿ, ಮಂಗಳ ಮತ್ತು ಕುಜ ಮೇಷ ರಾಶಿ, ಬುಧ ಕನ್ಯಾ ರಾಶಿ, ಗುರು ಧನು ರಾಶಿ, ಶನಿ ಮಕರ ರಾಶಿಯಲ್ಲಿ ಇರುತ್ತವೆ.

ಭಾನುವಾರ, ಸೆ 13ರ ಬೆಳಗ್ಗೆ 10.45 ರಿಂದ ಮಧ್ಯಾಹ್ನ 12ಗಂಟೆ

ಭಾನುವಾರ, ಸೆ 13ರ ಬೆಳಗ್ಗೆ 10.45 ರಿಂದ ಮಧ್ಯಾಹ್ನ 12ಗಂಟೆ

ಭಾನುವಾರ, ಸೆ 13ರ ಬೆಳಗ್ಗೆ 10.45 ರಿಂದ ಮಧ್ಯಾಹ್ನ 12ಗಂಟೆಯವರೆಗಿನ ಸಮಯ ಅತ್ಯಂತ ಪ್ರಶಸ್ತವಾದದ್ದು ಎಂದು ಡಾ. ರವಿ ಸುಂದರ್ ಹೇಳಿದ್ದಾರೆ. ಈ ಅವಧಿ ಅತ್ಯಂತ ಶುಭಕರವಾದದ್ದು. ಯಾಕೆಂದರೆ, ಆ ವೇಳೆ ವೃಶ್ಚಿಕ ಲಗ್ನವಿರಲಿದೆ. ಗುರು ಎರಡನೇ ಮನೆಯಲ್ಲಿ, ಶನಿ ಮೂರನೇ ಮನೆಯಲ್ಲಿ ಇರಲಿದ್ದಾನೆ. ಕುಜ ಆರನೇ ಮನೆಯಲ್ಲಿ ಆ ವೇಳೆ ಇರುತ್ತಾನೆ.

 ದೇವರ ಸ್ಮರಣೆ ಮಾಡಿದರೆ ಒಳ್ಳೆಯದು

ದೇವರ ಸ್ಮರಣೆ ಮಾಡಿದರೆ ಒಳ್ಳೆಯದು

ಈ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಒಳ್ಳೆಯದು. ಇದರಿಂದ, ಆರೋಗ್ಯ, ವ್ಯವಹಾರ, ಕೆಲಸಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಪರಿಹಾರ ಸಿಗಬಹುದು. ಇನ್ನು, ಚಂದ್ರ ಒಂಬತ್ತನೇ ಮನೆಯಲ್ಲಿ, ಸೂರ್ಯನು ಹತ್ತನೇ ಮನೆಯಲ್ಲಿ, ಬುಧ ಹನ್ನೊಂದನೇ ಮನೆಯಲ್ಲಿ ಇರಲಿದ್ದಾನೆ. ಇದೊಂದು ಅಪರೂಪದ ಸಮಯ ಎಂದು ರವಿ ಸುಂದರ್ ಹೇಳಿದ್ದಾರೆ.

ಮನೆಯಲ್ಲೇ ಇದ್ದು ವಿಷ್ಣು ಸಹಸ್ರನಾಮ ಪಠಿಸಿ

ಮನೆಯಲ್ಲೇ ಇದ್ದು ವಿಷ್ಣು ಸಹಸ್ರನಾಮ ಪಠಿಸಿ

ಹಾಗಾಗಿ, ಈ ಸಮಯದಲ್ಲಿ (10.45 ರಿಂದ ಮಧ್ಯಾಹ್ನ 12ಗಂಟೆ) ಮನೆಯಲ್ಲೇ ಇದ್ದು ದೇವರ ಸ್ಮರಣೆಯನ್ನು ಮಾಡಿ. ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಹನುಮಾನ್ ಚಾಲೀಸ್, ರಾಮರಕ್ಷಾ ಮಂತ್ರ ಅಥವಾ ಯಾವುದೇ ನಿಮಗೆ ಗೊತ್ತಿರುವ ಮಂತ್ರವನ್ನು ಪಠಿಸಿ, ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಡಾ.ರವಿ ಸುಂದರ್, ಆಡಿಯೋದಲ್ಲಿ ಹೇಳಿದ್ದಾರೆ.

English summary
September 13 Rare Planet Position For 45 Minutes, Very Auspicious Said Noted Astrologer Dr. Ravi Sundar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X