ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭ ರಾಶಿಯಲ್ಲಿ ಶನಿ ಸಂಚಾರ: ದ್ವಾದಶ ರಾಶಿಗಳ ಮೇಲೆ ಹೇಗಿದೆ ಗ್ರಹಚಾರ?

|
Google Oneindia Kannada News

ಶನಿಯು ನಿಧಾನವಾಗಿ ಸಾಗುವ ಗ್ರಹವಾಗಿದೆ. ಇದು ಒಂದು ರಾಶಿಯಿಂದ ಸಾಗಲು ಸುಮಾರು 2.5 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಂಬಲಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಇದನ್ನು ಶುಷ್ಕ ಮತ್ತು ಶೀತ ಗ್ರಹ ಎಂದು ಕರೆಯಲಾಗುತ್ತದೆ. ಇದನ್ನು ದುಷ್ಟ ಗ್ರಹ ಎಂದು ಕೂಡಾ ಹೇಳಲಾಗುತ್ತದೆ. ಇದರ ಪ್ರಭಾವ ಬಿದ್ದರೆ ಜನರು ಸಾಮಾನ್ಯವಾಗಿ ದುಃಖ ಮತ್ತು ಖಿನ್ನತೆಗೆ ಒಳಗಾಗುತ್ತಾರೆ ಎಂದು ನಂಬಲಾಗಿದೆ. ಇದರ ಪರಿಣಾಮ ನಿಧಾನವಾಗಿ ತ್ರೀವ್ರಗೊಳ್ಳುತ್ತಾ ಹೋಗುತ್ತದೆ. ಆದರೆ ಕರ್ಮ ಫಲವಿದ್ದರೆ, ಒಳ್ಳೆಯದ್ದನ್ನು ಮಾಡಿದ್ದರೆ ಶನಿಯು ಒಳ್ಳೆಯ ಫಲವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಕೆಟ್ಟದನ್ನು ಮಾಡುವವರಿಗೆ ಶಿಕ್ಷೆಯಾಗುತ್ತದೆ ಎಂದು ಕೂಡಾ ನಂಬಲಾಗಿದೆ.

ಶನಿಯು ಗುರುವೆಂದು ಪ್ರಸಿದ್ಧವಾಗಿದೆ ಮತ್ತು ಇದು ಕರ್ಮಭಾವದ ಸೂಚಕವಾಗಿದೆ. ಇದು ದುಃಖ, ಅಪಘಾತಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ ದುಃಖದ ನಂತರ ಅಂತಿಮ ಫಲಿತಾಂಶಗಳು ಉತ್ತಮವಾಗಿರುತ್ತದೆ. ನಾವು ತಪ್ಪು ಸರಿಯ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. ಜನರು ಸಮತೋಲನ ಜೀವನ ನಡೆಸಲು ಶನಿಯು ಸಹಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ.

Surya Gochar 2022: ಮೇಷ ರಾಶಿಯಲ್ಲಿ ಸೂರ್ಯ ಸಂಚಾರ: ದ್ವಾದಶಿ ರಾಶಿಗಳ ಮೇಲೆ ಹೇಗಿದೆ ಪ್ರಭಾವ? Surya Gochar 2022: ಮೇಷ ರಾಶಿಯಲ್ಲಿ ಸೂರ್ಯ ಸಂಚಾರ: ದ್ವಾದಶಿ ರಾಶಿಗಳ ಮೇಲೆ ಹೇಗಿದೆ ಪ್ರಭಾವ?

ವೈದಿಕ ಜ್ಯೋತಿಷ್ಯದಲ್ಲಿ, ಎರಡು ರಾಶಿಗಳು ಅಂದರೆ ಮಕರ ಮತ್ತು ಕುಂಭವನ್ನು ಶನಿ ಗ್ರಹವು ಆಳುತ್ತದೆ. ಎರಡು ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ನ್ಯಾಯಯುತವಾಗಿ ವ್ಯವಹರಿಸುವ ಶನಿಯು ಸಮತೋಲನದ ಜೀವನದ ಸಂಕೇತವಾಗಿದ್ದು, ಶುಕ್ರ ಗ್ರಹದಿಂದ ಆಳಲ್ಪಡುವ ತುಲಾದ ಮೇಲೂ ಪರಿಣಾಮವನ್ನು ಉಂಟು ಮಾಡುತ್ತದೆ. ಈ ರಾಶಿಯ ಪ್ರಭಾವವನ್ನು ತುಲನಾತ್ಮಕವಾಗಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಶನಿಯು ಏಪ್ರಿಲ್ 29ರಂದು ಕುಂಭ ರಾಶಿಯ ಮೇಲೆ ಸಂಚಾರ ಮಾಡಿದರೆ, ಜುಲೈ 12ರ ವೇಳೆಗೆ ತುಲಾ ರಾಶಿಯ ಮೇಲೆ ಸಂಚಾರ ಮಾಡಲಿದೆ. ಹಾಗಾದರೆ ಕುಂಭ ರಾಶಿಯಲ್ಲಿ ಶನಿ ಸಂಚಾರದಿಂದ ದ್ವಾದಶಿ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂದು ತಿಳಿಯಲು ಮುಂದೆ ಓದಿ...

 ಮೇಷ ರಾಶಿ: ಶನಿ ಸಂಚಾರ ಪ್ರಭಾವ

ಮೇಷ ರಾಶಿ: ಶನಿ ಸಂಚಾರ ಪ್ರಭಾವ

ಮೇಷ ರಾಶಿಯಲ್ಲಿ ಶನಿಯು ವರ್ಷದ ಆರಂಭದಲ್ಲಿ ನಿಮ್ಮ ಹತ್ತನೇ ಮನೆಯಿಂದ ಸಾಗಲಿದೆ. ವೃತ್ತಿಪರ ರಂಗದಲ್ಲಿ ನೀವು ನಿಜವಾಗಿಯೂ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಕಷ್ಟಪಟ್ಟು ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ. ಆಗ ಮಾತ್ರ ನಿಮ್ಮ ಸಾಮರ್ಥ್ಯಗಳನ್ನು ನಿಮ್ಮ ಸಹೋದ್ಯೋಗಿಗಳು ಮತ್ತು ತಂಡದ ಸದಸ್ಯರು ಗುರುತಿಸಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಕಾನೂನು ಸಂಸ್ಥೆಗಳು ಮತ್ತು ಪೆಟ್ರೋಲ್ ಉದ್ಯಮದಲ್ಲಿ ಇರುವವರು ಅನುಕೂಲಕರ ಅವಧಿಯನ್ನು ಹೊಂದಿರುತ್ತಾರೆ. ಪೌರಕಾರ್ಮಿಕರು ತಮ್ಮ ಶ್ರಮದಾಯಕ ಕೆಲಸದಿಂದ ಖ್ಯಾತಿ ಗಳಿಸಲು ಸಾಧ್ಯವಾಗಲಿದೆ.

ಏಪ್ರಿಲ್ 2022 ರಲ್ಲಿ, ಶನಿಯು ನಿಮ್ಮ ಆದಾಯ ಮತ್ತು ಲಾಭಗಳ ಹನ್ನೊಂದನೇ ಮನೆಯಿಂದ ಸಾಗುತ್ತಾನೆ. ಈ ಸಂಚಾರ ಅವಧಿಯಲ್ಲಿ ನಿಮ್ಮ ಎಲ್ಲಾ ಶ್ರಮ ಫಲವು ಲಭ್ಯವಾಗಲಿದೆ. ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದ ಹುಡುಕಾಟದಲ್ಲಿರುವ ಈಗಷ್ಟೇ ಶಿಕ್ಷಣ ಮುಗಿಸಿದ ಯುವಕರಿಗೆ ಉತ್ತಮ ಸಮಯ ಇದಾಗಿದೆ. ಸರ್ಕಾರಿ ನೌಕರರಿಗೆ ಅನುಕೂಲಕರ ಅವಧಿಯಾಗಿದೆ.ಉನ್ನತ ಅಧಿಕಾರಿಗಳಿಂದ ಗೌರವ ದೊರೆಯುತ್ತದೆ. ಜುಲೈನಲ್ಲಿ ಹತ್ತನೇ ಮನೆಗೆ ಶನಿ ಸಂಚಾರ ಮಾಡಲಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಹಿರಿಯರಿಂದ ನೀವು ಟೀಕೆಗೆ ಒಳಗಾಗುತ್ತೀರಿ. ಕೆಲವು ಕಾನೂನುಬಾಹಿರ ಚಟುವಟಿಕೆಗಳಿಂದ ಅಥವಾ ಕೆಲವು ಗುಪ್ತ ಮೂಲಗಳಿಂದ ಗಳಿಕೆಯಲ್ಲಿ ನೀವು ತೊಡಗಿದ್ದರೆ, ಸಿಕ್ಕಿಬೀಳುತ್ತೀರಿ.

ಪರಿಹಾರ: ಕಪ್ಪು ಎಳ್ಳನ್ನು ಅಗತ್ಯವಿರುವವರಿಗೆ ದಾನ ಮಾಡಿ

 ವೃಷಭ ರಾಶಿ: ಶನಿ ಸಂಚಾರ ಪ್ರಭಾವ

ವೃಷಭ ರಾಶಿ: ಶನಿ ಸಂಚಾರ ಪ್ರಭಾವ

ಶನಿ ಸಂಚಾರದಿಂದಾಗಿ ನೀವು ವರ್ಷದ ಆರಂಭದಲ್ಲಿ ಮಾಡಿದ ಎಲ್ಲಾ ಕಾರ್ಯಗಳ ಪ್ರತಿಫಲ ನಿಮಗೆ ಲಭ್ಯವಾಗಲಿದೆ. ವೈಯಕ್ತಿಕ ಮಟ್ಟದಲ್ಲಿ ಅಥವಾ ವೃತ್ತಿಪರ ಮಟ್ಟದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ಪಡೆಯುವ ವಿ‍ಚಾರದಲ್ಲಿ ನೀವು ಸಾಕಷ್ಟು ಅದೃಷ್ಟಶಾಲಿಯಾಗುತ್ತೀರಿ. ಆದರೆ ಉತ್ತಮ ಫಲಿತಾಂಶಕ್ಕಾಗಿ ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಅದು ನಿಮ್ಮ ದೃಷ್ಟದ ಮನೆಯಲ್ಲಿ ಕಾಲಿರಿಸಿದಾಗ ನಿಮಗೆ ಅದೃಶ್ಯವು ನಿಧಾನವಾಗಿ ಲಭಿಸಲಿದೆ. ಈ ಅವಧಿಯಲ್ಲಿ ನಿಮ್ಮ ನಂಬಿಕೆಯಲ್ಲಿ ಬದಲಾವಣೆಗಳು ಆಗಲಿದೆ. ನೀವು ಯಾವುದೇ ರೀತಿಯ ಧಾರ್ಮಿಕ ಆಚರಣೆ, ಆರಾಧನೆಯಲ್ಲಿ ತೊಡಗಿದ್ದರೆ ಕರ್ಮದ ಮೇಲ ನಂಬಿಕೆ ಇಟ್ಟುಕೊಳ್ಳುತ್ತೀರಿ.

ಏಪ್ರಿಲ್ ಅಂತ್ಯದ ವೇಳೆಗೆ ಶನಿಯು ನಿಮ್ಮ ಹತ್ತನೇ ಮನೆಗೆ ಸಂಚಾರ ಮಾಡುತ್ತಾನೆ. ಈ ಅವಧಿಯು ನಿಮ್ಮ ವೃತ್ತಿಪರ ಜೀವನದಲ್ಲಿ ಕೆಲವು ಉತ್ತಮ ಅವಕಾಶಗಳನ್ನು ತರುತ್ತದೆ. ಈ ಅವಧಿಯಲ್ಲಿ ನಿಮ್ಮ ಕನಸಿನ ಉದ್ಯೋಗವನ್ನು ನೀವು ಪಡೆಯಬಹುದು. ನಿಮ್ಮ ವೃತ್ತಿಪರ ಬಂಧಗಳು ಸುಧಾರಿಸುತ್ತವೆ. ನಿಮ್ಮ ತಂಡದೊಂದಿಗೆ ಸಮನ್ವಯ ಉತ್ತಮವಾಗಲಿದೆ. ನಿಮ್ಮ ಒಂಬತ್ತನೇ ಮನೆಗೆ ಶನಿಯ ಸಂಚಾರವು ನಿಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪ ಅಡಚಣೆಯನ್ನು ತರುತ್ತದೆ. ಕೆಲವು ಸ್ಥಳ ಬದಲಾವಣೆ ಅಥವಾ ನಿಮ್ಮ ತಂಡದ ಸದಸ್ಯರ ಬದಲಾವಣೆ ಆಗಬಹುದು. ಕೆಲಸ ಬದಲಾವಣೆಗೆ ಉತ್ತಮ ಕಾಲವಾಗಿದೆ. ಯಾವುದೇ ಪರಿಹಾರವಾಗದ ವಿಚಾರವಿದ್ದರೆ ಅದನ್ನು ಪರಿಹರಿಸಲು ಸಕಾಲ.

ಪರಿಹಾರ: ಕಬ್ಬಿಣದ ಉಂಗುರವನ್ನು ಧರಿಸಿ

 ಮಿಥುನ: ಶನಿ ಸಂಚಾರ ಪ್ರಭಾವ

ಮಿಥುನ: ಶನಿ ಸಂಚಾರ ಪ್ರಭಾವ

ಶನಿಯು ವರ್ಷದ ಪ್ರಾರಂಭದಲ್ಲಿ ನಿಮ್ಮ ಎಂಟನೇ ಮನೆಯಲ್ಲಿ ಸಂಚಾರ ಮಾಡಲಿದ್ದಾನೆ. ಶನಿಯ ಈ ಸ್ಥಾನವು ನಿಗೂಢ ರಹಸ್ಯಗಳು ಮತ್ತು ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ನಿಮ್ಮಲ್ಲಿ ಆಸಕ್ತಿ ಹುಟ್ಟಿಸುತ್ತದೆ. ನೋವು ಮತ್ತು ದುಃಖವನ್ನು ಕಡಿಮೆ ಮಾಡಲು ಪರ್ಯಾಯ ಚಿಕಿತ್ಸೆ ಕಲಿಕೆಯೆಡೆ ನೀವು ಮುಖ ಮಾಡಲಿದ್ದೀರಿ. ನೀವು ತುಂಬಾ ಚಿಂತನಶೀಲರಾಗಿರುತ್ತೀರಿ. ಅದರಿಂದಾಗಿ ನೀವು ಯಾವುದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದು ನಿಧಾನವನ್ನಾಗಿಸುತ್ತದೆ. ನೀವು ಉಸಿರಾಟದ ವ್ಯಾಯಾಮ, ಧ್ಯಾನವನ್ನು ಮಾಡಬೇಕು. ಯೋಗದ ಅಭ್ಯಾಸಗಳು ಸಾಮಾನ್ಯ ಯೋಗಕ್ಷೇಮ ಮತ್ತು ಜಾಗೃತಿಯನ್ನು ತರಲು ನಿಮಗೆ ಸಹಾಯ ಮಾಡುತ್ತದೆ.

ಏಪ್ರಿಲ್ ತಿಂಗಳಲ್ಲಿ ನಿಮ್ಮ ಒಂಬತ್ತನೇ ಮನೆಯಲ್ಲಿ ಶನಿಯ ಸಂಚಾರವು ನಿಮ್ಮ ಬಹುನಿರೀಕ್ಷಿತ ಕೆಲಸಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ನೀವು ಹೆಚ್ಚು ಶಾಂತ ಮತ್ತು ತಾಳ್ಮೆಯಿಂದಿರುತ್ತೀರಿ. ಈ ಸಮಯದಲ್ಲಿ ನೀವು ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣಿಸಬಹುದು. ನೀವು ಕಷ್ಟಪಟ್ಟು ಕೆಲಸ ಮಾಡುವಿರಿ ಮತ್ತು ನಿಮ್ಮ ವೃತ್ತಿ ಮತ್ತು ಗಳಿಕೆಯನ್ನು ಸುಧಾರಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೀರಿ. ಕಿರಿಯರೊಂದಿಗೆ ತಪ್ಪು ತಿಳುವಳಿಕೆ ಮೂಡಬಹುದು. ಜುಲೈ ತಿಂಗಳಲ್ಲಿ ನಿಮ್ಮ ಎಂಟನೇ ಮನೆಗೆ ಶನಿಯು ಹಿಂತಿರುಗುವುದರಿಂದ ನಿಮಗೆ ಈ ಹಿಂದೆ ಇದ್ದ ರೋಗಗಳು ಮತ್ತೆ ಕಾಣಿಸಿಕೊಳ್ಳಬಹುದು. ನೀವು ಮೂಳೆ ಗಾಯಗಳು ಮತ್ತು ಕೆಲವು ದೀರ್ಘಕಾಲದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಕೊಂಚ ಜಾಗರೂಕರಾಗಿರಿ.

ಪರಿಹಾರ: ಶನಿವಾರ ಸಾಸಿವೆ ಎಣ್ಣೆಯನ್ನು ದಾನ ಮಾಡಿ

 ಕರ್ಕಾಟಕ: ಶನಿ ಸಂಚಾರ ಪ್ರಭಾವ

ಕರ್ಕಾಟಕ: ಶನಿ ಸಂಚಾರ ಪ್ರಭಾವ

ಶನಿಗ್ರಹವು ನಿಮ್ಮ ಏಳನೇ ಮನೆಯಲ್ಲಿ ಏಪ್ರಿಲ್ ಅಂತ್ಯದವರೆಗೆ ಸಂಚಾರ ಮಾಡಲಿದ್ದಾನೆ. ಇದು ನಿಮ್ಮ ವೈವಾಹಿಕ ಜೀವನದ ಆನಂದಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ಉಂಟು ಮಾಡಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರದು. ನಿಮ್ಮ ಸಂಗಾತಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದ್ದಂತೆ ನಿಮಗೆ ಅನಿಸಬಹುದು. ಮದುವೆಯಾಗಲು ಮುಂದಾಗಿರುವವರು ಸಂಗಾತಿಯನ್ನು ಹುಡುಕುವಲ್ಲಿ ಅಡೆತಡೆ ಅನುಭವಿಸುವಿರಿ. ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು.

ನಿಮ್ಮ ಎಂಟನೇ ಮನೆಯಲ್ಲಿ ಶನಿಯ ಸಂಚಾರವು ವೃತ್ತಿಪರ ಜೀವನದಲ್ಲಿ ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಉದ್ಯೋಗಿಗಳು ಅಥವಾ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ವೃತ್ತಿಪರವಾಗಿ ನಿಮ್ಮ ಯೋಜನೆಗಳು ಕುಸಿಯುವುದರಿಂದ ನೀವು ಒತ್ತಡಕ್ಕೊಳಗಾಗುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಸಂಬಂಧದಲ್ಲಿ ಕುಟುಂಬ ಅಥವಾ ಸ್ನೇಹಿತರ ಮಧ್ಯಸ್ಥಿಕೆಯಿಂದಾಗಿ ನಿಮ್ಮ ಸಂಗಾತಿಯೊಂದಿಗೆ ನೀವು ತಪ್ಪು ತಿಳುವಳಿಕೆಯನ್ನು ಎದುರಿಸಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಶನಿಯು ನಿಮ್ಮ ಏಳನೇ ಮನೆಗೆ ಮರಳುತ್ತಾನೆ. ಮದುವೆಯ ವಿಷಯದಲ್ಲಿ ಈ ಸಮಯವು ನಿಮಗೆ ಅನುಕೂಲಕರವಾಗಿದೆ. ದಂಪತಿಗಳ ನಡುವಿನ ಹಿಂದಿನ ಸಮಸ್ಯೆಗಳು ಬಗೆಹರಿಯಲು ಪ್ರಾರಂಭಿಸುತ್ತವೆ. ವೃತ್ತಿಪರರಿಗೆ ಅಂದರೆ ವಕೀಲರು ಮತ್ತು ವೈದ್ಯರಿಗೆ ಉತ್ತಮವಾಗಿರುತ್ತದೆ.

ಪರಿಹಾರ: ಶನಿವಾರದಂದು ಅಗತ್ಯವಿರುವವರಿಗೆ ಕಪ್ಪು ಬಟ್ಟೆ ಮತ್ತು ಚಪ್ಪಲಿಯನ್ನು ದಾನ ಮಾಡಿ.

 ಸಿಂಹ: ಶನಿ ಸಂಚಾರ ಪ್ರಭಾವ

ಸಿಂಹ: ಶನಿ ಸಂಚಾರ ಪ್ರಭಾವ

ವರ್ಷದ ಪ್ರಾರಂಭದಲ್ಲಿ ನಿಮ್ಮ ಆರನೇ ಮನೆಯಲ್ಲಿ ಶನಿ ಸಂಚಾರವಾಗಲಿದೆ. ನೀವು ನ್ಯಾಯಾಲಯದ ಮೊಕದ್ದಮೆಗಳನ್ನು ಎದುರಿಸುತ್ತಿದ್ದರೆ ಈ ಅವಧಿಯು ಉತ್ತಮ ಫಲಿತಾಂಶ ನೀಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಅವಧಿಯಲ್ಲಿ ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ವಿವಾಹಿತರಿಗೆ ಈ ಅವಧಿಯು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಸಂಗಾತಿಯೊಂದಿಗೆ ಸಣ್ಣ ವಿಷಯಗಳಿಗೆ ಜಗಳವಾಗಬಹುದು. ಪರಸ್ಪರರ ನಿಲುವು, ವಿಚಾರವನ್ನು ಅರ್ಥಮಾಡಿಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಏಪ್ರಿಲ್ ಅಂತ್ಯದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಶನಿಯ ಸಂಚಾರವು ಸಂಘಟನೆಯಲ್ಲಿ ಕೆಲಸ ಮಾಡುವವರಿಗೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯ ಸಲಹೆ, ಪ್ರಬುದ್ಧ ನಿರ್ಧಾರಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ಜೀವನ ಸಂಗಾತಿಗಾಗಿ ಹುಡುಕಾಟ ನಡೆಸುವವರು ಅದೃಷ್ಟವನ್ನು ಪಡೆಯುತ್ತಾರೆ. ಜುಲೈ ತಿಂಗಳಲ್ಲಿ ಶನಿಯು ನಿಮ್ಮ ಆರನೇ ಮನೆಗೆ ಮರಳುತ್ತದೆ. ಈ ವೇಳೆ ಕೆಲವು ಹಳೆಯ ಕಾಯಿಲೆಗಳು ಮರುಕಳಿಸುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಅಲ್ಲದೆ, ಈ ಅವಧಿಯಲ್ಲಿ ನೀವು ಗಾಯ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಗುರಿಯಾಗುತ್ತೀರಿ. ಕಾನೂನು ವಿದ್ಯಾರ್ಥಿಗಳಿಗೆ ಅಥವಾ ಕಾನೂನು ವ್ಯಾಜ್ಯದಲ್ಲಿರುವವರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಉನ್ನತಿಯನ್ನು ಪಡೆಯುತ್ತೀರಿ. ನೀವು ಕಾರ್ಯನಿರ್ವಹಣೆ ಮಾಡುವ ಸಂಸ್ಥೆಯು ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸುತ್ತದೆ.

ಪರಿಹಾರ: ನಾಯಿಗಳಿಗೆ ಸಂಜೆ ವಿಶೇಷವಾಗಿ ಶನಿವಾರದಂದು ಹಾಲು ಮತ್ತು ಬ್ರೆಡ್ ಅನ್ನು ನೀಡಿ.

 ಕನ್ಯಾ: ಶನಿ ಸಂಚಾರ ಪ್ರಭಾವ

ಕನ್ಯಾ: ಶನಿ ಸಂಚಾರ ಪ್ರಭಾವ

ಶನಿಯು ವರ್ಷದ ಆರಂಭದಲ್ಲಿ ನಿಮ್ಮ ಐದನೇ ಮನೆಯಿಂದ ಸಾಗುತ್ತಾನೆ. ವಿದ್ಯಾರ್ಥಿಗಳಿಗೆ ಈ ಅವಧಿಯು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಅಧ್ಯಯನದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಏಕಾಗ್ರತೆ ಕಡಿಮೆ ಆಗಲಿದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಮಯವು ಉತ್ತಮವಾಗಿದೆ. ನೀವು ದೃಢ ಮನಸ್ಸನ್ನು ಹೊಂದಿರುತ್ತೀರಿ. ಮುಂಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಮದುವೆಯ ಬಗ್ಗೆ ಬಗ್ಗೆ ಯೋಚಿಸುತ್ತಿರುವವರು ಸ್ವಲ್ಪ ಸಮಯದವರೆಗೆ ಕಾಯಬೇಕಾಗಬಹುದು. ಏಕೆಂದರೆ ಈ ಸಮಯ ಉತ್ತಮ ಸುದ್ದಿ ನೀಡಲಾರದು.

ಜುಲೈ ತಿಂಗಳಿನಲ್ಲಿ ನಿಮ್ಮ ಆರನೇ ಮನೆಯಲ್ಲಿ ಶನಿಯ ಸಂಚಾರವು ಕಾನೂನು, ಚಾರ್ಟರ್ಡ್ ಅಕೌಂಟೆನ್ಸಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ಉತ್ತಮ ವಿರಾಮವನ್ನು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಸ್ಥರಿಗೆ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದಿಂದಾಗಿ ನೀವು ಪ್ರೋತ್ಸಾಹ ಮತ್ತು ಸಂಬಳ ಏರಿಕೆಗಳನ್ನು ಪಡೆಯಬಹುದು. ಉದ್ಯೋಗಗಳನ್ನು ಬದಲಾಯಿಸಲು ಯೋಜಿಸುತ್ತಿರುವವರಿಗೆ ಉತ್ತಮ ಸಮಯವಾಗಿದೆ. ಜುಲೈ ತಿಂಗಳಲ್ಲಿ ಶನಿಯು ಅಂತಿಮವಾಗಿ ನಿಮ್ಮ ಐದನೇ ಮನೆಗೆ ಮರಳುತ್ತದೆ. ಈ ಅವಧಿಯಲ್ಲಿ ನಿಮ್ಮ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಮಕ್ಕಳ ಬಗ್ಗೆ ಗಮನಹರಿಸಿ. ಕೆಲವು ಅನಿರೀಕ್ಷಿತ ಲಾಭಗಳನ್ನು ಪಡೆಯಬಹುದು.

ಪರಿಹಾರ: ಅಶ್ವತ್ಥ ಮರದ ಕೆಳಗೆ ನಿಮ್ಮ ಇಷ್ಟದ ಆಹಾರವನ್ನು ದಾನ ಮಾಡಿ

 ತುಲಾ: ಶನಿ ಸಂಚಾರ ಪ್ರಭಾವ

ತುಲಾ: ಶನಿ ಸಂಚಾರ ಪ್ರಭಾವ

ಶನಿಯು ವರ್ಷದ ಆರಂಭದಲ್ಲಿ ತುಲಾ ರಾಶಿಯ ನಾಲ್ಕನೇ ಮನೆಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಶಾಂತಿಗೆ ಅಡೆತಡೆ ಉಂಟಾಗಲಿದೆ. ಮನೆಯ ಸದಸ್ಯರ ನಡುವೆ ಜಗಳಗಳು ಮತ್ತು ವಾದಗಳು ನಡೆಯಬಹುದು. ಅದು ನಿಮಗೆ ದುಃಖ ಮತ್ತು ನಿರಾಶೆಯನ್ನು ತರುತ್ತದೆ. ನಿಮ್ಮ ಮನಸ್ಸಿನ ಶಾಂತಿಯನ್ನು ಸುಧಾರಿಸಲು ಮನೆಯಿಂದ ದೂರವಿರಲು ನೀವು ನಿರ್ಧಾರ ಮಾಡುವಿರಿ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಯೋಜಿಸುವವರಿಗೆ ಸಂತಸ ಲಭ್ಯವಾಗಲಿದೆ. ನಿಮ್ಮ ತಾಯಿಯೊಂದಿಗೆ ಕೆಲವು ವಾಗ್ವಾದ ನಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ ನಿಮ್ಮ ತಾಯಿಯು ಕೆಲವು ತೀವ್ರ ಆರೋಗ್ಯ ಸಮಸ್ಯೆ ಎದುರಿಸಬಹುದು. ಸ್ವಯಂ-ಚಿಕಿತ್ಸೆಯ ಬದಲಿಗೆ ವೈದ್ಯಕೀಯ ವೃತ್ತಿಪರರನ್ನು ಭೇಟಿಯಾಗುವುದು ಉತ್ತಮ.

ಏಪ್ರಿಲ್ ತಿಂಗಳಲ್ಲಿ ಶನಿಯು ನಿಮ್ಮ ಐದನೇ ಮನೆಯಿಂದ ಸಂಚಾರ ಮಾಡುತ್ತಾನೆ. ಇದು ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ. ಅಧ್ಯಯನಕ್ಕಾಗಿ ತಮ್ಮ ಪ್ರದೇಶದಿಂದ ಬೇರೆಡೆ ಸಂಚಾರ ಮಾಡಲು ಯೋಜಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಈ ಅವಧಿಯು ವ್ಯಾಪಾರದಿಂದ ಉತ್ತಮ ಲಾಭವನ್ನು ತರಬಹುದು. ನಿಮ್ಮ ಹವ್ಯಾಸಗಳು ಮತ್ತು ನಿಮ್ಮ ವ್ಯವಹಾರದಂತಹ ಆಸಕ್ತಿಗಳಲ್ಲಿ ತೊಡಗಲು ಮುಂದಾಗಿದ್ದರೆ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದರಿಂದ ಸಮಯವು ಅನುಕೂಲಕರವಾಗಿರುತ್ತದೆ. ಜುಲೈ ತಿಂಗಳಲ್ಲಿ ಶನಿಯು ನಿಮ್ಮ ಐದನೇ ಮನೆಗೆ ಮರಳುತ್ತದೆ. ಮನೆಯನ್ನು ನಿರ್ಮಿಸಲು ಅಥವಾ ಭೂಮಿಯನ್ನು ಖರೀದಿಸಲು ನೀವು ಯೋಜಿಸುತ್ತಿದ್ದರೆ ಈ ಅವಧಿಯು ಅನುಕೂಲಕರವಾಗಿರುತ್ತದೆ.

ಪರಿಹಾರ: ಶನಿವಾರದಂದು ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ದಾನ ಮಾಡಿ

 ವೃಶ್ಚಿಕ: ಶನಿ ಸಂಚಾರ ಪ್ರಭಾವ

ವೃಶ್ಚಿಕ: ಶನಿ ಸಂಚಾರ ಪ್ರಭಾವ

2022 ರಲ್ಲಿ ಶನಿಯ ಸಂಚಾರವು ವರ್ಷದ ಆರಂಭದಲ್ಲಿ ನಿಮ್ಮ ಮೂರನೇ ಮನೆಯಿಂದ ಆಗಲಿದೆ. ಇದು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಿಮ್ಮನ್ನು ಸಕ್ರಿಯಗೊಳಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಶಕ್ತಿ, ಧೈರ್ಯ ಮತ್ತು ಸಾಮರ್ಥ್ಯ ಅಧಿಕವಾಗುತ್ತದೆ. ನಿಮ್ಮ ಕಿರಿಯ ಸಹೋದರರೊಂದಿಗೆ ನಿಮ್ಮ ಬಾಂಧವ್ಯ ಉತ್ತಮವಾಗಿರುತ್ತದೆ. ಅವರು ನಿಮ್ಮ ಪ್ರಯತ್ನಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಈ ಅವಧಿಯಲ್ಲಿ ನೀವು ಸಾಹಸಮಯ ಮತ್ತು ಕ್ರೀಡಾ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ನೀವು ಈ ಅವಧಿಯಲ್ಲಿ ಜಿಮ್, ಅಥ್ಲೆಟಿಕ್ಸ್ ಅಥವಾ ಯೋಗದಂತಹ ಕೆಲವು ವ್ಯಾಯಾಮವನ್ನು ಆರಂಭ ಮಾಡಬಹುದು. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಬಾಂಧವ್ಯವು ತುಂಬಾ ಸೌಹಾರ್ದಯುತವಾಗಿರುವುದಿಲ್ಲ. ಜುಲೈ ತಿಂಗಳಲ್ಲಿ ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ಇದು ವಿದ್ಯಾರ್ಥಿಗಳ ಅಧ್ಯಯನದಲ್ಲಿ ಕೆಲವು ಅಡೆತಡೆಗಳನ್ನು ತರುತ್ತದೆ.

ಈ ಸಮಯದಲ್ಲಿ ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಕೆಲವು ನಿಶ್ಚಲತೆಯನ್ನು ಎದುರಿಸಬಹುದು. ನೀವು ಕೆಲವು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಅವಧಿಯಲ್ಲಿ ನೀವು ಚಿಕಿತ್ಸೆ ಅಥವಾ ಚೇತರಿಕೆ ಪಡೆಯಬಹುದು. ಜುಲೈ ತಿಂಗಳಿನಲ್ಲಿ ಶನಿಯು ಮೂರನೇ ಮನೆಗೆ ಹಿಂತಿರುಗುತ್ತಾನೆ, ಇದು ಕೆಲವು ಯೋಜನೆಗಳಿಗೆ ನಾಂದಿ ಹಾಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಖರ್ಚಿನ ಬಗ್ಗೆ ಸ್ವಲ್ಪ ಅಸಡ್ಡೆ ಹೊಂದಿರುತ್ತೀರಿ. ಅನಗತ್ಯ ವಿಷಯಗಳಿಗೆ ಸಾಕಷ್ಟು ಖರ್ಚು ಮಾಡುತ್ತೀರಿ. ಈ ಅವಧಿಯಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರಿಗಾಗಿ ಖರ್ಚು ಮಾಡುತ್ತೀರಿ. ಅಲಂಕಾರಿಕ ಉಡುಗೊರೆ ನೀಡಿ ಎಲ್ಲರೊಂದಿಗೆ ಸಂತೋಷವಾಗಿರಲು ಪ್ರಯತ್ನಿಸುತ್ತೀರಿ.

ಪರಿಹಾರ: ಶನಿವಾರದಂದು ಶನಿ ದೇವಸ್ಥಾನದಲ್ಲಿ ಸೊಪ್ಪನ್ನು ದಾನ ಮಾಡಿ

 ಧನು: ಶನಿ ಸಂಚಾರ ಪ್ರಭಾವ

ಧನು: ಶನಿ ಸಂಚಾರ ಪ್ರಭಾವ

ವರ್ಷದ ಆರಂಭದಲ್ಲಿ ಶನಿಯು ನಿಮ್ಮ ಎರಡನೇ ಮನೆಯಿಂದ ಸಾಗುತ್ತಾನೆ. ಈ ಅವಧಿಯಲ್ಲಿ, ನಿಮಗೆ ಉತ್ತಮ ಆರ್ಥಿಕ ಲಾಭ ಉಂಟಾಗಲಿದೆ. ನೀವು ಉತ್ತಮ ಆದಾಯ ಗಳಿಸುವಿರಿ. ಈ ಅವಧಿಯಲ್ಲಿ ಬಹಳಷ್ಟು ಉಳಿಸಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಹೋಗಲು ಯೋಜಿಸುತ್ತಿರುವವರಿಗೆ ಈ ಅವಧಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಲು ಮತ್ತು ಆಸ್ತಿಯಲ್ಲಿ ಹೂಡಿಕೆ ಮಾಡಲು ಸಹ ಸಮಯ ಅನುಕೂಲಕರವಾಗಿದೆ. ನಿಮ್ಮ ನಿಕಟ ಕುಟುಂಬದೊಂದಿಗೆ, ವಿಶೇಷವಾಗಿ ನಿಮ್ಮ ತಾಯಿಯೊಂದಿಗೆ ನಿಮ್ಮ ಬಾಂಧವ್ಯವು ಈ ಸಮಯದಲ್ಲಿ ಸುಧಾರಿಸುತ್ತದೆ. ನಿಶ್ಚಿತಾರ್ಥ ಮಾಡಿಕೊಳ್ಳುವ ಉತ್ತಮ ಅವಕಾಶಗಳಿವೆ.

ನಂತರ ಶನಿಯು ನಿಮ್ಮ ಮೂರನೇ ಮನೆಗೆ ಸಾಗುತ್ತದೆ. ಈ ವೇಳೆ ಧಾರ್ಮಿಕ ಕಾರ್ಯ ಹೆಚ್ಚಾಗಲಿದೆ. ನೀವು ಧರ್ಮಗ್ರಂಥಗಳ ಬಗ್ಗೆ ಕಲಿಯುವ ಒಲವನ್ನು ಹೊಂದಿರುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಈ ಸಂಕ್ರಮಣ ಅವಧಿಯಲ್ಲಿ ಶನಿಯು ನಿಮ್ಮ ಮಕ್ಕಳ ಮೇಲೆ ಪ್ರಭಾವ ಬೀರಲಿದೆ. ಈ ವೇಳೆ ಗರ್ಭಿಣಿಯಾಗಲು ಯೋಜಿಸುತ್ತಿರುವವರಿಗೆ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಹವ್ಯಾಸಗಳು ಮತ್ತು ಆಸಕ್ತಿಗಳನ್ನು ನಿಮ್ಮ ವೃತ್ತಿಯನ್ನಾಗಿ ಪರಿವರ್ತಿಸಲು ನೀವು ಯೋಜಿಸಬಹುದು. ಏಪ್ರಿಲ್ ತಿಂಗಳಲ್ಲಿ ಶನಿಯು ನಿಮ್ಮ ಎರಡನೇ ಮನೆಗೆ ಸಾಗುತ್ತಾನೆ, ಇದು ಕೆಲವು ಹಠಾತ್ ಲಾಭ ಅಥವಾ ಆರ್ಥಿಕ ಲಾಭವನ್ನು ತರಬಹುದು. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುವುದರಿಂದ ಈ ಸಮಯವು ಉತ್ತಮವಾಗಿರುತ್ತದೆ.

ಪರಿಹಾರ: ಶನಿವಾರದಂದು ಸಾಸಿವೆ ಎಣ್ಣೆಯನ್ನು ಅಗತ್ಯವಿರುವವರಿಗೆ ದಾನ ಮಾಡಿ

 ಮಕರ: ಶನಿ ಸಂಚಾರ ಪ್ರಭಾವ

ಮಕರ: ಶನಿ ಸಂಚಾರ ಪ್ರಭಾವ

ಶನಿಯು ವರ್ಷದ ಆರಂಭದಲ್ಲಿ ತಮ್ಮ ಉದಯದ ಚಿಹ್ನೆಯಿಂದ ಸಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಕೆಲವು ಶಿಸ್ತು ಮತ್ತು ಕಠಿಣ ಪರಿಶ್ರಮವನ್ನು ತರುತ್ತದೆ. ಈ ಅವಧಿಯಲ್ಲಿ ನೀವು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಕಾನೂನು, ಸಿಎ ಅಂತಹ ವೃತ್ತಿಯತ್ತ ಮುಖ ಮಾಡಿರುವ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಅಲ್ಲದೆ, ತೈಲ ಅಥವಾ ಪೆಟ್ರೋಲಿಯಂ ಉದ್ಯಮದಲ್ಲಿರುವವರು ಉತ್ತಮ ಅವಧಿಯನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ನೀವು ದೇಹದ ನೋವು ಮತ್ತು ಕೀಲು ನೋವುಗಳಿಗೆ ಗುರಿಯಾಗುವುದರಿಂದ ನಿಮ್ಮ ಆರೋಗ್ಯವನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು.

ಶನಿಯು ನಂತರ ನಿಮ್ಮ ಎರಡನೇ ಮನೆಗೆ ಚಲಿಸುತ್ತದೆ. ಈ ಅವಧಿಯು ಉದ್ಯಮಿಗಳಿಗೆ ವಿಶೇಷವಾಗಿ ಕುಟುಂಬ ವ್ಯವಹಾರದಲ್ಲಿರುವವರಿಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ಕೆಲಸದಿಂದ ಕೆಲವು ಉತ್ತಮ ಲಾಭ ಗಳಿಸುವಿರಿ. ಜುಲೈ ತಿಂಗಳಲ್ಲಿ ಶನಿಯು ನಿಮ್ಮ ರಾಶಿಗೆ ಹಿಂದಿರುಗುತ್ತಾನೆ. ಈ ಸಮಯವು ಏಕಾಂಗಿಯಾಗಿರುವವರಿಗೆ ಅನುಕೂಲಕರವಾಗಿರುತ್ತದೆ. ತಮ್ಮ ಇಷ್ಟದ ವ್ಯಕ್ತಿಯನ್ನು ಜೀವನ ಸಂಗಾತಿಯನ್ನಾಗಿಸಲು ಸಾಧ್ಯವಾಗಲಿದೆ. ನೀವು ಯಾವುದೇ ಪ್ರಮುಖ ಅನಾರೋಗ್ಯದಿಂದ ಬಳಲುತ್ತಿದ್ದರೆ ಜಾಗರೂಕರಾಗಿರಿ. ನಿಮ್ಮ ಮಾತು ಸ್ವಲ್ಪ ಕಠಿಣವಾಗಿರುತ್ತದೆ ಆದ್ದರಿಂದ ಯಾರೊಂದಿಗಾದರೂ ಮಾತನಾಡುವಾಗ ಜಾಗರೂಕರಾಗಿರಿ. ನಿಮ್ಮ ಅಸಭ್ಯ ಮಾತುಗಳು ನಿಮ್ಮ ಆತ್ಮೀಯರನ್ನು ನೋಯಿಸಬಹುದು.

ಪರಿಹಾರ: ಬಡ ಕುಟುಂಬದ ಯುವತಿಗೆ ಚಿನ್ನ, ಬೆಳ್ಳಿ ದಾನ ಮಾಡಿ

 ಕುಂಭ: ಶನಿ ಸಂಚಾರ ಪ್ರಭಾವ

ಕುಂಭ: ಶನಿ ಸಂಚಾರ ಪ್ರಭಾವ

ಶನಿಯು ನಿಮ್ಮ ಹನ್ನೆರಡನೇ ಮನೆಯಲ್ಲಿ ಇರುತ್ತಾನೆ. ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಗಾಗ್ಗೆ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಗಬಹುದು. ನಿಮ್ಮ ಅಗತ್ಯ ವೆಚ್ಚವನ್ನು ಕಡಿಮೆ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಪಾದದಲ್ಲಿ ಗಾಯವಾಗುವ ಸಾಧ್ಯತೆ ಇದೆ. ಜಾಗರೂಕರಾಗಿರಿ. ನೀವು ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಅಥವಾ ವಿದೇಶಕ್ಕೆ ಪ್ರವಾಸ ಮಾಡಲು ಯೋಜಿಸುತ್ತೀರಿ.

ನಂತರ ಶನಿಯು ನಿಮ್ಮ ಉದಯ ರಾಶಿಗೆ ಏಪ್ರಿಲ್ ತಿಂಗಳಲ್ಲಿ ಚಲಿಸುತ್ತಾನೆ. ವಿವಾಹಿತರಿಗೆ ಇದು ಅನುಕೂಲಕರವಾಗಿರುತ್ತದೆ.ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಮನಸ್ತಾಪಗಳು ಸರಿಯಾಗಲಿದೆ. ನೀವು ಅವರೊಂದಿಗೆ ಹೆಚ್ಚು ಆರೋಗ್ಯಕರ ಮತ್ತು ಸ್ಥಿರ ಸಂಬಂಧವನ್ನು ಬೆಳೆಸಿಕೊಳ್ಳುತ್ತೀರಿ. ನೀವು ಕೆಲವೊಮ್ಮೆ ಸ್ವಲ್ಪ ಸೋಮಾರಿತನ ಅಥವಾ ಆಲಸ್ಯವನ್ನು ತೋರಬಹುದು. ಆ ವೇಳೆ ಉದಾಸೀನತೆಯನ್ನು ಬಿಟ್ಟುಬಿಡಿ. ಈ ಸಮಯದಲ್ಲಿ ನಿಮ್ಮ ಹಿಂದಿನ ಪ್ರಯತ್ನಗಳ ಫಲವನ್ನು ನೀವು ಪಡೆಯುತ್ತೀರಿ. ಜುಲೈ ತಿಂಗಳಲ್ಲಿ ಶನಿಯು ಅಂತಿಮವಾಗಿ ನಿಮ್ಮ ಹನ್ನೆರಡನೇ ಮನೆಗೆ ಮರಳುತ್ತದೆ. ಈ ಅವಧಿ ಗ್ಲೋಬಲ್ ಕಂಪನಿಗಳು ಅಥವಾ MNCನಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರವಾಗಿದೆ. ನೀವು ಉತ್ತಮ ಖ್ಯಾತಿಯನ್ನು ಗಳಿಸುವಿರಿ ಅದು ನಿಮಗೆ ಪ್ರೋತ್ಸಾಹ ಮತ್ತು ಅನುಕೂಲಗಳನ್ನು ತರುತ್ತದೆ.

ಪರಿಹಾರ: ಶನಿವಾರದಂದು ಉಪವಾಸವಿದ್ದು, ನಿಮ್ಮ ಒಂದು ಹೊತ್ತಿನ ಆಹಾರವನ್ನು ಬಡವರಿಗೆ ನೀಡಿ

 ಮೀನ: ಶನಿ ಸಂಚಾರ ಪ್ರಭಾವ

ಮೀನ: ಶನಿ ಸಂಚಾರ ಪ್ರಭಾವ

ಶನಿಯು ವರ್ಷದ ಆರಂಭದಲ್ಲಿ ಹನ್ನೊಂದನೇ ಮನೆಯಿಂದ ಸಾಗುತ್ತಾನೆ. ಈ ಸಮಯವು ಮನರಂಜನೆ ಮತ್ತು ಸಂತೋಷದಾಯಕವಾಗಿರುತ್ತದೆ. ನಿಮ್ಮ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ನೀವು ಪ್ರವಾಸಗಳನ್ನು ಮಾಡಬಹುದು. ಈ ಅವಧಿಯು ವ್ಯಾಪಾರ ಮಾಲೀಕರಿಗೆ ವಿಶೇಷವಾಗಿ ವಿದೇಶಿ ಮಾರುಕಟ್ಟೆಯೊಂದಿಗೆ ವ್ಯವಹರಿಸುತ್ತಿರುವವರಿಗೆ ಅನುಕೂಲಕರವಾಗಿರುವುದಿಲ್ಲ. ನೀವು ಉತ್ತಮ ಲಾಭವನ್ನು ಮಾತ್ರ ಗಳಿಸಲಿದ್ದೀರಿ. ನೀವು ಸಾಮಾಜಿಕವಾಗಿ ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಸುತ್ತಲಿನ ಜನರಲ್ಲಿ ನಿಮ್ಮ ಪ್ರಭಾವವನ್ನು ಬೀರುತ್ತೀರಿ. ವಿದ್ಯಾರ್ಥಿಗಳು ತಮ್ಮ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಸಾಧ್ಯವಾಗುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ.

ಜುಲೈ ತಿಂಗಳಲ್ಲಿ ಶನಿಯು ನಿಮ್ಮ ಹನ್ನೆರಡನೇ ಮನೆಗೆ ಹೋಗುತ್ತಾನೆ. ಈ ಅವಧಿಯಲ್ಲಿ ನೀವು ಕೆಲವು ಹಣಕಾಸಿನ ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಖರ್ಚು ನಿಮ್ಮ ಗಳಿಕೆಯಿಂದ ತುಂಬಾ ಅಧಿಕವಾಗಿರುತ್ತದೆ. ಈ ಅವಧಿಯಲ್ಲಿ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ನಿಮಗೆ ನಿದ್ರೆಯ ಸಮಸ್ಯೆ ಉಂಟಾಗುತ್ತದೆ. ಮೂಳೆಗಳಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಹೆಚ್ಚು ಜಾಗರೂಕರಾಗಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮಯವು ಅನುಕೂಲಕರವಾಗಿರುತ್ತದೆ. ಶನಿಯು ನಿಮ್ಮ ಹನ್ನೊಂದನೇ ಮನೆಗೆ ಹಿಂತಿರುಗುತ್ತಾನೆ. ಈ ಅವಧಿಯಲ್ಲಿ ನೀವು ಕೆಲವು ಹೊಸ ಸ್ನೇಹಿತರನ್ನು ಮಾಡಬಹುದು. ನಿಮ್ಮ ಹಿರಿಯ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನೀವು ಅವರಿಂದ ಸ್ವಲ್ಪ ಆರ್ಥಿಕ ಲಾಭ ಅಥವಾ ಸಹಾಯವನ್ನು ಪಡೆಯಬಹುದು.

ಪರಿಹಾರ: ಶನಿವಾರ ಸಂಜೆ ಕಾರ್ಮಿಕರಿಗೆ ವಸ್ತ್ರದಾನ ಮಾಡಿ

English summary
Shani Rashi Parivartan 2022 in Kumbha Rashi; Saturn Transit in Aquarius Impact on Zodiac Signs in Kannada: The Saturn Transit in Aquarius will take place on 29th April 2022. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X