ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23ರಿಂದ ಶನಿಯ ಹಿಮ್ಮುಖ ಚಲನೆ: 12 ರಾಶಿಗಳ ಮೇಲೆ ಪ್ರಭಾವ ಏನು?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಮೇ 23ರಂದು ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತದೆ, ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ವಕ್ರಿಯಾಗುತ್ತಾನೆ. ಈ ಸಮಯದಲ್ಲಿ ಆಗುವ ಬದಲಾವಣೆಗಳನ್ನು ಹಾಗೂ ಪರಿಣಾಮಗಳನ್ನು ಇಲ್ಲಿ ವಿವರಿಸಲಾಗಿದೆ.

ನವಗ್ರಹಗಳಲ್ಲೇ ಪ್ರಭಾವಶಾಲಿಯಾಗಿರುವ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಮೇ 23ರಂದು ಹಿಮ್ಮುಖವಾಗಿ ಸಂಚರಿಸಲಿದೆ. ಈ ಗ್ರಹದ ಬದಲಾವಣೆಯು ನಮ್ಮ ಜೀವನದ ನೆಲೆಗಳನ್ನು ಕ್ರೋಢೀಕರಿಸಲು ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಮರುಹೊಂದಿಸಲು ಅನುಕೂಲಕರ ಕ್ಷಣವಾಗಲಿದೆ. ವಾಸ್ತವವಾಗಿ ಇದು ನಮ್ಮ ಜೀವನ ವಿಧಾನವನ್ನು, ಕೆಲಸ ಮಾಡುವ ಮತ್ತು ಪ್ರೀತಿಸುವ ವಿಧಾನವನ್ನು ಪ್ರಶ್ನಿಸುವ ಅವಧಿಯಾಗಿದೆ.

ಶನಿಯ ಹಿಮ್ಮುಖ ಚಲನೆಯಿಂದ ಯಾವ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ, ಈ ಚಲನೆಯು ಅದೃಷ್ಟವೇ ಅಥವಾ ದುರಾದೃಷ್ಟವೇ ಎಂಬುದನ್ನು ವಿವರಿಸಲಾಗಿದೆ.

ಶನಿ ದೇವರನ್ನು ಮೆಚ್ಚಿಸಲು ಮತ್ತು ಅವರ ಕೋಪವನ್ನು ತಪ್ಪಿಸಲು, ಮೊದಲನೆಯದಾಗಿ, ನಿಮ್ಮ ಕಾರ್ಯಗಳನ್ನು ಸುಧಾರಿಸಿ. ಯಾವುದೇ ತಪ್ಪು ಮಾಡಬೇಡಿ. ಹನುಮನನ್ನು ಭಕ್ತಿಯಿಂದ ಪೂಜಿಸಿ. ಹನುಮಾನ್ ಚಾಲಿಸಾ ಪಠಿಸಿ. ಶಿವನ ಆರಾಧನೆಯಿಂದ ಕೂಡ ಶನಿ ದೇವ ಸಂತಸಗೊಳ್ಳುತ್ತಾನೆ. ಶನಿ ಮಂತ್ರಗಳನ್ನು ಪಠಿಸಿ, ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ, ಹಿರಿಯರನ್ನು ಗೌರವಿಸಿ.

 ಮೇಷ ರಾಶಿಯ ಮೇಲೆ ಪ್ರಭಾವವೇನು?

ಮೇಷ ರಾಶಿಯ ಮೇಲೆ ಪ್ರಭಾವವೇನು?

ಮೇ 23 ರಿಂದ ಅಕ್ಟೋಬರ್ 11 ರವರೆಗೆ, ಕುಂಭ ರಾಶಿಯಲ್ಲಿ ಶನಿಯ ಹಿಮ್ಮೆಟ್ಟುವಿಕೆಯು ಸಂಬಂಧಗಳಲ್ಲಿ ಹೆಚ್ಚು ಅಪನಂಬಿಕೆಗೆ ಒಳಪಡಿಸುತ್ತದೆ. ಎಷ್ಟೆಂದರೆ ಇತರರ ತೀರ್ಪನ್ನು ಸಾಮಾನ್ಯಕ್ಕಿಂತ ಹೆಚ್ಚು ತೀವ್ರವಾಗಿ ನೀವು ಭಾವಿಸುವ ಹಂತದವರೆಗೆ. ಇದನ್ನು ಹೊರತುಪಡಿಸಿ ನಿಮ್ಮ ಯೋಜನೆಗಳಲ್ಲಿ ಬುದ್ಧಿವಂತಿಕೆಯನ್ನು ಬಳಸುತ್ತೀರಿ ಮತ್ತು ನೀವು ಅದನ್ನು ಬಳಸಿಕೊಂಡು ಪ್ರಬುದ್ಧರಾಗಲು ಬಯಸುತ್ತೀರಿ.

 ವೃಷಭ ರಾಶಿ ಮೇಲಾಗುವ ಪರಿಣಾಮವೇನು?

ವೃಷಭ ರಾಶಿ ಮೇಲಾಗುವ ಪರಿಣಾಮವೇನು?

ಈ ಹಂತದಲ್ಲಿ ನಿಮ್ಮ ಯೋಜನೆಗಳಿಗೆ ನೀವು ಅಂಟಿಕೊಳ್ಳುವುದು ಕಷ್ಟಕರವಾಗುತ್ತದೆ. ಆದಾಗ್ಯೂ, ನಿಮಗಾಗಿ ಒಂದು ಸಲಹೆಯಿದೆ, ಅದೇನೆಂದರೆ ಪರಿಣಾಮಗಳನ್ನು ಯೋಚಿಸದೆ ನಿಮ್ಮನ್ನು ಯಾವುದಕ್ಕೂ ಮುಂದೆ ಹೆಜ್ಜೆ ಇಡಬೇಡಿ. ಅಗತ್ಯ ಅಂಶಗಳತ್ತ ಗಮನಹರಿಸಲು ಸಮಯ ತೆಗೆದುಕೊಳ್ಳಿ.

 ಮಿಥನ ರಾಶಿ ಮೇಲಾಗುವ ಪ್ರಭಾವವೇನು?

ಮಿಥನ ರಾಶಿ ಮೇಲಾಗುವ ಪ್ರಭಾವವೇನು?

ಮಾಡಬೇಕಾದ ಉತ್ತಮ ಕೆಲಸವೆಂದರೆ ನೀವು ವಿರಾಮಗೊಳಿಸಿದ ಕಾರ್ಯವನ್ನು ಮುಂದುವರಿಸುವುದು ಮತ್ತು ಶಾಂತ ವಾತಾವರಣದಲ್ಲಿ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು.

 ಕರ್ಕಾಟಕ ರಾಶಿ ಮೇಲೆ ಬೀರುವ ಪರಿಣಾಮವೇನು?

ಕರ್ಕಾಟಕ ರಾಶಿ ಮೇಲೆ ಬೀರುವ ಪರಿಣಾಮವೇನು?

ಶನಿಯು 7ನೇ ಮನೆಯಲ್ಲಿ ಹಿಮ್ಮುಖನಾಗಿ ಚಲಿಸಲಿದ್ದಾನೆ, ಆರೋಗ್ಯದ ಕಡೆ ಎಚ್ಚರವಾಗಿರಬೇಕು, ಯಾವುದೇ ಕೆಲಸವನ್ನು ಸ್ವಂತವಾಗಿ ಮಾಡಿ ಲಾಭವಿದೆ, ಆದರೆ ಯಾವುದೇ ಕಾರಣಕ್ಕೂ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೆ ಅದರಿಂದ ತೊಡಕುಂಟಾಗುವುದು.

 ಸಿಂಹ ರಾಶಿ ಮೇಲಾಗುವ ಪರಿಣಾಮವೇನು?

ಸಿಂಹ ರಾಶಿ ಮೇಲಾಗುವ ಪರಿಣಾಮವೇನು?

ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಇತರರನ್ನು ಬೆಂಬಲಿಸಲು, ನಿಮ್ಮೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸಿ. ಈ ಗ್ರಹದ ಚಲನೆಯು ಪ್ರಾಮಾಣಿಕತೆ ಮತ್ತು ತಾಳ್ಮೆಯ ಸಂಪೂರ್ಣ ಆಳವಾದ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಶನಿಯು ಆರನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದರೆ ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಲಿದೆ.

 ಕನ್ಯಾ ರಾಶಿ ಮೇಲೆ ಬೀರು ಪ್ರಭಾವವೇನು?

ಕನ್ಯಾ ರಾಶಿ ಮೇಲೆ ಬೀರು ಪ್ರಭಾವವೇನು?

ಶನಿಯು ಹಿಮ್ಮೆಟ್ಟುವ ಸಮಯದಲ್ಲಿ ನಿಮ್ಮ ಸಂಬಂಧಗಳನ್ನು ಉತ್ತಮಗೊಳಿಸಲು ಸಮಯದ ಲಾಭವನ್ನು ಪಡೆಯಿರಿ. ನಿಮ್ಮ ಯೋಜನೆಗಳು ದೀರ್ಘಾವಧಿ ತೆಗೆದುಕೊಳ್ಳುತ್ತಿವೆಂದು ಅನಿಸಿದರೆ, ಅದಕ್ಕೆ ಸಂಬಂಧಪಟ್ಟ ಅಡೆತಡೆಗಳೇನು ಎನ್ನುವುದನ್ನು ತಿಳಿದುಕೊಳ್ಳಿ. ನಿಮ್ಮ ಕರ್ತವ್ಯಪ್ರಜ್ಞೆಯನ್ನು ಅರಿತುಕೊಳ್ಳಿ. ಶನಿಯು 5ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ.

 ತುಲಾ ರಾಶಿ ಮೇಲೆ ಬೀರುವ ಪ್ರಭಾವವೇನು?

ತುಲಾ ರಾಶಿ ಮೇಲೆ ಬೀರುವ ಪ್ರಭಾವವೇನು?

ಶನಿಯು ತುಲಾ ರಾಶಿಯಲ್ಲಿ 4ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ, ಆರ್ಥಿಕ ಸಮಸ್ಯೆಗಳು ಎದುರಾಗಬಹುದು, ಹಣ ಮರುಪಾವತಿಗೆ ಕಷ್ಟವಾಗವಹುದು.

 ವೃಶ್ಚಿಕ ರಾಶಿ ಮೇಲೆ ಏನು ಪರಿಣಾಮ?

ವೃಶ್ಚಿಕ ರಾಶಿ ಮೇಲೆ ಏನು ಪರಿಣಾಮ?

ನಿಮ್ಮ ಮೇಲೆ ನಿಮಗಿರುವ ನಂಬಿಕೆ ಮತ್ತು ಆಲೋಚನೆಗಳ ಮೂಲಕ ಪ್ರಶಾಂತವಾಗಿರಲು ಹಾಗೂ ನಿಮಗಾಗಿ ನೀವು ಸಮಯ ತೆಗೆದುಕೊಳ್ಳಿ. ಸಮಸ್ಯೆಗಳನ್ನು ಪರಿಹರಿಸಲು ಇದು ಪ್ರಮುಖವಾಗಬಹುದು. ಶನಿಯು 3ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ.

 ಧನು ರಾಶಿ ಮೇಲೆ ಏನು ಪರಿಣಾಮ

ಧನು ರಾಶಿ ಮೇಲೆ ಏನು ಪರಿಣಾಮ

ಈ ರಾಶಿಯಲ್ಲಿ ಶನಿ 2ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ, ನಿಮ್ಮ ಮೇಲೆ ನಿಮಗಿರುವ ನಂಬಿಕೆ ಮತ್ತು ಆಲೋಚನೆಗಳ ಮೂಲಕ ಪ್ರಶಾಂತವಾಗಿರಲು ಹಾಗೂ ನಿಮಗಾಗಿ ನೀವು ಸಮಯ ತೆಗೆದುಕೊಳ್ಳಿ. ಸಮಸ್ಯೆಗಳನ್ನು ಪರಿಹರಿಸಲು ಇದು ಪ್ರಮುಖವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಯೋಜನೆಗಳನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗಬಹುದು.

 ಮಕರ ರಾಶಿ ಮೇಲಾಗುವ ಪರಿಣಾಮವೇನು?

ಮಕರ ರಾಶಿ ಮೇಲಾಗುವ ಪರಿಣಾಮವೇನು?

ಮಕರ ರಾಶಿಯಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಾನೆ, ಮೇ 23, 2021 ಭಾನುವಾರ ಮಧ್ಯಾಹ್ನ 02.50 ನಿಮಿಷಕ್ಕೆ ಶನಿಯು ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಿದ್ದಾರೆ. ಸುಮಾರು 5 ತಿಂಗಳುಗಳವರೆಗೆ, ಶನಿಯು ಅದೇ ಸ್ಥಾನದಲ್ಲಿ ಉಳಿಯುತ್ತದೆ ಮತ್ತು ನಂತರ ಅಕ್ಟೋಬರ್ 11, 2021 ರಂದು ಶನಿ ಮತ್ತೆ ತಿರುಗುತ್ತದೆ ಅಥವಾ ಸರಾಗವಾಗಿ ಚಲಿಸುತ್ತದೆ. ಈ ವರ್ಷ 2021 ರಲ್ಲಿ ಶನಿಯು ಯಾವುದೇ ರಾಶಿಚಕ್ರವನ್ನು ಬದಲಾಯಿಸುವುದಿಲ್ಲ. ಏಕೆಂದರೆ ಶನಿಯು ಸುಮಾರು ಎರಡೂವರೆ ವರ್ಷಗಳ ಕಾಲ ಒಂದು ರಾಶಿಚಕ್ರದಲ್ಲಿ ಚಲಿಸುತ್ತದೆ.

 ಕುಂಭ ರಾಶಿ ಮೇಲಾಗುವ ಪರಿಣಾಮ

ಕುಂಭ ರಾಶಿ ಮೇಲಾಗುವ ಪರಿಣಾಮ

ಮೇ 23 ರಂದು ಶನಿ ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತದೆ ಮತ್ತು ಅಕ್ಟೋಬರ್ 12, 2021 ರಂದು ನೇರವಾಗಿ ಮಕರ ರಾಶಿಗೆ ಮರಳುತ್ತದೆ. ವ್ಯಕ್ತಿಗಳು ತಮ್ಮನ್ನು ತಾವು ಬೆಳೆಸಿಕೊಳ್ಳಲು ಶನಿಯು ಸಮಯದ ಅಂಶಗಳನ್ನು ನಿಯಂತ್ರಿಸುತ್ತದೆ. ಈ ಗ್ರಹವು ಅಧ್ಯಯನಗಳು, ಕೃಷಿ ಮತ್ತು ನಿರ್ಮಾಣವನ್ನು ಉಲ್ಲೇಖಿಸಬಹುದು. ಇದು ವಿಳಂಬ ಮತ್ತು ಮಿತಿಗಳ ಬಗ್ಗೆ ಕಲಿಸುವ ಗ್ರಹವೂ ಆಗಿದೆ. ಶನಿಯ ಹಿಮ್ಮೆಟ್ಟುವಿಕೆ ಇತರ ಜನರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಮಯವನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ.

 ಮೀನ ರಾಶಿ ಮೇಲಾಗುವ ಪರಿಣಾಮ

ಮೀನ ರಾಶಿ ಮೇಲಾಗುವ ಪರಿಣಾಮ

ಶನಿಯು 11ನೇ ಮನೆಯಲ್ಲಿ ಚಲಿಸುತ್ತಾನೆ, ಈ ಸಮಯದಲ್ಲಿ ನೀವು ಹೆಚ್ಚು ಪ್ರಬುದ್ಧರಾಗಿ ವರ್ತಿಸಬೇಕಿದೆ. ಈ ಚಲನೆಯು ಸ್ಥಿರವಾಗಿರಲು ಸಾಕಷ್ಟು ತಾಳ್ಮೆ ಮತ್ತು ಬೌದ್ಧಿಕ ಪ್ರಾಮಾಣಿಕತೆಯ ಅಗತ್ಯವಿರುತ್ತದೆ. ನಿಧಾನವಾಗಿಯಾದರೂ ನೀವು ಮುಂದುವರಿಯಲೇಬೇಕಾಗುತ್ತದೆ. ಶನಿ ಮತ್ತೆ ನೇರವಾಗಿ ಚಲಿಸಲು ಪ್ರಾರಂಭಿಸಿದ ನಂತರ ನಿಮ್ಮ ಮೇಲೆ ನಿಮಗಿರುವ ನಂಬಿಕೆಯನ್ನು ತಿಳಿದುಕೊಳ್ಳಲು ಆತ್ಮಾವಲೋಕನಕ್ಕೆ ತಳ್ಳುತ್ತದೆ.

English summary
Saturn, the largest Karmic influencing planet will turn into retrograde motion while transiting Capricorn (Makara Rasi) on 23 May 2021 at 2.50 PM IST. Here is the effects on all the zodiac signs in Kannada. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X