• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭವಿಷ್ಯ, ಫೆ 22ರ ನಂತರ: ಶನಿ,ರಾಹು,ಮಂಗಳ ಸಂಯೋಗ: 1965ರಲ್ಲಿ ಪಾಕ್ ಯುದ್ದ, 1984 ಇಂದಿರಾ ಗಾಂಧಿ ಹತ್ಯೆ, 2021?

By ಹರಿಕೃಷ್ಣ ಭಟ್
|

ಶಾರ್ವರಿ ಮತ್ತು ಪ್ಲವ ನಾಮ ಸಂವತ್ಸರದಲ್ಲಿ ವಿಶ್ವ ಗಂಭೀರವಾದ ಪರಿಣಾಮವನ್ನು ಎದುರಿಸುವ ಸಾಧ್ಯತೆಯಿದೆಯೇ? ಕೊರೊನಾ ಹಾವಳಿಯಿಂದ ಇನ್ನೂ ಮುಕ್ತವಾದ ಜಗತ್ತು ಇನ್ನಷ್ಟು ತೊಂದರೆ ಅನುಭವಿಸಲು ಸಿದ್ದವಾಗಬೇಕೇ?

ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯ ನಂತರ ಸಂವತ್ಸರದಲ್ಲಿ ಬದಲಾವಣೆಯಾಗಲಿದೆ. ಈ ಬಾರಿ ಅಧಿಕ ಮಾಸ ಇರುವುದರಿಂದ, ಚಾಂದ್ರಮಾನ ಯುಗಾದಿ ಒಂದು ತಿಂಗಳ ನಂತರ, ಅಂದರೆ, ಏಪ್ರಿಲ್ ಹದಿಮೂರರಂದು ಆಚರಿಸಲಾಗುತ್ತದೆ.

2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ! 2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!

ಇನ್ನು, ಕೊರೊನಾದ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ, ಯುಗಾದಿಯ ನಂತರ ಈ ಬಗ್ಗೆ ಹೇಳುವೆನು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಈ ವರ್ಷದ ಭವಿಷ್ಯವನ್ನು ನುಡಿದಿದ್ದ ಉತ್ತರ ಭಾರತ ಮೂಲದವರು ದೇಶದಲ್ಲಿ ರಾಜಕೀಯ ವಿಪ್ಲವ ಸಂಭವಿಸುವ ಸಾಧ್ಯತೆಯಿದೆ ಮತ್ತು ಮೋದಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಸೂಕ್ತ ಎನ್ನುವ ಮಾತನ್ನು ಹೇಳಿದ್ದರು.

ರಥಸಪ್ತಮಿಯ ದಿನವಾದ ಫೆ.18/19 ನಂತರದ ಮೂರು ದಿನಗಳಲ್ಲಿ ರಾಶಿಪಥದಲ್ಲಿ ಹಲವು ಬದಲಾವಣೆಯಾಗಲಿದೆ. ಮುಂದಿನ ಫೆ.22ರಂದು ಶನಿ, ರಾಹು ಮತ್ತು ಮಂಗಳ ಸಂಯೋಗ ಆಗಲಿರುವುದರಿಂದ, ರಾಜಕೀಯವಾಗಿ ಮತ್ತು ಪ್ರಾಕೃತಿಕವಾಗಿ ಉತ್ತಮವಾದುದಲ್ಲ.

ದೇಶಕ್ಕೆ ಕೊರೊನಾ ಹಾವಳಿ: ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ಸತ್ಯವಾಯಿತು ನೋಡಿ.. ದೇಶಕ್ಕೆ ಕೊರೊನಾ ಹಾವಳಿ: ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ಸತ್ಯವಾಯಿತು ನೋಡಿ..

ಇಂದಿರಾ ಗಾಂಧಿ ಹತ್ಯೆ

ಇಂದಿರಾ ಗಾಂಧಿ ಹತ್ಯೆ

ಫೆ.22ರಂದು ಮಂಗಳ, ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ, ಜೊತೆಗೆ ಶನಿ ಮತ್ತು ರಾಹು ರಾಶಿಯ ಸಂಯೋಗವಾಗಲಿದೆ. ಇದು ಇಡೀ ವಿಶ್ವಕ್ಕೆ ಕ್ಲಿಷ್ಕಕರವಾದ ಸಮಯ. ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕವಾಗಿದ್ದು, ಎರಡು ದೇಶಗಳ ನಡುವೆ ಯುದ್ದ ನಡೆದದ್ದು, ಅಮೆರಿಕಾ ಮತ್ತು ವಿಯಟ್ನಾಂ ನಡುವೆ ಸಮರ ಆರಂಭವಾಗಿದ್ದದ್ದು, ಇಂದಿರಾ ಗಾಂಧಿ ಹತ್ಯೆ ನಡೆದದ್ದು , ಇದೇ ರಾಶಿ ಸಂಯೋಗ ಪ್ರಭಾವದ ವೇಳೆ.

ಫೆಬ್ರವರಿ 22ರ ಮೂರು ಗ್ರಹಗಳ ಸಂಯೋಗ

ಫೆಬ್ರವರಿ 22ರ ಮೂರು ಗ್ರಹಗಳ ಸಂಯೋಗ

ಫೆಬ್ರವರಿ 22ರ ಮೂರು ಗ್ರಹಗಳ ಸಂಯೋಗದ ನಂತರದ 100 ದಿನಗಳಲ್ಲಿ ರಾಜಕೀಯವಾಗಿ, ಪ್ರಾಕೃತಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಬದಲಾವಣೆಗಳು ನಡೆಯಲಿದೆ, ಇದಕ್ಕೆ ಜನರು ಸಾಕ್ಷಿಯಾಗಬೇಕಿದೆ. ರಾಜಕೀಯವಾಗಿ, ಈ ಕ್ಷೇತ್ರಕ್ಕೆ ಸಂಬಂಧಿಸಿದರು ಹಲವು ಏರಿಳಿತವನ್ನು ಎದುರಿಸಬೇಕಾಗುತ್ತದೆ.

ರಕ್ಕಸ ಗಾತ್ರದ ಅಲೆಗಳಿಂದ ಸುನಾಮಿ

ರಕ್ಕಸ ಗಾತ್ರದ ಅಲೆಗಳಿಂದ ಸುನಾಮಿ

ಪ್ರಾಕೃತಿಕವಾಗಿ ಹಲವು ದುರ್ಘಟನೆಗಳನ್ನು ವಿಶ್ವ ಎದುರಿಸಬೇಕಾಗಬಹುದು. ವಿಶ್ವದ ವಿವಿಧ ಭಾಗಗಳಲ್ಲಿ ಭೂಕಂಪಗಳು ಸಂಭವಿಸುತ್ತವೆ, ಕಾಡ್ಗಿಚ್ಚುಗಳು ಆವರಿಸಬಹುದು. ಭೂಕಂಪನದಿಂದ ಸಾಗರದಲ್ಲಿ ಅಲೆಗಳು ರಕ್ಕಸವಾಗಿ, ಸುನಾಮಿ ಎದ್ದೇಳಬಹುದು ಎನ್ನುವ ಸೂಚನೆಗಳು ಕಂಡು ಬರುತ್ತಿವೆ.

ಕೊರೊನಾ ಹಾವಳಿ

ಕೊರೊನಾ ಹಾವಳಿ

ಆದರೆ, ಆರ್ಥಿಕವಾಗಿ ಭಾರತ ಮತ್ತು ವಿಶ್ವ ಮಾರ್ಚ್ ನಂತರ ಬಲಾಢ್ಯವಾಗಲಿದೆ. ವಿವಿಧ ರಂಗಗಳು ಉತ್ತೇಜನವನ್ನು ಕಾಣಲಿವೆ. ಕೊರೊನಾ ಹಾವಳಿಯಿಂದ ಎಷ್ಟು ಆರ್ಥಿಕ ಜಗತ್ತು ತೊಂದರೆಯನ್ನು ಎದುರಿಸುತ್ತೋ, ಅದೆಲ್ಲಾ ನಿವಾರಣೆಯಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯರು ಹೇಳಿದ್ದಾರೆ.

English summary
Saturn, Rahu, Mars Conjection On February 22nd: Astrological Prediction Says Tough Days For Next 100 days,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X