ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಲಾರಾಶಿಗೆ ಶನಿಮಹಾರಾಜನ ಪ್ರವೇಶ

By * ಮನೋಹರ್ ಭಟ್ , ಬೆಳ್ಮಣ್
|
Google Oneindia Kannada News

Lord Saturn
ಆಸ್ತಿಕರಿಗೆ ಮಾತ್ರ ಈ ಲೇಖನ. ನಾಸ್ತಿಕರು ತಲೆ ಕೆಡಿಸಿ ಕೊಳ್ಳಬೇಕಾಗಿಲ್ಲ. ತನ್ನ ತಂದೆಯನ್ನೇ (ಸೂರ್ಯದೇವ) ಕಾಡಿದ ಶನಿಗೆ ಯಕಶ್ಚಿತ್ ಮಾನವ ಯಾವ ಲೆಕ್ಕ? ನಾವು ಪುರಾಣದಲ್ಲಿ ಓದಿದ ಹಾಗೆ ರಾಮಬಂಟ ಹನುಮಂತನಿಗೆ ಮಾತ್ರ ಶನಿ ಕಾಡುವುದಿಲ್ಲ. ಇದೇ ಬರುವ ನವೆಂಬರ್ 15 ಖರನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಪಂಚಮಿ, ವೃಶ್ಚಿಕ ಸಂಕ್ರಮಣದ ಮುನ್ನಾ ದಿನ ಕಂಟಕಪ್ರಾಯನೂ, ನಂಬಿದವರಿಗೆ ಕಾಮಧೇನುವೂ ಆಗಬಲ್ಲ ಶನಿದೇವರು ತನ್ನ ಸಂಚಾರವನ್ನು ಬದಲಿಸಲಿದ್ದಾನೆ.

ನಾಳೆ ಅಂದರೆ ಮಂಗಳವಾರ 15 ನವೆಂಬರ್ ಶನಿಯು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಶಿಫ್ಟ್ ಆಗಲಿದ್ದಾನೆ. ಈ ದಿನದಿಂದ ಮೂರು ವರ್ಷ ಅಂದರೆ ನವೆಂಬರ್ 2, 2014ರ ವರೆಗೆ ಶನಿದೇವರು ತುಲಾ ರಾಶಿಯಲ್ಲಿ ನೆಲೆಯೂರಲಿದ್ದಾನೆ. ಈ ಹಿಂದೆ ಶನಿದೇವರು ಶ್ರೀವಿರೋಧಿ ಸಂವತ್ಸರದಲ್ಲಿ ತನ್ನ ರಾಶಿ ಬದಲಿಸಿದ್ದನು. ಹೆಚ್ಚಾಗಿ ಎರುಡುವರೆ ವರ್ಷಕ್ಕೊಮ್ಮೆ ಸ್ಥಾನ ಬದಲಾಯಿಸುವ ಶನಿ ಈ ಬಾರಿ ಆರು ತಿಂಗಳು ತಡವಾಗಿ ತುಲಾ ರಾಶಿಗೆ ಪ್ರವೇಶವಾಗುತ್ತಿರುವುದು ಗಮನಾರ್ಹ.

ಶನಿದೇವರ ರಾಶಿ ಬದಲಾವಣೆ ಎಲ್ಲರ ಭವಿಷ್ಯದಲ್ಲೂ ಪ್ರಮುಖ ಘಟ್ಟ ಎನ್ನುವುದು ಸರ್ವವೇದ್ಯ. ಹಾಗಾಗಿ ಕೆಲ ರಾಶಿಯವರಿಗೆ ದೆಶೆ ಬದಲಾಗುವ ಸಮಯವಾದರೆ, ಇನ್ನು ಕೆಲ ರಾಶಿಯವರು ಎಚ್ಚರಿಂದ ಇರುವುದು ಒಳಿತು ಎನ್ನುವುದು ನಾಡಿನ ಸಮಸ್ತ ಜ್ಯೋತಿಷಿಗಳ ಒಕ್ಕೊರಲ ಅಭಿಪ್ರಾಯ. ಮುಖ್ಯವಾಗಿ, ತುಲಾ, ವೃಶ್ಚಿಕ, ಮೇಷ, ಮಿಥುನ, ಕಟಕ ಮತ್ತು ಮೀನಾ ರಾಶಿಯವರು.

ಶನಿಯ ವಕ್ರ ದೃಷ್ಟಿಗೆ ಬಿದ್ದವರಿಗೆ ಮಾನಸಿಕ ಕ್ಲೇಷ, ವೃಥಾ ಚಿಂತೆ, ಹಣ ಪೋಲಾಗುವುದು, ದಾಂಪತ್ಯ ವಿರಸ, ನೌಕರಿ ನಾಶ, ವ್ಯಾಪಾರದಲ್ಲಿ ನಷ್ಟ, ಸಹೋದರರೊಂದಿಗೆ ಕಲಹ, ದೂರ ಪ್ರಯಾಣ, ದೈಹಿಕ, ಮಾನಸಿಕ ಚಿಂತೆ ಮುಂತಾದುವುಗಳು ಎದುರಾಗಬಹುದು.

ಹಾಗಾಗಿ, ಈ ಮೇಲೆ ತಿಳಿಸಿದ ರಾಶಿಯವರು ಶನಿದೇವರನ್ನು ಸಂಪ್ರೀತಗೊಳಿಸಲು ಇರುವೆಗೆ ಸಕ್ಕರೆ ಹಾಕುವುದು, ಕಾಗೆಗೆ ಆಹಾರ ನೀಡುವುದು, ಶಿವನಿಗೆ ಮತ್ತು ಶನಿದೇವರಿಗೆ ಎಳ್ಳು ದೀಪ ಹಚ್ಚುವುದು, ಎಣ್ಣೆ ಸ್ನಾನ, ಸಮುದ್ರ ಸ್ನಾನ ಮಾಡುವುದು, ಬಡವರಿಗೆ ಎಳ್ಳು ದಾನ ಮಾಡುವುದು, ಶನಿ ದೇವರ ಸ್ತುತಿ, ವಿಷ್ಣು ಸಹಸ್ರನಾಮ ಪಾರಾಯಣ , ರುದ್ರ ಪಠಿಸುವುದು, ಆಂಜನೇಯ ಸ್ತುತಿ ಭಜನೆ ಮಾಡುವುದರಿಂದ ಎದುರಿಸಬೇಕಾದ ಕಂಟಕಗಳಿಂದ ಸ್ವಲ್ಪ ಮಟ್ಟಿಗೆ ಶನಿ ರಿಲೀಫ್ ನೀಡಬಹುದು. ಶನಿ ಅಥವಾ ಆಂಜನೇಯ ದೇವಾಯಲದ ದರುಶನ ತಪ್ಪದೆ ಮಾಡಿ.

ಉಳಿದ ರಾಶಿಯವರಿಗೆ ಶನಿ ದೇವರಿಂದ ಅಂತಹ ಕಂಟಕವೇನೂ ಎದುರಾಗುವುದಿಲ್ಲ. ಹಾಗಾಗಿ, ಹೋದಲೆಲ್ಲಾ ಜಯ, ಬಡ್ತಿ, ನಿವೇಶನ ಖರೀದಿ, ಗೃಹ ನಿರ್ಮಾಣ, ಸುಖ ದಾಂಪತ್ಯ, ಧನ ಲಾಭ, ಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ ಎನ್ನುವುದು ಜ್ಯೋತಿಷಿಗಳ ಅಂಬೋಣ. ಸಕಲ ಸಂಕಷ್ಟಗಳನ್ನು ನಿವಾರಿಸುವ ಶನಿ ಮಹಾರಾಜ ಸಮಸ್ತ ಜನತೆಗೆ ಮತ್ತು ಒನ್ ಇಂಡಿಯ ಕನ್ನಡ ವಾಚಕ ಬಂಧುಗಳಿಗೆ ಸನ್ಮಂಗಳವನ್ನು ಉಂಟು ಮಾಡಲಿ.

English summary
English Summary : On November 15th 2011, Saturn moves into Libra where he becomes exalted, meaning the ability to deliver his highest and most beneficial qualities without encumbrances. Saturn will be in Libra for 3 years until November 2nd, 2014. This is a remarkable 6 months longer than a normal Saturn transit which is usually 2.5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X