• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂವತ್ತು ವರ್ಷದ ಹಿಂದೆ ವೃಶ್ಚಿಕದಲ್ಲಿ ಶನಿ, ಮಾಡಿದ್ದು ಎಷ್ಟೆಲ್ಲ ಹಾನಿ?

By ನಾಗನೂರಮಠ ಎಸ್.ಎಸ್
|
Google Oneindia Kannada News

ಪ್ರತಿ ಮೂವತ್ತು ವರ್ಷಕ್ಕೊಮ್ಮೆ ವೃಶ್ಚಿಕ ರಾಶಿಯಲ್ಲಿ ಪ್ರವೇಶಿಸುವ ಶನಿ ಹಾಗೆ ಬಂದಾಗ ಅನಾಹುತಗಳನ್ನೇ ಸೃಷ್ಟಿ ಮಾಡಿದ್ದಾನೆ. ಏಕೆಂದರೆ ಉಗ್ರ ಸ್ವರೂಪದಿಂದಲೇ ವೃಶ್ಚಿಕ ರಾಶಿಗೆ ಪ್ರವೇಶಿಸುವ ಮುನ್ನ ಹಾಗೂ ನಂತರವೂ ತನ್ನ ಪ್ರಭಾವವನ್ನು ಇಡೀ ಜಗತ್ತಿನ ಮೇಲೆ ತೋರಿಸುತ್ತಾನೆ.

ಈ ಬಾರಿ 2014ರ ರಲ್ಲಿ ವೃಶ್ಚಿಕ ರಾಶಿಗೆ ಕಾಲಿಟ್ಟ ಶನಿ, ಈ ಜನವರಿ 26ರಂದು ಧನುಸ್ಸು ರಾಶಿಗೆ ಪ್ರವೇಶ ಮಾಡಲಿದ್ದಾನೆ. ಈಗಾಗಲೇ ಸಾಕಷ್ಟು ಅನಾಹುತ, ಪ್ರಕೃತಿ ವಿಕೋಪಗಳನ್ನು ತೋರಿಸಿರುವ ಅತ, ಸಾಮಾನ್ಯ ಜನರಿಗೂ ತನ್ನ ಬಿಸಿ ಮುಟ್ಟಿಸಿದ್ದಾನೆ. ನೋಟ್ ಬ್ಯಾನ್ ಆಗಿ ಈಗಾಗಲೇ ಜನರು ಇದರ ಅನುಭವ ಪಡೆಯುತ್ತಿದ್ದಾರೆ.[ಮಹಾನ್ ಶಕ್ತಿವಂತ ಶನಿದೇವರ ಬಗ್ಗೆ ಇನ್ನಷ್ಟು ಮಾಹಿತಿ]

ಇನ್ನು ಸಾಡೇಸಾತಿ ಅನುಭವಿಸುತ್ತಿರುವ ರಾಶಿಗಳವರಿಗೆ ಈ ಬಗ್ಗೆ ಹೇಳೋದೇನೂ ಬೇಡ. ಇನ್ನು ಸಾಡೇಸಾತಿ ನಡೆಯುವಾಗ ಶನಿಯು ಏನೇನು ಮಾಡುತ್ತಾನೆ, ಯಾವ ಫಲಗಳನ್ನು ಕೊಡುತ್ತಾನೆ ಎಂಬುದನ್ನು ಎಲ್ಲರೂ ಈ ಹಿಂದಿನ ಲೇಖನದಲ್ಲಿ ಓದಿದ್ದೀರಿ. ಆದರೆ ರಾಶಿಗೆ ಅನುಗುಣವಾಗಿ ಶನಿ ಪ್ರಭಾವ ಏನು ಎಂದು ಓದಿದ್ದವರಿಗೆ ನಮ್ಮ ದೇಶ ಮತ್ತು ವಿಶ್ವದ ಮೇಲೂ ಯಾವ ರೀತಿ ಪರಿಣಾಮಗಳನ್ನು ಶನಿ ಬೀರುತ್ತಾನೆ ಎಂಬುದರ ಕಿರುನೋಟ ಇಲ್ಲಿದೆ.

ಇರಾನ್-ಇರಾಕ್ ಯುದ್ಧ

ಇರಾನ್-ಇರಾಕ್ ಯುದ್ಧ

1980ರ ದಶಕದಲ್ಲೂ ಶನಿ ವೃಶ್ಚಿಕ ರಾಶಿಯಲ್ಲಿದ್ದ. ಅಗ ಇರಾನ್- ಇರಾಕ್ ಯುದ್ಧವಾಗಿ ಸಾವಿರಾರು ಜನ ಮರಣವನ್ನಪ್ಪಿದ್ದರು. ಇನ್ನು ಆ ಸಮಯದಲ್ಲಿ ನಮ್ಮ ದೇಶದಲ್ಲೂ ಪೆಟ್ರೋಲ್ ಅಭಾವ ಉಂಟಾಗಿ ಹಣದುಬ್ಬರ ಉಂಟಾಗಿತ್ತು. ಇನ್ನು ಅಮೃತಸರದ ಸ್ವರ್ಣಮಂದಿರದಲ್ಲಿ ಇದ್ದ ಭಯೋತ್ಪಾದಕರನ್ನು ಸದೆಬಡಿಯಲು ಪ್ರಧಾನಿ ಇಂದಿರಾ ಗಾಂಧಿ ಆದೇಶಿಸಿದ್ದರು. ಆಗ 298 ಭಯೋತ್ಪಾದಕರನ್ನು ನಮ್ಮ ಸೈನಿಕರು ಹೊಡೆದುರುಳಿಸಿದ್ದರು. ಇದರ ಸೇಡಿಗೆ ಸಿಖ್ ಪ್ರಧಾನಿ ಇಂದಿರಾ ಅವರನ್ನು ಅಂಗರಕ್ಷಕರೇ ಕೊಂದರು.

ಇಂದಿರಾಗಾಂಧಿ ಹತ್ಯೆ

ಇಂದಿರಾಗಾಂಧಿ ಹತ್ಯೆ

ಇನ್ನು ಇಂದಿರಾಗಾಂಧಿ ಅವರ ಸಾವಿಗೆ ಪ್ರತ್ಯುತ್ತರವಾಗಿ ಗಲಭೆ ಸಂಭವಿಸಿತು. 10 ಸಾವಿರಕ್ಕೂ ಹೆಚ್ಚು ಸಿಖ್ ರನ್ನು ಗಲಭೆಯಲ್ಲಿ ಕೊಲ್ಲಲಾಯಿತು. ಅಲ್ಲದೇ ಗುರುದ್ವಾರ ಮತ್ತು ಸಿಖ್ ರ ಮನೆ ಮೇಲೆ ದಾಳಿ ಮಾಡಲಾಯಿತು. ಹಲವಾರು ಲೂಟಿ ಪ್ರಕರಣಗಳು ಕೂಡ ನಡೆದವು.

ಭೋಪಾಲ್ ಅನಿಲ ದುರಂತ

ಭೋಪಾಲ್ ಅನಿಲ ದುರಂತ

ಆ ನಂತರ ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಭೋಪಾಲ್ ಅನಿಲ ದುರಂತ ಸಂಭವಿಸಿತು. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಇಹಲೋಕ ತ್ಯಜಿಸಿದರು. 20 ಸಾವಿರಕ್ಕೂ ಹೆಚ್ಚು ಜನರು ವಿಷಗಾಳಿಯಿಂದ ಬಳಲಿದರು. ಈಗಲೂ 6 ಸಾವಿರಕ್ಕೂ ಹೆಚ್ಚು ಜನರು ಭೂಪಾಲ್ ಅನಿಲ ದುರಂತದ ತೊಂದರೆಗಳಿಂದ ಮುಕ್ತಿಗೊಂಡಿಲ್ಲ. ಇನ್ನು ವಿಶ್ವದಾದ್ಯಂತ 1 ಸಾವಿರಕ್ಕೂ ಹೆಚ್ಚು ಜನರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದರು.

ಸಾವಿರಾರು ಸಾವು

ಸಾವಿರಾರು ಸಾವು

ಮೆಕ್ಕಾದಲ್ಲಿ ಹಜ್ ಯಾತ್ರಗೆ ಬಂದು ಕಾಲ್ತುಳಿತಕ್ಕೆ ಸಿಕ್ಕು 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇಂದಿರಾ ಪುತ್ರ ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಟ್ಟರು. 300ಕ್ಕೂ ಹೆಚ್ಚು ಜನರು ವಿಷಪೂರಿತ ಮದ್ಯ ಸೇವಿಸಿ ಬೆಂಗಳೂರಿನಲ್ಲಿ ಮೃತಪಟ್ಟರು. ಬಾಂಗ್ಲಾದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು.

ಭೂಕಂಪ, ಚಂಡಮಾರುತ

ಭೂಕಂಪ, ಚಂಡಮಾರುತ

ಭಾರತದ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ 400ಕ್ಕೂ ಜನರು ಮರಣವನ್ನಪ್ಪಿದ್ದರು. ಬಿಹಾರದಲ್ಲಿ ಭೂಕಂಪ ಸಂಭವಿಸಿ ನೂರಕ್ಕೂ ಹೆಚ್ಚು ಜನರ ಸಾವಾಯಿತು. ಉತ್ತರ ಪ್ರದೇಶದ ಮದುವೆ ಸಮಾರಂಭವೊಂದರಲ್ಲಿ ವಿಷಪೂರಿತ ಆಹಾರ ಸೇವಿಸಿ 500ಕ್ಕೂ ಜನರ ಸತ್ತರು. ಆಂಧ್ರಪ್ರದೇಶದಲ್ಲಿ ಬಂದ ಚಂಡಮಾರುತದಿಂದ 1ಸಾವಿರಕ್ಕೂ ಹೆಚ್ಚು ಜನರು ಉಸಿರು ಬಿಟ್ಟರು.

ಹಾವಳಿ-ಕೊಲೆ-ಗಲಭೆ

ಹಾವಳಿ-ಕೊಲೆ-ಗಲಭೆ

ತಮಿಳುನಾಡಿನಲ್ಲಿ ರಾಜೀವ ಗಾಂಧಿ ಹತ್ಯೆಯಾಯಿತು. ಸಿಖ್ ಭಯೋತ್ಪಾದಕರ ದಾಳಿಯಿಂದಾಗಿ ಲಖನೌದಲ್ಲಿ 40ಕ್ಕೂ ಜನರ ದುರ್ಮರಣವಾಯಿತು. ಒರಿಸ್ಸಾ ರಾಜ್ಯದ ಕಟಕ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕುಖ್ಯಾತ ದಂತಚೋರ ವೀರಪ್ಪನ್ ಹಾವಳಿ ವಿಪರೀತವಾಗಿ ಹಲವಾರು ಪೊಲೀಸರನ್ನು ಹೊಂಚು ಹಾಕಿ ಕೊಲ್ಲಲಾಗಿತ್ತು. ಅಯೋಧ್ಯದ ಬಾಬ್ರಿ ಮಸೀದಿ ಕೆಡವಿದ ನಂತರ ಉಂಟಾದ ಗಲಭೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಸತ್ತರು.

ಆ ಕಾಯಿಲೆ ಪ್ರಭಾವ

ಆ ಕಾಯಿಲೆ ಪ್ರಭಾವ

ಹೊಸದಾಗಿ ಏಡ್ಸ್ ರೋಗ ಕಂಡು ಬಂದು ನೂರಾರು ಜನರು ಸಾವನ್ನಪ್ಪಿದರು. ವೈದ್ಯರಿಗೆ ಸವಾಲಾಗಿ ಪರಿಣಮಿಸಿರುವ ಈ ರೋಗಕ್ಕೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ. ಇನ್ನೂ ಹಲವಾರು ದುರ್ಘಟನೆಗಳು ಈ ಹಿಂದೆ ಶನಿಯು ವೃಶ್ಚಿಕ ರಾಶಿಗೆ ಬಂದಾಗ ನಡೆದಿವೆ. ಇವಿಷ್ಟೇ ಸಾಕು. ಇನ್ನೂ ಸಾಕಷ್ಟು ಘಟನೆಗಳಿವೆ. ಕೇಳಿದರೆ ಕೆಲವರಿಗೆ ಹೆದರಿಕೆ ಬಂದು ಜ್ವರ ಬರಬಹುದು. ಆ ರೀತಿಯ ಪ್ರಭಾವ ಶನಿಯದು.

 ದೇವರ ಆರಾಧನೆ ಪೂಜೆ

ದೇವರ ಆರಾಧನೆ ಪೂಜೆ

ಅದೇ ರೀತಿ ಈ ಬಾರಿಯೂ ದುರ್ಘಟನೆಗಳು ನಡೆದಿವೆ. ಇನ್ನೂ ನಡೆಯುತ್ತವೆ. ಯಾವುದಕ್ಕೂ ಎಚ್ಚರದಿಂದ ಮಹಾತ್ಮನ ಧ್ಯಾನಿಸುತ್ತಿದ್ದರೆ ಒಳ್ಳೆಯದು. ಇಲ್ಲವಾದಲ್ಲಿ ಅವನು ಕೆಂಗಣ್ಣು ಬಿಟ್ಟರೆ ನಮ್ಮ ಆತ್ಮ ಶಿವನ ಪಾದ ಎಂಬುದು ಮಾತ್ರ ಸತ್ಯ. ಹೀಗಾಗಿ ಆದಷ್ಟು ಪ್ರಮಾಣದಲ್ಲಿ ಶಿವಪೂಜೆ, ಶನಿದೇವನ ಶಾಂತಿ, ಹನುಮನ ಆರಾಧನೆ, ಗಣಪನ ಆರಾಧನೆ ಮಾಡುತ್ತಿದ್ದರೆ ನಮ್ಮ ಮೇಲಿನ ಪ್ರಭಾವ ಕಮ್ಮಿಯಾಗಬಹುದು. ಇಷ್ಟಕ್ಕೂ ಈ ಹಿಂದೆ ಜರುಗಿದ ದುರ್ಘಟನೆಗಳಲ್ಲಿ ಸಾವಿಗೀಡಾದವರು ಅಮಾಯಕರವೇ ಎಂಬುದು ಮಾತ್ರ ವಿಚಿತ್ರವೆನಿಸುವ ಸತ್ಯ. ಇದಕ್ಕೆ ಶನಿದೇವನೇ ಉತ್ತರಿಸಬೇಕು.

English summary
What are the ill effects of planet Saturn while transition in Libra, Scorpio and Sagittarius? Astrologer Naganoormata explains with examples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X