• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳೆಯರ ತಲೆಕೂದಲು ನೋಡಿ, ಭವಿಷ್ಯ ತಿಳಿದುಕೊಳ್ಳಿ

By ಪಂಡಿತ್ ಶಂಕರ್ ಭಟ್
|

ಭವಿಷ್ಯ ತಿಳಿದುಕೊಳ್ಳುವುದು ಬಹುತೇಕರ ಕುತೂಹಲ. ಅದರಲ್ಲೂ ನಿಮ್ಮನ್ನು ನೋಡುತ್ತಲೇ ನೀವು ಹೀಗೆ ಅಂತ ಹೇಳುವ ಹಾಗಿದ್ದರೆ..! ಅದೇ ಸಾಮುದ್ರಿಕಾ ಶಾಸ್ತ್ರ. ಬಹಳ ಆಸಕ್ತಿಕರವಾದ ಸಾಮುದ್ರಿಕ ಶಾಸ್ತ್ರಕ್ಕೆ ವೈಜ್ಞಾನಿಕವಾದ ಹಿನ್ನೆಲೆಯಿದೆ. ಸಾಮುದ್ರಿಕಾ ಶಾಸ್ತ್ರದ ಸರಣಿಯ ಮುಂದುವರಿದ ಭಾಗ ಇದು.

ವ್ಯಕ್ತಿಯ ದೈಹಿಕ ರಚನೆಯ ಆಧಾರದಲ್ಲಿ ನುಡಿಯಬಹುದು ಎಂಬುದನ್ನು ಈಗಾಗಲೇ ನಿಮಗೆ ತಿಳಿಸಲಾಗಿದೆ. ಹಾಗೂ ಅಂಥ ಸರಣಿಯ ಎರಡು ಲೇಖನಗಳನ್ನೂ ಬರೆದಾಗಿದೆ.

ಸಾಮುದ್ರಿಕಾ ಶಾಸ್ತ್ರ: ಭವಿಷ್ಯ ನುಡಿಯುವ ಹೆಣ್ಣಿನ ಕಣ್ಣುಗಳು

ಆ ರೀತಿ ಸಾಮುದ್ರಿಕಾ ಶಾಸ್ತ್ರದ ಮೂಲಕ ಭವಿಷ್ಯ ನುಡಿಯುವ ಪೈಕಿ ಇಂದಿನ ಲೇಖನದಲ್ಲಿ ಮಹಿಳೆಯರ ಕೂದಲನ್ನು ನೋಡಿ ಗುಣ- ನಡತೆಗಳನ್ನು ಹೇಗೆ ತಿಳಿದುಕೊಳ್ಳಬಹುದು ಎಂಬುದನ್ನು ವಿವರಿಸಲಾಗುತ್ತಿದೆ. ಈಗಾಗಲೇ ಹೇಳಿದಂತೆ ಈ ಹಿಂದಿನ ಲೇಖನಗಳಲ್ಲಿ ಮಹಿಳೆಯರ ಹಣೆ ಹಾಗೂ ಕಣ್ಣನ್ನು ನೋಡಿ ತಿಳಿದುಕೊಳ್ಳಬಹುದಾದ ಸಂಗತಿಗಳನ್ನು ತಲುಪಿಸಿದ್ದೆವು.

ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಮಹಿಳೆಯರ 'ಹಣೆ' ಬರಹ ಓದೋದು ಹೇಗೆ?

ಅದೃಷ್ಟ, ಸಾಮಾಜಿಕ ಸ್ಥಾನ-ಮಾನ, ಗುರು-ಹಿರಿಯರಿಗೆ ನೀಡುವ ಗೌರವ, ಅತ್ತೆ ಜತೆಗೆ ಇರುವ ಸಂಬಂಧ, ಪತಿಯ ಜತೆಗಿನ ಸಾಮರಸ್ಯ...ಹೀಗೆ ಮಹಿಳೆಯರ ಕೂದಲನ್ನು ನೋಡಿ ಬಹಳ ವಿಷಯಗಳನ್ನು ತಿಳಿದುಕೊಳ್ಳಬಹುದು. ಹಾಗಿದ್ದರೆ ಇನ್ನೇಕೆ ತಡ, ಲೇಖನವನ್ನು ಪೂರ್ತಿಯಾಗಿ ಓದಬೇಕಲ್ಲವೆ? ಮುಂದಿನ ಸ್ಲೈಡ್ ಗಳನ್ನು ನೋಡಿ.

ತಲೆಗೂದಲು ಉದ್ದವಾಗಿದ್ದರೆ

ತಲೆಗೂದಲು ಉದ್ದವಾಗಿದ್ದರೆ

ಮಹಿಳೆಯರ ತಲೆಗೂದಲು ಉದ್ದವಾಗಿದ್ದರೆ ಬಹಳ ಅದೃಷ್ಟವಂತರಾಗಿರುತ್ತಾರೆ. ಬುದ್ಧಿವಂತರು, ಪತಿ ಹಾಗೂ ಅತ್ತೆಯಿಂದ ಬಹಳ ಪ್ರೀತಿ ಪಡೆಯುತ್ತಾರೆ.

ಒತ್ತೊತ್ತಾದ ಕೂದಲು

ಒತ್ತೊತ್ತಾದ ಕೂದಲು

ಒತ್ತೊತ್ತಾದ ಕೂದಲಿದ್ದರೆ ಅಂಥ ಮಹಿಳೆಗೆ ವಿಪರೀತವಾದ ಉತ್ಸಾಹ ಇರುತ್ತದೆ. ಮತ್ತು ಪತಿಯ ಮೇಲೆ ಅಧಿಕಾರ ಇರಿಸಿಕೊಂಡಿರುತ್ತಾರೆ. ಆದರೆ ಅತ್ತೆಯೊಂದಿಗೆ ಭಿನ್ನಾಭಿಪ್ರಾಯ ಏರ್ಪಡುತ್ತದೆ.

ಕೆಂಚು ಬಣ್ಣದ ಕೂದಲಿದ್ದರೆ

ಕೆಂಚು ಬಣ್ಣದ ಕೂದಲಿದ್ದರೆ

ಕೆಂಚು ಬಣ್ಣದ ಕೂದಲಿರುವ ಮಹಿಳೆಯರು ಉನ್ನತ ಸ್ಥಾನವನ್ನು ತಲುಪುತ್ತಾರೆ. ನಟನೆ, ಫ್ಯಾಷನ್ ಹಾಗೂ ಸಂಗೀತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ.

ಚಿನ್ನದ ಬಣ್ಣದ ಕೂದಲು ಹೆಚ್ಚು ಇರುವವರು

ಚಿನ್ನದ ಬಣ್ಣದ ಕೂದಲು ಹೆಚ್ಚು ಇರುವವರು

ಚಿನ್ನದ ಬಣ್ಣದ ಕೂದಲು ವಿಪರೀತವಾಗಿ ಇರುವ ಮಹಿಳೆಯರಿಗೆ ತುಂಬ ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಪಡೆಯುತ್ತಾರೆ.

ಮುಂಭಾಗದ ಕೂದಲು ಬಿಳಿ

ಮುಂಭಾಗದ ಕೂದಲು ಬಿಳಿ

ಮಹಿಳೆಯ ಕೂದಲು ಎರಡು ಭಾಗವಾಗಿ, ಮುಂಭಾಗದಲ್ಲಿ ಬಿಳಿಯಾಗಿದ್ದರೆ ಅಂಥವರು ಬಹಳ ವೇಗದ ಆಲೋಚನೆ, ಚಿಂತನೆ ಹೊಂದಿರುತ್ತಾರೆ.

ಮುಂಭಾಗದ ಕೂದಲಲ್ಲಿ ಸುಳಿ

ಮುಂಭಾಗದ ಕೂದಲಲ್ಲಿ ಸುಳಿ

ಯಾವ ಮಹಿಳೆಗೆ ಮುಂಭಾಗದ ಕೂದಲಿನಲ್ಲಿ ಸುಳಿಯಿರುತ್ತದೋ ಅಂಥವರಿಗೆ ತಾಳ್ಮೆ ಕಡಿಮೆ. ಆದರೆ ಸ್ವತಂತ್ರ ಚಿಂತನೆ ಇರುತ್ತದೆ. ಉದ್ಯೋಗಸ್ಥರಾಗುತ್ತಾರೆ.

ಮಧ್ಯಭಾಗದಲ್ಲಿ ಸುಳಿ

ಮಧ್ಯಭಾಗದಲ್ಲಿ ಸುಳಿ

ತಲೆಯ ಮಧ್ಯಭಾಗದ ಕೂದಲಿನಲ್ಲಿ ಸುಳಿ ಇರುವ ಮಹಿಳೆಯು ಸಾಮಾಜಿಕ ಕಾರ್ಯಕರ್ತೆ ಆಗುತ್ತಾರೆ.

ತಲೆಯ ಎಡಭಾಗಕ್ಕೆ ಸುಳಿ

ತಲೆಯ ಎಡಭಾಗಕ್ಕೆ ಸುಳಿ

ತಲೆಯ ಎಡಭಾಗಕ್ಕೆ ಸುಳಿ ಇದ್ದಲ್ಲಿ ಅಂಥ ಮಹಿಳೆಯರನ್ನು ಸಹಿಸುವುದಕ್ಕೆ ಅಸಾಧ್ಯವಾಗಿರುತ್ತದೆ ಮತ್ತು ವಿಪರೀತ ಕೋಪದ ಗುಣವುಳ್ಳವರಾಗಿರುತ್ತಾರೆ.

ಬಲ ಭಾಗದಲ್ಲಿ ಸುಳಿ

ಬಲ ಭಾಗದಲ್ಲಿ ಸುಳಿ

ಒಂದು ವೇಳೆ ಸುಳಿ ತಲೆಯ ಬಲ ಭಾಗ ಇದ್ದರೆ ಅಂಥ ಮಹಿಳೆಯರು ಬುದ್ಧಿವಂತೆಯರಾಗಿರುತ್ತಾರೆ, ವಿಶ್ಲೇಷಣಾ ಸಾಮರ್ಥ್ಯ ಇರುತ್ತದೆ ಮತ್ತು ಏನಾದರೂ ಸಾಧಿಸುವ ಶಕ್ತಿ ಇರುತ್ತದೆ.

ಗುಂಗುರು ಕೂದಲಿದ್ದರೆ

ಗುಂಗುರು ಕೂದಲಿದ್ದರೆ

ಗುಂಗುರು ಕೂದಲು ಇರುವಂಥವರಿಗೆ ಗಂಡು ಸಂತಾನದ ಸಾಧ್ಯತೆ ಹೆಚ್ಚು ಹಾಗೂ ತುಂಬ ಸುಂದರವಾದ ದಾಂಪತ್ಯ ಜೀವನ ಇವರದಾಗಿರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the samudrika Shastra of Astrology, today we will discuss about hairs of women. Read how hairs define woman's personality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more