• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Daily Horoscope: ಜ 15, ಶುಕ್ರವಾರ ದ್ವಾದಶ ರಾಶಿ ಭವಿಷ್ಯ

By ಶ್ರೀ ರಾಘವೇಂದ್ರ ರಾವ್ ಕುಡ್ಲ
|

ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.

ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಕಷ್ಟಕಾರ್ಪಣ್ಯದಿಂದ ಮುಕ್ತಿ ಹೊಂದಲು ದಾರಿ ದೀಪ:

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ

ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು

ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ,

ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ,

ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ

ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ.

ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

 ಮೇಷ ರಾಶಿ

ಮೇಷ ರಾಶಿ

ವ್ಯಾಪಾರ- ವ್ಯವಹಾರಗಳಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ವಿದೇಶ ಪ್ರಯಾಣಗಳಿಗೆ ಪ್ರಯತ್ನಿಸುತ್ತಿದ್ದಲ್ಲಿ ಅದರಲ್ಲಿ ಶುಭಕರವಾದ ಬೆಳವಣಿಗೆಗಳು ಆಗಲಿವೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ ಕೆಲಸ- ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ ಅವಕಾಶ ದೊರೆಯಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ಕಮಿಷನ್ ದೊರೆಯಲಿದೆ.

 ವೃಷಭ ರಾಶಿ

ವೃಷಭ ರಾಶಿ

ಉದ್ಯೋಗ ಸ್ಥಳದಲ್ಲಿ ಮಹತ್ತರವಾದ ಬದಲಾವಣೆಗಳು ಆಗುವ ಬಗ್ಗೆ ಸೂಚನೆ ದೊರೆಯಲಿದೆ. ನಿಮ್ಮ ಪಾಲಿನ ಜವಾಬ್ದಾರಿ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಯಾರೂ ಊಹಿಸದ ರೀತಿಯಲ್ಲಿ ನಿಮ್ಮಲ್ಲಿನ ನಾಯಕತ್ವ ಗುಣಗಳು ಪ್ರಕಟಗೊಳ್ಳಲಿವೆ. ಕುಟುಂಬದಲ್ಲೂ ನಿಮ್ಮ ಅಗತ್ಯ ಹೆಚ್ಚಾಗಲಿದೆ.

 ಮಿಥುನ ರಾಶಿ

ಮಿಥುನ ರಾಶಿ

ತಂದೆಯ ನೆರವಿನೊಂದಿಗೆ ಹೊಸ ಕೆಲಸ- ಕಾರ್ಯಗಳು ಆರಂಭಿಸಲಿದ್ದೀರಿ. ನಿಮ್ಮ ಪಾಲಿಗೆ ಅದೃಷ್ಟ ಇರಲಿದೆ. ಈ ಕಾರಣಕ್ಕೆ ಅನಿರೀಕ್ಷಿತವಾಗಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಔತಣ ಕೂಟಗಳಿಗೆ ಸ್ನೇಹಿತರಿಂದ ಆಹ್ವಾನ ಬರಲಿದೆ. ಪ್ರಭಾವಿಗಳ ಸಂಪರ್ಕಕ್ಕೆ ಬರಲಿದ್ದೀರಿ.

 ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಅನಾರೋಗ್ಯ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿವೆ. ಇತರರ ಸಾಲಗಳಿಗೆ ಜಾಮೀನು ನಿಲ್ಲುವಂತೆ ಒತ್ತಡ ಹೆಚ್ಚಾಗಲಿದೆ. ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ದೂರ ಪ್ರಯಾಣಗಳಿಗೆ ತೆರಳದಿರುವುದು ಉತ್ತಮ. ತೀರಾ ಅನಿವಾರ್ಯ ಇದ್ದಲ್ಲಿ ನೀವು ವಾಹನ ಚಲಾಯಿಸಬೇಡಿ.

 ಸಿಂಹ ರಾಶಿ

ಸಿಂಹ ರಾಶಿ

ಸಂಗಾತಿ ಜತೆಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಕಿರು ಪ್ರವಾಸವನ್ನು ಕೈಗೊಳ್ಳಲಿದ್ದೀರಿ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ದೊಡ್ಡ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಯೋಗ ಇದೆ.

 ಕನ್ಯಾ ರಾಶಿ

ಕನ್ಯಾ ರಾಶಿ

ನಿಮ್ಮ ಉದ್ದೇಶಗಳಿಗೆ ಇತರರು ಅಡ್ಡಗಾಲು ಹಾಕಲಿದ್ದಾರೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಸುಖಾಸುಮ್ಮನೆ ತಲೆ ಮೇಲೆ ವಿವಾದ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟೂ ಮೌನವಾಗಿರುವುದು ಒಳಿತು. ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾ ಇಡಿ.

 ತುಲಾ ರಾಶಿ

ತುಲಾ ರಾಶಿ

ಮಕ್ಕಳ ಸಾಧನೆಯಿಂದ ಮನಸ್ಸಿಗೆ ಸಮಾಧಾನ ಆಗುತ್ತದೆ.ನ್ ಅವರ ಮದುವೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರುವ ಯೋಗ ಇದೆ. ಈ ದಿನ ಬಹಳ ಪ್ರಮುಖವಾದ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಅದರಿಂದ ಭವಿಷ್ಯದ ಹಲವು ಸಂಗತಿಗಳು ನಿರ್ಧಾರ ಆಗಲಿವೆ.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಸ್ನೇಹಿತರ ನಿರ್ಧಾರ ಮತ್ತು ನಡವಳಿಕೆ ನಿಮ್ಮನ್ನು ಅಚ್ಚರಿಗೆ ದೂಡಲಿದೆ. ಊಟ- ತಿಂಡಿ ವಿಚಾರದಲ್ಲಿ ನಾಲಗೆ ಹತೋಟಿಯಲ್ಲಿ ಇರಲಿ. ಮಸಾಲೆ ಹಾಗೂ ಕರಿದ ಪದಾರ್ಥಗಳು ಅಥವಾ ಸಿಹಿ ಖಾದ್ಯಗಳನ್ನು ತಿನ್ನದಿರಿ. ಹೊಸ ವಾಹನ ಖರೀದಿ ಮಾಡಬೇಕು ಎಂದಿದ್ದಲ್ಲಿ ಹಣಕಾಸು ಹೊಂದಿಸಿಕೊಳ್ಳಲು ಅನುಕೂಲ ಆಗಲಿದೆ.

 ಧನಸ್ಸು ರಾಶಿ

ಧನಸ್ಸು ರಾಶಿ

ಸೋದರ- ಸೋದರಿಯರ ಮಾತಿನಿಂದ ಮನಸ್ಸಿಗೆ ಬೇಸರ ಉಂಟಾಗಲಿದೆ. ಹಣದ ವಿಚಾರದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಗೆ ನಿರೀಕ್ಷಿತ ರಿಟರ್ನ್ಸ್ ಇಲ್ಲ ಎಂಬುದು ತಿಳಿದು ಬೇಸರ ಆಗುತ್ತದೆ. ಈಗಿನ ಹಿನ್ನಡೆ ಬಹಳ ಸಮಯ ನಿಮ್ಮನ್ನು ಕಾಡುತ್ತದೆ.

 ಮಕರ ರಾಶಿ

ಮಕರ ರಾಶಿ

ಹಣದ ಹರಿವು ನಿರೀಕ್ಷೆಯಂತೆ ಇಲ್ಲದೆ ಭಾರೀ ಒತ್ತಡಕ್ಕೆ ಒಳಗಾಗಲಿದ್ದೀರಿ. ನಿಮ್ಮ ಮಾತಿಗೆ ನಾನಾ ಅರ್ಥಗಳನ್ನು ಕಲ್ಪಿಸಿ, ಮೂಲೆಗುಂಪು ಮಾಡುವುದಕ್ಕೆ ಪ್ರಯತ್ನಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಆದಾಯದಲ್ಲಿ ಭಾರೀ ಇಳಿಕೆ ಆಗಲಿದೆ.

 ಕುಂಭ ರಾಶಿ

ಕುಂಭ ರಾಶಿ

ಇಂದು ವಿಪರೀತ ಗೊಂದಲ ಇರುತ್ತದೆ. ಭಾವನಾತ್ಮಕವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬುದು ನಿಮ್ಮ ಪಾಲಿಗೆ ಸವಾಲಾಗಿ ಪರಿಣಮಿಸಲಿದೆ. ಶೀತ ಪ್ರಕೃತಿಯವರಿಗೆ ಆರೋಗ್ಯದಲ್ಲಿ ಏರುಪೇರು, ಆಸ್ತಮಾ ಸಮಸ್ಯೆ ಇರುವವರಿಗೆ ಉಲ್ಬಣ ಆಗುವ ಸಾಧ್ಯತೆ ಇದೆ. ಅಂಥ ಸಂದರ್ಭದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ.

 ಮೀನ ರಾಶಿ

ಮೀನ ರಾಶಿ

ಒಂದರ ಹಿಂದೆ ಒಂದು ಖರ್ಚುಗಳು ಬಂದು, ಸಾಲ ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಸ್ವಂತಕ್ಕಾಗಿ ಖರ್ಚು ಮಾಡಲು ಕೂಡಿಟ್ಟಿದ್ದ ಹಣವನ್ನು ಇತರರಿಗೆ ನೀಡಬೇಕಾಗುತ್ತದೆ. ಹಿತಶತ್ರುಗಳ ಅಪ ಪ್ರಚಾರದಿಂದ ನಿಮ್ಮ ವರ್ಚಸ್ಸಿಗೆ ಹಾನಿ ಆಗುವ ಸಾಧ್ಯತೆ ಇದೆ. ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗುತ್ತದೆ.

ಕಷ್ಟಕಾರ್ಪಣ್ಯದಿಂದ ಮುಕ್ತಿ ಹೊಂದಲು ದಾರಿ ದೀಪ:

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ

ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು

ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ,

ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ,

ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ

ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ.

ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

English summary
Rashi Bhavishya For Today in Kannada (15 Jan 2021): Get your daily horoscope in Kannada based on your zodiac signs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X