ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಗುಡ್ಡ ಗೊರವಯ್ಯ ನುಡಿದ ಈ ವರ್ಷದ (2021) ದಸರಾ ಕಾರ್ಣಿಕ

|
Google Oneindia Kannada News

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಶ್ರೀ ಮೈಲಾರಲಿಂಗೇಶ್ವರ ಮತ್ತು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಗೊರವಯ್ಯನವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಅಪಾರ ನಂಬಿಕೆ. ಕೊರೊನಾ ಹಾವಳಿ, ಜಿಲ್ಲಾಡಳಿತದ ಬಿಗಿನಿಯಮ ಇಲ್ಲದಿದ್ದರೆ, ಈ ಕಾರ್ಣಿಕ ವೀಕ್ಷಿಸಲು ಲಕ್ಷಾಂತರ ಭಕ್ತರು ಸೇರುತ್ತಿದ್ದರು.

''ಮುಂದಿನ ಆರು ತಿಂಗಳಲ್ಲಿ ಈ ಸರ್ಕಾರ ಬೀಳಲಿದೆ, ಗಡ್ಡಧಾರಿಯೊಬ್ಬರು ಮುಂದೆ ಸಿಎಂ ಆಗಲಿದ್ದಾರೆ ಎಂದು ಮೈಲಾರ ಲಿಂಗೇಶ್ವರನ ಸನ್ನಿಧಾನದ ಧರ್ಮದರ್ಶಿ ವೆಂಕಟಪ್ಪ ಒಡೆಯರ್ ಹೇಳಿದ್ದರು. ಇದೆಲ್ಲಾ, ಸುಳ್ಳು ಕಾರ್ಣಿಕವನ್ನು ವರ್ಷಕ್ಕೊಮ್ಮೆ ಮಾತ್ರ ನುಡಿಯುವುದು,'' ಎಂದು ಕಾರ್ಣಿಕ ನುಡಿಯುವ ಗೊರವಯ್ಯ ಅಕ್ರೋಶ ವ್ಯಕ್ತ ಪಡಿಸಿದ್ದರು.

ದಸರಾ ವಿಶೇಷ: ಹನ್ನೆರಡು ರಾಶಿಗಳ ಶುಭ, ಅಶುಭಗಳ ಜ್ಯೋತಿಷ್ಯ ಫಲಾಫಲದಸರಾ ವಿಶೇಷ: ಹನ್ನೆರಡು ರಾಶಿಗಳ ಶುಭ, ಅಶುಭಗಳ ಜ್ಯೋತಿಷ್ಯ ಫಲಾಫಲ

"ನವೆಂಬರ್‌ನಿಂದ ಮುಂದಿನ ಸಂಕ್ರಾಂತಿ ನಡುವೆ ರಾಷ್ಟ್ರಮಟ್ಟದಲ್ಲಿ ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ. ಅದು ಜಾಗತಿಕವಾಗಿ ತಲ್ಲಣ ಸೃಷ್ಟಿಸಲಿದೆ'' ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಆದರೆ, ದೇವರಗುಡ್ಡದ ಒಂದು ಲೈನ್ ಕಾರ್ಣಿಕವನ್ನು ಬೇರೆ ರೀತಿಯಲ್ಲಿ ಉಲ್ಲೇಖಿಸಲಾಗುತ್ತಿದೆ.

 ಅಫ್ಘಾನಿಸ್ತಾನ ತಾಲಿಬಾನ್ ವಶ, ಕೋಡಿಮಠಶ್ರೀಗಳ ಭವಿಷ್ಯ ನಿಜವಾಯ್ತು ಅಫ್ಘಾನಿಸ್ತಾನ ತಾಲಿಬಾನ್ ವಶ, ಕೋಡಿಮಠಶ್ರೀಗಳ ಭವಿಷ್ಯ ನಿಜವಾಯ್ತು

"ಈ ಸಂವತ್ಸರದಲ್ಲಿ ಪ್ರೇತ ಕಾಣೆಯಾಗುತ್ತಾನೆ, ಪಂಚಭೂತಗಳಿಂದ ತೊಂದರೆ ಆಗಲಿದೆ. ಆಗಸ್ಟ್ ಮೂರನೇ ವಾರದಿಂದ ರೋಗ- ರುಜಿನಗಳು ಹೆಚ್ಚಾಗಲಿದೆ. ಜನವರಿಯವರೆಗೂ ರೋಗ ಬಾಧೆ ಇರಲಿದೆ. ಜನ ಭೀತಿಯಿಂದ ಸಾಯುತ್ತಿದ್ದಾರೆ ಹೊರತು, ಕಾಯಿಲೆಯಿಂದ ಸಾಯುವುದಿಲ್ಲ,'' ಎಂದು ಜುಲೈ ತಿಂಗಳಲ್ಲಿ ಕೋಡಿಶ್ರೀಗಳು ಹೇಳಿದ್ದರು. ಇಂದು (ಅಕ್ಟೋಬರ್ 14) ನುಡಿಯಲಾಗಿರುವ ಕಾರ್ಣಿಕ ಹೀಗಿದೆ:

 ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ ಎನ್ನುವ ಕಾರ್ಣಿಕ - 2020

ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ ಎನ್ನುವ ಕಾರ್ಣಿಕ - 2020

ವಿಜಯದಶಮಿಯ ಮುನ್ನಾದಿನ ಕಾರ್ಣಿಕ ನುಡಿಯಲಾಗುವ ಈ ಕ್ಷೇತ್ರದಲ್ಲಿ ಕಳೆದ ವರ್ಷದ ದಸರಾದಂದು, ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ ಎನ್ನುವ ಕಾರ್ಣಿಕ ಹೊರಬಿದ್ದಿತ್ತು. "ನಾಡು ಕೊರೊನಾ ಹಾವಳಿಯಿಂದ ಮುಕ್ತವಾಗಲಿದೆ. ಕೊರೊನಾ ಕಾಲಕ್ರಮೇಣ ಬೂದಿಯಾಗಲಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮುಂದೆ ರೈತರ ಬಾಳು ಹಸನಾಗಲಿದೆ. ರಾಜ್ಯ ಸರಕಾರ ನಿರಾಂತಕವಾಗಿ ಕಾರ್ಯಭಾರ ಮಾಡಲಿದೆ" ಎಂದು ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ಮಿನುಡಿದ ಭವಿಷ್ಯವನ್ನು ಅರ್ಚಕರು ವಿಶ್ಲೇಷಿಸಿದ್ದರು.

 ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್- (2021) ದಸರಾ ಕಾರ್ಣಿಕ

ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್- (2021) ದಸರಾ ಕಾರ್ಣಿಕ

ಈ ಬಾರಿಯ (2021) ದಸರಾ ಕಾರ್ಣಿಕ ನುಡಿದಿರುವ ಗೊರವಯ್ಯ, "ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್" ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಇದು ನಾಡು ಸುಭಿಕ್ಷವಾಗುವ, ರೈತರ ಬಾಳು ಹಸನಾಗುವ ಕಾರ್ಣಿಕ ಎಂದು ಅರ್ಥೈಸಲಾಗುತ್ತಿದೆ. ಕಾರ್ಣಿಕದ ಬಗ್ಗೆ ದೇವಾಲಯದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿಯವರು ವಿಶ್ಲೇಷಣೆಯನ್ನು ಮಾಡಿ, ಮಾಧ್ಯಮದವರಿಗೆ ವಿವರಿಸಿದ್ದಾರೆ.

 ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಹಾಗಾಗಿ ಅನ್ನದಾತರ ಭವಿಷ್ಯವಾಣಿ

ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಹಾಗಾಗಿ ಅನ್ನದಾತರ ಭವಿಷ್ಯವಾಣಿ

"ಎರೆ ಎಂದರೆ ಮಣ್ಣು, ದೊರೆ ಎಂದರೆ ರಾಜ. ಹಾಗಾಗಿ ಅನ್ನದಾತರ ಭವಿಷ್ಯವಾಣಿ"ಎಂದು ಹೇಳಿರುವ ಪ್ರಧಾನ ಅರ್ಚಕರು, "ರೈತ ಕಷ್ಟಪಟ್ಟು ಬೆಳೆಯುವ ಬೆಳೆಗೆ ದೊರೆಯಂತಹ ಸಮೃದ್ದಿ ಫಲ ಸಿಗುತ್ತದೆ. ದೈವ ದೂರೆಯಾದಿತಲೇ ಎಂದರೆ, ದೈವದ ರಕ್ಷೆ ಇರಲಿದೆ" ಎಂದು ಅರ್ಥೈಸಿಕೊಳ್ಳಬಹುದು ಎಂದು ಸಂತೋಷ್ ಭಟ್ ಹೇಳಿದ್ದಾರೆ. ಈ ಕಾರ್ಣಿಕ ಭವಿಷ್ಯವಾಣಿಗೆ ಇನ್ನೊಂದು ರೀತಿಯಲ್ಲೂ ಪ್ರಧಾನ ಅರ್ಚಕರು ವ್ಯಾಖ್ಯಾನಿಸಿದ್ದರಿಂದ ಗೊಂದಲ ಮೂಡುವಂತಾಗಿದೆ.

 ಬೊಮ್ಮಾಯಿ ಸರಕಾರ ಸುಭದ್ರವಾಗಲಿದೆ ಎಂದು ಪರೋಕ್ಷವಾಗಿ ಅರ್ಚಕರು ನುಡಿದಿದ್ದಾರೆ

ಬೊಮ್ಮಾಯಿ ಸರಕಾರ ಸುಭದ್ರವಾಗಲಿದೆ ಎಂದು ಪರೋಕ್ಷವಾಗಿ ಅರ್ಚಕರು ನುಡಿದಿದ್ದಾರೆ

ಪ್ರಧಾನ ಅರ್ಚಕರು ಮಾಡಿದ ಇನ್ನೊಂದು ವಿಶ್ಲೇಷಣೆಯೆಂದರೆ, "ದೈವ ದೊರೆಯದಿತಲೇ ಎಂದರೆ, ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದೂ ವ್ಯಾಖ್ಯಾನಿಸಬಹುದು. ಈ ಭವಿಷ್ಯವಾಣಿಯನ್ನು ರಾಜಕೀಯವಾಗಿ ಹೇಳುವುದಾದರೆ, ಜನತೆ ಮತ್ತು ದೈವ ಮೆಚ್ಚುವಂತಹ ಆಡಳಿತವನ್ನು ಈ ಸರಕಾರ ನೀಡುತ್ತದೆ ಎಂದೂ ಹೇಳಬಹುದು"ಎಂದು ಸಂತೋಷ್ ಭಟ್ ಹೇಳಿದ್ದಾರೆ. ಆ ಮೂಲಕ ಬೊಮ್ಮಾಯಿ ಸರಕಾರ ಸುಭದ್ರವಾಗಲಿದೆ ಎಂದು ಪರೋಕ್ಷವಾಗಿ ಅರ್ಚಕರು ನುಡಿದಿದ್ದಾರೆ.

English summary
Ranebennur Taluk Devaragudda Goravaiah 2021 Dasara Prediction. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X