• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖ್ಯಾತ ಜ್ಯೋತಿಷಿಯ ಭವಿಷ್ಯ: ಕೊರೊನಾ ಸಂಕಷ್ಟ ಸದ್ಯದಲ್ಲೇ ಮುಕ್ತ..ಮುಕ್ತ..ಮುಕ್ತ

|

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿತರು ಒಂದು ಕಡೆಯಾದರೆ, ಗುಣಮುಖರಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿರುವುದು ಸಮಾಧಾನಕರ ವಿಚಾರ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 72 ಲಕ್ಷದ ಗಡಿ ದಾಟಿದೆ.

ಮಾರ್ಚ್ ತಿಂಗಳಿನಿಂದ ಆರಂಭವಾಗಿರುವ ಈ ವೈರಾಣುವಿನ ಹಾವಳಿಯಿಂದ ಮನುಕುಲಕ್ಕೆ ಮುಕ್ತಿಯಾವಾಗ ಎಂದು ಹಲವು ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದರು. ಇದರಲ್ಲಿ ಹಲವರ ಭವಿಷ್ಯ ಪೊಳ್ಳಾಗಿದ್ದೇ ಹೆಚ್ಚು.

ರಾಜರಾಜೇಶ್ವರಿ ನಗರ ಉಪಚುನಾವಣೆ: ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯ

ಇದರ ನಡುವೆ ಕೊರೊನಾದ ಮೇಲೆ ಜನರಿಗೆ ಭಯ ಕಮ್ಮಿಯಾಗುತ್ತಿದೆ, ಜೊತೆಗೆ, ಸಾಮಾಜಿಕ ಅಂತರಕ್ಕೂ ಬೆಲೆಯಿಲ್ಲದಂತಾಗಿದೆ. ಇನ್ನೊಂದು ಕಡೆ, ಗುರುವಾರದಿಂದ (ಅ 15) ಅನ್ ಲಾಕ್ - 5 ತೆರೆಯುತ್ತಿರುವುದರಿಂದ, ಸಾರ್ವಜನಿಕರ ಓಡಾಟಕ್ಕೆ ಇನ್ನಷ್ಟು ಅನುಮತಿ ಸಿಕ್ಕಂತಾಗಿದೆ.

ಕೊರೊನಾ ಹಾವಳಿ ತೀವ್ರಗೊಳ್ಳುವ ಸಮಯ: ಕೋಡಿಶ್ರೀಗಳು ನುಡಿದ ಭವಿಷ್ಯದ ದಿನ ಮುಂದೆ ಬರುತ್ತಿದೆ

ಕೊರೊನಾದಿಂದ ಮುಕ್ತಿಯಾವಾಗ ಎನ್ನುವ ವಿಚಾರದಲ್ಲಿ ಹಿಂದೆಯೂ, ಅಂದರೆ ಏಪ್ರಿಲ್ ತಿಂಗಳಲ್ಲಿ, ಉತ್ತರ ಭಾರತದ ಮೂಲದ ಮನೀಜಾ ಅಹುಜಾ ಭವಿಷ್ಯವನ್ನು ನುಡಿದಿದ್ದರು. ಈಗ, ಮತ್ತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

ಸೂರ್ಯಗ್ರಹಣದ ನಂತರ ಕೊರೊನಾದಿಂದ ಮುಕ್ತಿ

ಸೂರ್ಯಗ್ರಹಣದ ನಂತರ ಕೊರೊನಾದಿಂದ ಮುಕ್ತಿ

"ಹೆಚ್ಚಿನ ಜ್ಯೋತಿಷಿಗಳು ಏಪ್ರಿಲ್, ಮೇ ಅಂತ್ಯದೊಳಗೆ ಕೊರೊನಾ ನಿರ್ನಾಮವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದರು. ಇದಾದ ನಂತರ, ಸೂರ್ಯಗ್ರಹಣದ ನಂತರ ಕೊರೊನಾದಿಂದ ಮುಕ್ತಿ ಸಿಗಲಿದೆ ಎನ್ನುವ ಭವಿಷ್ಯವನ್ನೂ ನುಡಿದಿದ್ದರು. ಈ ರೀತಿ ಆಗುವುದಿಲ್ಲ ಎಂದು ನಾನು ಹಿಂದೆನೇ ಹೇಳಿದ್ದೆ" ಎಂದು ಮನೀಜಾ ಅಹುಜಾ ಹೇಳಿದ್ದಾರೆ.

ಉತ್ತರ ಭಾರತದ ಮೂಲದ ಮನೀಜಾ ಅಹುಜಾ ಭವಿಷ್ಯ

ಉತ್ತರ ಭಾರತದ ಮೂಲದ ಮನೀಜಾ ಅಹುಜಾ ಭವಿಷ್ಯ

ಬೃಹಸ್ಪತಿ ಮತ್ತು ಕೇತು ಸಂಯೋಜನೆಯಿಂದ ಕೊರೊನಾ ವೈರಸ್ ಹೆಚ್ಚಾಗುತ್ತಿದೆ ಎಂದು ನಾನು ಹೇಳಿದ್ದೆ. ಸೆಪ್ಟಂಬರ್ 24ರಿಂದ ರಾಹುಕೇತುವಿನ ಗೋಚರ ವೃಶ್ಚಿಕ ರಾಶಿ ಕಡೆ ತಿರುಗಲಿದೆ. ಬೃಹಸ್ಪತಿ, ಧನು ರಾಶಿಯಲ್ಲೇ, ನವೆಂಬರ್ ಇಪ್ಪತ್ತರ ತನಕ ಇರಲಿದ್ದಾನೆ. ಅಲ್ಲಿಂದ ಮಕರ ರಾಶಿಗೆ ಹೋಗಲಿದ್ದಾನೆ. ಅಲ್ಲಿಂದ, ಕೊರೊನಾ ಹಾವಳಿ ಕಮ್ಮಿಯಾಗಲಿದೆ"ಎಂದು ಮನೀಜಾ ಅಹುಜಾ ಹೇಳಿದ್ದಾರೆ. ಅಂದರೆ, ನವೆಂಬರ್ ಮಾಸಾಂತ್ಯದಿಂದ ಕೊರೊನಾ ಹಾವಳಿ ಕಮ್ಮಿಯಾಗಲಿದೆ.

ದೇಶದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ

ದೇಶದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ

ಸೆಪ್ಟಂಬರ್ ಅಂತ್ಯದಿಂದ ನವೆಂಬರ್ ಇಪ್ಪತ್ತರೊಳಗೆ ಕೊರೊನಾಗೆ ಲಸಿಕೆ ಬಂದರೂ ಬರಬಹುದು. ಅಕ್ಟೋಬರ್ ತಿಂಗಳಲ್ಲಿ ಮಂಗಳ ಗ್ರಹವು, ಮೀನ ರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಡಿಸೆಂಬರ್ ತಿಂಗಳವರೆಗೆ ಆ ರಾಶಿಯಲ್ಲಿ ಇರಲಿದ್ದಾನೆ. ಈ ಸಮಯದಲ್ಲಿ ದೇಶದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ"ಎಂದು ಮನೀಜಾ ಹೇಳಿದ್ದಾರೆ.

ಈ ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್

ಈ ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್

"ಕೊರೊನಾ ವೈರಸ್ ನಂತರ ಅಂದರೆ, ಈ ವರ್ಷಾಂತ್ಯದಲ್ಲಿ ಇನ್ನೊಂದು ವೈರಸ್ ಅಟ್ಯಾಕ್ ಮಾಡಲಿದೆ ಎನ್ನುವ ಭವಿಷ್ಯವನ್ನು ಕೆಲವು ಜ್ಯೋತಿಷಿಗಳು ಹೇಳಿದ್ದರು. ಆದರೆ, ಇದು ಸುಳ್ಳು, ಅಂತಹ ಯಾವುದೇ ವೈರಸ್ ಮತ್ತೆ ದಾಳಿ ಮಾಡುವುದಿಲ್ಲ. ನಾರಾಯಣ ಕವಚವನ್ನು ಜನರು ಓದಿದರೆ ಎಲ್ಲರಿಗೂ ಮಂಗಳವಾಗಲಿದೆ" ಎಂದು ಜ್ಯೋತಿಷಿ ಅಹುಜಾ ಹೇಳಿದ್ದಾರೆ.

English summary
Prediction: Corona Virus Cases Reduce From 24th September Onwards After The Jupiter Ketu Conjunction Is Over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X