• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶಕ್ಕೆ ಕೊರೊನಾ ಹಾವಳಿ: ಕೋಡಿಶ್ರೀಗಳು ನುಡಿದಿದ್ದ ಭವಿಷ್ಯ ಸತ್ಯವಾಯಿತು ನೋಡಿ..

|
Google Oneindia Kannada News

ಬಹುತೇಕ ಒಂದು ವರ್ಷಗಳಿಂದ ಜನರ ಬದುಕನ್ನು ಮೂರಾಬಟ್ಟೆ ಮಾಡಿದ್ದ ಕೊರೊನಾ ವೈರಸಿನ ಹಾವಳಿ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆಯೇ? ಸರಕಾರ ನೀಡುತ್ತಿರುವ ಅಂಕಿಅಂಶದ ಪ್ರಕಾರ ಹೌದು..

ಮಧ್ಯಪ್ರಾಚ್ಯ, ಯುರೋಪ್ ಮತ್ತು ಅಮೆರಿಕಾದಲ್ಲಿ ಕೊರೊನಾ ಹಾವಳಿ ಇನ್ನೂ ಇದ್ದು, ಕೆಲವೊಂದು ಕಡೆ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ಭಾರತದಲ್ಲಿ ಮಾತ್ರ ಇದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.

ಈ ಬಾರಿ ಮೈಲಾರ ಕಾರ್ಣಿಕ ಅನುಮಾನ: ಕಳೆದ ವರ್ಷ ಭವಿಷ್ಯ ನುಡಿದಿದ್ದೇನು, ಆಗಿದ್ದೇನು? ಈ ಬಾರಿ ಮೈಲಾರ ಕಾರ್ಣಿಕ ಅನುಮಾನ: ಕಳೆದ ವರ್ಷ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?

ಇದರ ಜೊತೆಗೆ, ಜನರೂ ಕೊರೊನಾ ಬಗ್ಗೆ ಇಟ್ಟುಕೊಂಡಿದ್ದ ಭಯವನ್ನು ಬಿಟ್ಟು, ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾದಿಂದ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ ಇದುವರೆಗೆ 1,56,000+.

ಇನ್ನು, ಕರ್ನಾಟಕದಲ್ಲಿ 12,263 ಮಂದಿ ಈ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಕೊರೊನಾ ವಿಚಾರದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಬಹಳ ಮುಂದೆನೇ ಎಚ್ಚರಿಕೆಯನ್ನು ನೀಡಿದ್ದರು ಮತ್ತು ಯಾವಾಗ ಈ ಹಾವಳಿಯಿಂದ ಮುಕ್ತವಾಗಬಹುದು ಎನ್ನುವುದರ ಬಗ್ಗೆಯೂ ಹೇಳಿದ್ದರು. ಈಗ ಸತ್ಯವಾಗುತ್ತಿದೆ ಅವರ ಭವಿಷ್ಯ. ಶ್ರೀಗಳು ಹೇಳಿದ್ದೇನು, ಮುಂದೆ ಓದಿ..

2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ! 2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!

ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ

ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ

"ಮದ್ದಿಲ್ಲದ ಕಾಯಿಲೆಗೆ ಸಾವಿರ ಸಾವಿರ ಜನರು ಸಾವನ್ನಪ್ಪುತ್ತಾರೆ. ಎದುರಾಗುವ ಕಾಯಿಲೆ ಬರೀ ಮನುಷ್ಯನಿಗೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಜಡತ್ವದ ವಸ್ತುಗಳಿಗೂ ಆವರಿಸಬಹುದು. ಔಷಧಗಳು ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮನುಷ್ಯ ಎಣ್ಣೆ ಇಲ್ಲದ ದೀಪವನ್ನು ಉರಿಸಿದ್ದಾನೆ. ಹಕ್ಕಿಗಳು ರೆಕ್ಕೆಯಿಲ್ಲದೇ ಹಾರಾಡಿವೆ. ಮನುಷ್ಯ ದೈವಶಕ್ತಿಗಿಂತ ದೊಡ್ಡವನಲ್ಲ" - ಕೋಡಿಶ್ರೀಗಳು.

ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ

ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ

"ದೈವೀ ಶಕ್ತಿ ಕೋಪಿಸಿಕೊಂಡರೆ, ಅನಾಹುತ ನಡೆಯುತ್ತದೆ. ಮನುಷ್ಯನ ಯಾವ ಪ್ರಯತ್ನವೂ ಫಲವನ್ನು ನೀಡುವುದಿಲ್ಲ. ಸಹಸ್ರ ಸಹಸ್ರ ವರುಷಗಳಿಂದ ಋಷಿ, ಮುನಿ, ಯೋಗಿಗಳು ಜಪತಪದಿಂದ ರಕ್ಷಣೆ ಮಾಡುತ್ತಾ ಬಂದಿರುವ ಭೂಮಿ ನಮ್ಮದು. ಹೀಗಾಗಿ ಭಾರತೀಯರು ಈ ರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ" ಎಂದು ಕೋಡಿಶ್ರೀಗಳು ಹೇಳಿದ್ದರು.

ಆಶ್ವೀಜ, ಕಾರ್ತಿಕ ಮಾಸ

ಆಶ್ವೀಜ, ಕಾರ್ತಿಕ ಮಾಸ

"ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು. ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ"ಎಂದು ಅಕ್ಟೋಬರ್ ತಿಂಗಳಲ್ಲಿ ಶ್ರೀಗಳು ಭವಿಷ್ಯ ನುಡಿದಿದ್ದರು.

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

"ಜನವರಿ, ಫೆಬ್ರವರಿಯಲ್ಲಿ ಇದು ಕಮ್ಮಿಯಾಗುವ ಸಾಧ್ಯತೆಯಿದೆ. ಆದರೂ, ಯುಗಾದಿಯವರೆಗೆ ಸಾರ್ವಜನಿಕರು ಎಚ್ಚರದಿಂದ ಇರುವುದು ಸೂಕ್ತ. ಇನ್ನೂ ಮಳೆ ಹೆಚ್ಚಾಗುವ ಆ ಮೂಲಕ ಜನರಲ್ಲಿ ಅಶಾಂತಿ ಹೆಚ್ಚಾಗುವ ಘಟನೆಗಳು ಸಂಭವಿಸಲಿವೆ. ಯುಗಾದಿಯ ನಂತರ ಮುಂದೇನಾಗುತ್ತದೆ ಎಂದು ಹೇಳುತ್ತೇನೆ"ಎಂದು ಕೋಡಿಶ್ರೀಗಳು ನವೆಂಬರ್ ಮಾಸದಲ್ಲಿ ಮತ್ತೆ ಭವಿಷ್ಯ ನುಡಿದಿದ್ದರು.

English summary
Prediction By Kodimutt Seer On Coronavirus Almost Comes Out Accuracy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X