• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ, ಜ್ಯೋತಿಷ್ಯ ಭವಿಷ್ಯ: ರೆಡ್ ಅಲರ್ಟ್, ಮುಂದಿನ 40 ದಿನ ಅತ್ಯಂತ ವಿಷಮ

|
Google Oneindia Kannada News

ಕೊರೊನಾ ಎರಡನೇ ಅಲೆ ನಿರೀಕ್ಷೆಗೂ ಮೀರಿ ಮನುಕುಲಕ್ಕೆ ಹಾನಿ ಮಾಡುತ್ತಿದ್ದು, ಈಗಾಗಲೇ ಕೆಲವು ರಾಜ್ಯಗಳು ಲಾಕ್ ಡೌನ್ ಮೊರೆ ಹೋಗಿದೆ. ಕರ್ನಾಟಕದಲ್ಲೂ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ.

ಹಲವು ಜ್ಯೋತಿಷಿಗಳು ಹೇಳಿದ ಹಾಗೆ ಪ್ಲವನಾಮ ಸಂವತ್ಸರದಲ್ಲಿ ಹಲವು ಅನಿಷ್ಟಗಳು ಎದುರಾಗಲಿವೆ. ಮಳೆ, ಗಾಳಿ, ಅಗ್ನಿ, ವೈರಾಣುವಿನಿಂದ ಹೆಚ್ಚಿನ ತೊಂದರೆ ಸಂಭವಿಸಲಿದೆ. ಅತಿವೃಷ್ಟಿ, ಅನಾವೃಷ್ಟಿ ಎದುರಾಗಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

 ಪ್ಲವನಾಮ ಸಂವತ್ಸರದ ಭವಿಷ್ಯ: ಕೊರೊನಾ, ಯುದ್ದಭೀತಿ, ಮೋದಿಗೆ ಕಂಟಕ ಪ್ಲವನಾಮ ಸಂವತ್ಸರದ ಭವಿಷ್ಯ: ಕೊರೊನಾ, ಯುದ್ದಭೀತಿ, ಮೋದಿಗೆ ಕಂಟಕ

ಉತ್ತರ ಭಾರತದ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಕೊರೊನಾ ವಿಚಾರದಲ್ಲಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಯಾವ ಯಾವ ನಗರ ಲಾಕ್ ಡೌನ್ ಆಗಲಿದೆ ಎನ್ನುವುದನ್ನು ಕೂಡಾ ಸಿನ್ಹಾ ಹಿಂದೆಯೇ ಹೇಳಿದ್ದರು.

ಸಿನ್ಹಾ ಪ್ರಕಾರ ಅತ್ಯಂತ ವೇಗದಲ್ಲಿ ಕೊರೊನಾ ಕೇಸುಗಳು ಜಾಸ್ತಿಯಾಗಲಿದೆ ಮತ್ತು ಅಷ್ಟೇ ವೇಗದಲ್ಲಿ ಅದರ ಪ್ರಭಾವ ಕಮ್ಮಿಯಾಗಲಿದೆ. ಆದರೆ, ಮುಂದಿನ ನಲವತ್ತು ದಿನಗಳು ಮಾತ್ರ ಸಾರ್ವಜನಿಕರು ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಸಮಯ ಎಂದು ಜ್ಯೋತಿಷ್ಯ ನುಡಿದಿದ್ದಾರೆ. ಜೊತೆಗೆ, ಯಾವಯಾವ ರಾಶಿಯವರು ಏನು ಮಾಡಬೇಕು ಎನ್ನುವುದರ ಬಗ್ಗೆಯೂ ಹೇಳಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಕಳೆದ ವರ್ಷದ (2020) ಕೋಡಿಶ್ರೀಗಳ 'ಯುಗಾದಿ ಭವಿಷ್ಯ'ದ ಸತ್ಯಾಸತ್ಯತೆಕಳೆದ ವರ್ಷದ (2020) ಕೋಡಿಶ್ರೀಗಳ 'ಯುಗಾದಿ ಭವಿಷ್ಯ'ದ ಸತ್ಯಾಸತ್ಯತೆ

 ದೇಶದ ಜಾತಕದ ಆಧಾರದ ಮೇಲೆ ಹೇಳುವುದಾದರೆ ಕಠಿಣಾತೀತ ಸಮಸ್ಯೆ

ದೇಶದ ಜಾತಕದ ಆಧಾರದ ಮೇಲೆ ಹೇಳುವುದಾದರೆ ಕಠಿಣಾತೀತ ಸಮಸ್ಯೆ

ನಮ್ಮ ದೇಶದ ಜಾತಕದ ಆಧಾರದ ಮೇಲೆ ಹೇಳುವುದಾದರೆ ಕಠಿಣಾತೀತ ಸಮಸ್ಯೆಗಳನ್ನು ಭಾರತೀಯರು ಎದುರಿಸಬೇಕಾಗುತ್ತದೆ. ಆದರೆ ಹಿಂದಿನಂತೆ ಇಡೀ ದೇಶ ಲಾಕ್ ಡೌನ್ ಆಗುವ ಸಾಧ್ಯತೆಗಳು ಕಮ್ಮಿ. ಶೇರು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಷ್ಟವನ್ನು ಅನುಭವಿಸಲಿದೆ. ದೆಹಲಿಯಲ್ಲಿ ಹಾಕಲಾಗಿರುವ ಆರು ದಿನಗಳ ಲಾಕ್ ಡೌನ್ ಮೇ ಮೂರರಗೆ ವಿಸ್ತರಣೆಯಾಗಲಿದೆ.

 ಮೇ 6-26 ಅತ್ಯಂತ ಕೆಟ್ಟಕಾಲ, ನಾಲ್ಕು ಲಕ್ಷ ತನಕ ಕೇಸ್ ಗಳು ದಿನಂಪ್ರತಿ

ಮೇ 6-26 ಅತ್ಯಂತ ಕೆಟ್ಟಕಾಲ, ನಾಲ್ಕು ಲಕ್ಷ ತನಕ ಕೇಸ್ ಗಳು ದಿನಂಪ್ರತಿ

ಮೇ 6-26 ಅತ್ಯಂತ ಕೆಟ್ಟಕಾಲ, ನಾಲ್ಕು ಲಕ್ಷ ತನಕ ಕೇಸ್ ಗಳು ದಿನಂಪ್ರತಿ ವರದಿಯಾಗಲಿದೆ. ಭಾರತದಲ್ಲಿ ಏರಿಕೆಯಾಗುತ್ತಿರುವ ಕೇಸುಗಳು ಭಯ ಹುಟ್ಟಿಸುವಂತದ್ದು. ಕೊರೊನಾ ಒಂದನೇ ಅಲೆ ಸ್ಪ್ರೆಡ್ ಆಗಲು ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ, ಎರಡನೇ ಅಲೆ ತೀವ್ರವಾಗಿ, ವೇಗವಾಗಿ ಹರಡುತ್ತದೆ. ಸಾವಿನ ಸಂಖ್ಯೆಯೂ ಹೆಚ್ಚಾಗಲಿದೆ.

 ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್

ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್

ಒಂದು ತುಂಡು ಕರ್ಪೂರಕ್ಕೆ ಏಲಕ್ಕಿ, ಲವಂಗ, ಲೋಬನವನ್ನು ಮಿಕ್ಸ್ ಮಾಡಿ ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಜೇಬಿನಲ್ಲಿ ಇಟ್ಟುಕೊಳ್ಳಿ. ಇದರಿಂದ ಕೊರೊನಾ ವೈರಸ್ ಬರುವುದಿಲ್ಲ ಎಂದು ಹೇಳುವುದಿಲ್ಲ, ಆದರೆ, ಬ್ಯಾಕ್ಟೀರಿಯಾವನ್ನು ನಿಗ್ರಹಿಸುವ ಶಕ್ತಿಯನ್ನು ಇದು ಹೊಂದಿದೆ. ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು.

 ಶುಕ್ರ ಮತ್ತು ಬುಧ ಒಂದೇ ಕುಂಡಲಿಯಲ್ಲಿ

ಶುಕ್ರ ಮತ್ತು ಬುಧ ಒಂದೇ ಕುಂಡಲಿಯಲ್ಲಿ

ಮೇ ಆರರಂದು ಶುಕ್ರ ಮತ್ತು ಬುಧ ಒಂದೇ ಕುಂಡಲಿಯಲ್ಲಿ ಇರಲಿದ್ದಾನೆ. ಮಂಗಳ ಎರಡನೇ ಮನೆಯಲ್ಲಿ, ಕೇತು ಹತ್ತನೇ ಮನೆಯಲ್ಲಿ, ಶನಿ ಒಂಬತ್ತನೇ ಮನೆಯಲ್ಲಿ ಇರಲಿದ್ದಾನೆ. ಸೂರ್ಯ ಮತ್ತು ಮಂಗಳ ರಾಶಿಗಳು ಪರಿವರ್ತನೆಯಾದ ನಂತರದ ದಿನಗಳಾಗಿರುವುದರಿಂದ ಕೊರೊನಾ ವೈರಸ್ ಇನ್ನಷ್ಟು ಕಾಟವನ್ನು ನೀಡಲಿದೆ. ಮೇ ಆರರಂದು ಇದು ದೇಶದಲ್ಲಿ ದೊಡ್ಡ ಅನಿಷ್ಟಕ್ಕೆ ಕಾರಣವಾಗಲಿದೆ.

 ಮೇಷ ರಾಶಿಯವರು- ಆದಿತ್ಯ ಹೃದಯ ಮಂತ್ರವನ್ನು ಪಠಿ

ಮೇಷ ರಾಶಿಯವರು- ಆದಿತ್ಯ ಹೃದಯ ಮಂತ್ರವನ್ನು ಪಠಿ

ಮೇಷ ರಾಶಿಯವರು- ಆದಿತ್ಯ ಹೃದಯ ಮಂತ್ರವನ್ನು ಪಠಿಸಿ, ವೃಶ್ಚಿಕ ರಾಶಿಯವರು ಶುಕ್ರಬೀಜ ಮಂತ್ರವನ್ನು ಜಪಿಸಿ, ಕನ್ಯಾ ಮತ್ತು ಮಿಥುನ ರಾಶಿಯವರು ಬಿಳಿಬಣ್ಣದ ವಸ್ತುಗಳನ್ನು ದಾನ ಮಾಡುವುದು ಮತ್ತು ಸೋಮವಾರದ ದಿನ ಸೂರ್ಯಾಸ್ತದವರೆಗೆ ಉಪವಾಸವಿರುವುದು, ಕಟಕ ರಾಶಿಯವರು ಗುರುವಿನ ಮಂತ್ರ ಪಠಿಸುವುದು. ಸಿಂಹ ರಾಶಿಯವರು ಆದಿತ್ಯ ಹೃದಯ ಮಂತ್ರ ಜಪಿಸುವುದು ಮತ್ತು ಕಪ್ಪುಬಣ್ಣದ ಬಟ್ಟೆಯನ್ನು ಧರಿಸದೇ ಇರುವುದು.

 ಉತ್ತರ ಭಾರತದ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ

ಉತ್ತರ ಭಾರತದ ಮೂಲದ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ

ತುಲಾ ರಾಶಿಯವರು ಕೇತುವಿಗೆ ಸಂಬಂಧಪಟ್ಟ ಮಂತ್ರವನ್ನು ಜಪಿಸುವುದು, ಧನು ರಾಶಿಯವರು ವಿಷ್ಣು ಸಹಸ್ರನಾಮ ಮಂತ್ರ ಜಪಿಸುವುದು ಮತ್ತು ಹಳದಿ ಬಣ್ಣದ ಬಟ್ಟೆಯನ್ನು ಹೆಚ್ಚು ಧರಿಸುವುದು, ಮಕರ ಮತ್ತು ಕುಂಭ ರಾಶಿಯವರು ಶನಿದೇವರ ಮಂತ್ರ ಜಪಿಸುವುದು. ಕೊನೆಯದಾಗಿ, ಮೀನ ರಾಶಿಯವರು ವಿಷ್ಣು ಸಹಸ್ರನಾಮ ಪಠಿಸುವುದು ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಹೆಚ್ಚಾಗಿ ಧರಿಸಿದರೆ ಉತ್ತಮ ಎಂದು ಜ್ಯೋತಿಷಿ ಸಿನ್ಹಾ ಹೇಳಿದ್ದಾರೆ.

English summary
Astrology Prediction By K M Sinha, Next 40 Days Is Very Critical. Corona Cases Will Go Very High.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X