India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ, ರಾಜಕೀಯ ಹಿನ್ನಡೆ ಆರಂಭ: ಜ್ಯೋತಿಷಿ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಎರಡು ದಿನಗಳ ಕರ್ನಾಟಕ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಮೈಸೂರಿಗೆ ಮೂರ್ನಾಲ್ಕು ಬಾರಿ ಆಗಮಿಸಿದ್ದರೂ, ಚಾಮುಂಡಿ ಬೆಟ್ಟಕ್ಕೆ ಮೋದಿ ಇದೇ ಮೊದಲ ಬಾರಿ ಭೇಟಿ ನೀಡಿದ್ದರು.

   Narendra Modi ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಜ್ಯೋತಿಷಿಗಳು ಹೇಳಿದ್ದೇನು | *India | OneIndia Kannada

   ದೇವಾಲಯದಲ್ಲಿ ಸುಮಾರು ಹದಿನೈದು ನಿಮಿಷ ಪ್ರಾರ್ಥನೆ ಸಲ್ಲಿಸಿದ್ದ ಮೋದಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ದೇವಾಲಯಕ್ಕೆ ಹಲವು ಗಣ್ಯರು ಭೇಟಿ ನೀಡಿದ್ದಾರೆ, ಆದರೆ ಮೋದಿಯವರಷ್ಟು ಸರಳತೆಯ ವ್ಯಕ್ತಿತ್ವವನ್ನು ನಾವು ಕಂಡಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ.

    ಬಹುದೊಡ್ಡ ಅವಘಡ ಸಂಭವಿಸಲಿದೆ: ಮತ್ತೆ ಕೋಡಿಶ್ರೀಗಳ ಭಯಾನಕ ಭವಿಷ್ಯ ಬಹುದೊಡ್ಡ ಅವಘಡ ಸಂಭವಿಸಲಿದೆ: ಮತ್ತೆ ಕೋಡಿಶ್ರೀಗಳ ಭಯಾನಕ ಭವಿಷ್ಯ

   ಚಾಮುಂಡಿ ಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿಯಾದ ನಂತರ ಮುಂಬರುವ ಚುನಾವಣೆಯಲ್ಲಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಮೋದಿ, ಮೈಸೂರಿನಿಂದ ತೆರಳಿದ ಕೆಲವೇ ಹೊತ್ತಿನಲ್ಲಿ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

   ರಾಜ್ಯ ಭೇಟಿಯ ಮೊದಲ ದಿನ (ಜೂನ್ 20) ರಾತ್ರಿ ಪ್ರಧಾನಿ ಮೋದಿ ದೇವಾಲಯಕ್ಕೆ ತೆರಳಿದ್ದರು. ಮರುದಿನ ಯೋಗದಿನ ಮತ್ತು ಇತರ ಕಾರ್ಯಕ್ರಮದಲ್ಲಿ ಭಾಗವಹಿಸಿ ನವದೆಹಲಿಗೆ ವಾಪಸ್ ಆಗಿದ್ದರು. ಜ್ಯೋತಿಷಿ ಹೇಳಿದ್ದೇನು, ಮುಂದೆ ಓದಿ..

    ಬಳ್ಳಾರಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠದ ಸ್ವಾಮಿಗಳು

   ಬಳ್ಳಾರಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠದ ಸ್ವಾಮಿಗಳು

   ಕೆಲವು ದಿನಗಳ ಹಿಂದೆ ಬಳ್ಳಾರಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠ ಅರಸೀಕೆರೆ ಮಠದ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, ಜಗತ್ತಿನ ಅರಸರು ಭಾರತದ ವಿರುದ್ದ ತಿರುಗಿಬೀಳಲಿದ್ದಾರೆ, ರಾಜಕೀಯ ಅಸ್ಥಿರತೆ ಉಂಟಾಗಿ ಗುಂಪುಗಳಾಗುತ್ತವೆ, ಕೋಮುದ್ವೇಷ ಹರಡುತ್ತದೆ, ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದರು. ಪರೋಕ್ಷವಾಗಿ ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯನ್ನು ಉಲ್ಲೇಖಿಸಿ ಶ್ರೀಗಳು ಇದನ್ನು ಹೇಳಿದ್ದು ಎಂದು ವ್ಯಾಖ್ಯಾನಿಸಲಾಗಿತ್ತು. ಜೊತೆಗೆ, ದೇಶದ ಕೆಲವು ಭಾಗಗಳಲ್ಲಿ ಅಶಾಂತಿಯ ವಾತಾವರಣವೂ ನಿರ್ಮಾಣವಾಗಿತ್ತು.

    ರಾಜಕೀಯ ವಿಶ್ಲೇಷಕರೂ ಮತ್ತು ಜ್ಯೋತಿಷಿಯೂ ಆಗಿರುವ ಗುರುರಾಜ್ ಅಂಜನ್

   ರಾಜಕೀಯ ವಿಶ್ಲೇಷಕರೂ ಮತ್ತು ಜ್ಯೋತಿಷಿಯೂ ಆಗಿರುವ ಗುರುರಾಜ್ ಅಂಜನ್

   ಈಗ ರಾಜಕೀಯ ವಿಶ್ಲೇಷಕರೂ ಮತ್ತು ಜ್ಯೋತಿಷಿಯೂ ಆಗಿರುವ ಗುರುರಾಜ್ ಅಂಜನ್ ಎನ್ನುವವರು ಪ್ರಧಾನಿ ಮೋದಿಯ ಮೈಸೂರು ಭೇಟಿಯ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಗುರುರಾಜ್ ಅವರು ಬರೆದುಕೊಂಡಿದ್ದು, "ಪ್ರಧಾನಿ ಮೋದಿಯವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ದಿನವೇ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಮುಂಬರುವ ಅಂದರೆ 2023ರ ಚುನಾವಣೆಗಳಲ್ಲಿ ಪ್ರಧಾನಿ ಮೋದಿಯವರು ಬಯಸಿದ ಫಲಿತಾಂಶ ಸಿಗುವುದಿಲ್ಲ ಮತ್ತು ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಲಿದ್ದಾರೆ"ಎಂದು ಗುರುರಾಜ್ ಟ್ವೀಟ್ ಮಾಡಿದ್ದಾರೆ.

   ಮುಂದಿನ ವರ್ಷ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆ

   ಮುಂದಿನ ವರ್ಷ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಜ್ಯೋತಿಷಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಲಾಗಿದೆ. ಹಾಗಾದರೆ, ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆಯಾ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಪ್ರಧಾನಿ ಮೋದಿ ರಾತ್ರಿ 8.30ರ ಸುಮಾರಿಗೆ ಪೂಜೆ ಸಲ್ಲಿಸಿದ್ದರು. ಮೋದಿ ಭೇಟೀಯ ಬಗ್ಗೆ ಖ್ಯಾತ ಜ್ಯೋತಿಷಿ ಡಾ. ಶಲ್ವಪಿಳ್ಳೈ ಅಯ್ಯಂಗಾರ್ ಅವರೂ ವಿಶ್ಲೇಷಣೆಯನ್ನು ಮಾಡಿದ್ದಾರೆ.

    ಮೋದಿ ರಾತ್ರಿ ಪೂಜೆ - ಶಲ್ವಪಿಳ್ಳೈ ಅಯ್ಯಂಗಾರ್ ಸ್ಪಷ್ಟನೆ

   ಮೋದಿ ರಾತ್ರಿ ಪೂಜೆ - ಶಲ್ವಪಿಳ್ಳೈ ಅಯ್ಯಂಗಾರ್ ಸ್ಪಷ್ಟನೆ

   ಪ್ರಧಾನಿ ಮೋದಿಯ ಚಾಮುಂಡೇಶ್ವರಿ ದರ್ಶನದ ಬಗ್ಗೆ ಮಾತನಾಡಿದ ಶಲ್ವಪಿಳ್ಳೈ ಅಯ್ಯಂಗಾರ್, "ವಿಂದ್ಯಾ ವಾಸಿನಿಯಾಗಿ ದುರ್ಗೆ ರಾಜರನ್ನು ರಕ್ಷಿಸುತ್ತಿದ್ದಳು, ಈಗ ರಾಜಕೀಯ ಮುಖಂಡರು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಲು ತಾಯಿಯ ಮೊರೆ ಹೋಗುತ್ತಾರೆ. ಮುಂದಿನ ಅಧಿಕಾರ ಅಥವಾ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲು ಮೋದಿ ಚಾಮುಂಡಿ ಬೆಟ್ಟಕ್ಕೆ ಬಂದಿರಬಹುದು. ತಾಯಿಯ ರಾತ್ರಿಯ ಅಭಿಷೇಕದ ನಂತರ ನಡೆಯುವ ಪೂಜೆ ತರುವಾಯ ಪ್ರಾರ್ಥನೆ ಸಲ್ಲಿಸಿದರೆ, ಅದು ಈಡೇರುತ್ತದೆ ಎನ್ನುವುದು ನಂಬಿಕೆ"ಎಂದು ಅಯ್ಯಂಗಾರ್ ಅವರು ಹೇಳಿದ್ದಾರೆ.

   English summary
   Political Setback To PM Modi In 2023, Prediction Soon After His Chamundeshwari Visit. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X