• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ

|
   Nostradamus predicted that year 2020 will be very violent | 2020 | WORLWAR III | ONEINDIA KANNADA

   ನಾಸ್ಟ್ರಡಾಮಸ್ ಯಾರಿಗೆ ಗೊತ್ತಿಲ್ಲ? ಜಗದ್ವಿಖ್ಯಾತ ಭವಿಷ್ಯಕಾರ ಆತ. ಇಡೀಯ ಭೂಮಂಡಲದ ಬಗ್ಗೆಯೇ ಆತ ಭವಿಷ್ಯ ನುಡಿದಿದ್ದಾನೆ. ಅದೂ ಸಾವಿರಾರು ವರ್ಷಗಳ ಹಿಂದೆ. ಆತ ನುಡಿದಿರುವ ಭವಿಷ್ಯ ಬಹುತೇಕ ಜರುಗಿದೆ ಎನ್ನಲಾಗುತ್ತದೆ. ಒಂದು ಸಮಯದಲ್ಲಂತೂ ಕನ್ನಡ ಸೇರಿದಂತೆ ಭಾರತದ ಬಹುತೇಕ ಟಿವಿ ಚಾನೆಲ್‌ ಗಳು ತಿಂಗಳುಗಟ್ಟಲೆ ನಾಸ್ಟ್ರಡಾಮಸ್ ಭವಿಷ್ಯದ ಬಗ್ಗೆ ಕಾರ್ಯಕ್ರಮಗಳನ್ನು ಭಿತ್ತರಿಸಿದ್ದವು.

   ಇದೀಗ ನಾಸ್ಟ್ರಡಾಮಸ್ ಮತ್ತೆ ಮುನ್ನೆಲೆಗೆ ಬಂದಿದ್ದಾನೆ. 2020 ನೇ ವರ್ಷ ವಿಶ್ವದಾದ್ಯಂತ ನಡೆಯುವ ಪ್ರಮುಖ ಘಟನೆಗಳ ಬಗೆಗೆ ಆತ ನುಡಿದಿದ್ದ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

   ನಾಸ್ಟ್ರಡಾಮಸ್ ಭವಿಷ್ಯದ ಪ್ರಕಾರ, 2020 ವರ್ಷ ಹಿಂಸಾಚಾರದಿಂದ ಕೂಡಿರುತ್ತದೆಯಂತೆ. ಯುದ್ಧಗಳು, ಆಂತರಿಕ ಯುದ್ಧಗಳು, ಹಿಂಸಾತ್ಮಕ ಪ್ರತಿಭಟನೆಗಳು ಸಾಕಷ್ಟು ನಡೆಯುತ್ತವೆಯಂತೆ. 2020 ಮನುಕುಲದ ಹಿಂಸಾತ್ಮಕ ವರ್ಷ ಆಗಿರಲಿದೆಯಂತೆ.

   'ದೇವರ ದೇಶದಲ್ಲಿ ದೊಡ್ಡ ಬಿರುಗಾಳಿ'

   'ದೇವರ ದೇಶದಲ್ಲಿ ದೊಡ್ಡ ಬಿರುಗಾಳಿ'

   'ದೇವರ ನಾಡಿನಲ್ಲಿ ದೊಡ್ಡ ಬಿರುಗಾಳಿ ಏಳಲಿದೆ, ಸಹೋದರರಿಬ್ಬರು ಕಿತ್ತಾಡಿಕೊಂಡು ದೂರಾಗಿ ವೈರಿಗಳಾಗುತ್ತಾರೆ, ದೊಡ್ಡ ನಗರವೊಂದು ಹೊತ್ತಿ ಉರಿದಾಗ ಮೂರನೇ ಮಹಾ ಯುದ್ಧ ಆರಂಭವಾಗುತ್ತದೆ' ಈ ರೀತಿಯ ಸೂಕ್ಷ್ಮ ವ್ಯಾಖ್ಯಾನಗಳೊಂದಿಗೆ ನಾಸ್ಟ್ರಡಾಮಸ್ ವಿಶ್ವದ ಭವಿಷ್ಯ ನುಡಿದಿದ್ದಾನೆ.

   ವ್ಲಾಡಿಮಿರ್ ಪುಟಿನ್ ಹತ್ಯೆ ಯತ್ನ

   ವ್ಲಾಡಿಮಿರ್ ಪುಟಿನ್ ಹತ್ಯೆ ಯತ್ನ

   ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್‌ರ ಕೊಲೆ ಯತ್ನ ನಡೆಯುತ್ತದೆ. ಇಂಗ್ಲೆಂಡ್ ರಾಣಿ ಮರಣಹೊಂದುತ್ತಾರೆ, ಅಮೆರಿಕ ದೇಶವು ಏಷ್ಯಾ ರಾಷ್ಟ್ರಗಳಲ್ಲಿ ಬೃಹತ್ ಯುದ್ಧ ತಾಲೀಮು ನಡೆಸಿ ಮೂರನೇ ಮಹಾಯುದ್ಧಕ್ಕೆ ಇಂಬು ನೀಡಲಿದೆ ಎಂಬಿತ್ಯಾದಿಯಾಗಿ ನಾಸ್ಟ್ರಡಾಮಸ್‌ ನ ಭವಿಷ್ಯವನ್ನು ವಿಶ್ಲೇಶಿಸಲಾಗಿದೆ.

   ವಿಶ್ವದೆಲ್ಲೆಡೆ ಮಹಾ ಆರ್ಥಿಕ ಕುಸಿತ

   ವಿಶ್ವದೆಲ್ಲೆಡೆ ಮಹಾ ಆರ್ಥಿಕ ಕುಸಿತ

   ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ಆರ್ಥಿಕ ಕುಸಿತ 2020 ರಲ್ಲಿ ಉಂಟಾಗಲಿದೆಯಂತೆ. ಷೇರು ಮಾರುಕಟ್ಟೆ ನೆಲಕಚ್ಚಲಿದೆ. ಸಾಲ ತೀರಿಸುವ ಶಕ್ತಿಯನ್ನು ಜನರು ಕಳೆದುಕೊಳ್ಳಲಿದ್ದಾರೆ. ಭಾರಿ ಆರ್ಥಿಕ ದಿವಾಳಿ 2020 ರಲ್ಲಿ ವಿಶ್ವದೆಲ್ಲೆಡೆ ಕಾಣಲಿದೆಯಂತೆ.

   ಭಾರತದಲ್ಲಿ ತೀವ್ರ ಆಂತಕರಿಕ ಕಲಹ

   ಭಾರತದಲ್ಲಿ ತೀವ್ರ ಆಂತಕರಿಕ ಕಲಹ

   ಭಾರತದಲ್ಲೂ ಬಹುವಾಗಿ ಆಂತರಿಕ ಜಗಳಗಳು ನಡೆಯುತ್ತವೆ. ಮತೀಯ ಗಲಭೆಗಳು ಹೆಚ್ಚಲಿವೆ. ಆರ್ಥಿಕ ಸಂಕಷ್ಟಕ್ಕೆ ಭಾರತ ತುತ್ತಾಗುತ್ತದೆ. ಪ್ರಾಕೃತಿಕ ಹಾನಿಗಳು ಬಹುಮಟ್ಟಿಗೆ 2020 ರಲ್ಲಿ ಸಂಭವಿಸುತ್ತವೆ ಎಂದು ನಾಸ್ಟ್ರಡಾಮಸ್ ಹೇಳಿದ್ದಾನೆ.

   ಶಾಂತಿಯುತ ತಲೆಮಾರಿನ ಹುಟ್ಟು

   ಶಾಂತಿಯುತ ತಲೆಮಾರಿನ ಹುಟ್ಟು

   ಕೇವಲ ಹಿಂಸಾಚಾರ ಮಾತ್ರವಲ್ಲದೆ 2020 ಕೆಲವು ಹೊಸ ಘಟನೆಗಳಿಗೂ ಸಾಕ್ಷಿ ಆಗಲಿದೆ. ಹೊಸ ತಲೆಮಾರಿನ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ತಲೆಮಾರಿನ ಉದಯವೂ ಇದೇ ವರ್ಷದಲ್ಲಿ ಆಗಲಿದೆಯಂತೆ.

   English summary
   Nostradamus predicts that year 2020 will be very violent year. He predicts that world war three may happen.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X