ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Leo Horoscope 2022: ಸಿಂಹ ರಾಶಿಯವರಿಗೆ 2022 ವರ್ಷ ಹೇಗಿರುತ್ತದೆ?

|
Google Oneindia Kannada News

ಸಿಂಹ ರಾಶಿಯವರು 2022 ರಲ್ಲಿ ತಮ್ಮ ವೃತ್ತಿಜೀವನದಲ್ಲಿ ಆರ್ಥಿಕ ಸಮೃದ್ಧಿ ಮತ್ತು ಬೆಳವಣಿಗೆ ಉಂಟಾಗುವ ಕಾರಣ ನಿಮ್ಮ ಈ ವರ್ಷ ಉತ್ತಮವಾಗಿರಲಿದೆ. ಈ ವರ್ಷದಲ್ಲಿ ನೀವು ಜೀವನದ ವಿವಿಧ ಅಂಶಗಳಲ್ಲಿ ಅಡೆತಡೆಗಳನ್ನು ಎದುರಿಸಬಹುದು. ಆದರೆ ನೀವು ಹೆಚ್ಚು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಣೆ ಮಾಡುತ್ತೀರಿ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಕೆಲಸ ಮತ್ತು ಸಂಬಂಧಗಳಲ್ಲಿ ಉತ್ತಮ ಅಭಿವೃದ್ಧಿ ಕಾಣಿಸಿಕೊಳ್ಳಲಿದೆ. 2022 ರ ಸಿಂಹ ರಾಶಿಯ ಜೀವನ ಭವಿಷ್ಯವಾಣಿಗಳ ಪ್ರಕಾರ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯದಲ್ಲಿ ಅಡಚಣೆಗಳನ್ನು ಹೊಂದಬಹುದು. ಈ ವರ್ಷ ಮಕ್ಕಳ ಆರೋಗ್ಯವು ನಿಮಗೆ ಚಿಂತೆಯನ್ನು ಉಂಟುಮಾಡಬಹುದು. ಆಸ್ತಿಯನ್ನು ಖರೀದಿಸಲು ಉತ್ತಮ ಸಮಯ ಇದಾಗಿದೆ. ವಿವಾಹಿತ ದಂಪತಿಗಳಿಗೆ ಮಗುವಾಗಲಿದೆ. ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಈ ವರ್ಷ ನಿಮ್ಮ ಕುಟುಂಬದಲ್ಲಿ ಮಂಗಳಕರ ಘಟನೆಗಳು ನಡೆಯಬಹುದು.

Gemini Horoscope 2022: ಹೊಸ ವರ್ಷದಲ್ಲಿ ಮಿಥುನ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೇಗಿರಲಿದೆ?Gemini Horoscope 2022: ಹೊಸ ವರ್ಷದಲ್ಲಿ ಮಿಥುನ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೇಗಿರಲಿದೆ?

ಸಿಂಹ ರಾಶಿಯವರ ಪ್ರಕಾರ ಜನವರಿ 2022 ರಲ್ಲಿ, ಶನಿಯು ಸಾಕಷ್ಟು ಅದೃಷ್ಟ, ಆಶಾವಾದ, ಕೆಲಸದ ವಾತಾವರಣದಲ್ಲಿ ಉಲ್ಲಾಸವನ್ನು ತರುತ್ತಾನೆ. 2022 ರ ಮೊದಲ ಒಂಬತ್ತು ತಿಂಗಳುಗಳಲ್ಲಿ ಗುರುವು ನಿಮಗೆ ಆಸಕ್ತಿದಾಯಕ ಅವಕಾಶಗಳನ್ನು ತರಬಹುದು. ಆದಾಗ್ಯೂ, ಈ ದೃಷ್ಟಿಕೋನವು ಎಷ್ಟೇ ಅನುಕೂಲಕರವಾಗಿ ತೋರಿದರೂ ನೀವು ಎಚ್ಚರದಿಂದ ಇರಬೇಕಾಗುತ್ತದೆ. ಆತುರವಿಲ್ಲದೆ ಕಾರ್ಯನಿರ್ವಹಿಸುವುದು ಉತ್ತಮ. ಕುಟುಂಬ, ಮದುವೆ ಮತ್ತು ಪ್ರೀತಿಗೆ ಸಂಬಂಧಿಸಿದ ಈ ವಿಷಯಗಳ ಹೊರತಾಗಿ, ನೀವು ಉಳಿದೆಡೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಏಪ್ರಿಲ್ ಕೊನೆಯ ವಾರದಿಂದ ಜುಲೈ ಮಧ್ಯದವರೆಗೆ, ಕುಟುಂಬ ಕಾರ್ಯಕ್ರಮವನ್ನು ಆಯೋಜಿಸುವ ಸಂತಸ ನಿಮ್ಮದಾಗಲಿದೆ. ನೀವು ವಿವಾಹಿತರಾಗಿದ್ದರೆ, ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ, ಆದರೆ ನಿಮ್ಮ ಸಂಗಾತಿಯೊಂದಿಗಿನ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನೀವು ಸ್ವಲ್ಪ ಮಾನಸಿಕ ಒತ್ತಡವನ್ನು ಅನುಭವಿಸುವ ಸಾಧ್ಯತೆ ಇದೆ.

 ಕೆಲಸದಲ್ಲಿ ಬಡ್ತಿ ಸಾಧ್ಯತೆ, ಆರೋ‌ಗ್ಯದ ಕಡೆ ಇರಲಿ ಗಮನ

ಕೆಲಸದಲ್ಲಿ ಬಡ್ತಿ ಸಾಧ್ಯತೆ, ಆರೋ‌ಗ್ಯದ ಕಡೆ ಇರಲಿ ಗಮನ

ಜನವರಿ ತಿಂಗಳಲ್ಲಿ, ತಿಂಗಳ ಮೊದಲ ಭಾಗದಲ್ಲಿ, ಸಿಂಹ ರಾಶಿಯವರು ಪರ್ಯಾಯ ವೃತ್ತಿ ಬದಲಾವಣೆಯಿಂದ ಅಥವಾ ಪ್ರಾಯಶಃ ವಿದೇಶದಲ್ಲಿ ಉದ್ಯೋಗದತ್ತ ಹೆಚ್ಚು ಆಕರ್ಷಿತರಾಗುತ್ತಾರೆ. 2022 ರಲ್ಲಿ ಶುಕ್ರವು ಸಿಂಹ ರಾಶಿಯ 2022 ರ ವಾರ್ಷಿಕ ಜಾತಕ ಭವಿಷ್ಯವಾಣಿಯ ಪ್ರಕಾರ ಶಕ್ತಿಯ ಉತ್ತೇಜನವನ್ನು ತರುತ್ತದೆ. ಆದ್ದರಿಂದಾಗಿ ನಿಮ್ಮ ಪ್ರೀತಿ ಮತ್ತು ಪ್ರಣಯದ ಭಾವನೆಯನ್ನು ವ್ಯಕ್ತಪಡಿಸುವ ನಿಮ್ಮ ಬಯಕೆ ಹೆಚ್ಚಾಗುತ್ತದೆ. ಸವಾಲು ಕೂಡಾ ಎದುರಾಗಬಹುದು. ಕೆಲಸದ ಸ್ಥಳದಲ್ಲಿ ಅಥವಾ ನಿಮ್ಮ ನಿಕಟ ಸ್ನೇಹಿತರು ನಿಮ್ಮ ಗಮನ ಸೆಳೆಯಬಹುದು. ಮಾರ್ಚ್ ತಿಂಗಳಲ್ಲಿ, ನಿಮ್ಮ ಕೆಲಸದಲ್ಲಿ ಬಡ್ತಿಗೆ ಅವಕಾಶವಿರಬಹುದು. ಈ ತಿಂಗಳು, ಸಿಂಹ ರಾಶಿಯವರು ತಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಬೇಕು. ಅತಿಯಾದ ಒತ್ತಡಕ್ಕೆ ಒಳಗಾಗದಿರುವುದು ಉತ್ತಮ. ಏಪ್ರಿಲ್ ತಿಂಗಳಲ್ಲಿ, ಆರ್ಥಿಕವಾಗಿ, ತಿಂಗಳ ಮೊದಲ ಭಾಗದಲ್ಲಿ, ಸಿಂಹ ರಾಶಿಯವರು ಅಜಾಗರೂಕತೆಯಿಂದ ಖರ್ಚು ಮಾಡದಿರುವುದು ಸೂಕ್ತ. ಹಾಗೆಯೇ ಯಾವುದೇ ಹಣಕಾಸಿನ ಹೂಡಿಕೆ ಮಾಡಬೇಡಿ. ಮಾರ್ಚ್ ನಿಂದ ಮೇ ನಡುವೆ, ಯಾವುದೇ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆಯುವ ನಿಮ್ಮ ಆಕಾಂಕ್ಷೆಯನ್ನು ಪೂರೈಸಬಹುದು. ಸಂಬಂಧಗಳಲ್ಲಿ ಎಚ್ಚರವಾಗಿರಬೇಕು. ಸಂಬಂಧದ ವಿಚಾರದಲ್ಲಿ ತೊಂದರೆ ಉಂಟಾಗಬಹುದು. ಮೇ ತಿಂಗಳು ಸ್ವಲ್ಪ ಒತ್ತಡದಿಂದ ಕೂಡಿರಬಹುದು. ಜುಲೈ ತಿಂಗಳಲ್ಲಿ ಕೆಲವು ಸಿಂಹ ರಾಶಿಯವರು ಸಾಲ ಹಿಂದಕ್ಕೆ ಪಾವತಿಸಲು ಸಾಧ್ಯವಾಗಬಹುದು, ಇನ್ನು ಕೆಲವರಿಗೆ ಅನಿರೀಕ್ಷಿತ ಹಣ ದೊರೆಯಬಹುದು. ಈ ವರ್ಷ ನೀವು ದೈಹಿಕವಾಗಿ ಸದೃಢರಾಗಿರುತ್ತೀರಿ. ಆದರೆ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರುವುದರಿಂದ ಆಯಾಸಕ್ಕೆ ಒಳಗಾಗುತ್ತೀರಿ. ನಿಮ್ಮ ಕಣ್ಣುಗಳಲ್ಲಿ ಊತ, ದೃಷ್ಟಿ ಮಂದವಾಗುವುದು ಅಥವಾ ತಲೆನೋವಿನಂತಹ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆಯೂ ನೀವು ಚಿಂತಿತರಾಗಬಹುದು. ಹೊಸ ಪ್ರೇಮ ಸಂಬಂಧಗಳನ್ನು ಪಡೆಯಬಹುದು ಮತ್ತು ದೀರ್ಘಾವಧಿಯ ಸಂಬಂಧದಲ್ಲಿರುವವರು ಮದುವೆಯ ಪ್ರಸ್ತಾಪಗಳನ್ನು ಪಡೆಯಬಹುದು. ಈಗಾಗಲೇ ವಿವಾಹಿತರಾಗಿದ್ದಲ್ಲಿ ಸಾಮರಸ್ಯವು ಹೆಚ್ಚಲಿದೆ. ಸೆಪ್ಟೆಂಬರ್ ತಿಂಗಳಲ್ಲಿ, ಹೊಸ ಉದ್ಯೋಗ ಹುಡುಕಬೇಕಾಗಬಹುದು ಅಥವಾ ನೀವು ವೈಯಕ್ತಿಕ ವ್ಯವಹಾರ ಮಾಡಲು ಮುಂದಾಗಬಹುದು. ವರ್ಷ ಅಂತ್ಯದ ವೇಳೆಗೆ ನೀವು ಕೆಲಸದಲ್ಲಿ ನಿಮ್ಮ ಎಲ್ಲಾ ಶಕ್ತಿಯನ್ನು ವ್ಯಯಿಸಿ ಸಫಲರಾಗುತ್ತೀರಿ. ವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ, ಸಿಂಹ ರಾಶಿಯವರು ಸರಿಯಾದ ಆಹಾರಕ್ರಮವನ್ನು ಪ್ರಾರಂಭಿಸಲು, ವ್ಯಾಯಾಮ ಮಾಡಲು ಮತ್ತು ಹೆಚ್ಚಿನ ಸಮಯವನ್ನು ವಿಶ್ರಾಂತಿಗಾಗಿ ಕಳೆಯುತ್ತಾರೆ. ಸಿಂಹ ರಾಶಿಯ ವಾರ್ಷಿಕ ಜಾತಕ 2022ರ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ ಮುಂದೆ ಓದಿ....

Cancer Horoscope 2022: ಹೊಸ ವರ್ಷದಲ್ಲಿ ಕಟಕ ರಾಶಿಯವರ ಸಂಪೂರ್ಣ ಭವಿಷ್ಯ ಹೀಗಿರಲಿದೆCancer Horoscope 2022: ಹೊಸ ವರ್ಷದಲ್ಲಿ ಕಟಕ ರಾಶಿಯವರ ಸಂಪೂರ್ಣ ಭವಿಷ್ಯ ಹೀಗಿರಲಿದೆ

 ಸಿಂಹ ರಾಶಿ ಪ್ರೇಮ ಜೀವನ ಭವಿಷ್ಯ 2022

ಸಿಂಹ ರಾಶಿ ಪ್ರೇಮ ಜೀವನ ಭವಿಷ್ಯ 2022

ಸಿಂಹ ರಾಶಿ ಪ್ರೇಮ ಜೀವನ ಭವಿಷ್ಯ 2022 ರ ಪ್ರಕಾರ ಪ್ರೀತಿಯಲ್ಲಿ ವಕ್ರ ರೀತಿಯಲ್ಲಿ ಚಲನೆ ಉಂಟಾಗಬಹುದು. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ನೀವು ಹಾಗೂ ನಿಮ್ಮ ಸಂಗಾತಿಯ ನಡುವೆ ಘರ್ಷಣೆ ಉಂಟಾಗಬಹುದು. ಈ ವರ್ಷ ದೀರ್ಘಾವಧಿಯ ಸಂಬಂಧದಲ್ಲಿರುವ ಜೋಡಿಗಳು ವಿವಾಹವಾಗುತ್ತಾರೆ. ಮದುವೆಯ ಪ್ರಸ್ತಾಪಗಳು ಏಪ್ರಿಲ್ ನಂತರ ಅಂತಿಮಗೊಳ್ಳಬಹುದು. 2022 ರಲ್ಲಿ, ಸಂಬಂಧದಲ್ಲಿರುವ ಜೋಡಿಗಳಿಗೆ ಮಿಶ್ರ ಜೀವನ ಎದುರಾಗಲಿದೆ. ಆದರೆ ನಿಮ್ಮ ಸಂಗಾತಿಯು ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ನೀವು ಬಯಸುತ್ತೀರಿ. ಸಣ್ಣ ಘರ್ಷಣೆಗಳು ಮತ್ತು ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಅವು ನಿಮ್ಮ ಸಂಬಂಧಕ್ಕೆ ಗಂಭೀರ ಪರಿಣಾಮ ಬೀರಲಾರದು.

 ಸಿಂಹ ರಾಶಿ ವೃತ್ತಿ ಭವಿಷ್ಯ 2022

ಸಿಂಹ ರಾಶಿ ವೃತ್ತಿ ಭವಿಷ್ಯ 2022

ಸಿಂಹ ರಾಶಿಯವರಿಗೆ, ಕೆಲಸದ ಮತ್ತು ವೃತ್ತಿಯ ದೃಷ್ಟಿಕೋನದಿಂದ ವರ್ಷದ ಆರಂಭವು ಮಂಗಳಕರವಾಗಿರುತ್ತದೆ. ಏಳನೇ ಮನೆಯಲ್ಲಿ ಗುರುವಿನ ಸ್ಥಾನದಿಂದಾಗಿ ಸಿಂಹ ರಾಶಿಯವರು ವೃತ್ತಿ ಭವಿಷ್ಯ 2022 ರ ಪ್ರಕಾರ ಕೆಲಸ ಮತ್ತು ವೃತ್ತಿಯಲ್ಲಿ ನೀವು ಗಣನೀಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ನೀವು ಪಾಲುದಾರಿಕೆಯಲ್ಲಿ ಯಾವುದಾದರೂ ಕೆಲಸವನ್ನು ಮಾಡುವುದಾದರೆ ನೀವು ಆದಾಯವನ್ನು ಹೆಚ್ಚು ಹೊಂದುವ ಸಾಧ್ಯತೆಯೂ ಇದೆ. ನೀವು ಬಯಸಿದ ಲಾಭ ನಿಮಗೆ ದೊರೆಯಲಿದೆ. ನೀವು ನಿಮ್ಮ ವೃತ್ತಿ ಜೀವನದ ಪಾರ್ಟ್‌ನರ್‌ ಜೊತೆ ತೃಪ್ತರಾಗಿರುತ್ತೀರಿ. ಉದ್ಯೋಗದಲ್ಲಿರುವ ಜನರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಗೌರವವನ್ನು ಪಡೆಯುತ್ತಾರೆ. ವರ್ಷದ ಉತ್ತರಾರ್ಧದಲ್ಲಿ, ಅವಧಿಯು ಸ್ವಲ್ಪ ಪ್ರತಿಕೂಲ ಪರಿಣಾಮ ಬೀರಬಹುದು. ಈ ಅವಧಿಯಲ್ಲಿ, ನಿಮ್ಮ ಶತ್ರುಗಳು ನಿಮಗೆ ಅಡೆತಡೆಗಳನ್ನು ಉಂಟುಮಾಡಬಹುದು, ಆದರೆ ಆರನೇ ಮನೆಯ ಮೇಲೆ ಶನಿಯ ಉತ್ತಮ ಪ್ರಭಾವದಿಂದಾಗಿ ನಿಮ್ಮ ಕೆಲಸ ಮತ್ತು ವೃತ್ತಿಯ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.

 ಸಿಂಹ ರಾಶಿ ಶಿಕ್ಷಣ ಭವಿಷ್ಯ 2022

ಸಿಂಹ ರಾಶಿ ಶಿಕ್ಷಣ ಭವಿಷ್ಯ 2022

ಸಿಂಹ ರಾಶಿ ಶಿಕ್ಷಣ ಭವಿಷ್ಯ 2022 ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ವರ್ಷದ ಆರಂಭದಲ್ಲಿ ಯಶಸ್ವಿಯಾಗುವ ಅವಕಾಶವನ್ನು ಹೊಂದಿದ್ದಾರೆ. ಈ ರಾಶಿಯವರು ವರ್ಷದ ಮಧ್ಯದಲ್ಲಿ ತಮ್ಮ ಅಧ್ಯಯನದಲ್ಲಿ ಕಠಿಣ ಸಮಯವನ್ನು ಎದುರಿಸಬಹುದು. ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳು ತಾವು ಬಯಸಿದ ಸಂಸ್ಥೆಯಲ್ಲಿಯೇ ದಾಖಲಾತಿ ಪಡೆಯಲಿದ್ದಾರೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವವರು ವರ್ಷದ ಕೊನೆಯ ಭಾಗದಲ್ಲಿ ಅಂದರೆ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಅವಕಾಶ ಪಡೆಯಬಹುದು

 ಸಿಂಹ ರಾಶಿ ಹಣಕಾಸು ಭವಿಷ್ಯ 2022

ಸಿಂಹ ರಾಶಿ ಹಣಕಾಸು ಭವಿಷ್ಯ 2022

ಸಿಂಹ ರಾಶಿ ಹಣಕಾಸು ಭವಿಷ್ಯ 2022 ರ ಪ್ರಕಾರ, ಇದು ನಿಮಗೆ ಉತ್ತಮ ವರ್ಷವಾಗಿರುತ್ತದೆ. ಈ ವರ್ಷ ನೀವು ಉತ್ತಮ ಆರ್ಥಿಕ ಅಭಿವೃದ್ಧಿ ಉಂಟಾಗಲಿದೆ. ವೃತ್ತಿಪರವಾಗಿ ಹಠಾತ್ ಪ್ರಗತಿ ಉಂಟಾಗುವ ಕಾರಣದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ. ಏಪ್ರಿಲ್ 6 ರ ನಂತರದ ಅವಧಿಯು ಪ್ರಬಲವಾಗಿದೆ ಮತ್ತು ಈ ಅವಧಿಯಲ್ಲಿ ನೀವು ಸ್ನೇಹಿತರು, ಜೀವನ ಸಂಗಾತಿಗಳು ಅಥವಾ ವೃತ್ತಿಪರ ಪಾಲುದಾರರ ಮೂಲಕ ಸಂಪತ್ತನ್ನು ಗಳಿಸುವಿರಿ.

 ಸಿಂಹ ರಾಶಿಯ ಕುಟುಂಬ ಭವಿಷ್ಯ 2022

ಸಿಂಹ ರಾಶಿಯ ಕುಟುಂಬ ಭವಿಷ್ಯ 2022

ಸಿಂಹ ರಾಶಿಯ ಕುಟುಂಬ ಭವಿಷ್ಯ 2022 ರ ಪ್ರಕಾರ, ನೀವು ಈ ವರ್ಷ ಸಿಂಹ ರಾಶಿಯವರೊಂದಿಗೆ ವಿಶೇಷವಾಗಿ ನಿಮ್ಮ ವಯಸ್ಸಿನಲ್ಲಿ ನಿಮಗೆ ಹತ್ತಿರವಿರುವ ಪುರುಷ ಸಂಬಂಧಿಕರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೀರಿ. ಇದರಲ್ಲಿ ಸಹೋದರರು ಕೂಡಾ ಸೇರಿದ್ದಾರೆ. ವಿವಾಹಿತ ಸಿಂಹ ರಾಶಿಯವರು ಎರಡನೇ ಮಗು ಆಗುವ ಸಾಧ್ಯತೆ ಇದೆ. ಸಿಂಹ ರಾಶಿಯವರಿಗೆ ವಿವಾಹವಾಗಲು ಇದು ಉತ್ತಮ ವರ್ಷವಾಗಿದೆ. ವಿವಾಹ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಗುರು ಮತ್ತು ಶನಿಯು ಸಂಯೋಗದಲ್ಲಿರುವಾಗ ವಿವಾಹವಾಗಿ. ನೀವು ವಿವಾಹಿತರಾಗಿದ್ದರೆ, ನೀವು ಗರ್ಭಿಣಿಯಾಗಲು ಇದು ಉತ್ತಮ ಸಮಯ. ಇದು ಸ್ವತಃ ಸಂತೋಷದಾಯಕ ಸಂದರ್ಭವಾಗುವುದು ಮಾತ್ರವಲ್ಲದೆ, ಅತ್ತೆಯೊಂದಿಗಿನ ನಿಮ್ಮ ಸಂಬಂಧವನ್ನು ಹೆಚ್ಚಿಸುತ್ತದೆ.

 ಸಿಂಹ ರಾಶಿಯ ಮಕ್ಕಳ ಭವಿಷ್ಯ 2022

ಸಿಂಹ ರಾಶಿಯ ಮಕ್ಕಳ ಭವಿಷ್ಯ 2022

ಸಿಂಹ ರಾಶಿಯ ಮಕ್ಕಳ ಭವಿಷ್ಯ 2022 ರ ಪ್ರಕಾರ, ನಿಮ್ಮ ಮಕ್ಕಳು ಮಿಶ್ರ ಭಾವನೆಗಳಿಂದ ತುಂಬಿರುತ್ತಾರೆ. ನಿಮ್ಮ ಸಾಮಾಜಿಕ ಮಾತುಕತೆಯ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ಸಂಘರ್ಷಗಳಿಗೆ ಹೆಚ್ಚಾಗಿ ಒಳಗಾಗಬೇಡಿ. ಕುಟುಂಬ ಮತ್ತು ಮಕ್ಕಳೊಂದಿಗೆ ಹೆಚ್ಚು ಸಂತೋಷವನ್ನು ಪಡೆಯಲು ಮತ್ತು ಅವರಿಗೆ ಹತ್ತಿರವಾಗಲು ಅವರೊಂದಿಗೆ ಸಮಯ ಕಳೆಯಿರಿ. ಇದು ನಡೆಯುತ್ತಿರುವ ಎಲ್ಲಾ ತಪ್ಪುಗ್ರಹಿಕೆಗಳು ಮತ್ತು ಸಣ್ಣ ಘರ್ಷಣೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಗುರು, ಏಳನೇ ಮನೆಯಲ್ಲಿ ನಿಮ್ಮ ಮಕ್ಕಳಿಗೆ ಅನುಕೂಲಕರವಾಗಿರುತ್ತದೆ. ಈ ಅವಧಿಯು ನಿಮ್ಮ ಎರಡನೇ ಮಗುವಿಗೆ ಹೆಚ್ಚು ಮಂಗಳಕರವಾಗಿದೆ. ವರ್ಷದ ಉತ್ತರಾರ್ಧದಲ್ಲಿ, ಎಂಟನೇ ಮನೆಯಲ್ಲಿ ಗುರುವು ನಿಮ್ಮ ಮಕ್ಕಳಿಗೆ ಮಾನಸಿಕ ಚಂಚಲತೆಯನ್ನು ಉಂಟುಮಾಡಬಹುದು. ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

 ಸಿಂಹ ರಾಶಿ ಮದುವೆ ಭವಿಷ್ಯ 2022

ಸಿಂಹ ರಾಶಿ ಮದುವೆ ಭವಿಷ್ಯ 2022

ಸಿಂಹ ರಾಶಿ ಮದುವೆ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಯವರು ವೈವಾಹಿಕ ಜೀವನದಲ್ಲಿ ಅನುಕೂಲಕರ ಪ್ರತಿಫಲ ಹೊಂದುತ್ತೀರಿ. ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮ್ಮ ಸಂಬಂಧಕ್ಕೆ ಒಳ್ಳೆಯದಾಗುತ್ತದೆ. ನಿಮ್ಮ ಬಂಧವನ್ನು ಬಲಪಡಿಸುತ್ತದೆ ಮತ್ತು ನೀವು ಪ್ರತಿ ವಿವಾದ ಮತ್ತು ತಪ್ಪುಗ್ರಹಿಕೆಯನ್ನು ಪರಿಹರಿಸಲು ಸಾಧ್ಯವಾಗಲಿದೆ. ಈ ಅವಧಿಯಲ್ಲಿ ನೀವು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಸಂಪರ್ಕವನ್ನು ಬಲಪಡಿಸಲು ಹಲವು ಅವಕಾಶಗಳು ಲಭ್ಯವಾದರೆ ನಿಮ್ಮ ವೈವಾಹಿಕ ಜೀವನ ಉತ್ತಮವಾಗಲಿದೆ.

 ಸಿಂಹ ರಾಶಿಯ ವ್ಯಾಪಾರ ಭವಿಷ್ಯ 2022

ಸಿಂಹ ರಾಶಿಯ ವ್ಯಾಪಾರ ಭವಿಷ್ಯ 2022

ಸಿಂಹ ರಾಶಿಯ ವ್ಯಾಪಾರ ಭವಿಷ್ಯ 2022 ರ ಪ್ರಕಾರ ವ್ಯಾಪಾರ ಮಾಲೀಕರು 2022 ರಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಪಾಲುದಾರಿಕೆ ವ್ಯಾಪಾರ ಮಾಡುವವರು ಕೂಡಾ ಉತ್ತಮ ಲಾಭವನ್ನು ಪಡೆಯಬಹುದು. ವಿಶೇಷವಾಗಿ ವರ್ಷದ ಎರಡನೇ ಭಾಗದಲ್ಲಿ ನಿಮಗೆ ಲಾಭ ಹೆಚ್ಚಾಗಲಿದೆ. ದೊಡ್ಡ ಹೂಡಿಕೆಗಳು ಈ ವರ್ಷ ಅಪಾಯಕಾರಿ. ಈ ವರ್ಷ ವ್ಯಾಪಾರ ಸಭೆಗಳಿಗಾಗಿ ನೀವು ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ. ಈ ವರ್ಷದಲ್ಲಿ, ನೀವು ಹೊಸ ವ್ಯಾಪಾರ ಒಪ್ಪಂದಗಳು ಮತ್ತು ಅವಕಾಶವನ್ನು ಪಡೆಯುತ್ತೀರಿ. ಆದರೆ ನೀವು ಹೂಡಿಕೆ ಮಾಡುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ಚಿನ್ನ, ಬೆಳ್ಳಿ ಅಥವಾ ಆಸ್ತಿ ಯಾವುದೇ ಆದರೂ ಸರಿಯಾಗಿ ಪರಿಶೀಲನೆ ಮಾಡಿ ಹೂಡಿಕೆ ಮಾಡಿ. ಇಲ್ಲವಾದರೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ವ್ಯಾಪಾರದಲ್ಲಿರುವ ಸಿಂಹ ರಾಶಿಯವರು ಇನ್ನೂ ಅಪೂರ್ಣವಾಗಿರುವ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಲು ಕಷ್ಟಪಡಬಹುದು. ವರ್ಷದ ಮೊದಲಾರ್ಧದಲ್ಲಿ ನಿಮ್ಮ ವ್ಯವಹಾರದ ಮೇಲೆ ಹೆಚ್ಚು ಗಮನ ಹರಿಸಲಿದ್ದೀರಿ. ಸರಿಯಾದ ವ್ಯಾಪಾರ ಯೋಜನೆಗಳು ಉತ್ತಮ ವ್ಯಾಪಾರಕ್ಕೆ ಕಾರಣವಾಗುತ್ತವೆ. ಇದೇ ರೀತಿಯ ವ್ಯವಹಾರದಲ್ಲಿ ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ನೇರ ಸಂಪರ್ಕವನ್ನು ಇರಿಸಿಕೊಳ್ಳಬೇಡಿ.

 ಸಿಂಹ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಸಿಂಹ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಸಿಂಹ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022 ರ ಪ್ರಕಾರ ಈ ವರ್ಷ ಸಿಂಹ ರಾಶಿಯವರಿಗೆ ಆಸ್ತಿ ಮತ್ತು ವಾಹನಗಳ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ. ಏಕೆಂದರೆ ಅವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿ ರಂಗದಲ್ಲಿ ನೀವು ಪ್ರಗತಿ ಹೊಂದುವಿರಿ. ನಿಮ್ಮ ಆದಾಯದಲ್ಲಿ ಹೆಚ್ಚಳವು ಹೊಸ ವಾಹನ ಖರೀದಿ ಮಾಡಲು ಸಹಾಯ ಮಾಡಲಿದೆ. ಗುರುವಿನ ಸ್ಥಾನವು ನೀವು ಸ್ನೇಹಿತರು, ಜೀವನ ಸಂಗಾತಿ ಹಾಗೂ ವೃತ್ತಿಪರ ಪಾಲುದಾರರ ಸಹಾಯದಿಂದ ಉತ್ತಮ ಆಸ್ತಿಯನ್ನು ಗಳಿಸಲು ಸಹಾಯಕವಾಗಲಿದೆ. ಯಾವುದೇ ಆಸ್ತಿಯನ್ನು ಖರೀದಿಸುವ ಅಥವಾ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಎಲ್ಲಾ ಜನರ ಬಗ್ಗೆ ಸರಿಯಾಗಿ ತಿಳಿದುಕೊಂಡು ಆರ್ಥಿಕ ವಹಿವಾಟು ನಡೆಸಿ.

 ಸಿಂಹ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಸಿಂಹ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಸಿಂಹ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022 ರ ಪ್ರಕಾರ 2022 ರಲ್ಲಿ ನಿಮಗೆ ಸಂಘರ್ಷ ಮುಖ್ಯವಾಗಿದೆ. ಹಣವನ್ನು ಖರ್ಚು ಮಾಡಲೇ ಬೇಕಾದ ಪರಿಸ್ಥಿತಿಯು ನಿಮಗೆ ಸಮಸ್ಯೆಯನ್ನು ಉಂಟುಮಾಡುತ್ತದೆ. ವರ್ಷದ ಮಧ್ಯದಲ್ಲಿ ಜವಾಬ್ದಾರಿಯ ಪ್ರಜ್ಞೆಯು ಹೆಚ್ಚಾಗುತ್ತದೆ. ಆದರೆ ಈ ಸಮಯದಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ಹೊಂದಬೇಡಿ. ನಿಮ್ಮ ಹಣಕಾಸನ್ನು ನೀವು ಕ್ರಮವಾಗಿ ನಿರ್ವಹಣೆ ಮಾಡಬೇಕು. ಈ ವರ್ಷ ನಿಮ್ಮ ಮನೆ, ಭೂಮಿ, ವಿಸ್ತೃತ ಕುಟುಂಬದ ಮೇಲೆ ನೀವು ಗಮನಹರಿಸುವುದರಿಂದ ನಿಮ್ಮ ದೀರ್ಘಾವಧಿಯ ಭವಿಷ್ಯವು ನಿಮ್ಮ ಹಣಕಾಸಿನ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷ ನಿಮ್ಮ ಹಣವನ್ನು ನೀವು ಖರ್ಚು ಮಾಡುವ ನಿರ್ಧಾರ ಮಾಡಿದರೆ, ಮನೆಯನ್ನು ನವೀಕರಣ ಮಾಡಲು ಅಥವಾ ಅಲಂಕರಿಸಲು ಖರ್ಚು ಮಾಡುವುದು ಒಳ್ಳೆಯದು. ಈ ವರ್ಷ, ಜ್ಯೋತಿಷ್ಯ ಭವಿಷ್ಯ 2022 ರ ಪ್ರಕಾರ, ನೀವು ದೀರ್ಘಾವಧಿ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯವಾಗಿದೆ. ಇದು ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 ಸಿಂಹ ರಾಶಿ ಆರೋಗ್ಯ ಭವಿಷ್ಯ 2022

ಸಿಂಹ ರಾಶಿ ಆರೋಗ್ಯ ಭವಿಷ್ಯ 2022

ಸಿಂಹ ರಾಶಿ ಆರೋಗ್ಯ ಭವಿಷ್ಯ 2022 ರ ಪ್ರಕಾರ ಸಿಂಹ ರಾಶಿಯವರು ಈ ವರ್ಷ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ವರ್ಷದ ಆರಂಭದಲ್ಲಿ, ಅಂದರೆ ಜನವರಿಯಿಂದ ಏಪ್ರಿಲ್‌ವರೆಗೆ ನಿಮ್ಮ ಆರೋಗ್ಯ ಸ್ಥಿತಿ ಸ್ಥಿರವಾಗಿರಲಿದೆ. ನಂತರ ಬಿಪಿ, ವೈರಲ್ ಸೋಂಕು ಅಥವಾ ಅಜೀರ್ಣ ಸಮಸ್ಯೆ ಉಂಟಾಗಬಹುದು. 2022 ರಲ್ಲಿ ನಿಮಗೆ ಪ್ರಮುಖ ಕಾಯಿಲೆಗಳು ಮತ್ತು ಗಾಯಗಳು ಉಂಟಾಗುವ ಸಾಧ್ಯತೆಗಳು ಇದೆ. ಆದ್ದರಿಂದ ಪ್ರಯಾಣದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಉತ್ತಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಮಾರ್ಪಾಡುಗಳು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ಇರಿಸುತ್ತದೆ.

 ಸಿಂಹ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಸಿಂಹ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಸಿಂಹ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆಯು 5 ಆಗಿದೆ. ಸಿಂಹದ ಅಧಿಪತ್ಯವು ಸೂರ್ಯನು ಮತ್ತು ವರ್ಷವನ್ನು ಬುಧನು ಆಳುತ್ತಾನೆ. ಈ ಅವಧಿಯಲ್ಲಿ, ಸಿಂಹ ರಾಶಿಯ ಜನರು ಬಹಳ ತರ್ಕಬದ್ಧರಾಗಿರುತ್ತಾರೆ. ಅವರ ಅದೃಷ್ಟ ಸಂಖ್ಯೆಯ ಪ್ರಕಾರ ಈ ವರ್ಷ ಉತ್ಸಾಹವನ್ನು ತರುತ್ತದೆ. ನೀವು ಅನೇಕ ಕಾರ್ಯಗಳಿಂದ ಹೊಸ ಪಾಠವನ್ನು ಕಲಿಯುತ್ತೀರಿ. ಅದು ನಿಮ್ಮ ಇಡೀ ಜೀವನಕ್ಕೆ ಸಹಕಾರಿ ಆಗಲಿದೆ. ಈ ವರ್ಷ ನಿಮ್ಮ ಖರ್ಚು ಹೆಚ್ಚಾಗಬಹುದು. ನಿಮ್ಮ ಸ್ವಂತ ಮನೆ ಅಥವಾ ಅಂಗಡಿಯ ಕನಸುಗಳು ಈ ವರ್ಷ ನನಸಾಗಬಹುದು. ಬುಧ ಮತ್ತು ಸೂರ್ಯನು ಪರಸ್ಪರ ಸುಂದರವಾದ ಸ್ನೇಹವನ್ನು ಹೊಂದಿರುವುದರಿಂದ 2022 ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ತರುತ್ತದೆ.

 ಸಿಂಹ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ಸಿಂಹ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ಎಲ್ಲಾ ಪೂಜಾ ವಿಧಿ ವಿಧಾನದೊಂದಿಗೆ ಶನಿ ಯಂತ್ರವನ್ನು ತಾಮ್ರದ ತಟ್ಟೆಯಲ್ಲಿ ಪೂಜಿಸಿ. ವಿವಾಹಿತ ದಂಪತಿಗಳು ತಮ್ಮ ವೈವಾಹಿಕ ಜೀವನದಲ್ಲಿ ಶಾಂತಿ, ಸಾಮರಸ್ಯ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಯಾವುದೇ ಶುಭ ಸಮಾರಂಭದಲ್ಲಿ ಅಥವಾ ಉದ್ಯೋಗ ಸಂದರ್ಶನ ಅಥವಾ ವ್ಯಾಪಾರ ಸಭೆಯಂತಹ ಯಾವುದೇ ಪ್ರಮುಖ ಕೆಲಸಕ್ಕೆ ಹೋಗುವ ಮುನ್ನ ಯಾವಾಗಲೂ ಕೆಲವು ಸಿಹಿ ಪದಾರ್ಥಗಳನ್ನು ಸೇವಿಸಿ. ನಿಮ್ಮ ಸೋದರ ಮಾವ, ಅಳಿಯ ಮತ್ತು ಸೋದರಳಿಯರೊಂದಿಗೆ ಸೇವೆ ಮಾಡಿ ಅಥವಾ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ. ಎಂದಿಗೂ ಸತ್ಯವನ್ನು ಮಾತನಾಡಿ, ಯಾರಿಗೂ ಸುಳ್ಳು ಹೇಳಬೇಡಿ ಮತ್ತು ನಿಮ್ಮ ಭರವಸೆಗಳು ನೀವು ಪೂರ್ತಿ ಮಾಡಿದ್ದೀರೇ ಎಂಬುವುದನ್ನು ಖಾತರಿಪಡಿಸಿಕೊಳ್ಳಿ.

English summary
Simha Rashi Varshika Bhavishya 2022 in Kannada: Check out the Leo yearly horoscope 2022 predictions in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X