• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಳಿಗೆಗೊಂದು ಭವಿಷ್ಯ : ಏನ್ ಸ್ವಾಮಿ ಬ್ರಹ್ಮಾಂಡ ಗುರುಗಳೇ ಇದು!

|

ಕೂರೊನಾ ವೈರಸಿನ ಹಾವಳಿ ಇನ್ನೆಷ್ಟು ದಿನ ಇರಲಿದೆ, ಮನುಕುಲಕ್ಕೆ ಇದರಿಂದ ಆಗುವ ತೊಂದರೆ ಏನು ಎನ್ನುವುದರ ಬಗ್ಗೆ, ಜೊತೆಗೆ, 'ಆಕ್ಟ್ ಆಫ್ ಗಾಡ್' ಬಗ್ಗೆ , ಕೆಲವು ದಿನಗಳ ಹಿಂದೆ ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದಿದ್ದರು.

   Corona ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಈಗ ಮತ್ತೊಮ್ಮೆ ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ ಭವಿಷ್ಯ ನುಡಿದಿದ್ದು, ತಮ್ಮ ಹಿಂದಿನ ಹೇಳಿಕೆಗೂ, ಈಗಿನ ಮಾತಿಗೂ, ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.

   ಶ್ರಾವಣ ಮಾಸಾರಂಭದಲ್ಲಿ ಕೋಡಿ ಶ್ರೀಗಳು ನುಡಿದ ಭಯಾನಕ ಹೊಸ ಭವಿಷ್ಯ

   ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬ್ರಹ್ಮಾಂಡ ಗುರುಗಳು, ಭೂಕಂಪ ಮತ್ತು ಕೊರೊನಾ ಬಗ್ಗೆ ಭಯಾನಕ ಭವಿಷ್ಯವನ್ನು ನುಡಿದಿದ್ದರು.

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಮಹಾಮಾರಿ ಕೊರೊನಾ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ

   ಅದರಲ್ಲೂ, ಪ್ರಾಕೃತಿಕ ವಿಕೋಪದ ಬಗ್ಗೆ ನುಡಿದಿದ್ದ ಭವಿಷ್ಯ, ವ್ಯಾಪಕ ಟೀಕೆಗೆ ಒಳಗಾಗಿತ್ತು. ಈಗ, ಹಿಂದೆ ತಾವು ಹೇಳಿದ್ದ ಭವಿಷ್ಯಕ್ಕೂ, ಈಗ ನುಡಿದಿರುವ ಭವಿಷ್ಯಕ್ಕೂ, ಒಂದಕ್ಕೊಂದು ಸಂಬಂಧವಿಲ್ಲದಂತಿದೆ. ಅದು ಹೀಗಿದೆ:

   ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ

   ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ

   ತನ್ನ ವಿಶಿಷ್ಟ ಮಾತಿನ ಧಾಟಿಯಿಂದ ಹೆಸರುವಾಸಿಯಾಗಿರುವ ಬ್ರಹ್ಮಾಂಡ ಗುರುಗಳು, "ಎರಡು ವರ್ಷಗಳ ಹಿಂದಿನ ಅತಿವೃಷ್ಟಿಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದ್ದು, ತುಂಬಾ ತೊಂದರೆಯಾಗಲಿದೆ. ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ" ಎನ್ನುವ ಭವಿಷ್ಯವನ್ನು ಮೇ ತಿಂಗಳಲ್ಲಿ ನುಡಿದಿದ್ದರು.

   ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಯ ಗ್ರಾಮ

   ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಯ ಗ್ರಾಮ

   ಈಗ ಅಂದರೆ, ಕೆಲವು ದಿನಗಳ ಹಿಂದೆ, ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಯ ಗ್ರಾಮವೊಂದರಲ್ಲಿ ಪಟ್ಟಾಭಿರಾಮಚಂದ್ರಸ್ವಾಮಿ ದೇಗುಲದ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಾಂಡ ಗುರುಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿದ್ದ ಗುರುಗಳು, "ಮನುಷ್ಯನಿಗಿರುವ ಅಹಂಕಾರವನ್ನು ಮಟ್ಟಹಾಕಲೆಂದೇ ಶನಿ ಮಹಾರಾಜನು ಹೊಸ (ಕೊರೊನಾ) ರೂಪದಲ್ಲಿ ಬಂದಿದ್ದಾನೆ"ಎಂದು ಹೇಳಿದ್ದಾರೆ.

   ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು

   ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು

   "ಈ ದರಿದ್ರ ಕೊರೊನಾ ಇನ್ನೂ ಮೂವತ್ತು ವರ್ಷ ಮನುಕುಲವನ್ನು ಕಾಡಲಿದೆ" ಎನ್ನುವ ಹೊಸ ಭವಿಷ್ಯವನ್ನು ನುಡಿದಿದ್ದಾರೆ. "ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಬೇವು, ಹೊಂಗೆ ಮರವನ್ನು ಮುಂಜಾನೆ ಹನ್ನೊಂದು ಸುತ್ತು ಪ್ರದಕ್ಷಿಣೆ ಹಾಕಿ. ಕಷಾಯ ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಿ"ಎಂದು ಬ್ರಹ್ಮಾಂಡ ಗುರುಗಳು ಹೇಳಿದ್ದಾರೆ.

   ಏನ್ ಸ್ವಾಮಿ ಬ್ರಹ್ಮಾಂಡ ಗುರುಗಳೇ, ಮುಂಡಾ ಮೋಚ್ತು!

   ಏನ್ ಸ್ವಾಮಿ ಬ್ರಹ್ಮಾಂಡ ಗುರುಗಳೇ, ಮುಂಡಾ ಮೋಚ್ತು!

   ಈ ಹಿಂದೆ, ಕೊರೊನಾ ಮಹಾಮಾರಿಯ ಬಗ್ಗೆ ಮಾತಾನಾಡಿದ್ದ ಗುರುಗಳು, 'ಇದು ಕೊರೊನಾ ಅಲ್ಲ, ಕೌಮಾರಿ. ಈ ಕೌಮಾರಿಯ ಶಾಂತಿಗಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಬೇಕಿದೆ. ಭೂಕಂಪನದ ಭಯಾನಕ ಅನುಭವಕ್ಕೆ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಕೂಡಾ ಸಾಕ್ಷಿಯಾಗಲಿದೆ. ಅಮೆರಿಕಾ ಸರ್ವನಾಶವಾಗಲಿದೆ ಮತ್ತು ಆಸ್ಟ್ರೇಲಿಯಾ ಬಹುಪಾಲು ಸಮುದ್ರ ಪಾಲಾಗಲಿದೆ" ಎನ್ನುವ ಭವಿಷ್ಯವನ್ನೂ ಬ್ರಹ್ಮಾಂಡ ಗುರುಗಳು ನುಡಿದಿದ್ದರು.

   English summary
   New Prediction From Brahmanda Guruji Aliyas Narendra Sharma On Coronavirus Impact.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X