ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಲಿದೆಯೇ? ಭವಿಷ್ಯವಾಣಿ

|
Google Oneindia Kannada News

ದೇಶದಲ್ಲಿ ಎರಡನೇ ಅಲೆಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರ ವಿಫಲವಾದ ಬಗ್ಗೆ ವಿರೋಧ ಪಕ್ಷಗಳು ಒಗ್ಗೂಡಿ ನರೇಂದ್ರ ಮೋದಿ ಸರಕಾರದ ವಿರುದ್ದ ಮುಗಿಬಿದ್ದಿವೆ. ಪ್ರಧಾನಿ ಶಾಂತ ರೀತಿಯಿಂದ ಎಲ್ಲವನ್ನೂ ಆಲಿಸುತ್ತಿದ್ದಾರೆ.

ಲಸಿಕೆ ಹಂಚಿಕೆಯಲ್ಲಿನ ಗೊಂದಲ, ಆಮ್ಲಜನಕದ ಕೊರತೆ, ಕುಂಭಮೇಳ ಆಯೋಜನೆ, ಪಂಚ ರಾಜ್ಯಗಳ ಚುನಾವಣೆ ಮುಂತಾದವು ಕೊರೊನಾ ಎರಡನೇ ಅಲೆಯ ವೇಳೆ, ಮೋದಿ ಸರಕಾರದ ವರ್ಚಸ್ಸಿಗೆ ಬಲವಾದ ಪೆಟ್ಟನ್ನು ನೀಡಿತ್ತು.

'ಹೂತ ಹೆಣಗಳು ಪ್ರೇತವಾಗಿ ಎದ್ದು ಮಾತಾಡುತ್ತವೆ': ಕೋಡಿಮಠದ ಶ್ರೀಗಳ ಭಯಂಕರ ಭವಿಷ್ಯವಾಣಿ'ಹೂತ ಹೆಣಗಳು ಪ್ರೇತವಾಗಿ ಎದ್ದು ಮಾತಾಡುತ್ತವೆ': ಕೋಡಿಮಠದ ಶ್ರೀಗಳ ಭಯಂಕರ ಭವಿಷ್ಯವಾಣಿ

ಇದರ ಜೊತೆಗೆ ಸಮೀಕ್ಷೆಯೊಂದರ ಪ್ರಕಾರ ಮೋದಿಯವರ ಜನಪ್ರಿಯತೆ ಪಾತಾಳಕ್ಕೆ ಇಳಿದಿತ್ತು. ಪ್ರಧಾನಿಯಾಗಿ ಅಧಿಕಾರ ತೆಗೆದುಕೊಂಡ ನಂತರ, ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೋದಿ ಪ್ರಭಾವ ಕಮ್ಮಿಯಾಗುತ್ತಿದೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿತ್ತು.

ಇವೆಲ್ಲದರ ನಡುವೆ, ಪ್ರಧಾನಮಂತ್ರಿ ಹುದ್ದೆಯಿಂದ ನರೇಂದ್ರ ಮೋದಿ ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆಯೇ ಎನ್ನುವುದರ ಬಗ್ಗೆ ಖ್ಯಾತ ಜ್ಯೋತಿಷಿ ಕೆ.ಎಂ.ಸಿನ್ಹಾ ಭವಿಷ್ಯ ನುಡಿದಿದ್ದಾರೆ.

 ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು

ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು

"ಮೇ 6ರಿಂದ 26ರವರೆಗೆ ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಈ ಅವಧಿ ಸ್ವಲ್ಪದಿನ ಅಂದರೆ ಜೂನ್ 3ರವರೆಗೆ ಹೋಗಬಹುದು. ಈ ಅವಧಿ ಮುಗಿದ ನಂತರ, ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗಲಿದೆ. ಆದರೆ, ಮೇ 6ರಿಂದ 26ರವರೆಗಿನ ಅವಧಿಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ಹೋಗಲಿದೆ"ಎಂದು ಕೆ.ಎಂ.ಸಿನ್ಹಾ ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

 ಮೋದಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ

ಮೋದಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ

"ಮೋದಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ನಾನು ಈ ವಿಚಾರದಲ್ಲಿ ಚಾಲೆಂಜ್ ಮಾಡಲು ಸಿದ್ದನಿದ್ದೇನೆ. ಜೂನ್ 14ರ ವರೆಗೆ ಅವರ ಜಾತಕಫಲ ಸರಿಯಾಗಿರಲಿಲ್ಲ. ಅವರ ಜಾತಕವನ್ನು ಆಧರಿಸಿ ಈ ಜ್ಯೋತಿಷ್ಯವನ್ನು ನುಡಿಯುತ್ತಿದ್ದೇನೆ"ಎಂದು ಕೆ.ಎಂ.ಸಿನ್ಹಾ ಹೇಳಿದ್ದಾರೆ.

 ಜೂನ್ 14ರ ವರೆಗೆ ಅವರ ಜಾತಕಫಲ ಸರಿಯಾಗಿರಲಿಲ್ಲ

ಜೂನ್ 14ರ ವರೆಗೆ ಅವರ ಜಾತಕಫಲ ಸರಿಯಾಗಿರಲಿಲ್ಲ

ಮೋದಿಯವರ ಲಗ್ನ ಕುಂಡಲಿಯ ದಶೆ ಬದಲಾಗಲಿದೆ. ಈಗ ಅವರ ದಶೆ ಬದಲಾಗಿರುವುದರಿಂದ ಮೋದಿಯವರು ತಮ್ಮ ಹಿಂದಿನ ವರ್ಚಸ್ಸನೇ ಮತ್ತೆ ಪಡೆಯಲಿದ್ದಾರೆ. ಭಾರತದಲ್ಲಿ ತುರ್ತು ಪರಿಸ್ಥಿತಿ ಅಥವಾ ಮೋದಿಯವರು ರಾಜೀನಾಮೆ ನೀಡಬೇಕಾದಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ"ಎಂದು ಕೆ.ಎಂ.ಸಿನ್ಹಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

 ಎಪ್ಪತ್ತು ವರ್ಷದಲ್ಲಿ ಕಾಂಗ್ರೆಸ್ ನಡೆಸಿದ ಆಡಳಿತ

ಎಪ್ಪತ್ತು ವರ್ಷದಲ್ಲಿ ಕಾಂಗ್ರೆಸ್ ನಡೆಸಿದ ಆಡಳಿತ

ಎಪ್ಪತ್ತು ವರ್ಷದಲ್ಲಿ ಕಾಂಗ್ರೆಸ್ ನಡೆಸಿದ ಆಡಳಿತದಿಂದಾಗಿ ಮತ್ತೆ ಅವರು ಅಧಿಕಾರಕ್ಕೆ ಬಂದಿಲ್ಲ. ಮೋದಿಯವರ ಎರಡನೇ ಅವಧಿಯು ಐದು ವರ್ಷ ಪೂರೈಸಲಿದೆ. ಜುಲೈ ಹದಿನೇಳರ ಹೊತ್ತಿಗೆ ದೇಶದ ಬಹುತೇಕ ಕಡೆ ಕೊರೊನಾ ಎರಡನೇ ಅಲೆ ಸಂಪೂರ್ಣ ನಿರ್ಮೂಲನೆಯಾಗಲಿದೆ ಎಂದು ಸಿನ್ಹಾ ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ.

English summary
Narendra Modi Resignation Situation Will Not Arise, Astrological Prediction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X