• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರ ಭವಿಷ್ಯ: ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯವೇನು, ಆಗಿದ್ದೇನು!

|

ಜ್ಯೋತಿಷ್ಯ, ಭವಿಷ್ಯವಾಣಿ ನಿಜವಾಗುತ್ತೋ, ಇಲ್ಲವೋ, ಆದರೆ ಇದನ್ನು ನಂಬುವವರ ಸಂಖ್ಯೆಗೆ ಬರವೇನೂ ಇಲ್ಲ. ಜಗತ್ತಿನ ಆಗುಹೋಗುಗಳು, ಪ್ರಾಕೃತಿಕ ವಿಕೋಪ, ರಾಜಕೀಯದಲ್ಲಿನ ಸ್ಥಿತ್ಯಂತರದ ಬಗ್ಗೆ ಭವಿಷ್ಯ ನುಡಿಯುತ್ತಲೇ ಇರುತ್ತಾರೆ.

2020 ಅತ್ಯಂತ ಕೆಟ್ಟವರ್ಷ ಎನ್ನುವುದು ಸಾರ್ವಜನಿಕ ವಲಯದಲ್ಲಿನ ಒಟ್ಟಾರೆ ಅಭಿಪ್ರಾಯ. ಮಾರ್ಚ್ ತಿಂಗಳಿನಿಂದ ಆರಂಭವಾದ ಕೊರೊನಾ ಹಾವಳಿ, ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿತು. ವರ್ಷ ಮುಗಿಯುತ್ತಾ ಬಂದಿದ್ದರೂ, ಇದರ ಹಾವಳಿ ಸಂಪೂರ್ಣವಾಗಿ ನಿಲ್ಲಲಿಲ್ಲ.

5 ತಿಂಗಳ ಹಿಂದೆಯೇ ಕೊರೊನಾ ಬಗ್ಗೆ ಕರಾರುವಕ್ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಕೊರೊನಾದಿಂದಾಗಿ ಅದೆಷ್ಟೋ ಮಂದಿ ಮನೆಮಠ, ಕೆಲಸವನ್ನು ಕಳೆದುಕೊಂಡರು, ಜನರು ಬದುಕು ಮೂರಾಬಟ್ಟೆಯಾಯಿತು. ಈ ರೀತಿಯ ಜೀವನವನ್ನು ಮನುಕುಲ ಎದುರಿಸಬೇಕಾದೀತು ಎನ್ನುವ ಕಲ್ಪನೆಯೇ ಸಾರ್ವಜನಿಕರಿಗಿಲ್ಲ.

'ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ', ಯುಗಾದಿ ತನಕ ಎಚ್ಚರ: ಕೋಡಿಶ್ರೀಗಳ ಭವಿಷ್ಯ

ಕಳೆದ ವರ್ಷ, ಬಲ್ಗೇರಿಯಾದ ನಿಗೂಢ ಮಹಿಳೆ ಎಂದೇ ಹೆಸರಾಗಿರುವ ಬಾಬಾ ವಂಗಾ, 2020ರ ಭವಿಷ್ಯವನ್ನು ನುಡಿದಿದ್ದರು. ಆ ಮಹಿಳೆ ನುಡಿದಿದ್ದ ಭವಿಷ್ಯವೇನು, ಅದರ ಸತ್ಯಾಸತ್ಯತೆಯ ಬಗ್ಗೆ ಒಂದು ಕಿರುನೋಟ ಹೀಗಿದೆ:

ಬಲ್ಗೇರಿಯಾದ ನಿಗೂಢ ಮಹಿಳೆ ಎಂದೇ ಹೆಸರಾಗಿದ್ದ ಬಾಬಾ ವಂಗಾ

ಬಲ್ಗೇರಿಯಾದ ನಿಗೂಢ ಮಹಿಳೆ ಎಂದೇ ಹೆಸರಾಗಿದ್ದ ಬಾಬಾ ವಂಗಾ

1996ರಲ್ಲಿಯೇ ಮೃತಪಟ್ಟಿದ್ದ ಬಾಬಾ ವಂಗಾ, ಸ್ತನ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಈಕೆಗೆ ಬಾಲ್ಯದಿಂದಲೂ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಆದರೂ ಆಕೆ ಜಗತ್ತಿನಲ್ಲಿ 51ನೇ ಶತಮಾನದವರೆಗೂ ಏನೇನು ನಡೆಯಲಿದೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾಳೆ. ಆಕೆ ಸತ್ತು ಈಗ 23 ವರ್ಷಗಳಾಗಿದ್ದರೂ, ಆಕೆಯ ಭವಿಷ್ಯದ ಬಗ್ಗೆ ಅಪಾರ ನಂಬಿಕೆಯಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ 2020ರ ವರ್ಷ ಅಪಾಯಕಾರಿಯಾಗಿದೆ. ಪುಟಿನ್ ಮೇಲೆ ಹತ್ಯಾ ಪ್ರಯತ್ನಗಳು ನಡೆಯಲಿವೆ ಎಂದು ಬಾಬಾ ವಂಗಾ ಹೇಳಿದ್ದರು. ತಮ್ಮ ಮೇಲೆ ನಾಲ್ಕು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿವೆ ಎಂಬುದನ್ನು ಈ ಹಿಂದೆ ಸ್ವತಃ ಪುಟಿನ್ ಬಹಿರಂಗಪಡಿಸಿದ್ದರು. ಆದರೆ, ಈ ವರ್ಷದಲ್ಲಿ ಪುಟಿನ್ ಮೇಲೆ ಹತ್ಯೆಯ ಪ್ರಯತ್ನ ನಡೆದ ಬಗ್ಗೆ ವರದಿಯಾಗಿಲ್ಲ. ಬದಲಿಗೆ, ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವ್ಲಾನಿಯನ್ನು ಪುಟಿನ್ ಕಡೆಯವರು ಕೊಲ್ಲಲು ನೋಡಿದ್ದರು ಎಂದು ಜರ್ಮನ್ ಚಾನ್ಸೆಲರ್ ಆರೋಪಿಸಿದ್ದರು.

ಯುರೋಪಿಯನ್ ದೇಶಗಳ ಮೇಲೆ ಮುಸ್ಲಿಂ ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ

ಯುರೋಪಿಯನ್ ದೇಶಗಳ ಮೇಲೆ ಮುಸ್ಲಿಂ ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ

2020ರಲ್ಲಿ ಯುರೋಪಿಯನ್ ದೇಶಗಳ ಮೇಲೆ ಮುಸ್ಲಿಂ ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ನಡೆಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಫ್ರಾನ್ಸ್ ನಲ್ಲಿ ಮುಸ್ಲಿಂ ಜಿಹಾದಿಗಳ ದಾಳಿಗೆ ಮೂವರು ನಾಗರೀಕರು ಮೃತ ಪಟ್ಟಿದ್ದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ದುರ್ಘಟನೆ ನಡೆದಿತ್ತು. ಇದಲ್ಲದ್ದೇ ಪಶ್ಚಿಮ ಯುರೋಪ್ ನಲ್ಲೂ ಅಲ್ಲಲ್ಲಿ ಉಗ್ರರ ದಾಳಿ ನಡೆದಿತ್ತು.

2020ರಲ್ಲಿ ಭೀಕರ ಪ್ರವಾಹ ಏಷ್ಯಾ ಖಂಡದಲ್ಲಿ ಉಂಟಾಗಲಿದೆ

2020ರಲ್ಲಿ ಭೀಕರ ಪ್ರವಾಹ ಏಷ್ಯಾ ಖಂಡದಲ್ಲಿ ಉಂಟಾಗಲಿದೆ

2020ರಲ್ಲಿ ಭೀಕರ ಪ್ರವಾಹ ಏಷ್ಯಾ ಖಂಡದಲ್ಲಿ ಉಂಟಾಗಲಿದೆ ಎಂದು ವಂಗಾ ನುಡಿದಿದ್ದರು. ಭಾರತ ಸೇರಿದಂತೆ ಹಲವು ಕಡೆ ಅತಿವೃಷ್ಟಿ ಉಂಟಾಗಿತ್ತು. ನವೆಂಬರ್ ತಿಂಗಳಲ್ಲಿ ಇರಾನ್, ಡಿಸೆಂಬರ್ ನಲ್ಲಿ ಇಂಡೋನೇಷ್ಯಾದಲ್ಲೂ ಪ್ರವಾಹ ಉಂಟಾಗಿತ್ತು. ಜೊತೆಗೆ, ಥಾಯ್ ಲ್ಯಾಂಡ್, ಶ್ರೀಲಂಕಾ, ಫಿಲಿಫೇನ್ಸ್ ಮುಂತಾದ ಕಡೆ ಪ್ರವಾಹ ಉಂಟಾಗಿತ್ತು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ನುಡಿದ ಭವಿಷ್ಯ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ನುಡಿದ ಭವಿಷ್ಯ

ಆದರೆ, ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ನುಡಿದ ಭವಿಷ್ಯ ಸುಳ್ಳಾಗಿದೆ. ಈಕೆ ನುಡಿದ ಭವಿಷ್ಯದ ಪ್ರಕಾರ, ಟ್ರಂಪ್ 2020ರಲ್ಲಿ ತೀವ್ರ ಕಾಯಿಲೆಗೆ ತುತ್ತಾಗಲಿದ್ದಾರೆ, ಸಾಯಲೂಬಹುದು ಎನ್ನುವ ಭವಿಷ್ಯ ನುಡಿಯಲಾಗಿತ್ತು. ಆದರೆ, ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡಿ, ಬೈಡೆನ್ ವಿರುದ್ದ ಟ್ರಂಪ್ ಸೋಲು ಅನುಭವಿಸಿದ್ದಾರೆ.

English summary
Mystic Lady Baba Vanga Prediction For The year 2020 Comes Out True Or False.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X