• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರಲ್ಲಿ ಏನೇನಾಗಲಿದೆ? ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯ

|

ಜಗತ್ತಿನ ಖ್ಯಾತ ಭವಿಷ್ಯಕಾರ ನಾಸ್ಟ್ರಡಾಮಸ್‌ನಂತೆಯೇ ಪ್ರಸಿದ್ಧಿ ಪಡೆದ ಭವಿಷ್ಯಕಾರ್ತಿ ಬಾಬಾ ವಂಗಾ. ಬಲ್ಗೇರಿಯಾದ ನಿಗೂಢ ಮಹಿಳೆ ಎಂದೇ ಹೆಸರಾಗಿದ್ದ ಬಾಬಾ ವಂಗಾ, 1996ರಲ್ಲಿಯೇ ಮೃತಪಟ್ಟಿದ್ದಳು. ಸ್ತನ ಕ್ಯಾನ್ಸರ್‌ಗೆ ಬಲಿಯಾದ ಆಕೆಗೆ ಬಾಲ್ಯದಿಂದಲೂ ಕಣ್ಣುಗಳೂ ಕಾಣಿಸುತ್ತಿರಲಿಲ್ಲ. ಆದರೂ ಆಕೆ ಜಗತ್ತಿನಲ್ಲಿ 51ನೇ ಶತಮನಾದವರೆಗೂ ಏನೇನು ನಡೆಯಲಿದೆ ಎಂಬುದನ್ನು ಕಂಡುಕೊಂಡಿದ್ದಳಂತೆ. 5079ನೇ ಇಸವಿಯವರೆಗೆ ಜಗತ್ತಿನಲ್ಲಿ ಏನೇನು ನಡೆಯಲಿದೆ, ಒಳಿತು ಮತ್ತು ಕೆಡಕುಗಳೇನು ಉಂಟಾಗಲಿವೆ ಎಂಬುದನ್ನು ಬಾಬಾ ವಂಗಾ ಮೊದಲೇ ತಿಳಿಸಿದ್ದಾಳೆ. ಆಕೆಯ ನಂಬಿಕೆ ಪ್ರಕಾರ 5079ಕ್ಕೆ ಜಗತ್ತಿನ ಅಂತ್ಯವಾಗಲಿದೆ.

ಪ್ರತಿ ವರ್ಷದ ಅಂತ್ಯ ಮತ್ತು ಹೊಸ ವರ್ಷಾರಂಭಕ್ಕೂ ಮುನ್ನ ಬಾಬಾ ವಂಗಾ ನುಡಿದ ಭವಿಷ್ಯವನ್ನು ಜಗತ್ತಿನ ವಿವಿಧ ದೇಶಗಳು ಹಾಗೂ ಪ್ರಮುಖ ನಾಯಕರಿಗೆ ಅನ್ವಯಿಸಿ ವಿಶ್ಲೇಷಿಸಲಾಗುತ್ತದೆ. ಆಕೆ ಸತ್ತು ಈಗ 23 ವರ್ಷಗಳಾಗಿದ್ದರೂ, ಆಕೆಯ ನುಡಿದ ಭವಿಷ್ಯಗಳು ನಿಜವಾಗುತ್ತದೆ ಎಂದೇ ಹೇಳಲಾಗುತ್ತಿದೆ. ಆಕೆಯ ಶೇ 85ರಷ್ಟು ಭವಿಷ್ಯ ನಿಜವಾಗಿವೆಯಂತೆ. ರಿಯಾಲಿಟಿ ಸ್ಟಾರ್ ಒಬ್ಬ ಅಮೆರಿಕ ಅಧ್ಯಕ್ಷನಾಗುವುದು, 9/11ರ ಉಗ್ರರ ದಾಳಿ, ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ದೂರವಾಗುವುದು ಮುಂತಾದ ಭವಿಷ್ಯಗಳು ಸುಳ್ಳಾಗಿಲ್ಲ.

2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ

2020ಕ್ಕೂ ಆಕೆ ನುಡಿದ ಭವಿಷ್ಯಗಳು ಭೀಕರವಾಗಿವೆ. ಈ ವರ್ಷದಲ್ಲಿ ಅನೇಕ ದುರಂತಗಳು ನಡೆಯಲಿವೆ ಎಂದು ಬಾಬಾ ವಂಗಾ ಎಚ್ಚರಿಕೆ ನೀಡಿದ್ದಾಳೆ. ಆಕೆ ನುಡಿದ ಭವಿಷ್ಯದಲ್ಲಿ 2020ರಲ್ಲಿ ಏನೇನಾಗಲಿದೆ? ಮುಂದೆ ಓದಿ.

ಟ್ರಂಪ್‌ಗೆ ಮಾರಕ ಕಾಯಿಲೆ?

ಟ್ರಂಪ್‌ಗೆ ಮಾರಕ ಕಾಯಿಲೆ?

ಬಾಬಾ ವಂಗಾ ನುಡಿದಿರುವ ಭವಿಷ್ಯದ ಪ್ರಕಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ತೀವ್ರ ಕಾಯಿಲೆಗೆ ತುತ್ತಾಗಲಿದ್ದಾರೆ. ಕಿವುಡುತನಕ್ಕೆ ಒಳಗಾಗಲಿರುವ ಟ್ರಂಪ್, ಅಪರಿಚಿತ ಕಾಯಿಲೆಯೊಂದರ ದಾಳಿಯಿಂದ ನರಳಲಿದ್ದಾರೆ ಎಂದು ವಂಗಾ ಹೇಳಿದ್ದಾಳೆ. ಟ್ರಂಪ್ ಬ್ರೇನ್ ಟ್ಯೂಮರ್‌ಗೆ ಒಳಗಾಗಲಿದ್ದು, ಅದರಿಂದ ಅವರು ಕಿವುಡರಾಗಲಿದ್ದಾರೆ. ಅವರು ಸಾಯಲೂಬಹುದು ಎನ್ನಲಾಗಿದೆ.

ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ ಪ್ರಯತ್ನ

ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆ ಪ್ರಯತ್ನ

ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರಿಗೂ 2020 ಅಪಾಯಕಾರಿಯಾಗಿದೆ. ಪುಟಿನ್ ಮೇಲೆ ಹತ್ಯಾ ಪ್ರಯತ್ನಗಳು ನಡೆಯಲಿವೆ. ಆದರೆ ಪುಟಿನ್ ಅದರಿಂದ ಸಾಯುತ್ತಾರೆಯೇ ಎಂಬುದನ್ನು ಆಕೆ ಸ್ಪಷ್ಟವಾಗಿ ಹೇಳಿಲ್ಲ. 2019ರ ವರ್ಷದ ಕುರಿತಾದ ವಂಗಾ ಭವಿಷ್ಯದಲ್ಲಿಯೂ ಪುಟಿನ್ ಹತ್ಯೆ ಪ್ರಯತ್ನದ ಬಗ್ಗೆ ಉಲ್ಲೇಖಿಸಲಾಗಿತ್ತು. ತಮ್ಮ ಮೇಲೆ ನಾಲ್ಕು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿವೆ ಎಂಬುದನ್ನು ಈ ಹಿಂದೆ ಸ್ವತಃ ಪುಟಿನ್ ಬಹಿರಂಗಪಡಿಸಿದ್ದರು. ಐವತ್ತಕ್ಕೂ ಹೆಚ್ಚು ಬಾರಿ ಹತ್ಯೆಯ ಪ್ರಯತ್ನಗಳಿಂದ ತಪ್ಪಿಸಿಕೊಂಡಿದ್ದ ಕ್ಯೂಬಾ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರು ಇಂತಹ ದಾಳಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಸಲಹೆ ನೀಡಿದ್ದರು ಎಂಬುದನ್ನು ಪುಟಿನ್ ಹೇಳಿಕೊಂಡಿದ್ದರು. ಕ್ರೆಮ್ಲಿನ್ ಒಳಗೇ ಪುಟಿನ್ ಮೇಲೆ ಹತ್ಯೆಯ ದಾಳಿ ನಡೆಯಲಿದೆ ಎಂದು ವಂಗಾ ಹೇಳಿದ್ದಾಳೆ.

ಜಾತಕದಲ್ಲಿ ಕುಜ ದೋಷವಿದ್ದಾಗ ಏನು ಪರಿಹಾರ?

ಯುರೋಪ್ ಮೇಲೆ ರಾಸಾಯನಿಕ ದಾಳಿ

ಯುರೋಪ್ ಮೇಲೆ ರಾಸಾಯನಿಕ ದಾಳಿ

2020ರ ಯುರೋಪಿಯನ್ ದೇಶಗಳ ಪಾಲಿಗೆ ಮಾರಕವಾಗಲಿದೆ ಎಂದು ಕೂಡ ವಂಗಾ ಭವಿಷ್ಯ ಎಚ್ಚರಿಕೆ ನೀಡಿದೆ. ಯುರೋಪ್ ಮೇಲೆ ಮುಸ್ಲಿಂ ಉಗ್ರರಿಂದ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ನಡೆಯಲಿದೆ ಎಂದು ಹೇಳಲಾಗಿದೆ.

ಏಷ್ಯಾದಲ್ಲಿ ಸುನಾಮಿ

ಏಷ್ಯಾದಲ್ಲಿ ಸುನಾಮಿ

ನೈಸರ್ಗಿಕ ಅವಘಡಗಳೂ ಈ ವರ್ಷ ಸಂಭವಿಸಲಿವೆ. ಏಷ್ಯಾದಲ್ಲಿ ಸುನಾಮಿ ಉಂಟಾಗಲಿದೆ. ಉಲ್ಕಾಪಾತದಿಂದ ರಷ್ಯಾ ತತ್ತರಿಸಲಿದೆ ಎಂದು ನುಡಿಯಲಾಗಿದೆ. 2004ರಲ್ಲಿ ತೀರದಲ್ಲಿ ಭಾರಿ ದೊಡ್ಡ ಅಲೆ ಅಪ್ಪಳಿಸಲಿದೆ ಮತ್ತು ಜನರು ನೀರಿನ ಅಡಿ ಕಣ್ಮರೆಯಾಗಲಿದ್ದಾರೆ ಎಂದು ವಂಗಾ ಹೇಳಿದ್ದ ಭವಿಷ್ಯ ಸುನಾಮಿಯಿಂದ ಸತ್ಯವಾಗಿತ್ತು.

12ನೇ ವಯಸ್ಸಿನಲ್ಲಿ ಅಂಧತ್ವ

12ನೇ ವಯಸ್ಸಿನಲ್ಲಿ ಅಂಧತ್ವ

12ನೇ ವಯಸ್ಸಿನಲ್ಲಿ ಭಾರಿ ಬಿರುಗಾಳಿ ಮಳೆಯಿಂದಾಗಿ ಬಾಬಾ ವಂಗಾ ತನ್ನ ದೃಷ್ಟಿ ಕಳೆದುಕೊಂಡಿದ್ದಳು. 1996ರಲ್ಲಿ ತನ್ನ 85ನೇ ವಯಸ್ಸಿನಲ್ಲಿ ಆಕೆ ಮೃತಪಟ್ಟಿದ್ದಳು. ಆಕೆಗೆ 'ಬಲ್ಕನ್‌ನ ನಾಸ್ಟ್ರಡಾಮಸ್' ಎಂದೇ ಹೆಸರು. ತನ್ನ ದೃಷ್ಟಿ ಕಳೆದುಕೊಂಡ ದಿನವೇ ಭವಿಷ್ಯದ ಜಗತ್ತನ್ನು ನೋಡುವ ದೃಷ್ಟಿ ಪಡೆದುಕೊಂಡಿದ್ದಾಗಿ ವಂಗಾ ಹೇಳಿಕೊಂಡಿದ್ದಳು. ಜತೆಗೆ ಬೇರೆಯವರ ಸಮಸ್ಯೆಯನ್ನು ಶಮನಗೊಳಿಸುವ ಶಕ್ತಿಯೂ ಸಿಕ್ಕಿತ್ತು ಎಂದು ತಿಳಿಸಿದ್ದಳು.

ಇಷ್ಟಪಟ್ಟಿದ್ದವರನ್ನು ಮದುವೆಯಾಗಬೇಕೆ? ಪರಿಹಾರ ಇಲ್ಲಿದೆ

ಅವಳಿ ಕಟ್ಟಡಗಳ ಮೇಲಿನ ದಾಳಿ

ಅವಳಿ ಕಟ್ಟಡಗಳ ಮೇಲಿನ ದಾಳಿ

2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11ರ ದಾಳಿಯ ಬಗ್ಗೆ ವಂಗಾ ಹೇಳಿದ್ದ ಭವಿಷ್ಯ ನಿಜವಾಗಿತ್ತು. 'ಭೀಕರ, ಭೀಕರ! ಅಮೆರಿಕದ ಸಹೋದರರು ಲೋಹದ ಹಕ್ಕಿಗಳಿಂದ ದಾಳಿಗೆ ಒಳಗಾಗಲಿದ್ದಾರೆ. ತೋಳಗಳು ಕೂಗಲಿವೆ, ಮುಗ್ಧರ ರಕ್ತದ ಕೋಡಿ ಹರಿಯಲಿದೆ' ಎಂದು ಆಕೆ 1989ರಲ್ಲಿ ನುಡಿದಿದ್ದಳು.

ಎಲ್ಲ ಭವಿಷ್ಯ ನಿಜವಾಗಿಲ್ಲ

ಎಲ್ಲ ಭವಿಷ್ಯ ನಿಜವಾಗಿಲ್ಲ

ಆದರೆ ವಂಗಾ ನುಡಿದ ಎಲ್ಲ ಭವಿಷ್ಯಗಳೂ ನಿಜವಾಗಿವೆ ಎನ್ನುವಂತಿಲ್ಲ. 2019ರಲ್ಲಿ ಡೊನಾಲ್ಡ್ ಟ್ರಂಪ್‌ಗೆ ನಿಗೂಢ ಕಾಯಿಲೆ ಉಂಟಾಗುತ್ತದೆ, ಪುಟಿನ್ ಮೇಲೆ ಅವರ ರಕ್ಷಣೆಗೆ ನಿಯೋಜಿಸಿರುವ ತಂಡದಿಂದಲೇ ಹತ್ಯೆಯ ಪ್ರಯತ್ನ ನಡೆಯಲಿದೆ ಎಂದು ಹೇಳಿದ್ದಳು. 2016ರಲ್ಲಿ ಯುರೋಪ್ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ, 2010-2014ರಲ್ಲಿ ಅಣ್ವಸ್ತ್ರ ಯುದ್ಧ ನಡೆಯಲಿದೆ ಎಂಬ ಭವಿಷ್ಯಗಳು ಸುಳ್ಳಾಗಿದ್ದವು.

English summary
The mystic blind lady of Balgaria, Baba Vanga predicted Donald Trump will fall ill and Vladimir Putin will face an assassination attempt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more